Eating_at_work_for_people_with_diabetes
Reading Time: 2 minutes

ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡುವುದು ಡಯಾಬಿಟಿಸ್‍ನಿಂದ ಬಳಲುತ್ತಿರುವವರಿಗೆ ಒಂದು ಆಜೀವ ಕಾರ್ಯ. ಅವರ ಸುತ್ತಮುತ್ತಲಿನ ವಾತಾವರಣ ಹಾಗು ದೈನಂದಿನ ಚಟುವಟಿಕೆಗಳನ್ನು ಲೆಕ್ಕಿಸದೇ  ದಿನವಿಡೀ ತಮ್ಮ ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಆರೋಗ್ಯಕರ ಆಹಾರ ಕ್ರಮವನ್ನು ಒಳಗೊಂಡ ನಿರ್ಧಿಷ್ಟ ಜೀವನಶೈಲಿಯನ್ನುಅವರು ಅನುಸರಿಸಬೇಕಾಗುತ್ತದೆ. ಕಾರ್ಯನಿರತ ವೇಳಾಪಟ್ಟಿಯ ಜೀವನಶೈಲಿಯಲ್ಲಿ, ಇದು ಇನ್ನೂ ಕಷ್ಟಕರವಾದ ಸವಾಲಾಗುವುದು, ದಿನದಲ್ಲಿ ಸಮಯಕ್ಕೆ ತಕ್ಕಂತೆ ಊಟ ಮಾಡಲಾಗದೆ, ದೇಹದ ಸಕ್ಕರೆ ಅಂಶವು ಹೆಚ್ಚಾಗಲು ಕಾರಣವಾಗಬಹುದು. 

ನವದೆಹಲಿಯ ಅಪೊಲೊ ಆಸ್ಪತ್ರೆಯ ಅಸ್ತಾ ಮಲ್ಟಿ ಸ್ಪೆಷಾಲಿಟಿ ಸೆಂಟರ್‌ನ ಹಿರಿಯ ಸಲಹೆಗಾರ ವೈದ್ಯರಾದ ಡಾ. ರತನ್ ಕುಮಾರ್ ವೈಶ್ ಅವರು ಇಂತಹ ವ್ಯಕ್ತಿಗಳಿಗಾಗಿ ಎಚ್ಚರದಿಂದ ಆಹಾರ ಸೇವಿಸುವ ಸಲಹೆಗಳು ಮತ್ತು ಕೆಲವು ಆರೋಗ್ಯಕರ ತಿಂಡಿಯ ಆಯ್ಕೆಗಳನ್ನು ನೀಡುತ್ತಾರೆ.

ಬೆಳಗಿನ ಉಪಹಾರವನ್ನು ಎಂದಿಗೂ ತಪ್ಪಿಸಬೇಡಿ

ಒಂದು ವೇಳೆ ರಾತ್ರಿಯ ವೇಳೆಗೆ ನಿಮ್ಮ ದೇಹದ ಸಕ್ಕರೆ ಮಟ್ಟಗಳು ಇಳಿದಿದ್ದು, ಬೆಳಗ್ಗೆ ನಿಮ್ಮ ಕೆಲಸಕ್ಕೆ ತಡವಾಯಿತು, ಎಂದು ನೀವು ಬೆಳಗಿನ ಉಪಹಾರವನ್ನು ತಪ್ಪಿಸಿದರೇ, ಅದು ನಿಮ್ಮ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮಗಳನ್ನು ಬೀರಬಹುದು. ನಿಮ್ಮ ಸಕ್ಕರೆ ಮಟ್ಟವು ತೀವ್ರವಾಗಿ ಕುಸಿಯಬಹುದು ಮತ್ತು ನಿಮಗೆ ತಲೆತಿರುಗುವಿಕೆ, ಸುಸ್ತು ಮತ್ತು ಕಣ್ಗತ್ತಲೆಯ ಅಂತಹ ಅನುಭವಗಳು ಉಂಟಾಗಬಹುದು. ಆದ್ದರಿಂದ, ನಿಮ್ಮ ಕೆಲಸದ ದಿನವನ್ನು ಪ್ರಾರಂಭಿಸುವ ಮೊದಲೇ ಬೆಳಗಿನ ಉಪಹಾರ  ಸೇವನೆಯಾಗಿರಬೇಕು. ನಿಮ್ಮ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಬೆಳಿಗ್ಗೆ ಎದ್ದ 15 ನಿಮಿಷಗಳಲ್ಲಿ ನೀವು ದಿನದ ಮೊದಲ ಊಟವನ್ನು ಸೇವಿಸಿರಬೇಕು. ಆ ಬೆಳಗಿನ ಆಹಾರವು ಒಂದು ಚಿಕ್ಕ ಚಪಾತಿ ಅಥವಾ ಸಕ್ಕರೆ ರಹಿತ ಬಿಸ್ಕತ್ತು ಆಗಿರಬಹುದು.

ಕೆಲಸ ಮಾಡುವಾಗ ಹೆಚ್ಚಿನ ಪ್ರಮಾಣದಲ್ಲಿ ಅಹಾರವನ್ನು ಸೇವಿಸುವುದನ್ನು ತಪ್ಪಿಸಿ 

 ನಿಮ್ಮ ದಿನದ ಆಹಾರವನ್ನು ಒಂದು ಸಲಕ್ಕೆ  ಹೆಚ್ಚಿನ ಪ್ರಮಾಣದಲ್ಲಿ ಸೆವಿಸುವ ಬದಲು, ಅದನ್ನು ದಿನವಿಡೀ ಸಣ್ಣ ಸಣ್ಣ ಭಾಗವಾಗಿಸಿಕೊಂಡು ಸೇವಿಸಿರಿ. 2 ಗಂಟೆಗಳ ಅಂತರದಲ್ಲಿ 8 ಲಘು ಅಹಾರಗಳನ್ನು ಸೇವಿಸುವುದರಿಂದ ನಿಮಗೆ ಸ್ಥಿರವಾಗಿ ಸಕ್ಕರೆ ಮಟ್ಟಗಳನ್ನು ನಿಯಂತ್ರಿಸಲು ಸಹಾಯಕವಾಗುತ್ತದೆ. 

ಕೆಫೆಟೇರಿಯಾದಲ್ಲಿ ತಿನ್ನುವುದನ್ನು ತಪ್ಪಿಸಿ

ಕೆಲಸ ಮಾಡುವ ಸ್ಥಳದ ಕೆಫೆಟೇರಿಯಾಗಳಲ್ಲಿ ನೀಡಲಾಗುವ ಆಹಾರವು ಎಣ್ಣೆಯುಕ್ತ, ಕೊಬ್ಬು ಮತ್ತು ಸಂಸ್ಕರಿಸಲ್ಪಟ್ಟ ಆಹಾರ ಪದಾರ್ಥಗಳಾಗಿವೆ. ಇದು ನೀವು ಅನುಸರಿಸುತ್ತಿರುವ ಆಹಾರ ಪದ್ಧತಿಗೆ ತೊಡಕಾಗುತ್ತದೆ ಮತ್ತು ನಿಮ್ಮ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಅದರ ಮೇಲೆ ಅವಲಂಬಿತರಾಗಬೇಡಿ. ಮನೆಯಲ್ಲಿ ಬೇಯಿಸಿದ ಆಹಾರ ಮತ್ತು ತಿಂಡಿಗಳನ್ನು ಒಯ್ಯುವುದು ಉತ್ತಮ ಆಯ್ಕೆಯಾಗಿದೆ.

ಕೆಲಸದ ಸ್ಥಳದಲ್ಲಿ ಆರೋಗ್ಯಕರ ತಿನ್ನುವ ಆಯ್ಕೆಗಳು –

ತಿಂಡಿಗಾಗಿ ಆಯ್ದುಕೊಳ್ಳಲು ಹಲವಾರು ಆರೋಗ್ಯಕರ ಆಯ್ಕೆಗಳಿವೆ.

  1. ಇಡೀ ಗೋದಿಹಿಟ್ಟಿನಿಂದ ತಯಾರಿಸಿದ ಬ್ರೆಡ್‌ನ ತರಕಾರಿ ಸ್ಯಾಂಡ್ವಿಚ್- ಪಾಲಕ್ ಸೊಪ್ಪು, ಬಟಾಣಿ ಮತ್ತು ಟೊಮೆಟೊಗಳಂತಹ ಕೆಲವು ತರಕಾರಿಗಳೊಂದಿಗೆ ನೀವು ಇಡೀ ಗೋಧಿ ಹಿಟ್ಟಿನ ಬ್ರೆಡ್‌ನ ಒಂದು ಮಧ್ಯಮ ಗಾತ್ರದ ಸ್ಲೈಸ್‌ನಿಂದ ಮಾಡಿದ ಸ್ಯಾಂಡ್‌ವಿಚ್ ಅನ್ನು ಸುಲಭವಾಗಿ ಪ್ಯಾಕ್ ಮಾಡಿಕೊಳ್ಳಬಹುದು. ಅವುಗಳಲ್ಲಿ ಆಲೂಗಡ್ಡೆ ಸೇರಿಸಬೇಡಿ.
  2. ಹಣ್ಣುಗಳು – ನೈಸರ್ಗಿಕವಾದ ಸಕ್ಕರೆ ಅಂಶಗಳಿಂದ ಕೂಡಿರುವ ಹಣ್ಣುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವುದು ಸಮಸ್ಯೆ ಎನಿಸಬಹುದು.  ಆದ್ದರಿಂದ, ಆ ಹಣ್ಣುಗಳನ್ನು ಸೇವಿಸುವುದರ ಪ್ರಮಾಣದ ಬಗ್ಗೆ ಎಚ್ಚರಿಕೆಯಿಂದಿರುವುದು ಉತ್ತಮ ಮಾರ್ಗವಾಗಿದೆ. ಉದಾಹರಣೆಗೆ, ಒಂದು ಸಣ್ಣ ಗಾತ್ರದ ಸೇಬು ಅಥವಾ ಒಂದು ಸಣ್ಣ ಗಾತ್ರದ ಕಿತ್ತಳೆ ಹಣ್ನನ್ನು ದಿನಕ್ಕೆ ಒಂದು ಊಟದ ಭಾಗವಾಗಿ ಸೇರಿಸಬಹುದು. ಪಪ್ಪಾಯ ಮತ್ತು ಮಾವಿನಕಾಯಿಯಂತಹ ಇತರ ಹಣ್ಣುಗಳನ್ನು ದಿನದ ಆಹಾರದ ಭಾಗದಲ್ಲಿ 100 ಗ್ರಾಂಗೆ ಸೀಮಿತಗೊಳಿಸಬೇಕು.
  3. ನಟ್‌ಗಳು ಮತ್ತು ಒಣ ಹಣ್ಣುಗಳು – ವಾಲ್ನಟ್‌, ಬಾದಾಮಿ ಮತ್ತು ಇತರ ಕಾಯಿಗಳು ಸುಲಭವಾಗಿ ಸಿಗುತ್ತವೆ ಮತ್ತು ಇದನ್ನು ಅಡುಗೆ ಮಾಡುವ ಹೆಚ್ಚುವರಿ ಶ್ರಮ ಇರುವುದಿಲ್ಲ. ನೀವು ಯಾವಾಗಲೂ ಅವುಗಳನ್ನು ನಿಮ್ಮೊಂದಿಗೆ ಕೊಂಡೊಯ್ಯಬಹುದು ಮತ್ತು ನೀವು ಪ್ರಯಾಣಿಸುವಾಗಲೂ ಸಹ ಅವುಗಳನ್ನು ಸೇವಿಸಬಹುದು.
  4. ಕಾಳು ಮತ್ತು ತರಕಾರಿಗಳು – ಫೈಬರ್ ಭರಿತ ತರಕಾರಿಗಳು ಮತ್ತು ದ್ವಿದಳ ಧಾನ್ಯ ಕಾಳು ದಿನದಲ್ಲಿ ನಿಮ್ಮ ಊಟದ ಒಂದು ಭಾಗವಾಗಿರಬೇಕು. ನಿಮ್ಮ ಮಧ್ಯಾಹ್ನದ ಊಟದಲ್ಲಿ ಅಥವಾ ರಾತ್ರಿಯ  ಊಟದಲ್ಲಿ ಒಂದು ಇಡೀ ಗೋಧಿ ಹಿಟ್ಟಿನ ಚಪಾತಿಯೊಂದಿಗೆ ನೀವು ಅವುಗಳನ್ನು ಸೇರಿಸಿಕೊಳ್ಳಬಹುದು.

ನೀವು ಪ್ರಯಾಣಿಸುವಾಗ ಜಾಗರೂಕರಾಗಿರಿ 

ನೀವು ಆಯ್ಕೆ ಮಾಡಲು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕದ ಆಹಾರ ಆಯ್ಕೆಗಳನ್ನು ಒದಗಿಸುವ ಅನೇಕ ವಿಮಾನ ನಿಲ್ದಾಣಗಳು ಮತ್ತು ಉತ್ತಮ ಹೋಟೆಲ್‌ಗಳಿವೆ. ನಿಮ್ಮ ಪ್ರಯಾಣವನ್ನು ಯೋಜಿಸುವ ಮೊದಲು ಯಾವಾಗಲೂ ಅಂತಹ ಊಟದ ಆಯ್ಕೆಗಳು ಎಲ್ಲಿವೆ ಎಂದು ನೋಡಿಕೊಳ್ಳಿ, ಆಗ ನೀವು ಹೋಗಬೇಕಾದ ಸ್ಥಳವನ್ನು ತಲುಪಿದ ನಂತರ ನೀವು ನಿಶ್ಚಿಂತೆಯಾಗಿರಬಹುದು. ನೀವು ಸುದೀರ್ಘವಾದ ವ್ಯಾಪಾರ ಪ್ರವಾಸಕ್ಕೆ ಹೋಗುತ್ತಿದ್ದರೆ, ನಿಮ್ಮ ಆಹಾರ ಪದ್ಧತಿಯ ಬಗೆಯಾಗಿ ವೈದ್ಯರೊಂದಿಗೆ ಅಥವಾ ನಿಮ್ಮ ಡೈಯಟಿಶಿಯನ್ ಅವರೊಂದಿಗೆ ಚರ್ಚಿಸುವುದು ಉತ್ತಮ ವಿಧಾನವಾಗಿದೆ.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.