Reading Time: 2 minutes

ಕೊಲೆಸ್ಟರಾಲ್ ಪ್ರಮಾಣಗಳು ನಿಧಾನವಾಗಿ ಮೇಲೆರುತ್ತವೆ ಹಾಗೂ ನಾವು ಸೇವಿಸುವ ಆಹಾರಕ್ರಮವು ಇದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆರಂಭದಲ್ಲಿ ಇದರ ನಿರ್ದಿಷ್ಟ ಲಕ್ಷಣಗಳು ಕಂಡು ಬರದಿದ್ದರೂ ಅಧಿಕ ಮಟ್ಟದ ಕೊಲೆಸ್ಟರಾಲ್ ಹೃದಯದ ಕಾಯಿಲೆಯ ಅಪಾಯವನ್ನು ತಂದೊಡ್ಡಬಲ್ಲದು. ಅತ್ಯಧಿಕ ಅನಾರೋಗ್ಯಕಾರಿ ಕೊಲೆಸ್ಟರಾಲ್ (ಎಲ್‍ಡಿಎಲ್) ಹೊಂದಿರುವ ಆಹಾರಗಳನ್ನು ದೂರವಿಡುವುದು ಕೊಲೆಸ್ಟರಾಲಿನ ಮಟ್ಟದ ಹೆಚ್ಚಳವನ್ನು ನಿಯಂತ್ರಿಸುವ ಸುಲಭೋಪಾಯವಾಗಿದೆ. ನಿಧಿ ದವನ್ (ಎಚ್‍ಒ‍ಡಿ) ಡಯಟೆಟಿಕ್ಸ್, ಸರೋಜ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ನವದೆಹಲಿ, ಇವರು ಅಧಿಕ ಕೊಲೆಸ್ಟರಾಲ್ ಬಾರದ ಹಾಗೆ ಅಥವಾ ಅದನ್ನು ತಡೆಗಟ್ಟಲು ನಾವು ದೂರಮಾಡಬೇಕಾದ ಆಹಾರದ ಪಟ್ಟಿಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ

ಮೊದಲನೆಯದಾಗಿ, ನೀವು ಹುರಿದ ಆಹಾರಗಳನ್ನು ಸೇವಿಸುವುದನ್ನು ನಿಲ್ಲಿಸಬೇಕು. ಫ್ರೆಂಚ್ ಫ್ರೈಸ್, ಫ್ರೈಡ್ ಚಿಕನ್, ಚಿಪ್ಸ್  ಇತ್ಯಾದಿಗಳು ಅಧಿಕ ಕೊಲೆಸ್ಟರಾಲ್ ಹೊಂದಿರುವ ಆಹಾರ ಪದಾರ್ಥಗಳಾಗಿವೆ ಮತ್ತು ಇದನ್ನು ಸಾಧ್ಯವಾದಷ್ಟರ ಮಟ್ಟಿಗೆ ನಿಲ್ಲಿಸುವುದು ಒಳ್ಳೆಯದು. ಇಂತಹ ಆಹಾರಗಳನ್ನು ಹುರಿಯುವುದಕ್ಕೆ ಕೆಟ್ಟ ಕೊಬ್ಬಿನಾಂಶದಿಂದ ಕೂಡಿದ ಹೈಡ್ರೋಜನೇಟಡ್ ಎಣ್ಣೆಗಳನ್ನು ಉಪಯೋಗಿಸುವುದರಿಂದ ದೇಹದಲ್ಲಿ ಅನಾರೋಗ್ಯಕಾರಿ ಕೊಲೆಸ್ಟರಾಲ್ (ಎಲ್‍ಡಿಎಲ್) ಹೆಚ್ಚಾಗುವುದಕ್ಕೆ ಕಾರಣವಾಗುತ್ತದೆ.

ಎರಡನೆಯದಾಗಿ, ಐಸ್ ಕ್ರೀಮ್ ಮತ್ತು ಸಕ್ಕರೆ ಮಿಶ್ರಿತ ಆಹಾರ ಪದಾರ್ಥಗಳನ್ನು ದೂರ ಮಾಡಬೇಕು. ಐಸ್ ಕ್ರೀಮ್, ಬೇಕರಿ ತಿನಿಸುಗಳಾದಂತಹ ಕೇಕ್ಸ್, ಪೇಸ್ಟ್ರೀಸ್ ಮತ್ತು ಕುಕೀಸ್‍ನಂತಹ ಆಹಾರ ಪದಾರ್ಥಗಳಲ್ಲಿ ಸಕ್ಕರೆ ಮಿಶ್ರಿತವಾಗಿರುತ್ತವೆ. ಹೆಚ್ಚುವರಿ ಸಕ್ಕರೆ ಮತ್ತು ಮತ್ತು ಎಲ್‍ಡಿ‍ಎಲ್ (ಅನಾರೋಗ್ಯಕಾರಿ ಕೊಲೆಸ್ಟರಾಲ್) ನಡುವೆ ಇರುವ ನಂಟನ್ನು ಅಧ್ಯಯನಗಳು(1) ಸೂಚಿಸುತ್ತವೆ. ಹೆಚ್ಚುವರಿ ಸಕ್ಕರೆ ನಿಮ್ಮ ದೇಹದಲ್ಲಿ ಎಚ್‍ಡಿ‍ಎಲ್(2) ಮಟ್ಟವನ್ನು ಕುಗ್ಗಿಸುತ್ತದೆ ಹಾಗೂ ಟ್ರೈಗ್ಲಿಸರೈಡ್‌ ಅನ್ನು ಹೆಚ್ಚಿಸುತ್ತದೆ. ಸಿಹಿ ಪದಾರ್ಥಗಳಾದ ಸಾಫ್ಟ್ ಡ್ರಿಂಕ್ಸ್ ಮತ್ತು ಪ್ಯಾಕ್ಡ್ ಜ್ಯೂಸ್‍ಗಳು ನಿಮ್ಮ ದೇಹದ ತೂಕವನ್ನು ಹೆಚ್ಚಿಸುವುದು ಮತ್ತು ನಿಧಾನವಾಗಿ ನಿಮ್ಮ ಶರೀರದ ಕೊಲೆಸ್ಟರಾಲ್ ಮಟ್ಟವನ್ನು ಏರಿಸುತ್ತವೆ.

ಮೂರನೆಯದಾಗಿ, ನೀವು ಮೊಟ್ಟೆಯ ಹಳದಿ ಭಾಗದ ಸೇವನೆಯನ್ನು ನಿಲ್ಲಿಸಬೇಕು. ನೀವು ಅಧಿಕ ಅಥವಾ ಗಡಿರೇಖೆಯಲ್ಲಿರುವ ಕೊಲೆಸ್ಟರಾಲ್ ಮಟ್ಟದಲ್ಲಿದ್ದರೆ ಮೊಟ್ಟೆಯ ಹಳದಿ ಭಾಗದ ಸೇವನೆಯನ್ನು ನೀವು ತ್ಯಜಿಸಬೇಕು ಅಥವಾ ನಿಯಮಿತವಾಗಿ ಬಳಸಬೇಕು. ಒಂದಿಷ್ಟು ದೈಹಿಕ ವ್ಯಾಯಾಮದೊಂದಿಗೆ ಮೊಟ್ಟೆಯ ಹಳದಿ ಭಾಗವನ್ನು ಸೇವಿಸುವುದರಿಂದ ನಿಮ್ಮಕೊಲೆಸ್ಟರಾಲ್ ಮಟ್ಟವನ್ನು ನಿಯಂತ್ರಿಸಬಹುದಾಗಿದೆ. ಆದರೆ ನೀವು ಉಪಯೊಗಿಸುವ ಮೊಟ್ಟೆಯ ಹಳದಿ ಭಾಗ ಒಂದು ವಾರದಲ್ಲಿ ಮೂರು ಮೊಟ್ಟೆಗಳಿಗೆ ಸೀಮಿತವಾಗಿರಬೇಕು. ನಿಮ್ಮ ಕೊಲೆಸ್ಟರಾಲನ್ನು ನಿಯಂತ್ರಣದಲ್ಲಿ ಇಡಲು ಮೊಟ್ಟೆಯ ಹಳದಿ ಭಾಗವನ್ನು ದೂರವಿಡಿ ಹಾಗೂ ಬರೀ ಮೊಟ್ಟೆಯ ಬಿಳಿಯ ಭಾಗವನ್ನು ಸೇವಿಸಿ.

ನಾಲ್ಕನೆಯದಾಗಿ, ನೀವು ಬೆಣ್ಣೆಯನ್ನು ದೂರವಿಡಬೇಕು. ಸ್ನಾಕ್ಸ್‌ನಿಂದ ಉಪಹಾರದವರೆಗೂ ನೀವು ಸೇವಿಸುವ ಎಲ್ಲಾ ಪದಾರ್ಥಗಳು ಬೆಣ್ಣೆಯಿಂದ ಕೂಡಿದೆ; ಬ್ರೆಡ್ ಟೋಸ್ಟ್, ಪಾಪ್ಕಾರ್ನ್, ಇತ್ಯಾದಿ. ಬೆಣ್ಣೆಯು ಹೆಚ್ಚಿನ ಪ್ರಮಾಣದಲ್ಲಿ ಸ್ಯಾಚುರೇಟಡ್ ಹಾಲಿನ ಕೊಬ್ಬನ್ನು ಹಾಗೂ ಕೊಲೆಸ್ಟರಾಲ್‌ ಅನ್ನು ಹೊಂದಿದೆ. ಇದರ ಬದಲಿಗೆ ನಟ್ ಬಟರ್ಸ್ ಅಥವಾ ಇತರ ಆರೋಗ್ಯಕರ ಪರ್ಯಾಯ ಪದಾರ್ಥಗಳನ್ನು ನೀವು ಸೇವಿಸಬಹುದಾಗಿದೆ. ಯಾವುದೇ ಪದಾರ್ಥದಲ್ಲಿ 1% ಗಿಂತ ಹೆಚ್ಚು ಹಾಲಿನ ಕೊಬ್ಬಿದ್ದಲ್ಲಿ ಆ ಪದಾರ್ಥವನ್ನು ನೀವು ತಪ್ಪಿಸಬೇಕು.

ಐದನೆಯದಾಗಿ, ನೀವು ರೆಡ್ ಮೀಟ್ ಸೇವನೆಯನ್ನು ತಪ್ಪಿಸಬೇಕು. ಬೇರೆ ಯಾವುದೇ ಮಾಂಸದ ಪದಾರ್ಥಗಳಿಗಿಂತ ಆಡಿನಮರಿ, ಮಟನ್ ಮತ್ತು ಹಂದಿಗಳಲ್ಲಿ ಹೆಚ್ಚಿನ ಪ್ರಮಾಣದ ಕೊಲೆಸ್ಟರಾಲ್ ಹಾಗೂ ಸ್ಯಾಚುರೇಟಡ್ ಫ್ಯಾಟ್ ಹೊಂದಿರುತ್ತದೆ. ಇದು ಈಗಾಗಲೆ ಹೆಚ್ಚಿನ ಪ್ರಮಾಣದ ಕೊಲೆಸ್ಟರಾಲ್ ಇರುವ ವ್ಯಕ್ತಿಗಳಿಗೆ  ಹೆಚ್ಚಿನ ಹಾನಿಯನ್ನುಂಟು ಮಾಡುತ್ತದೆ ಹಾಗೂ ಹೃದಯ ಕಾಯಿಲೆಯಿಂದ ಬಳಲುವವರಿಗೆ ಇನ್ನು ಹೆಚ್ಚು ಮಾರಕವಾಗಿದೆ. ಇದರ ಪರ್ಯಾಯವಾಗಿ ಬೇಯಿಸಿದ ಅಥವಾ ರೋಸ್ಟಡ್ ಕೋಳಿ ಮತ್ತು ಒಮೆಗಾ-3 ಫ್ಯಾಟಿ ಆಸಿಡ್ಸ್ ಹೊಂದಿರುವ ಮೀನುಗಳನ್ನು ನೀವು ಆರಿಸಬಹುದು. ಈ ಪದಾರ್ಥಗಳು ನಿಮ್ಮ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಿ ನಿಮ್ಮ ಕೊಲೆಸ್ಟರಾಲನ್ನು ಹತೋಟಿಯಲ್ಲಿ ಇರಿಸಿಕೊಳ್ಳಲು ಸಹಕಾರಿಯಾಗಿದೆ.

ಆರನೆಯದಾಗಿ, ನೀವು ತೆಂಗಿನಕಾಯಿ ಹಾಗೂ ತೆಂಗಿನೆಣ್ಣೆಯನ್ನು ನಿಮ್ಮ ಆಹಾರಕ್ರಮದಿಂದ ತಪ್ಪಿಸಬೇಕು. ನಿಮ್ಮ ಕೊಲೆಸ್ಟರಾಲ್ ಮಟ್ಟವು ಮೇಲೇರಿದ್ದರೆ ತೆಂಗಿನಕಾಯಿ ಬಳಸಿ ಮಾಡಿದ ಆಹಾರ ಪದಾರ್ಥಗಳನ್ನು ಅಥವಾ ತೆಂಗಿನ ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳ ಸೇವನೆಯನ್ನು ನೀವು ತಪ್ಪಿಸಬೇಕು. ತೆಂಗಿನ ಎಣ್ಣೆ ಮತ್ತು ಪಾಮ್ ಎಣ್ಣೆ ಹೆಚ್ಚಿನ ಪ್ರಮಾಣದಲ್ಲಿ ಸ್ಯಾಚುರೇಟಡ್ ಕೊಬ್ಬನ್ನು ಹೊಂದಿರುತ್ತದೆ ಮತ್ತು ಆರೋಗ್ಯಕರ ಪರ್ಯಾಯಗಳನ್ನು ಬಳಸುವುದರಿಂದ ಕೆಟ್ಟ ಕೊಲೆಸ್ಟರಾಲ್ ಮಟ್ಟವನ್ನು ತಗ್ಗಿಸಬಹುದಾಗಿದೆ.

ಕೊನೆಯದಾಗಿ, ನೀವು ಸಂಸ್ಕರಿಸಿದ ಧಾನ್ಯದ ಪದಾರ್ಥಗಳನ್ನು ದೂರವಿಡಬೇಕಾಗಿದೆ. ಸಂಸ್ಕರಿಸಿದ ಧಾನ್ಯಗಳಿಂದ ತಯಾರಿಸಿದ ಆಹಾರ ಪದಾರ್ಥಗಳು ಅಥವ ಹಿಟ್ಟಿನಿಂದ (ಮೈದಾ) ತಯಾರಿಸಿದ ಆಹಾರ ಪದಾರ್ಥಗಳು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‍ಗಳನ್ನು ಹೊಂದಿರುತ್ತದೆ ಮತ್ತು ಇದು ನಿಮ್ಮ ಆರೋಗ್ಯಕಾರಿ ಕೊಲೆಸ್ಟರಾಲ್ (ಎಚ್‍ಡಿ‍ಎಲ್) ಮಟ್ಟಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಬಿಳಿ ಬ್ರೆಡ್ ಮತ್ತು ಪಾಸ್ತಾದಂತಹ ಪದಾರ್ಥಗಳ ಸೇವನೆಯನ್ನು ತಪ್ಪಿಸಿ. ಮಲ್ಟಿಗ್ರೇನ್ ಅಥವಾ ಸಂಪೂರ್ಣ ಗೋಧಿ ಬ್ರೆಡ್ಡಿನಂತಹ ಉತ್ತಮ ಪರ್ಯಾಯಗಳೊಂದಿಗೆ ನೀವು ಈ ಪದಾರ್ಥಗಳನ್ನು ಬದಲಾಯಿಸಬಹುದು.

 

ಆಕರಗಳು::

  1. https://www.ncbi.nlm.nih.gov/pubmed/21901431
  2. https://www.ncbi.nlm.nih.gov/pubmed/24808490

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.