Reading Time: 2 minutes

ರಂಜಾನ್, ಇದೊಂದು ಪವಿತ್ರ ಹಬ್ಬವಾಗಿದ್ದು ಪ್ರೀತಿಪ್ರಾತ್ರರೊಡನೆ ಪ್ರಾರ್ಥನೆ, ಕೃತಜ್ಞತೆ, ಸಹಾನುಭೂತಿ ಮತ್ತು ಊಟವನ್ನು ಹಂಚಿಕೊಳ್ಳುವ ಸಮಯವಾಗಿದೆ. ನಿಮ್ಮ ಊಟದಲ್ಲಿ ನೀವು ಯಾವ ಆಹಾರವನ್ನು ಸೇರಿಸಬೇಕು ಎಂಬುದರ ಬಗ್ಗೆ ನಿಮಗೆ ತಿಳಿದಿದೆಯೇ? ತಿಳಿದುಕೊಳ್ಳಲು ಮುಂದೆ ಓದಿ.

ಸ್ನೇಹಿತರು, ಕುಟುಂಬದವರು ಮತ್ತು ಆಹಾರ: ರಂಜಾನ್ ತಿಂಗಳಲ್ಲಿ ಯಾವುದೇ ಮುಸ್ಲಿಂ ಮನೆಯಲ್ಲಿ ಈ ಮೂರು ಅಂಶಗಳು ಸಾಮಾನ್ಯವಾಗಿ ಇಫ್ತಾರ್ ಊಟವನ್ನು ಪ್ರತಿಬಿಂಬಿಸುತ್ತವೆ. ಸುಹೂರ್ ಮತ್ತು ಇಫ್ತಾರ್‌ನಲ್ಲಿ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ರಂಜಾನ್ ಸಮಯದಲ್ಲಿ ನೀವು ಯಾವ ರೀತಿ ಊಟದ ಯೋಜನೆ ಮಾಡಿಕೊಳ್ಳುತ್ತೀರಿ? ಬನ್ನಿ ತಿಳಿದುಕೊಳ್ಳೋಣ.

ಸಾಮಾನ್ಯವಾಗಿ, ಇಫ್ತಾರ್‌ನಲ್ಲಿ ಭರ್ಜರಿ ಭೋಜನವನ್ನು ಉಣಬಡಿಸಲಾಗುತ್ತದೆ. ಸಕ್ಕರೆ ಹೇರಳವಾಗಿರುವ, ಅತಿಯಾಗಿ ಕರಿದ, ಕೆನೆ ಭರಿತ ಆಹಾರಗಳು ಸಾಮಾನ್ಯವಾಗಿ ಕಂಡುಬರುವ ಪದಾರ್ಥಗಳು. ಆದಾಗ್ಯೂ, ಇವುಗಳ ಸೇವನೆ ದೀರ್ಘಾವಧಿಯಲ್ಲಿ ಅನಾರೋಗ್ಯಕರವಾಗಿ ಪರಿಣಮಿಸುತ್ತವೆ. ಈ ಸಮಯದಲ್ಲಿ ಸಮತೋಲಿತ ಮತ್ತು ಪೌಷ್ಠಿಕ ಆಹಾರವನ್ನು ಸೇವಿಸುವುದೊಂದೆ ನಿಮ್ಮ ಆಹಾರದ  ಗುರಿಯಾಗಿರಬೇಕು.

ಇಫ್ತಾರ್‌ನಲ್ಲಿ ನಿಮ್ಮ ಉಪವಾಸವನ್ನು ಮುರಿಯುವ ಬಗೆ

ಸಾಂಪ್ರದಾಯಿಕವಾಗಿ, ಉಪವಾಸವನ್ನು ಖರ್ಜೂರ ಮತ್ತು ನೀರನ್ನು ಸೇವಿಸುವುದರ ಮೂಲಕ ಕೊನೆಗೊಳಿಸಲಾಗುತ್ತದೆ.. ಖರ್ಜೂರವು ಅನೇಕ ಪೌಷ್ಠಿಕಾಂಶದ ಲಾಭಗಳನ್ನು ಹೊಂದಿದೆ. ಖರ್ಜೂರವು ಹಲವಾರು ವಿಟಮಿನ್‌ಗಳನ್ನು ಮತ್ತು ಖನಿಜಾಂಶಗಳನ್ನು ಹೊಂದಿದ್ದು, ಆ್ಯಂಟಿಆಕ್ಸಿಡಂಟ್‍ಗಳು ಅಧಿಕವಾಗಿರುತ್ತದೆ ಮತ್ತು ನಾರಿನಂಶದಿಂದ ಸಮೃದ್ಧವಾಗಿರುತ್ತದೆ.1 ನೈಸರ್ಗಿಕ ಸಕ್ಕರೆಯಾದ ‘ಫ್ರಕ್ಟೋಸ್’ ಅನ್ನು ಹೊಂದಿರುವುದರಿಂದ ಖರ್ಜೂರ ತ್ವರಿತ ಶಕ್ತಿಯ ಉತ್ತಮ ಮೂಲವಾಗಿದೆ. ಖರ್ಜೂರಗಳಿಗೆ ಬದಲಾಗಿ, ಇತರೆ ಒಣಹಣ್ಣುಗಳಾದ ಏಪ್ರಿಕಾಟ್, ಅಂಜೂರದ ಹಣ್ಣು, ಒಣದ್ರಾಕ್ಷಿ ಅಥವಾ ತಾಜಾ ಮತ್ತು ಋತುವನ್ನವಲಂಬಿಸಿದ ಹಣ್ಣುಗಳನ್ನು ಸಹ ನೀವು ಸೇವಿಸಬಹುದು.

ಚೆನ್ನಾಗಿ ನೀರನ್ನು ಕುಡಿಯಿರಿ! ಈ ಸಮಯದಲ್ಲಿ ನೀವು ಸಾಕಷ್ಟು ನೀರನ್ನು ಸೇವಿಸುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಬಹಳ ಗಂಟೆಗಳ ಕಾಲ ನೀರನ್ನು ನೀವು ಕುಡಿಯದೆ ಇರುವುದರಿಂದ ನಿಮ್ಮ ದೇಹಕ್ಕೆ ನೀರಿನ ಅವಶ್ಯಕತೆಯಿರುತ್ತದೆ. ನೀರು, ಹಾಲು, ಹಣ್ಣಿನ ರಸ ಅಥವಾ ಸ್ಮೂಥಿಗಳನ್ನು ನೀವು ಕುಡಿಯಬಹುದು. ನೆನಪಿಡಿ, ನೀರು ಅತ್ಯುತ್ತಮ ಆಯ್ಕೆಯಾಗಿದೆ: ಇದು ಕ್ಯಾಲೊರಿ ಅಥವಾ ಅಧಿಕ ಸಕ್ಕರೆಯಿಲ್ಲದ ನೀರಿನಾಂಶವನ್ನು ನಿಮ್ಮ ದೇಹಕ್ಕೆ ಒದಗಿಸುತ್ತದೆ.

ನಿಮ್ಮ ಹಸಿವನ್ನು ನಿಯಂತ್ರಿಸಲು ಮತ್ತು ಅತಿಯಾಗಿ ತಿನ್ನುವುದನ್ನು ತಪ್ಪಿಸಲು ಸೂಪ್‌ ಸೇವನೆಯು ಅತ್ಯುತ್ತಮ ವಿಧಾನವಾಗಿದೆ. ತರಕಾರಿ, ಬೇಳೆ, ಬಾರ್ಲಿ ಅಥವಾ ಚಿಕನ್‌ನಿಂದ ತಯಾರಿಸಿದ ಸೂಪ್‌ಗಳನ್ನು ಕುಡಿಯಿರಿ. ಸಲಾಡ್‌ಗಳು ಕೂಡ ಹಸಿವನ್ನು ಹೋಗಲಾಡಿಸುವ ಉತ್ತಮ ಪದಾರ್ಥಗಳಾಗಿವೆ. ನೀವು ಮಾಂಸವನ್ನು ತಿನ್ನಲೇ ಬೇಕೆಂದಿದ್ದರೆ, ಅವುಗಳನ್ನು ಆರೋಗ್ಯಕರ ರೀತಿಯಲ್ಲಿ ತಯಾರಿಸಿ. ಡೀಪ್ ಫ್ರೈ ಅಥವಾ ಕ್ರೀಮಿ ಸಾಸ್‌ಗಳಲ್ಲಿ ಅಡುಗೆ ಮಾಡುವ ಬದಲು ಸ್ಟೀಮ್, ಗ್ರಿಲ್, ಸ್ಟಿರ್-ಫ್ರೈ ಮಾಡುವ ಮೂಲಕ ನಿಮ್ಮ ಆಹಾರವನ್ನು ಚೆನ್ನಾಗಿ ಬೇಯಿಸಿ.

ನಿಮ್ಮ ಇಫ್ತಾರ್ ಊಟದಲ್ಲಿ ಸಾಕಷ್ಟು ತರಕಾರಿಗಳು ಮತ್ತು ಧಾನ್ಯಗಳಿವೆಯೇ ಎಂದು ಖಚಿತಪಡಿಸಿಕೊಳ್ಳಿ, ಇದರಿಂದ ದೇಹಕ್ಕೆ ಪ್ರಮುಖ ವಿಟಮಿನ್‌ಗಳು, ಖನಿಜಾಂಶಗಳು, ಶಕ್ತಿ ಮತ್ತು ನಾರಿನಂಶ ದೊರೆಯುತ್ತದೆ. ಹುರಿದ ಮತ್ತು ಸಂಸ್ಕರಿಸಿದ ಆಹಾರ ಪದಾರ್ಥಗಳನ್ನು ತಪ್ಪಿಸಿ. ನೀವು ಬಡಿಸಿಕೊಳ್ಳುತ್ತಿರುವ ಪ್ರಮಾಣದ ಮೇಲೆ ಗಮನ ಇಡುವುದನ್ನು ಮತ್ತು ಎಚ್ಚರವಹಿಸಿ ತಿನ್ನುವುದನ್ನು ಮರೆಯಬೇಡಿ.

ಸುಹೂರನ್ನು ತಪ್ಪಿಸಬೇಡಿ

ಮುಂಜಾನೆಯ ಊಟವು ಬಹಳ ಮುಖ್ಯವಾದದ್ದಾಗಿದೆ ಏಕೆಂದರೆ ಇದು ದಿನವಿಡೀ ಯಶಸ್ವಿಯಾಗಿ ಉಪವಾಸ ಕೈಗೊಳ್ಳಲು ನಿಮಗೆ ಅನುವು ಮಾಡಿಕೊಡುತ್ತದೆ. ಸುಹೂರ್ ಸಮಯದಲ್ಲಿ, ನೀವು ಸಾಕಷ್ಟು ನೀರನ್ನು ಕುಡಿಯುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಉಪವಾಸ ಮಾಡುವಾಗ ದೇಹಕ್ಕೆ ನೀರಿನಾಂಶವು ಹೆಚ್ಚಾಗಿ ಬೇಕಾಗಿರುವುದರಿಂದ ಕಲ್ಲಂಗಡಿಯಂತಹ ನೀರಿನಾಂಶ ಹೆಚ್ಚಿರುವ ಆಹಾರವನ್ನೇ ಆರಿಸಿ. ಗಂಜಿ ಆಹಾರಗಳಾದ ಅಕ್ಕಿ ಅಥವಾ ಕೂಸ್ಕೂಸ್ ಒಳ್ಳೆಯ ಶಕ್ತಿಯನ್ನು ಒದಗಿಸುತ್ತದೆ. ಓಟ್ಸ್, ನಾರಿನಾಂಶ ಹೆಚ್ಚಿರುವ ಉಪಹಾರ ಧಾನ್ಯಗಳು ಮತ್ತು ಇಡೀ ಧಾನ್ಯದ ಆಹಾರಗಳು ನಿಮಗೆ ದೀರ್ಘಾವಧಿಯವರೆಗೆ ಹಸಿವಾಗದಂತೆ ನೋಡಿಕೊಳ್ಳುತ್ತವೆ. ಮೊಸರು ಮತ್ತೊಂದು ಉತ್ತಮ್ಮ ಆಯ್ಕೆಯಾಗಿದ್ದು, ಇದರಲ್ಲಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ.

ನಿಮ್ಮ ರಂಜಾನ್ ಆರೋಗ್ಯ ಮತ್ತು ಸಂತೋಷದಿಂದ ಕೂಡಿರಲಿ ಎಂದು ಆಶಿಸುತ್ತೇವೆ!

ಪ್ರಸ್ತಾಪ:

  1. Rahmani AH, Aly SM, Ali H, Babiker AY, Srikar S, Khan AA. Therapeutic effects of date fruits (Phoenix dactylifera) in the prevention of diseases via modulation of anti-inflammatory, antioxidant and antitumor activity. Int J Clin Exp Med. 2014;7(3):483–491. 2014.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.