Laugh A DAy
Reading Time: 2 minutes


ನೀವು ಕೊನೆಯದಾಗಿ ಹೊಟ್ಟೆ ಹುಣ್ಣಾಗುವಂತೆ ನಕ್ಕ ಗಳಿಗೆಯನ್ನು ಚೆನ್ನಾಗಿ ನೆನಪು ಮಾಡಿಕೊಳ್ಳಬಲ್ಲಿರಾ? ಆ ನೆನಪುಗಳು ನಿಮ್ಮನ್ನು ಹಿಂದಕ್ಕೆ ಕರೆದೊಯ್ದಾಗ ಏನು ನೋಡುವಿರಿ? ಕಣ್ಣಲ್ಲಿ ನೀರು ಬರುವಷ್ಟು, ಹೊಟ್ಟೆ ಹಿಡಿದುಕೊಂಡು ಜೋರಾಗಿ ನಗುತ್ತಿದ್ದೀರಿ ಅಲ್ಲವೇ? ನಮ್ಮ ಆರೋಗ್ಯ ತೊಂದರೆಗಳು ಮತ್ತು ಕಳವಳಗಳ ಬಲೆಯಲ್ಲಿ ಸಿಕ್ಕಿ ನಾವು ಒದ್ದಾಡುತ್ತಿದ್ದೇವೆ. ಇವು ನಮ್ಮ ದೇಹ ಮತ್ತು ಮನಸ್ಸಿನ ಮೇಲೆ ಎಷ್ಟು ಹಿಡಿತ ಸಾಧಿಸಿವೆ ಎಂದರೆ, ನಾವು ನಗುವುದನ್ನೇ ಮರೆತಿದ್ದೇವೆ.

ನಗುವುದರಿಂದ ನಿಮ್ಮ ರಕ್ತನಾಳಗಳಿಗೆ ಹೇಗೆ ವಿಶ್ರಾಂತಿ ಸಿಗುತ್ತದೆ?

ನಗುವುದರಿಂದ ನಿಮ್ಮ ರಕ್ತನಾಳಗಳಿಗೆ ತುಂಬ ಪ್ರಯೋಜನವಿದೆ. ಏಕೆಂದರೆ ನಗುವುದು, ರಕ್ತನಾಳಗಳ ಒಳಪೊರೆಯಾದ ಎಂಡೋತೀಲಿಯಂ ಮೇಲೆ ಪ್ರಭಾವ ಬೀರುತ್ತದೆ. ರಕ್ತನಾಳಗಳು ವಿಶ್ರಾಂತಿ ಪಡೆಯಲು, ರಕ್ತದ ಹರಿವು ಹೆಚ್ಚಾಗಲು, ಹಾಗೂ ರಕ್ತದೊತ್ತಡ ಹಿಡಿತದಲ್ಲಿರಲು, ಎಂಡೋತೀಲಿಯಂ ಕಾರಣವಾಗಿದೆ.(1)

ಕಾಮಿಡಿ ಸಿನಿಮಾ ನೋಡುವಾಗ ನಗುವುದರಿಂದ, ಎಂಡೋತೀಲಿಯಂ ಮೇಲೆ ಪ್ರಭಾವ ಬೀರಿ, ಅದರಿಂದ ರಕ್ತನಾಳಗಳು ಶಾಂತವಾದವು ಹಾಗೂ ರಕ್ತದೊತ್ತಡದ ಇಳಿಕೆಯೊಂದಿಗೆ, ರಕ್ತದ ಹರಿವು ಚೆನ್ನಾಗಿ ಆಯಿತು ಎಂದು ಬಾಲ್ಟಿಮೋರ್‌, MD ಯಲ್ಲಿರುವ ಯುನಿವರ್ಸಿಟಿ ಆಫ್‌ ಮೇರಿಲ್ಯಾಂಡ್‌ ಸ್ಕೂಲ್‌ ಆಫ್‌ ಮೆಡಿಸಿನ್‌ನಲ್ಲಿ ನಡೆಸಿದ ಅಧ್ಯಯನವೊಂದು ಗಮನಿಸಿತು.(1)

ಆದರೆ, ಈ ಅಧ್ಯಯನ ಮತ್ತು ಇನ್ನಿತರ ಸಂಶೋಧನೆಗಳು ಇನ್ನೂ ಒಂದು ಮಾತನ್ನು ಹೇಳುತ್ತವೆ. ಅದೇನೆಂದರೆ, ಮಾನಸಿಕ ಒತ್ತಡ ಅನುಭವಿಸುವುದರಿಂದ ರಕ್ತನಾಳಗಳು ಕಿರಿದಾಗಿ, ರಕ್ತದ ಹರಿವು ಕಡಿಮೆಯಾಗುತ್ತದೆ. ಅದರಿಂದ ದೇಹದ ಬೇರೆ ಅಂಗಗಳಿಗೆ ಹರಿಯುವ ರಕ್ತದ ಅಳತೆ ಕಡಿಮೆಯಾಗಿ, ಅದು ರಕ್ತದೊತ್ತಡ ಏರಲು ದಾರಿ ಮಾಡಿಕೊಡುತ್ತದೆ.(2)

ನಗುವಿನ ಚಿಕಿತ್ಸೆಯು ರಕ್ತದೊತ್ತಡವನ್ನು ಕಡಿಮೆ ಮಾಡಬಹುದೇ ಎಂದು ತೀರ್ಮಾನಿಸಲು, ಜಪಾನಿನ ಒಸಾಕ ಯುನಿವರ್ಸಿಟಿಯ ಸಂಶೋಧಕರು ಒಂದು ಅಧ್ಯಯನ ನಡೆಸಿದರು. ಅದರಲ್ಲಿ ಕಂಡುಬಂದ ಫಲಿತಾಂಶಗಳು ಅಚ್ಚರಿ ಉಂಟುಮಾಡುವಂತಿದ್ದವು. ಏಕೆಂದರೆ, ನಗುವುದಕ್ಕೆಂದೇ ರೂಪಿಸಲಾದ ತರಗತಿಗಳಲ್ಲಿ ಪಾಲ್ಗೊಂಡವರ ರಕ್ತದೊತ್ತಡ, 5 mmHg ನಷ್ಟು ಕಡಿಮೆಯಾಗಿತ್ತು ಹಾಗೂ ನಗುವಿನ ತರಗತಿಗಳು ಮುಗಿದ ಕೂಡಲೇ, ಅವರ ರಕ್ತದೊತ್ತಡ 7 mmHg ನಷ್ಟು ಕಡಿಮೆಯಾಗಿತ್ತು. ನಗುವಿನ ತರಗತಿಗಳಲ್ಲಿ ಪಾಲ್ಗೊಳ್ಳದೆ ಇದ್ದವರ ರಕ್ತದೊತ್ತಡದ ಅಳತೆಯಲ್ಲಿ ಯಾವ ಬದಲಾವಣೆಯೂ ಕಾಣಲಿಲ್ಲ.(3)

ನಗುವಿನ ಒಂದು ಪ್ರಯೋಜನವೆಂದರೆ, ರಕ್ತದೊತ್ತಡದ ಮೇಲಿನ ಅದರ ಪರಿಣಾಮಗಳು 24 ಗಂಟೆಗಳವರೆಗೆ ಇರುತ್ತವೆ ಎಂದು ಕಂಡುಬಂದಿದೆ. ಡಾಕ್ಟರ್‌ ಸೂಚನೆ ಇಲ್ಲದೆಯೇ ನೀವೇ ತೆಗೆದುಕೊಳ್ಳಬಹುದಾದ ಅತಿ ಅಗ್ಗದ ಔಷಧವೆಂದರೆ, ಅದು ನಗು. ನಿಮ್ಮನ್ನು ಕಂಗೆಡಿಸುವ ಆರೋಗ್ಯ ತೊಂದರೆಗಳ ನಡುವೆಯೂ, ಬದುಕಿನಲ್ಲಿ ನಗುವಿನ ಕ್ಷಣಗಳನ್ನು ಸವಿಯುತ್ತ, ಎಲ್ಲಾ ಒಳ್ಳೆಯದಾಗುವುದು ಎನ್ನುವ ನಂಬಿಕೆಯಿಂದ ಇರುವುದು ತುಂಬ ಮುಖ್ಯ. ಇದರಿಂದ ಅದೆಷ್ಟೊ ಆರೋಗ್ಯದ ಲಾಭಗಳಿವೆ.(4)

ಕಡಿಮೆ ರಕ್ತದೊತ್ತಡದ ಕಡೆ ನಗುನಗುತ್ತ ದಾಪುಗಾಲು ಹಾಕಿ:

ಲಾಫ್ಟರ್‌ ಯೋಗ ಇಲ್ಲವೇ ನಗುವಿನ ಯೋಗ ಎಂಬುದು ನಯವಾದ ಉಸಿರಾಟ ಮತ್ತು ಕೈಕಾಲು ಚಾಚುವಿಕೆಯೊಂದಿಗೆ ನಗು ಉಕ್ಕಿಸುವ ಚಂದದ ವ್ಯಾಯಾಮಗಳನ್ನು ಒಳಗೊಂಡಿದೆ. ಇದರಲ್ಲಿ, ದೇಹ ಮತ್ತು ಮೆದುಳಿಗೆ ಹೆಚ್ಚು ಆಕ್ಸಿಜನ್‌ ಹೋಗುವುದು. ಇದರಿಂದ, ಸಿಸ್ಟಾಲಿಕ್‌ ಮತ್ತು ಡಯಸ್ಟಾಲಿಕ್‌ ರಕ್ತದೊತ್ತಡ ಹಾಗೂ ಒತ್ತಡದ ಮಟ್ಟಗಳು ಕಡಿಮೆಯಾಗುತ್ತವೆ.(5)

ನಿಮ್ಮ ನಗು ಅಪಾಯಕಾರಿಯಾಗದಿರಲಿ:

ತುಂಬ ಜೋರಾಗಿ ನಗುವುದನ್ನು ತಪ್ಪಿಸಿ. ಸುರಕ್ಷಿತವಾದ ಬಗೆಯನ್ನು ಪಾಲಿಸಿ. ಗಹಗಹಿಸಿ ನಗುವುದು ಹಾಗೂ ಒತ್ತಾಯದ ನಗು ಬೇಕಾಗಿಲ್ಲ ಮತ್ತು ಅದರಿಂದ ಉಪಯೋಗವಿಲ್ಲ. ಕೆಲವು ಹೊತ್ತಿನ ಬಳಿಕ, ದೇಹದಲ್ಲಿ ನಲಿವಿನ ಹಾರ್ಮೋನ್‌ಗಳು ಉಂಟಾಗುವುದು ನಿಲ್ಲುತ್ತದೆ ಹಾಗೂ ದೇಹ ನೆರವಿಗಾಗಿ ಅಂಗಲಾಚುತ್ತದೆ. ಅತಿಯಾದರೆ ಅಮೃತವೂ ವಿಷವಾಗುತ್ತದೆ.

-ನೀವು ಮಾಡುವ ಕೆಲಸಗಳಲ್ಲಿ ನಿಮ್ಮ ಮನಸ್ಸು ಮತ್ತು ಮೆದುಳು ತೊಡಗಿರಲಿ. ಯಾವುದೇ ವ್ಯಾಯಾಮ ದಿನಚರಿ ಶುರುಮಾಡುವ ಮುನ್ನ ನಿಮ್ಮ ಡಾಕ್ಟರ್‌ ಅನಿಸಿಕೆ ತಿಳಿಯಿರಿ.

-ನಗುವಿನಿಂದ ನಲಿವು ಹೆಚ್ಚುವುದು. ನಿಮ್ಮ ಮಿತಿಗಳನ್ನು ಗೌರವಿಸಿ. ನಿಮ್ಮ ಆರೋಗ್ಯ ನಿಮ್ಮ ಆದ್ಯತೆಯಾಗಲಿ. ನಿಮ್ಮ ಮೇಲೆ ನಿಮಗೆ ಕರುಣೆಯಿರಲಿ.

-ನೋವು ನಿಮಗೆ ಬೇಡ! ನಿಮ್ಮ ದೇಹಕ್ಕೆ ನೋವಾಗುವ ಇಲ್ಲವೇ ಅನನುಕೂಲವಾಗುವ ಯಾವುದೇ ಕೆಲಸ ಮಾಡಲು ಹೋಗಬೇಡಿ. ಯಾವುದೇ ಬಗೆಯ ನಗುವಿನ ವ್ಯಾಯಾಮಗಳನ್ನು ಮಾಡುವ ಮುನ್ನ ಡಾಕ್ಟರ್‌ ಸಲಹೆ ಪಡೆಯುವುದು ತುಂಬ ಮುಖ್ಯ.

-ಮನಸಾರೆ ನಗಬೇಕು, ಎಚ್ಚರದಿಂದ ಕುಡಿಯಬೇಕು. ನೀವು ನಕ್ಕ ಬಳಿಕ, ನಿಮ್ಮ ತಲೆ ಭಾರ ಅನಿಸಿದರೆ ಇಲ್ಲವೇ ಸಣ್ಣದಾಗಿ ತಲೆನೋವಾದರೆ, ನಿಮ್ಮ ದೇಹ ಎಚ್ಚರಿಕೆಯ ಗಂಟೆಯನ್ನು ಬಾರಿಸುತ್ತಿರಬಹುದು. ನಿಮ್ಮ ದೇಹ ದಣಿಯುವಷ್ಟು ಕೆಲಸ ಮಾಡಬೇಡಿ ಹಾಗೂ ಹೆಚ್ಚು ನೀರು ಕುಡಿಯಿರಿ.(6)

ಕೊನೆಯದಾಗಿ, ಒತ್ತಡವನ್ನು ಇಳಿಸಬಹುದಾದ ಹಾಗೂ ನೋವು ತಾಳಿಕೊಳ್ಳುವ ಶಕ್ತಿ ಹೆಚ್ಚಿಸಬಹುದಾದ, ದೇಹದಲ್ಲಿನ ರಾಸಾಯನಿಕ ಬದಲಾವಣೆಗಳಿಗೂ ನಗುವಿಗೂ ನಂಟಿದೆ.(7) ನಗುವುದರಿಂದ ಕಳೆದುಕೊಳ್ಳುವುದು ಏನೂ ಇಲ್ಲ. ಹಾಗಾದರೆ ಇನ್ನೇಕೆ ತಡ, ನಗಲು ಶುರುಮಾಡಿ.

ಉಲ್ಲೇಖ:

  1. Miller M, Fry WF. The effect of mirthful laughter on the human cardiovascular system. Medical hypotheses. 2009 Nov 1;73(5):636-9.
  2. Arrighi JA, Burg MM, Cohen IS, Kao AH, Pfau S, Caulin-Glaser T, Zaret BL, Soufer R. Myocardial blood-flow response during mental stress in patients with coronary artery disease. Lancet. 2000 Jul 22;356(9226):310-311.
  3. Music and laughter may help lower blood pressure [Internet]. Available from: https://www.webmd.com/hypertension-high-blood-pressure/news/20110325/music-and-laughter-may-help-lower-blood-pressure.
  4. American Heart Association. Does humor help your heart? How? [Internet]. Available from: http://www.heart.org/HEARTORG/Conditions/More/MyHeartandStrokeNews/Humor-helps-your-heart-How_UCM_447039_Article.jsp#.Xg4H5EczbIU.
  5. Laughing your way to lower blood pressure and less stress [Internet]. [cited 2005 May 15]. Available from: https://www.medscape.com/viewarticle/574552.
  6. Laughter Online University. Heart health: why laughter helps, saves lives [Internet]. Available from: https://www.laughteronlineuniversity.com/heart-health-and-laughter/.
  7. Louie D, Brook K, Frates E. The laughter prescription: a tool for lifestyle medicine. Am J Lifestyle Med. 2016 Jul;10(4):262-267.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.