Everything about blood pressure
Reading Time: 2 minutes

ಹೃದಯವು ರಕ್ತವನ್ನು ಪಂಪ್ ಮಾಡುವ ಮೂಲಕ ದೇಹದ ಎಲ್ಲಾ ಭಾಗಗಳಿಗೂ ಆಮ್ಲಜನಕ ಮತ್ತು ಶಕ್ತಿಯನ್ನು ಪೂರೈಸುತ್ತದೆ. ರಕ್ತವು ಹರಿಯುವಾಗ ರಕ್ತನಾಳಗಳ ಗೋಡೆಯ ಮೇಲೆ ಉಂಟಾಗುವ ಒತ್ತಡವನ್ನು ರಕ್ತದೊತ್ತಡ (ಬಿಪಿ) ಎನ್ನಲಾಗುತ್ತದೆ. ಅಧಿಕ ರಕ್ತದೊತ್ತಡವು ರಕ್ತನಾಳಗಳ ಮೇಲೆ ಮತ್ತು ಹೃದಯದ ಮೇಲೆ ಒತ್ತಡವನ್ನು ಹಾಕುತ್ತದೆ ಹಾಗೂ ಹೃದಯಾಘಾತ ಅಥವಾ ಬೇರೆ ಹೃದ್ರೋಗಗಳಿಗೆ ಕಾರಣವಾಗುತ್ತದೆ. ರಕ್ತದೊತ್ತಡವನ್ನು ಎರಡು ರೀಡಿಂಗ್‌ಗಳಿಂದ ಅಳೆಯಲಾಗುತ್ತದೆ – ಸಿಸ್ಟಾಲಿಕ್ ಮತ್ತು ಡಯಾಸ್ಟಾಲಿಕ್.(1)

ರಕ್ತದೊತ್ತಡದ ರೀಡಿಂಗ್ಗಳು

ಪ್ರತಿಯೊಂದು ಬಿಪಿ ರೀಡಿಂಗನ್ನು ಎರಡು ಸಂಖ್ಯೆಗಳಿಂದ ತೋರಿಸಲಾಗುತ್ತದೆ. ಮೊದಲನೆಯದು ಸಿಸ್ಟಾಲಿಕ್ ಬಿಪಿ, ಹೃದಯವು ದೇಹಕ್ಕೆ ರಕ್ತವನ್ನು ಪಂಪ್ ಮಾಡಿದಾಗ, ಒತ್ತಡ ಹೆಚ್ಚಿರುವ ಈ ಬಿಪಿ ಕಾಣಿಸಿಕೊಳ್ಳುತ್ತದೆ. ಮತ್ತೊಂದು ಡಯಾಸ್ಟಾಲಿಕ್ ಬಿಪಿ, ಈ ಬಿಪಿ ಎದೆ ಬಡಿತದ ನಡುವೆ ಕಾಣಿಸಿಕೊಳ್ಳುವುದರಿಂದ ಕಡಿಮೆ ಒತ್ತಡವನ್ನು ಹೊಂದಿರುತ್ತದೆ. ಸಿಸ್ಟಾಲಿಕ್ ಒತ್ತಡವನ್ನು ರೀಡಿಂಗ್‌ನ ಮೇಲ್ಭಾಗದಲ್ಲಿ ತೋರಲಾಗುತ್ತದೆ, ಹಾಗೆಯೇ ಡಯಾಸ್ಟಾಲಿಕ್ ಒತ್ತಡವನ್ನು ರೀಡಿಂಗ್‌ನ ಕೆಳಭಾಗದಲ್ಲಿ ತೋರಲಾಗುತ್ತದೆ.(1)

ಸಹಜ ರಕ್ತದೊತ್ತಡ ಎಂದರೇನು

ರಕ್ತದೊತ್ತಡವನ್ನು ಮಿಲಿಮೀಟರ್ಸ್‌ ಆಫ್ ಮರ್ಕ್ಯೂರಿಯ ಯೂನಿಟ್‌ಗಳಲ್ಲಿ ಅಳೆಯಲಾಗುತ್ತದೆ (mmHg). ಸಹಜ ರಕ್ತದೊತ್ತಡವು ಸಾಮಾನ್ಯವಾಗಿ 120/80 mmHg ಗಿಂತ ಕಡಿಮೆ ಇರುತ್ತದೆ, ಇದರಲ್ಲಿ 120 ಸಿಸ್ಟಾಲಿಕ್ ಬಿಪಿ ಆಗಿದ್ದರೆ, 80 ಡಯಾಸ್ಟಾಲಿಕ್ ಬಿಪಿ ಆಗಿರುತ್ತದೆ.(3)

ರಕ್ತದೊತ್ತಡದ ರೀಡಿಂಗನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?

ನಿಮ್ಮ ರಕ್ತದೊತ್ತಡವು 90/60 ಗಿಂತ ಕಡಿಮೆ ಇದ್ದರೆ, ನೀವು ಲೋ ಬಿಪಿ (ಕಡಿಮೆ ರಕ್ತದೊತ್ತಡ) ಹೊಂದಿರುವ ಸಾಧ್ಯತೆ ಇರುತ್ತದೆ.

ಒಂದುವೇಳೆ ರೀಡಿಂಗ್ 90/60 ಗಿಂತ ಹೆಚ್ಚಿದ್ದು, 120/80 ಗಿಂತ ಕಡಿಮೆ ಇದ್ದರೆ ನಿಮ್ಮ ಬಿಪಿ ಸಹಜವಾಗಿದೆ ಎಂದರ್ಥ.

ನಿಮ್ಮ ಬಿಪಿ 120/80 ಗಿಂತ ಹೆಚ್ಚಿದ್ದು, 140/90 ಗಿಂತ ಕಡಿಮೆ ಇದ್ದರೆ, ಸಹಜ ಮಟ್ಟಕ್ಕಿಂತ ಹೆಚ್ಚಿನ ಬಿಪಿ ಹೊಂದಿದ್ದೀರಿ ಎಂದು ಪರಿಗಣಿಸಲಾಗುತ್ತದೆ. ಜೀವನಶೈಲಿಯಲ್ಲಿ ಬದಲಾವಣೆಗಳನ್ನು ತಂದುಕೊಳ್ಳುವ ಮೂಲಕ ನೀವು ಇದನ್ನು ಕಡಿಮೆ ಮಾಡಿಕೊಳ್ಳಬೇಕಿರುತ್ತದೆ.

ಕೆಲವು ವಾರಗಳಿಂದ ರೀಡಿಂಗ್ ಮಟ್ಟ 140/90 ಗಿಂತ ಹೆಚ್ಚು ತೋರುತ್ತಿದೆ ಎಂದರೆ, ನೀವು ಹೈ ಬಿಪಿ (ಅಧಿಕ ರಕ್ತದೊತ್ತಡ) ಹೊಂದಿರುವ ಸಾಧ್ಯತೆ ಇರುತ್ತದೆ.(4)

ಅಧಿಕ ರಕ್ತದೊತ್ತಡ ಎಂದರೇನು?

ನಿಮ್ಮ ರಕ್ತದೊತ್ತಡವು ಯಾವಾಗಲೂ ಅಧಿಕವಾಗಿದ್ದಾಗ ಹೈ ಬಿಪಿ ಕಾಣಿಸಿಕೊಳ್ಳುತ್ತದೆ. ಈ ಸ್ಥಿತಿಯಲ್ಲಿ ಒಂದು ಅಥವಾ ಎರಡೂ ರೀಡಿಂಗ್‌ಗಳು 130/80 mmHg ಗಿಂತ ಹೆಚ್ಚು ತೋರುತ್ತವೆ.(4,5) ಈ ಸಮಸ್ಯೆಯು ನಿಮ್ಮ ಹೃದಯದ ಮೇಲೆ ಹೆಚ್ಚಿನ ಒತ್ತಡವನ್ನು ಹಾಕುತ್ತದೆ ಹಾಗೂ ಪಾರ್ಶ್ವವಾಯು, ಹೃದಯ ವೈಫಲ್ಯ, ಹೃದಯಾಘಾತ ಮತ್ತು ಕಿಡ್ನಿ ವೈಫಲ್ಯದಂತಹ ಆರೋಗ್ಯ ಸಮಸ್ಯೆಯ ಅಪಾಯವನ್ನು ಹೆಚ್ಚಿಸುತ್ತದೆ.(1,5)

ಅಧಿಕ ರಕ್ತದೊತ್ತಡವು ಯಾವುದೇ ಲಕ್ಷಣಗಳನ್ನು ತೋರುವುದಿಲ್ಲ, ಹಾಗಾಗಿ ನಿಯಮಿತ ಬಿಪಿ ತಪಾಸಣೆ ಮೂಲಕ ಮಾತ್ರ ಅದನ್ನು ತೊಡೆದು ಹಾಕಬಹುದಾಗಿದೆ.(6)

ರಕ್ತದೊತ್ತಡದ ಏರಿಕೆಯನ್ನು ವಿವರಿಸುವುದು ಹೇಗೆ?

ರಕ್ತದೊತ್ತಡವು ಸಹಜ ಮಟ್ಟಕ್ಕಿಂತಲೂ ಹೆಚ್ಚಿದ್ದಾಗ ರಕ್ತದೊತ್ತಡದ ಏರಿಕೆ ಎಂದು ಹೇಳಲಾಗುತ್ತದೆ. ಈ ಸ್ಥಿತಿಯಲ್ಲಿ ಸಿಸ್ಟಾಲಿಕ್ ಒತ್ತಡವು 120 ಮತ್ತು 130 mmHg ನಡುವೆ ಇರುತ್ತದೆ, ಹಾಗೂ ಡಯಾಸ್ಟಾಲಿಕ್ ಒತ್ತಡ 80 mmHg ಗಿಂತ ಕಡಿಮೆ ಇರುತ್ತದೆ.(5) ಹೈ ಬಿಪಿ ಮತ್ತು ಏರಿಕೆಯಾದ ಬಿಪಿ ಎರಡೂ ಕೂಡ ನಿಮ್ಮನ್ನು ಹೃದಯಾಘಾತ, ಪಾರ್ಶ್ವವಾಯು ಅಥವಾ ಹೃದಯ ವೈಫಲ್ಯಕ್ಕೆ ದೂಡುತ್ತದೆ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಏರಿಕೆಯಾದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡಬಹುದಾಗಿದೆ. ಏರಿಕೆಯಾದ ರಕ್ತದೊತ್ತಡ ಕೂಡ ಯಾವುದೇ ಕಾಣಿಸಿಕೊಳ್ಳುವ ಲಕ್ಷಣಗಳನ್ನು ಹೊಂದಿರುವುದಿಲ್ಲ.(6)

ಹೈಪರ್‌ಟೆನ್ಶನ್ ಅನ್ನು ಪ್ರಾರಂಭದಲ್ಲಿಯೇ ಸದೆಬಡಿಯುವ, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ರಕ್ತದೊತ್ತಡವನ್ನು ಸಹಜ ಮಟ್ಟದಲ್ಲಿ ಇರಿಸಿಕೊಳ್ಳುವುದು ತುಂಬ ಮುಖ್ಯ. ಚಿಕಿತ್ಸೆಗೊಳಪಡದ ಅಧಿಕ ರಕ್ತದೊತ್ತಡ ಬೇರೆಬೇರೆ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ; ಆದ್ದರಿಂದ, ಮುಂದಾಗಬಹುದಾದ ಆರೋಗ್ಯ ಸಮಸ್ಯೆಯನ್ನು ತಪ್ಪಿಸಲು ರಕ್ತದೊತ್ತಡವನ್ನು ಹದ್ದುಬಸ್ತಿನಲ್ಲಿ ಇಡುವುದು ತುಂಬ ಮುಖ್ಯವಾಗಿದೆ.

ಉಲ್ಲೆಖ:

  1. Blood Pressure UK. Blood pressure and you [Internet]. Available from: http://www.bloodpressureuk.org/BloodPressureandyou/Thebasics/Bloodpressure.
  2. American Heart Association. What is high blood pressure? [Internet]. [updated 2019 Oct 31; cited 2020 Jan 11]. Available from: https://www.heart.org/en/health-topics/high-blood-pressure/the-facts-about-high-blood-pressure/what-is-high-blood-pressure.
  3. National Center for Biotechnology Information. What is blood pressure and how is it measured? [Internet]. [updated 2019 May 23; cited 2020 Jan 11]. Available from: https://www.ncbi.nlm.nih.gov/books/NBK279251/.
  4. Blood Pressure UK. Blood pressure chart [Internet]. Available from: http://www.bloodpressureuk.org/BloodPressureandyou/Thebasics/Bloodpressurechart.
  5. MedlinePlus. High blood pressure-adults [Internet]. Available from: https://medlineplus.gov/ency/article/000468.htm.
  6. Mayo Clinic. Elevated blood pressure [Internet]. [updated 2019 Oct 6; cited 2020 Jan 11]. Available from: https://www.mayoclinic.org/diseases-conditions/prehypertension/symptoms-causes/syc-20376703.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.