Best time to take high blood pressure medicine
Reading Time: 2 minutes

ಅಧಿಕ ರಕ್ತದೊತ್ತಡವನ್ನು ಮೂಕ ಕೊಲೆಗಾರ ಎಂದೂ ಕರೆಯುತ್ತಾರೆ, ಏಕೆಂದರೆ ಹೆಚ್ಚಿನ ಜನರಿಗೆ ತಮಗೆ ಅಧಿಕ ರಕ್ತದೊತ್ತಡ ಇರುವುದರ ಕುರಿತೇ  ಅರಿವಿರುವುದಿಲ್ಲ. ಅಧಿಕ ರಕ್ತದೊತ್ತಡ ಹೊಂದಿರುವ ವ್ಯಕ್ತಿಯಲ್ಲಿ ತಕ್ಷಣವೇ ರೋಗಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ, ಇದು ಚಿಕಿತ್ಸೆಗೊಳಪಡದಿದ್ದರೆ ಅಧಿಕ ರಕ್ತದೊತ್ತಡವು ನಿಮಗೆ ತುಂಬ ಅನಾರೋಗ್ಯ ಉಂಟುಮಾಡಿ ಸಾವಿಗೂ ಕಾರಣವಾಗಬಹುದು. ಅಧಿಕ ರಕ್ತದೊತ್ತಡವು ಈ ಕೆಳಗಿನ ಯಾವುದೇ ಪರಿಸ್ಥಿತಿಗಳಿಗೆ ದಾರಿಮಾಡಿಕೊಡಬಹುದು:

  • ಪಾರ್ಶ್ವವಾಯು
  • ಹೃದಯಾಘಾತ
  • ಮೂತ್ರಪಿಂಡ ವೈಫಲ್ಯ
  • ಕುರುಡುತನ

ಜೀವ ಉಳಿಸುವಂತಹ ಔಷಧಗಳ ಮೂಲಕ ಇದನ್ನು ನಿಯಂತ್ರಿಸಬಹುದಾಗಿದೆ. ಪ್ರತಿದಿನ ವ್ಯಾಯಾಮ ಮಾಡುವ, ಆರೋಗ್ಯಕರ ಆಹಾರವನ್ನು ಸೇವಿಸುವ ಮತ್ತು ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಇದನ್ನು ನಿಯಂತ್ರಣದಲ್ಲಿಡಬಹುದು.1 ವಿಶ್ವಾದ್ಯಂತ ಸುಮಾರು1.13 ಶತಕೋಟಿ ಜನರು ಅಧಿಕ ರಕ್ತದೊತ್ತಡವನ್ನು ಹೊಂದಿದ್ದಾರೆ, ಆದರೆ ಇವರಲ್ಲಿ, ಐದಕ್ಕೆ ಒಬ್ಬರು ಮಾತ್ರ ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾರೆ ಎಂದು ನಿಮಗೆ ತಿಳಿದಿದೆಯೇ?2

ನಿಮ್ಮ ರಕ್ತದೊತ್ತಡದ ಔಷಧ ಸೇವನೆಯ ಸಮಯವನ್ನು ಬದಲಾಯಿಸುವುದರಿಂದ ಅದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ನಿಮಗೆ ನೆರವಾಗಬಹುದೇ? ಹೊಸ ಅಧ್ಯಯನವೊಂದು, ರಕ್ತದೊತ್ತಡದ ಔಷಧಿಗಳನ್ನು ಬೆಳಿಗ್ಗೆಗಿಂತ ಹೆಚ್ಚಾಗಿ, ರಾತ್ರಿಯಲ್ಲಿ ತೆಗೆದುಕೊಳ್ಳುವುದರಿಂದ ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದ ಅಪಾಯಗಳನ್ನು ಅರ್ಧದಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸೂಚಿಸುತ್ತದೆ.3

ಸಂಶೋಧನೆ ಏನು ಹೇಳುತ್ತದೆ?

2008 ಮತ್ತು 2018 ರ ನಡುವೆ ಸ್ಪೇನ್‌ನ 40 ಪ್ರಾಥಮಿಕ ಆರೈಕೆ ಚಿಕಿತ್ಸಾಲಯಗಳಲ್ಲಿ ಒಂದು ಅಧ್ಯಯನವನ್ನು ನಡೆಸಲಾಯಿತು. ಅಧಿಕ ರಕ್ತದೊತ್ತಡ ಹೊಂದಿರುವ ಸುಮಾರು 19,000 ವ್ಯಕ್ತಿಗಳು (ಸರಾಸರಿ ವಯಸ್ಸು – 60 ವರ್ಷಗಳು) ಈ ಅಧ್ಯಯನದಲ್ಲಿ ಭಾಗವಹಿಸಿದ್ದರು. ಭಾಗವಹಿಸಿದವರನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿತ್ತು. ಒಂದು ಗುಂಪನ್ನು ತಮ್ಮ ರಕ್ತದೊತ್ತಡದ ಔಷಧಿಗಳನ್ನು ಬೆಳಿಗ್ಗೆ ಮತ್ತು ಇನ್ನೊಂದು ಗುಂಪನ್ನು ಮಲಗುವ ವೇಳೆಗೆ ತೆಗೆದುಕೊಳ್ಳುವಂತೆ ಸೂಚಿಸಲಾಯಿತು. ಈ ಎಲ್ಲಾ ವ್ಯಕ್ತಿಗಳನ್ನು ಸರಾಸರಿ ಆರು ವರ್ಷಗಳವರೆಗೆ ಟ್ರ್ಯಾಕ್ ಮಾಡಲಾಯಿತು. ಪ್ರತಿಯೊಬ್ಬ ವ್ಯಕ್ತಿಯನ್ನು ವರ್ಷಕ್ಕೊಮ್ಮೆಯಾದರೂ ವೈದ್ಯಕೀಯವಾಗಿ ಪರೀಕ್ಷೆಗೊಳಪಡಿಸಲಾಗುತ್ತಿತ್ತು ಮತ್ತು ಅವರ ರಕ್ತದೊತ್ತಡದ ಮೇಲೆ 48 ಗಂಟೆಗಳ ಕಾಲ ನಿಗಾವಹಿಸಲಾಗುತ್ತಿತ್ತು. ಈ ವ್ಯಕ್ತಿಗಳಲ್ಲಿ ಈ ಕೆಳಗಿನ ಯಾವುದಾದರೂ ಸ್ಥಿತಿ ಸಂಭವಿಸುತ್ತದೆಯೇ ಎಂದು ಸಂಶೋಧಕರು ದಾಖಲಿಸಿದ್ದಾರೆ.

  • ಪಾರ್ಶ್ವವಾಯು
  • ಹೃದಯ ವೈಫಲ್ಯ
  • ಹೃದಯಾಘಾತ
  • ಕಟ್ಟಿಕೊಂಡ ಅಥವಾ ಕಿರಿದಾದ ಹೃದಯದ ಆರ್ಟರಿಗಳನ್ನು ಅಗಲಗೊಳಿಸುವ ಚಿಕಿತ್ಸೆ
  • ಹೃದಯರಕ್ತನಾಳದ ಕಾಯಿಲೆಗಳಿಂದ ಸಾವು

ಅಧ್ಯಯನದ ಕೊನೆಯಲ್ಲಿ, ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ 9% ವ್ಯಕ್ತಿಗಳು ಮೇಲಿನ ಒಂದು ಅಥವಾ ಹೆಚ್ಚಿನ ತೊಂದರೆಗಳನ್ನು ಅನುಭವಿಸಿದ್ದಾರೆ. ಆದರೆ ಮಲಗುವ ವೇಳೆಗೆ ತಮ್ಮ  ಮಾತ್ರೆಗಳನ್ನು ತೆಗೆದುಕೊಂಡವರು ಮೇಲಿನ ಯಾವುದೇ ಪರಿಸ್ಥಿತಿಗಳನ್ನು ಎದುರಿಸುವಂತಹ ಸಾಧ್ಯತೆ 45% ನಷ್ಟು ಕಡಿಮೆ ಆಗಿತ್ತು ಎಂದು ಅಧ್ಯಯನವು ಕಂಡುಹಿಡಿದಿದೆ. ಮಲಗುವ ಸಮಯದಲ್ಲಿ ಅಧಿಕ ರಕ್ತದೊತ್ತಡದ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಮೂತ್ರಪಿಂಡದ ಕಾರ್ಯವೂ ಸುಧಾರಿಸುತ್ತದೆ ಮತ್ತು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಗಮನಾರ್ಹವಾಗಿ ಕಡಿಮೆಯಾಗುತ್ತದೆ ಎಂದು ಕೂಡ ಸಂಶೋಧಕರು ಕಂಡುಕೊಂಡಿದ್ದಾರೆ.3

ಆರೋಗ್ಯವಂತ ವ್ಯಕ್ತಿಗಳಲ್ಲಿ ಮತ್ತು ಅಧಿಕ ರಕ್ತದೊತ್ತಡ ಹೊಂದಿರುವ ಕೆಲವು ರೋಗಿಗಳಲ್ಲಿ, ರಕ್ತದೊತ್ತಡವು ಪ್ರತಿ 24 ಗಂಟೆಗಳಿಗೊಮ್ಮೆ ಪುನರಾವರ್ತಿಸುವ ಒಂದು ಲಯವಾದ ಸಿರ್ಕಾಡಿಯನ್ ಲಯವನ್ನು ತೋರುತ್ತದೆ – ವಿಶ್ರಾಂತಿ ಸಮಯದಲ್ಲಿ, ರಾತ್ರಿಗಳಲ್ಲಿ ರಕ್ತದೊತ್ತಡವು ಕುಸಿದಿರುತ್ತದೆ, ಬೆಳಿಗ್ಗೆ ತುಂಬ ಹೆಚ್ಚಾಗುತ್ತದೆ ಮತ್ತು ಸಾಮಾನ್ಯವಾಗಿ ಮಧ್ಯಾಹ್ನದ ಹೊತ್ತಿಗೆ ಹೆಚ್ಚಿರುತ್ತದೆ.4 ಆದಾಗ್ಯೂ, ಅಧಿಕ ರಕ್ತದೊತ್ತಡ ಹೊಂದಿರುವ ಕೆಲವು ವ್ಯಕ್ತಿಗಳಲ್ಲಿ, ರಕ್ತದೊತ್ತಡ ರಾತ್ರಿಯ ಹೊತ್ತಿಗೆ ಕುಸಿತ ಕಂಡಿರುವುದಿಲ್ಲ.5 ಇದಕ್ಕೆ ಕಾರಣ, ಅವರ ಅಧಿಕ ರಕ್ತದೊತ್ತಡದ ಔಷಧಿಗಳ ಪರಿಣಾಮವು ಸಾಕಷ್ಟು ಸಮಯದವರೆಗೆ ಇರುವುದಿಲ್ಲ. ಬೆಳಿಗ್ಗೆ ತೆಗೆದುಕೊಂಡ ಔಷಧಿಗಳ ಪರಿಣಾಮವು ರಾತ್ರಿಯ ಹೊತ್ತಿಗೆ ಇಳಿದಿರಬಹುದು, ಇದರ ಪರಿಣಾಮವಾಗಿ ಅದು ರಕ್ತದೊತ್ತಡವನ್ನು ಇಳಿಸದೆ ಇರಬಹುದು.6 ಅಂತಹ ವ್ಯಕ್ತಿಗಳು 24 ಗಂಟೆಗಳ ಕಾಲವೂ ಅಧಿಕ ರಕ್ತದೊತ್ತಡಕ್ಕೆ ದೀರ್ಘಕಾಲದವರೆಗೆ ಒಡ್ಡಿಕೊಂಡಿರುತ್ತಾರೆ ಮತ್ತು ಇವರುಗಳೇ ಅಧಿಕ ರಕ್ತದೊತ್ತಡದಿಂದ ಹೆಚ್ಚಿನ ತೊಂದರೆಗಳನ್ನು ಎದುರಿಸಬಹುದು ಎಂದು ಅನೇಕ ಅಧ್ಯಯನಗಳು ಸೂಚಿಸುತ್ತವೆ.

ಶಿಫಾರಸ್ಸುಗಳು

ಹಲವಾರು ಅಧ್ಯಯನಗಳಲ್ಲಿ ಕಂಡುಬರುವಂತೆ, ನಿಮ್ಮ ರಕ್ತದೊತ್ತಡದ ಔಷಧಿಗಳನ್ನು ಮಲಗುವ ವೇಳೆಗೆ ತೆಗೆದುಕೊಳ್ಳುವುದರಿಂದ ಅಧಿಕ ರಕ್ತದೊತ್ತಡಕ್ಕೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಉಂಟಾಗುವ ತೊಂದರೆಗಳನ್ನು ತಡೆಯಬಹುದು.5 ಆದಾಗ್ಯೂ, ನಿಮ್ಮ ಪ್ರಸ್ತುತ ರಕ್ತದೊತ್ತಡದ ಔಷಧಿ ದಿನಚರಿಯಲ್ಲಿ, ಯಾವುದೇ ಬದಲಾವಣೆಗಳನ್ನು ಮಾಡುವ ಮೊದಲು ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು.7

ಅಲ್ಲದೆ, ಕೇವಲ ಔಷಧಿಗಳನ್ನು ತೆಗೆದುಕೊಳ್ಳುವುದು ಸಾಕಾಗುವುದಿಲ್ಲ. ಔಷಧಿಗಳ ಕಟ್ಟುಪಾಡುಗಳೊಂದಿಗೆ ಆರೋಗ್ಯಕರ ಆಹಾರ ಮತ್ತು ಸಕ್ರಿಯ ಜೀವನಶೈಲಿ ಇದ್ದಾಗ, ನಿಮ್ಮ ದೇಹವು ಹೆಚ್ಚು ಸಮಯದವರೆಗೆ ಆರೋಗ್ಯಕರವಾಗಿರುತ್ತದೆ. ಆದ್ದರಿಂದ, ನಿಮ್ಮ ಆರೋಗ್ಯದ ಕಾಳಜಿವಹಿಸಿ ಮತ್ತು ನಿಮ್ಮ ದೇಹವನ್ನು ದೇವಾಲಯದಂತೆ ನೋಡಿಕೊಳ್ಳಿ, ಆಗ ಮಾತ್ರ ಅದು ನಿಮಗೆ ಉತ್ತಮವಾಗಿ ಸೇವೆ ಸಲ್ಲಿಸುತ್ತದೆ.


ಉಲ್ಲೇಖಗಳು:

  1. U.S. Food and Drug Administration. High blood pressure–medicines to help you [Internet]. [updated 2019 May 22; cited 2019 Nov 18]. Available from: https://www.fda.gov/consumers/free-publications-women/high-blood-pressure-medicines-help-you.
  2. World Health Organization. World hypertension day 2019 [Internet]. [cited 2019 Nov 18]. Available from: https://www.who.int/cardiovascular_diseases/world-hypertension-day-2019/en/.
  3. Hermida RC, Crespo JJ, Domínguez-Sardiña M, Otero A, Moyá A, Ríos MT, et al. Bedtime hypertension treatment improves cardiovascular risk reduction: the Hygia Chronotherapy Trial. Eur Heart J. 2019 Oct 22;pii:ehz754. doi: 10.1093/eurheartj/ehz754.
  4. Douma LG, Gumz ML. Circadian clock-mediated regulation of blood pressure. Free Radic Biol Med. 2018 May 1;119:108-114. doi: 10.1016/j.freeradbiomed.
  5. Cuspidi C, Michev I, Meani S, Valerio C, Bertazzoli G, et al. Non-dipper treated hypertensive patients do not have increased cardiac structural alterations. Cardiovasc Ultrasound2003 Feb 14;1:1.
  6. Chonan K, Hashimoto J, Ohkubo T, Tsuji I, Nagai K, Kikuya M, et al. Insufficient duration of action of antihypertensive drugs mediates high blood pressure in the morning in hypertensive population: the Ohasama study. Clin Exp Hypertens. 2002 May;24(4):261-275.
  7. American Heart Association. Managing high blood pressure medications [Internet]. [updated 2016 Oct 31; cited 2019 Nov 18]. Available from: https://www.heart.org/en/health-topics/high-blood-pressure/changes-you-can-make-to-manage-high-blood-pressure/managing-high-blood-pressure-medications.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.