23 ಏಪ್ರಿಲ್, 2020 ರಂದು ರಂಜಾನ್ ಪವಿತ್ರ ಮಾಸ ಪ್ರಾರಂಭವಾಗಲಿದೆ. ಈ ಸಮಯದಲ್ಲಿ, ಪ್ರಪಂಚದಲ್ಲೆಡೆ ಇರುವ ಮುಸ್ಲಿಮ್ ಬಾಂಧವರಿಗೆ ದಿನದ ಎರಡು ಭೋಜನಗಳಾದ – ಸುಹೂರ್ ಮತು ಇಫ್ತಾರ್ ಮಾತ್ರವೇ ದಿನದಲ್ಲಿ ಸೇವಿಸಬಹುದಾಗಿದೆ. ಅಂದರೆ ಈ ಎರಡು ಊಟಗಳಲ್ಲೇ ಅವರು ಇಡೀ ದಿನದ ಪೌಷ್ಟಿಕಾಂಶಗಳನ್ನು ಪಡೆದುಕೊಳ್ಳಬೇಕಿರುತ್ತದೆ. ಡಯಾಬಿಟಿಸ್ ಇರುವವರು ಯಾರಾದರು ಉಪವಾಸ ಕೈಗೊಂಡಿದ್ದರೆ, ಅವರ ಆಹಾರಕ್ರಮದಲ್ಲಿನ ಬದಲಾವಣೆಯೊಂದಿಗೆ, ಅವರ ದಿನಚರಿ, ಸ್ವಯಂ ಆರೈಕೆಯ ಅಭ್ಯಾಸಗಳಲ್ಲೂ ಬದಲಾವಣೆಗಳನ್ನು ತರಬೇಕಿರುತ್ತದೆ ಹಾಗೂ ಇದನ್ನು ಅವರು ಸುಹೂರ್ ಹೊತ್ತಲ್ಲೇ ಮಾಡಬೇಕಿರುತ್ತದೆ.
ಸುಹೂರ್ ಭೋಜನವನ್ನು ಸೂರ್ಯ ಉದಯಿಸುವುದಕ್ಕಿಂತಲೂ ಮುನ್ನ ಸೇವಿಸಬೇಕು ಹಾಗೂ ಉಪವಾಸ ಕೈಗೊಂಡಿರುವವರು ತದನಂತರ ಯಾವುದೇ ಆಹಾರ ಅಥವಾ ನೀರನ್ನು ಕುಡಿಯುವಂತಿರುವುದಿಲ್ಲ. ಇದೇ ಕಾರಣಕ್ಕಾಗಿ, ಸುಹೂರ್ ಅಂತಹವರಿಗೆ ದಿನದ ಬಹುಮುಖ್ಯ ಭೋಜನವಾಗಿರುತ್ತದೆ. ಹಾಗಾಗಿ, ನೀವೇನೇ ತಿಂದರೂ ಅದು ಇಡೀ ದಿನವನ್ನು ಸಮರ್ಥವಾಗಿ ಕಳೆಯಲು ಬೇಕಾದ ಶಕ್ತಿಯನ್ನು ಒದಗಿಸುವಷ್ಟು ಆರೋಗ್ಯಕರವಾಗಿರಬೇಕಾಗುತ್ತದೆ.
ನಿಮ್ಮ ಸುಹೂರ್ ಅನ್ನು ಆರೋಗ್ಯಕರವಾಗಿಸಲು ಇಲ್ಲಿ ಕೆಲವು ಸಲಹೆಗಳಿವೆ.
ನಿಮ್ಮ ಬ್ಲಡ್ ಗ್ಲೂಕೋಸ್ ಅನ್ನು ಪರೀಕ್ಷಿಸಿ
ಬೆಳಗ್ಗೆ ಎದ್ದೊಡನೆ, ನಿಮ್ಮ ಸುಹೂರ್ ಭೋಜನವನ್ನು ಸೇವಿಸುವ ಮುನ್ನ ನಿಮ್ಮ ಬ್ಲಡ್ ಗ್ಲುಕೋಸ್ ಅನ್ನು ಪರೀಕ್ಷಿಸಲು ಮರೆಯದಿರಿ. ಇದು ನಿಮ್ಮ ಬ್ಲಡ್ ಶುಗರ್ ಮಟ್ಟವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ನೆರವಾಗುವುದಲ್ಲದೆ, ಇದು ನಿಮ್ಮ ಬ್ಲಡ್ ಶುಗರ್ ಮಟ್ಟ ಇಡೀ ದಿನ ಉಪವಾಸವನ್ನು ಕೈಗೊಳ್ಳುವಷ್ಟು ಉತ್ತಮ ಮಟ್ಟದಲ್ಲಿದೆಯೇ ಎಂಬುದನ್ನು ತಿಳಿಸಿಕೊಡುತ್ತದೆ. ನೀವು ಗಮನದಲ್ಲಿಟ್ಟುಕೊಳ್ಳಬೇಕಾದ ಮಟ್ಟಗಳು ಯಾವುವು ಎಂದು ಹೇಳಲು ನಿಮ್ಮ ವೈದ್ಯರೇ ಸರಿಯಾದ ವ್ಯಕ್ತಿ. ಒಂದು ವೇಳೆ ನಿಮ್ಮ ಬ್ಲಡ್ ಶುಗರ್ ಮಟ್ಟಗಳು ಆರೋಗ್ಯಕರ ವ್ಯಾಪ್ತಿಯಲ್ಲಿ ಇಲ್ಲದಿದ್ದರೆ, ಯಾವುದೇ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ನಿಮ್ಮ ವೈದ್ಯರ ಸಲಹೆಗಳನ್ನು ಪಾಲಿಸಿ.
ನಿಮ್ಮ ಸುಹೂರ್ ತಟ್ಟೆ
ಮೊಟ್ಟೆ, ಓಟ್‍ಮೀಲ್ (ಇನ್‌ಸ್ಟಂಟ್ ಓಟ್ಸ್‌ಗಿಂತ ರೋಲ್ಡ್ ಅಥವಾ ಸ್ಟೀಲ್-ಕಟ್ ಓಟ್ಸ್ ಬಳಸಿ), ಮತ್ತು ಚಪಾತಿಯಂತಹ ಆಹಾರಗಳು ಕಡಿಮೆ ಬ್ಲಡ್ ಶುಗರ್‌ನಂತಹ ಯಾವುದೇ ತೊಂದರೆಗಳಿಗೂ ಒಳಗಾಗದೆ ಇಡೀ ದಿನದ ಉಪವಾಸವನ್ನು ಸಮರ್ಥವಾಗಿ ಕಳೆಯಲು ಬೇಕಾದ ಪೋಷಕಾಂಶಗಳನ್ನು ಹೊಂದಿರುತ್ತವೆ. ಸಾಕಷ್ಟು ನೀರನ್ನು ಕುಡಿಯುವುದು ಸಹ ಅಷ್ಟೇ ಮುಖ್ಯ. ದಿನಕ್ಕೆ ಎಂಟು ಲೋಟ ನೀರು ಕುಡಿಯುವುದು ಒಳ್ಳೆಯದು, ಆದರೆ ಸುಹೂರ್ ಸಮಯದಲ್ಲಿ ನೀವು ನಾಲ್ಕು ಲೋಟ ನೀರನ್ನು ಕುಡಿಯಬಹುದು. ಈ ರೀತಿಯಾಗಿ, ನೀವು ಇಡೀ ದಿನ ನಿಮ್ಮ ದೇಹದ ಶಕ್ತಿಯನ್ನು ಹಾಗೂ ನೀರಿನಾಂಶವನ್ನು ಕಾಯ್ದುಕೊಳ್ಳಬಹುದು.
ಮಾದರಿ ಸುಹೂರ್ ತಟ್ಟೆಯಲ್ಲಿ ಈ ಅಂಶಗಳು ಇರುತ್ತವೆ:
- ಎರಡು ಚಪಾತಿ ಅಥವಾ ಒಂದು ಬಟ್ಟಲು ಓಟ್‍ಮೀಲ್: ಕಾರ್ಬೋಹೈಡ್ರೇಟ್ಸ್‌ಗಾಗಿ
- ಮೊಟ್ಟೆ, ಚಿಕನ್, ಬೇಳೆ, ಮೊಳಕೆಕಾಳು, ಸೋಯಾ ಅಥವಾ ಪನೀರ್: ಇವು ಪ್ರೋಟೀನ್‍ನ ಒಳ್ಳೆ ಮೂಲಗಳು.
- ಸೇಬು, ಪಪಾಯ, ಪೇರಳೆ, ಹಸಿರು ಸೊಪ್ಪುಗಳು ಇತ್ಯಾದಿ
- ನೀರು: ಇಫ್ತಾರ್‌ವರೆಗೆ ದೇಹದ ನೀರಿನಾಂಶವನ್ನು ಕಾಪಾಡಿಕೊಳ್ಳಲು
ನಿಮ್ಮ ಸುಹೂರ್ ಭೋಜನವನ್ನು ಸಿದ್ಧಪಡಿಸುವಾಗ ನೆನಪಿಡಬೇಕಾದ ಕೆಲವು ಅಂಶಗಳು:
- ಆಹಾರದಲ್ಲಿ ಎರಡು ಟೀಸ್ಪೂನ್‌ಗೂ ಹೆಚ್ಚು ಎಣ್ಣೆಯನ್ನು ಬಳಸಬೇಡಿ.
- ಆಹಾರದಲ್ಲಿ ಬಳಸುವ ಉಪ್ಪಿನ ಪ್ರಮಾಣವನ್ನು ಕುಗ್ಗಿಸಿ.
- ಸಾಕಷ್ಟು ನೀರನ್ನು ಕುಡಿಯುವುದರ ಜೊತೆಗೆ, ಲೆಂಟಿಲ್ಸ್‌ನಂತಹ ಪದಾರ್ಥಗಳನ್ನು ಬೇಯಿಸುವಾಗ ನೀರನ್ನು ಬಳಸಲು ಪ್ರಯತ್ನಿಸಿ.
- ನಿಮ್ಮ ಸುಹೂರ್ ಅನ್ನು ಆದಷ್ಟು ತಡವಾಗಿ ಸೇವಿಸಿ, ವಿಶೇಷವಾಗಿ ನೀವು 10 ಗಂಟೆಗಿಂತಲೂ ಹೆಚ್ಚು ಕಾಲ ಉಪವಾಸ ಇರಬೇಕಾದ ಸಂದರ್ಭದಲ್ಲಿ.
3. ನಿಮ್ಮ ಭೋಜನದ ನಂತರ ನಿಮ್ಮ ಬ್ಲಡ್ ಗ್ಲುಕೋಸ್ ಅನ್ನು ಪರೀಕ್ಷಿಸಿ
ಭೋಜನ ಸೇವಿಸಿದ ಎರಡು ಗಂಟೆಯ ನಂತರ ನಿಮ್ಮ ಬ್ಲಡ್ ಶುಗರ್ ಮಟ್ಟಗಳು ಆರೋಗ್ಯಕರ ವ್ಯಾಪ್ತಿಯಲ್ಲಿ ಇದೆಯೇ ಎಂದು ನೋಡಲು ನಿಮ್ಮ ಬ್ಲಡ್ ಗ್ಲುಕೋಸ್ ಅನ್ನು ಪರೀಕ್ಷಿಸಲು ಮರೆಯದಿರಿ.
ಸಂಬಂಧ
- Can I fast with diabetes during Ramadan? – Diabetes Voice [Internet]. IDF. 2020 [cited 5 March 2020]. Available from: https://diabetesvoice.org/en/caring-for-diabetes/can-i-fast-with-diabetes-during-ramadan/