High Cholesterol and Ghee
Reading Time: 2 minutes

ಅಧಿಕ ಕೊಲೆಸ್ಟರಾಲ್ ಭಾರತದಲ್ಲಿ ಭಾರಿ ಸಮಸ್ಯೆ ಆಗಿ  ಪರಿಣಮಿಸಿದೆ. ಇತ್ತೀಚಿನ ಅಧ್ಯಯನದ ಪ್ರಕಾರ ಭಾರತದಲ್ಲಿನ, ನಗರ ಭಾಗದ 25-30% ಜನರಲ್ಲಿ ಅಧಿಕ ಕೊಲೆಸ್ಟರಾಲ್ ಕಂಡು ಬಂದರೆ, ಗ್ರಾಮೀಣ ಭಾಗದ 15-20% ಜನರಲ್ಲಿ ಅಧಿಕ ಕೊಲೆಸ್ಟರಾಲ್ ಪತ್ತೆಯಾಗಿದೆ.1 ಇದಕ್ಕೆ ಅನುವಂಶೀಯತೆ, ದೈಹಿಕ ಚಟುವಟಿಕೆಗಳ ಕೊರತೆ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿ ಕಾರಣವೆಂದು ಹೇಳಬಹುದು. ಸರಿಯಾದ ಚಿಕಿತ್ಸೆ ಮತ್ತು ಕ್ರಮಗಳನ್ನು ತೆಗೆದುಕೊಂಡರೆ ಅಧಿಕ ಕೊಲೆಸ್ಟರಾಲ್ ಅಂತಹ ಗಂಭೀರ ಆರೋಗ್ಯ ಸಮಸ್ಯೆ ಏನಲ್ಲ; ಆದರೆ, ಅದನ್ನು ಹಾಗೆಯೇ ಬಿಟ್ಟರೆ, ಅದು ಮಾರಣಾಂತಿಕತೆಗೆ ಕಾರಣವಾಗಬಹುದು. ಇತ್ತೀಚಿನ ಅಧ್ಯಯನದ ಪ್ರಕಾರ, ಒಟ್ಟು ಕೊಲೆಸ್ಟರಾಲಿನ ಪ್ರತಿ 40-ಪಾಯಿಂಟ್ ಹೆಚ್ಚಾದಷ್ಟು ಯುವಜನತೆ ಹೃದ್ರೋಗದಿಂದ ಮರಣವನ್ನಪ್ಪುವ ಸಾಧ್ಯತೆ ಎರಡರಷ್ಟಾಗುತ್ತದೆ.2

ಎರಡು ಬಗೆಯ ಕೊಲೆಸ್ಟರಾಲ್‌ಗಳಿದ್ದು, ಕಡಿಮೆ-ದಟ್ಟವಾಗಿರುವ ಲಿಪೊಪ್ರೋಟೀನ್‌ಗಳನ್ನು (ಎಲ್‌ಡಿಎಲ್) ‘ಕೆಟ್ಟ’ ಕೊಲೆಸ್ಟರಾಲ್ ಎಂದು ಕರೆದರೆ, ಹೆಚ್ಚು-ದಟ್ಟವಾಗಿರುವ ಲಿಪೊಪ್ರೋಟೀನ್‌ಗಳನ್ನು (ಎಚ್‌ಡಿಎಲ್) ‘ಒಳ್ಳೆಯ’ ಕೊಲೆಸ್ಟರಾಲ್ ಎಂದು ಕರೆಯಲಾಗುತ್ತದೆ. ಕೆಟ್ಟ ಕೊಲೆಸ್ಟರಾಲ್ ಆರ್ಟರಿಗಳಲ್ಲಿ ಬಂದು ಕುಳಿತ ಮೇಲೆ ಆರೋಗ್ಯ ಸಮಸ್ಯೆಗಳ ಸಾಧ್ಯತೆ ಹೆಚ್ಚಾಗುವುದು ಸಹಜ. ಆದ್ದರಿಂದ, ಆರೋಗ್ಯಕರ ಕೊಲೆಸ್ಟರಾಲ್‌ ಮಟ್ಟಕ್ಕಾಗಿ, ಎಲ್‌ಡಿಎಲ್ ಹಾಗೂ ಎಚ್‌ಡಿಎಲ್‌ಗಳ ನಡುವೆ ಸರಿಯಾದ ಸಮತೋಲನವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯವಾಗಿದೆ. ವಯಸ್ಸಾದಂತೆ ಕೊಲೆಸ್ಟರಾಲ್ ಮಟ್ಟ ಹೆಚ್ಚಾಗುತ್ತದೆ ಎಂದು ವರದಿಯಾಗಿದೆ; ಆದಾಗ್ಯೂ, ಹೃದಯಘಾತಕ್ಕೆ ತುತ್ತಾಗುವವರಲ್ಲಿ ಬಹುಸಂಖ್ಯಾತರು ಯುವಜನರೇ ಆಗಿದ್ದಾರೆ.3

ಭಾರತದ ಆಹಾರ ಪರಂಪರೆಯಲ್ಲಿ ತುಪ್ಪ ಅಗ್ರಪಂಕ್ತಿಯಲ್ಲಿ ಕಂಡು ಬರುವ ಆಹಾರ ಪದಾರ್ಥವಾಗಿದ್ದು, ತುಪ್ಪ ಆಹಾರದ ರುಚಿ ಮತ್ತು ಘಮಲನ್ನು ಬೇರೆಯದೇ ಒಂದು ಹಂತಕ್ಕೆ ಕೊಂಡೊಯ್ಯುತ್ತದೆ. ಭಾರತದ ಬಹಳಷ್ಟು ರುಚಿಕಟ್ಟಾದ ಆಹಾರಗಳಲ್ಲಿ ತುಪ್ಪದ ಕಿಂಚಿತ್ತು ಅಂಶವಾದರೂ ಹಾಜರಿರುತ್ತದೆ, ನೀವು ಸಿಹಿಯನ್ನು ಹೆಚ್ಚು ಸವಿಯುವವರಾಗಿದ್ದರೆ, ಭಾರತದ ಬಹುತೇಕ ಸಿಹಿ ಪದಾರ್ಥಗಳನ್ನು ತುಪ್ಪದಿಂದ ಮಾಡಿರುವುದನ್ನು ನೀವು ಸ್ವಾದಿಸಿರುತ್ತೀರಿ. ಹಾಗಾಗಿ, ಇಲ್ಲಿ ಏಳುವ ಪ್ರಶ್ನೆ ಏನೆಂದರೆ, ತುಪ್ಪ ಎಷ್ಟರ ಮಟ್ಟಿಗೆ ಸುರಕ್ಷಿತ? ಅನ್ನುವುದಾಗಿದೆ, ಅದರಲ್ಲೂ ನೀವು ಅಧಿಕ ಕೊಲೆಸ್ಟರಾಲ್ ಮಟ್ಟವನ್ನು ಹೊಂದಿದ್ದರೆ ಈ ಪ್ರಶ್ನೆಯನ್ನು ಹಾಕಿಕೊಳ್ಳುವುದು ಇನ್ನೂ ಉತ್ತಮ.

ಈ ಪ್ರಶ್ನೆಗೆ ಉತ್ತರವನ್ನು ಹುಡುಕುವುದಕ್ಕೂ ಮೊದಲು, ತಿಳಿಗೊಳಿಸಿದ ಬೆಣ್ಣೆ ಎಂದು ಕರೆಯುವ ದೇಸಿ ಅಥವಾ ಹಸುವಿನ ತುಪ್ಪದ ಬಗ್ಗೆ ನೀವು ತಿಳಿದುಕೊಳ್ಳಬೇಕು, ಇದರಲ್ಲಿ ಸ್ಯಾಚುರೇಟೆಡ್ ಕೊಬ್ಬು ವಿಪರೀತವಾಗಿದ್ದು, ದೇಹದಲ್ಲಿ ಹೆಚ್ಚಿನ ಮಟ್ಟದ ಕೊಲೆಸ್ಟರಾಲ್‌ ಬಂದು ಜಮಾವಣೆಯಾಗಲು ಕಾರಣವಾಗುತ್ತದೆ.  ಆದ್ದರಿಂದ, ನೀವು ಎಷ್ಟು ತುಪ್ಪವನ್ನು ಸೇವಿಸುತ್ತೀರಾ ಎಂಬುದು ಕೂಡ ನಿಮ್ಮ ಕೊಲೆಸ್ಟರಾಲ್ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಆದಾಗ್ಯೂ, ನಿಮ್ಮ ಆಹಾರಕ್ರಮ ಆರೋಗ್ಯಕರ ರೀತಿಯಲ್ಲಿದ್ದರೆ, ಸ್ವಲ್ಪವೇ ಸ್ವಲ್ಪ (ಒಂದು ಟೀಸ್ಪೂನ್) ತುಪ್ಪವನ್ನು ನಿಮ್ಮ ಆಹಾರಕ್ಕೆ ಕಂಪನ್ನು ಕೊಡಲೆಂದು ಬಳಸುವುದರಿಂದ ಏನಂತಹ ಅಪಾಯವಿಲ್ಲವೆಂದು ಆರೋಗ್ಯ ತಜ್ಞರು ಹೇಳುತ್ತಾರೆ. ನಿಮ್ಮ ಆಹಾರಕ್ರಮದಲ್ಲಿ ಬಹಳಷ್ಟು ತರಕಾರಿ, ಇಡೀ ಧಾನ್ಯ, ಹುರುಳಿಕಾಯಿಗಳಿದ್ದಂತಹ ಪಕ್ಷದಲ್ಲಿ ಒಂಚೂರು ತುಪ್ಪವನ್ನು ಹಾಕಿಕೊಂಡರೆ ಅಷ್ಟೇನು ತೊಂದರೆಯಾಗುವುದಿಲ್ಲ.4 ಹಾಗೆಯೇ ನೀವು ಆದಷ್ಟು ನಿಮ್ಮ ಆಹಾರದಲ್ಲಿರುವ ಇತರೆ ಸ್ಯಾಚುರೇಟಡ್ ಕೊಬ್ಬುಗಳನ್ನು ಕೆನೊಲಾ ಎಣ್ಣೆ, ಆಲಿವ್ ಎಣ್ಣೆ, ಬಾದಾಮಿ ಮತ್ತು ವಾಲ್‌ನಟ್ಸ್‌ನಂತಹ ಆರೋಗ್ಯಕರ ಕೊಬ್ಬುಗಳಿಗೆ ಮಾರ್ಪಡಿಸಲು ಪ್ರಯತ್ನಿಸಬೇಕು. ಜೊತೆಗೆ, ಒಮೆಗಾ -3 ಕೊಬ್ಬಿನಾಂಶ ಕಂಡುಬರುವ ಸಾಲ್ಮನ್, ಬಂಗುಡೆ ಮತ್ತು ಟ್ಯೂನಾದಂತಹ ಮೀನುಗಳನ್ನು ನಿಮ್ಮ ಆಹಾರಕ್ರಮಕ್ಕೆ ಸೇರಿಸುವುದರಿಂದ ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.2

ಹೆಚ್ಚಿನ ಕೊಲೆಸ್ಟರಾಲ್ ಮಟ್ಟ ಇದೆ ಎಂಬ ಒಂದೇ ಕಾರಣಕ್ಕೆ ನೀವು ತುಪ್ಪದ ಸಹವಾಸಕ್ಕೆ ಹೋಗಬಾರದಂತಲ್ಲ, ಆದರೆ ನೆನಪಿರಲಿ, ನೀವು ಎಲ್ಲಿಯವರೆಗೆ ಆರೋಗ್ಯಕರ ಆಹಾರಕ್ರಮವನ್ನು ಅನುಸರಿಸಿಕೊಂಡು ಹೋಗುತ್ತೀರೋ ಅಲ್ಲಿಯವರೆಗೆ, ನಿಮ್ಮ ಪ್ರತಿದಿನದ ಆಹಾರಕ್ರಮಕ್ಕೆ ತುಸು ತುಪ್ಪವನ್ನು ಬಳಸಿಕೊಳ್ಳಲು ಯಾವುದೇ ಆತಂಕ ಪಡಬೇಕಿಲ್ಲ. ನಿಮ್ಮ ಆಹಾರ ಕ್ರಮದಲ್ಲಿ ಸಮೃದ್ಧವಾಗಿರುವ ಆರೋಗ್ಯಕರ ತುಪ್ಪವನ್ನು ಸವಿಯಲು ಮುಂದಾಗಿ.

ಉಲ್ಲೇಖಗಳು

  1. Gupta R, Rao RS, Misra A, Sharma SK. Recent trends in epidemiology of dyslipidemias in India. Indian Heart J. 2017 May-Jun;69(3):382-392. DOI: 10.1016/j.ihj.2017.02.020.
  2. Indian Heart Association. Cholesterol and South Asians. The balance between good and bad cholesterol is an important contributor to cardiovascular and stroke risk [Internet]. [cited 2019 Dec 9]. Available from: http://indianheartassociation.org/cholesterol-and-south-asians/.
  3. Scientific India. Cholesterol and Indians [Internet]. [cited 2019 Dec 9]. Available from: http://www.scind.org/572/Health/cholesterol-and-indians.html.
  4. Consumer Reports. Is ghee good for you? [Internet]. [cited 2019 Dec 9]. Available from: https://www.consumerreports.org/fats/is-ghee-good-for-you/.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.