Reading Time: 2 minutes

ಖರ್ಜೂರ ಹಾಗೂ ರಂಜಾನ್, ಎರಡಕ್ಕೂ ಬಿಡಿಸಲಾಗದ ನಂಟಿದೆ. ಆದರೆ, ನಿಮಗೆ ಡಯಾಬಿಟಿಸ್ ಇದ್ದಾಗ ಖರ್ಜೂರ ಹಣ್ಣು ತಿನ್ನುವುದು ಸುರಕ್ಷಿತವೇ? ಇದನ್ನು ತಿಳಿಯಲು ಕೆಳಗೆ ಓದಿ. 

ರಮಾದಾನ್ ಅಥವಾ ರಂಜಾನ್ ಎನ್ನುವುದು ಮುಸ್ಲಿಮರಿಗೆ ಪವಿತ್ರ ತಿಂಗಳು. ಜಗತ್ತಿನಾದ್ಯಾಂತ ಇರುವ ಮುಸ್ಲಿಮ್ ಬಾಂಧವರು 30 ದಿನದ ರಂಜಾನ್  ತಿಂಗಳು ಪೂರ್ತಿ, ಮುಂಜಾನೆಯಿಂದ ಮುಸ್ಸಂಜೆಯವರಗೆ ಉಪವಾಸವಿರುತ್ತಾರೆ. ಲಕ್ಷಾಂತರ ಮುಸ್ಲಿಮರು ಈ ಉಪವಾಸ ಅವಧಿಯನ್ನು ಅನುಸರಿಸುತ್ತಾರೆ, ಡಯಾಬಿಟಿಸ್‌ನಂತಹ ದೀರ್ಘ ಕಾಲದ ಸಮಸ್ಯೆ ಇರುವವರು ಸಹ ಉಪವಾಸ ಇರುತ್ತಾರೆ. ಆದರೆ, ಡಯಾಬಿಟಿಸ್ ಇರುವವರು ಉಪವಾಸ ಇರುವಾಗ ವಿಶೇಷ ಆರೈಕೆಯನ್ನು ತೆಗೆದುಕೊಳ್ಳುವುದು ಅವಶ್ಯಕವಾಗಿದೆ.

ಸಾಂಪ್ರದಾಯಿಕವಾಗಿ, ಉಪವಾಸ ಇರುವವರು ನೀರು ಹಾಗೂ ಖರ್ಜೂರ ಹಣ್ಣು ತೆಗೆದುಕೊಳ್ಳುವ ಮೂಲಕ ತಮ್ಮ ಉಪವಾಸ ಮುಂದುವರೆಸುತ್ತಾರೆ. ಆದರೆ, ಡಯಾಬಿಟಿಸ್ ಇರುವವರು ಖರ್ಜೂರ ಹಣ್ಣು ತಿನ್ನುವುದರ ಕುರಿತು ಕಾಳಜಿಯನ್ನು ಹೊಂದಿದ್ದಾರೆ. ಖರ್ಜೂರ ಹಣ್ಣು ಅದರ ಸಿಹಿಯ ಅಂಶ ಹಾಗೂ ಹೆಚ್ಚಿನ ಫ್ರಕ್ಟೋಸ್‍ಗೆ ಹೆಸರುವಾಸಿಯಾಗಿದೆ. ಹಾಗಾಗಿ, ಈ ವಿಷಯವನ್ನು ಹೆಚ್ಚು ವಿವರವಾಗಿ ತಿಳಿಯೋಣ. 

ಖರ್ಜೂರ ಹಣ್ಣು ಖರ್ಜೂರ ಮರದಲ್ಲಿ ಬೆಳೆಯುತ್ತದೆ. ಮೈ ತುಂಬಿಕೊಂಡು ಸಿಹಿ ಸಿಹಿಯಾಗಿರುವ, ಈ ಹಣ್ಣು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನಪ್ರಿಯತೆ ಪಡೆದಿದೆ. ಸಾಮಾನ್ಯವಾಗಿ ಒಣ ಖರ್ಜೂರ ಹಣ್ಣನ್ನು ಮಾರಾಟ ಮಾಡುತ್ತಾರೆ, ಆದರೆ ಕೆಲವು ದೇಶಗಳಲ್ಲಿ ಹಸಿ ಖರ್ಜೂರವನ್ನು ಸಹ ತಿನ್ನುತ್ತಾರೆ. ಒಂದು ಒಣ ಖರ್ಜೂರ ಹಣ್ಣಿನಲ್ಲಿ 67 ಕ್ಯಾಲರಿಗಳು ಹಾಗೂ ಸರಿಸುಮಾರು 18 ಗ್ರಾಮಿನಷ್ಟು ಕಾರ್ಬ್ಸ್ ಇರುತ್ತದೆ1. ಅಚ್ಚರಿಯೆಂಬಂತೆ, ಅವುಗಳ ಜೊತೆಗೆ ಅಂದಾಜು 2 ಗ್ರಾಂನಷ್ಟು ನಾರಿನಾಂಶ, ಅಥವಾ 8% ನಷ್ಟು ದೈನಂದಿನ ಸೇವನೆಯ ಪ್ರಮಾಣ (ಡಿವಿ) ಇರುತ್ತದೆ2. 100 ಗ್ರಾಂ ಖರ್ಜೂರ ಹಣ್ಣಿನಿಂದ ನಿಮ್ಮ ಆಹಾರದಲ್ಲಿ ಶಿಫಾರಸು ಮಾಡಲಾದ 50 ರಿಂದ 100% ನಾರಿನಾಂಶ ದೊರಕುತ್ತದೆ3. ನಾರಿನಾಂಶ ಹೆಚ್ಚಾಗಿರುವ ಆಹಾರ ಕಾರ್ಬೋಹೈಡ್ರೇಟ್‌ಗಳನ್ನು ನಿಧಾನವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ, ಇದರಿಂದ ರಕ್ತದಲ್ಲಿನ ಸಕ್ಕರೆಯ ಏರಿಳಿತದ ಅಪಾಯ ಕಡಿಮೆಯಾಗುತ್ತದೆ. 

ಖರ್ಜೂರ ಹಣ್ಣುಗಳಿಂದ ಅನೇಕ ಪೌಷ್ಠಿಕಾಂಶದ ಪ್ರಯೋಜನಗಳಿವೆ. ಇವುಗಳಲ್ಲಿ ಸಾಕಷ್ಟು ವಿಟಮಿನ್‌ಗಳು ಹಾಗೂ ಖನಿಜಗಳ ಜೊತೆಗೆ ಆ್ಯಂಟಿಆಕ್ಸಿಡೆಂಟ್‌ಗಳು ಹೆಚ್ಚಾಗಿ ಇರುತ್ತವೆ4. ನಾವು ಮೊದಲೇ ಹೇಳಿದಂತೆ ಈ ಹಣ್ಣುಗಳಲ್ಲಿ ನಾರಿನಾಂಶ ಹೆಚ್ಚಾಗಿ ಇರುತ್ತದೆ. ಹಾಗೆಯೇ ಈ ಹಣ್ಣುಗಳು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು (ಜಿಐ) ಹೊಂದಿರುತ್ತವೆ. ವಾಸ್ತವವಾಗಿ, ಖರ್ಜೂರ ಹಣ್ಣುಗಳು  42.29 ಸರಾಸರಿಯೊಂದಿಗೆ 35 ಹಾಗೂ 55 ರ ನಡುವಿನ ಜಿಐ ಯನ್ನು ಹೊಂದಿರುತ್ತವೆ5. ಸಾಮಾನ್ಯವಾಗಿ ಕಡಿಮೆ ಜಿಐ ಇರುವ ಆಹಾರಗಳು ಡಯಾಬಿಟಿಸ್ ಇರುವವರಿಗೆ ಸುರಕ್ಷಿತವಾಗಿವೆ, ಏಕೆಂದರೆ ಅವು ರಕ್ತದಲ್ಲಿನ ಸಕ್ಕರೆಯ ಮಟ್ಟದ ಏರಿಳಿತಕ್ಕೆ ಕಾರಣವಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಅಷ್ಟೇ ಅಲ್ಲದೇ, ಡಯಾಬಿಟಿಸ್ ರೋಗಿಗಳಲ್ಲಿ ಗ್ಲೈಸೆಮಿಕ್ ಹಾಗೂ ಲಿಪಿಡ್ ನಿಯಂತ್ರಣವನ್ನು ಸುಧಾರಿಸುವಲ್ಲಿ ಖರ್ಜೂರ ಹಣ್ಣು ಸಹಾಯ ಮಾಡುತ್ತದೆ ಎಂದು ಹಲವು ಅಧ್ಯಯನಗಳು ತೋರಿಸುತ್ತವೆ.6

ಕೊನೆ ಮಾತು, ಡಯಾಬಿಟಿಸ್ ಇರುವವರು ಖರ್ಜೂರ ಹಣ್ಣುಗಳನ್ನು ತಿನ್ನಬಹುದು; ಆದರೆ, ಮಿತವಾಗಿ ತಿನ್ನಿ ಹಾಗೂ ಡಾಕ್ಟರನ್ನು ಸಂಪರ್ಕಿಸಿದ ನಂತರ ತಿಂದರೆ ಇನ್ನೂ ಉತ್ತಮ. ಹಾಗಾಗಿ, ಒಂದು ಬಾರಿಗೆ 1-2 ಕ್ಕಿಂತ ಹೆಚ್ಚು ಖರ್ಜೂರ ಹಣ್ಣುಗಳನ್ನು ತಿನ್ನಬಾರದು ಎಂದು ಗುರಿ ಇಟ್ಟುಕೊಳ್ಳಿ. 

ಎಲ್ಲರಿಗೂ ರಂಜಾನ್ ಹಬ್ಬದ ಶುಭಾಷಯಗಳು!

ಉಲ್ಲೇಖಗಳು:

  1. FoodData Central. [Internet] U.S. Department of Agriculture. April 2019. [cited 2020 Feb 5]. Available from: https://fdc.nal.usda.gov/fdc-app.html#/food-details/168191/nutrients
  2. Dreher M. Whole Fruits and Fruit Fiber Emerging Health Effects. Nutrients. 2018;10(12):1833.
  3. Alkaabi J, Al-Dabbagh B, Ahmad S, Saadi H, Gariballa S, Ghazali M. Glycemic indices of five varieties of dates in healthy and diabetic subjects. Nutrition Journal. 2011;10(1).
  4. Rahmani AH, Aly SM, Ali H, Babiker AY, Srikar S, Khan AA. Therapeutic effects of date fruits (Phoenix dactylifera) in the prevention of diseases via modulation of anti-inflammatory, antioxidant and antitumor activity. Int J Clin Exp Med. 2014;7(3):483–491. 2014.
  5. Atkinson F, Foster-Powell K, Brand-Miller J. International Tables of Glycemic Index and Glycemic Load Values: 2008. Diabetes Care. 2008;31(12):2281-2283.
  6. Al-Farsi* M, Lee C. Nutritional and Functional Properties of Dates: A Review. Critical Reviews in Food Science and Nutrition. 2008;48(10):877-887.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.