Reading Time: 2 minutes

ಇಡೀ ಪ್ರಪಂಚ ಇಂದು ನೋವೆಲ್ ಕೊರೋನಾ ವೈರಸ್ ರೋಗದೊಂದಿಗೆ ಹೋರಾಡುತ್ತಿದೆ, ಇದು ಮೊದಲು ಪತ್ತೆಯಾಗಿದ್ದು ಚೈನಾದ ವುಹಾನ್ ಪ್ರಾಂತ್ಯದಲ್ಲಿ. ಇದನ್ನು ಗುಣಪಡಿಸುವ ಔಷಧಿಗಾಗಿ ಡಾಕ್ಟರ್ ಮತ್ತು ವೈದ್ಯಕೀಯ ಸಂಸ್ಥೆಯವರು ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದ್ದಾರೆ. ಈ ಎಲ್ಲಾ ಸಂಶೋಧನೆಗಳು, ಚೀನೀಯರ ಅನುಭವ ಹೇಳುವಂತೆ ಯಾರಿಗಾದರೂ ಈ ಮೊದಲೇ ಯಾವುದಾದರೂ ವೈದ್ಯಕೀಯ ಸಮಸ್ಯೆಗಳು ಇದ್ದಲ್ಲಿ, ಅಂತಹವರು ಗುಣಮುಖರಾಗುವುದು ಕಷ್ಟ ಎಂಬುದನ್ನು ಬೆಂಬಲಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಟಿಸಿದ ವರದಿಯ ಪ್ರಕಾರ, ಅನಾರೋಗ್ಯಕ್ಕೆ ತುತ್ತಾಗಿ ಸತ್ತವರ ಪೈಕಿ 13.2% (1) ನಷ್ಟು ಜನ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯಂತಹ (ಸಿವಿಡಿ) ದೀರ್ಘಕಾಲದ ಸಮಸ್ಯೆಗಳಿಂದ ಬಳಲುತ್ತಿದ್ದವರು ಎಂದು ಸೂಚಿಸಿದೆ. 

ಕಾರ್ಡಿಯಾಕ್ ರೋಗಿಗಳು ಅಪಾಯದಲ್ಲಿರುವರೇ?

ಭಾರತದಲ್ಲಿ ಸಿವಿಡಿ ಹರಡುವಿಕೆಯು 54.5 ಮಿಲಿಯನ್ ಎಂದು ವರದಿಯಾಗಿರುವುದರಿಂದ, ಹೆಚ್ಚಿನ ಅಪಾಯವಿರುವುದು ನಮಗೆ. ಅಲ್ಲದೆ, ಎಲ್ಲಾ ವೈದ್ಯರು ಒಂದು ಸಂಗತಿಯನ್ನು ಒಪ್ಪುತ್ತಾರೆ- ಈ ರೋಗ ಮೊದಲು ಪ್ರಭಾವ ಬೀರುವುದೇ ಹೃದಯದ ಮೇಲೆ. ಇದಕ್ಕೆ ಕಾರಣ ನಮ್ಮ ದೇಹ ಸೋಂಕಿನಿಂದ ಉಂಟಾಗುವ ಉರಿಯೂತಕ್ಕೆ ಮೊದಲು ಪ್ರತಿಕ್ರಿಯಿಸುತ್ತದೆ. ಇದರ ಪರಿಣಾಮವಾಗಿ, ಎದೆಬಡಿತದಲ್ಲಿ2 ಏರುಪೇರು ಉಂಟಾಗುತ್ತದೆ. ಚೀನಾದಲ್ಲಿ ಮಾಡಿದ ಅಧ್ಯಯನಗಳು, ಸಿವಿಡಿ3 ರೋಗಿಗಳಿಗೂ ಮತ್ತು ಅಸ್ವಸ್ಥತೆಯ ತೀವ್ರತೆಗೂ ಪರಸ್ಪರ ಸಂಬಂಧವಿದೆ ಎಂಬುದನ್ನು ಸೂಚಿಸುತ್ತವೆ. 

ಅಲ್ಲದೇ ಹೃದ್ರೋಗ ನಿಮ್ಮ ರೋಗನಿರೋಧಕ ಶಕ್ತಿಯ ಕಾರ್ಯನಿರ್ವಹಣೆಗೆ ನೇರವಾಗಿ ಸಂಬಂಧಿಸಿದೆ. COVID-19 ಅನ್ನು ನಿಯಂತ್ರಿಸಬಲ್ಲ ಔಷಧಕ್ಕಾಗಿ ಸಂಶೋಧನೆಯು ಇನ್ನೂ ನಡೆಯುತ್ತಲೇ ಇರುವುದರಿಂದ, ವಿಶೇಷವಾಗಿ ನೀವೇನಾದರೂ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೆ, ನೀವು ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು.

ನಿಮ್ಮ ಹೃದಯವನ್ನು ರಕ್ಷಿಸಲು ಮುನ್ನಚ್ಚೆರಿಕೆ ಕ್ರಮಗಳು

ಸುರಕ್ಷಿತವಾಗಿರಲು ನೀವು ಮಾಡಬಹುದಾದ ಕೆಲವು ಸಂಗತಿಗಳು ಇಲ್ಲಿವೆ4, 5.

 • ಮೂಲಭೂತವಾದ ಶುಚಿತ್ವವನ್ನು ಕಾಪಾಡಿ. 
 • ನಿಮ್ಮ ಕೈಯನ್ನು ಕನಿಷ್ಟ ಪಕ್ಷ 20 ಸೆಕೆಂಡುಗಳ ಕಾಲ ಸೋಪಿನಿಂದ ತೊಳೆಯಿರಿ. ಅಥವಾ ಶೇ. 60% ಗಿಂತ ಹೆಚ್ಚಿರುವ ಆಲ್ಕೋಹಾಲ್ ಸ್ಯಾನಿಟೈಸರ್ ಬಳಸಿ ಅಥವಾ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ರಬ್‍ಗಳನ್ನು ಬಳಸಿ. 
 • ಕೈಯಿಂದ ಕಣ್ಣು, ಮೂಗು, ಬಾಯಿಯನ್ನು ಮುಟ್ಟಿಕೊಳ್ಳಬೇಡಿ.
 • ಕೈ ಮಿಲಾಯಿಸುವುದು, ಅಥವಾ ಅಂತಹ ಇನ್ನಿತರ ದೈಹಿಕ ಸಂಪರ್ಕವನ್ನು ತಪ್ಪಿಸಿ.
 • ಜನಸಂದಣಿ ಇರುವ ಜಾಗಗಳಿಗೆ ಹೋಗಲೇಬೇಡಿ. ಸಾಮಾಜಿಕ ಅಂತರವನ್ನು ಕಾಯಿರಿ.
 • ಚೆನ್ನಾಗಿ ನೀರು ಕುಡಿಯಿರಿ ಮತ್ತು ಪೌಷ್ಟಿಕಾಂಶಯುಕ್ತ ಆಹಾರವನ್ನೇ ಸೇವಿಸಿರಿ.
 • ನಿಮ್ಮ ಆರೋಗ್ಯ ಸಮಸ್ಯೆಗೆ ಸಂಬಂಧಿಸಿದ ಎಲ್ಲಾ ಔಷಧಿಗಳು ನಿಮ್ಮ ಬಳಿ ಸಾಕಷ್ಟಿವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. 
 • ಈಗಾಗಲೇ ಅಸ್ತಿತ್ವದಲ್ಲಿರುವ ವೈದ್ಯಕೀಯ ಇತಿಹಾಸಕ್ಕೆ ಸಂಬಂಧಿಸಿದ ಇತರ ಯಾವುದೇ ತೊಂದರೆಗಳನ್ನು ನೀವು ಗಮನಿಸಿದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ. 
 • ಜ್ವರ ಮತ್ತು ಒಣ ಕೆಮ್ಮಿನಂತಹ COVID-19 ರ ಗುಣಲಕ್ಷಣಗಳ ಮೇಲೆ ನಿಗಾ ಇರಲಿ. ನಿಮ್ಮಲ್ಲಿ ಈ ರೋಗಲಕ್ಷಣಗಳು ಕಂಡುಬಂದರೆ, ಸ್ವಯಂ-ಪ್ರತ್ಯೇಕತೆ (ಸೆಲ್ಫ್-ಐಸೋಲೇಶನ್) ಮಾರ್ಗದರ್ಶನಗಳನ್ನು ಅನುಸರಿಸಿ ಹಾಗೂ ನಿಮಗೆ ಸಹಾಯದ ಅಗತ್ಯವಿರುವಾಗ ಸಹಾಯವಾಣಿ ಸಂಖ್ಯೆ + 91-11-23978043 ಅನ್ನು ಸಂಪರ್ಕಿಸಿ.
 • ಸರ್ಕಾರ ಶಿಫಾರಸು ಮಾಡಿದ ಅಧೀಕೃತ ಪರೀಕ್ಷಾ ಸಿಬ್ಬಂದಿ ಮತ್ತು ಏಜೆನ್ಸಿಯನ್ನು ಸಂಪರ್ಕಿಸಿ ಹಾಗೂ ಫಲಿತಾಂಶಗಳು ಬರುವವರೆಗೂ ಅಥವಾ ರೋಗಲಕ್ಷಣಗಳು ಕಡಿಮೆ ಆಗುವವರೆಗೂ ಪ್ರತ್ಯೇಕವಾಗಿಯೇ ಇರಿ.

ಕಾರ್ಡಿಯಾಕ್ ಕೇರ್ ಗಿವರ್‌ಗಳಿಗಾಗಿ

 • ನೀವು ಹೃದಯದ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಗೆ (ಗಳಿಗೆ) ಕೇರ್ ಗಿವರ್ ಆಗಿದ್ದರೆ, ಅವರ ಸಮಸ್ಯೆಗೆ (ಗಳಿಗೆ) ಸಂಬಂಧಿಸಿದ ಔಷಧಿಗಳನ್ನು ಮನೆಯಲ್ಲಿ ಸಾಕಷ್ಟು ಇಟ್ಟುಕೊಂಡಿರುವಿರಾ ಎಂದು ಪರಿಶೀಲಿಸಿಕೊಳ್ಳಿ. ಕಾರ್ಡಿಯಾಕ್ ಅಥವಾ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳಿರುವವರು ಹೆಚ್ಚಿನ ಸಂದರ್ಭಗಳಲ್ಲಿ ಬೇರೆ ಆರೋಗ್ಯದ ಸಮಸ್ಯೆಗಳಿಂದಲೂ ಬಳಲುತ್ತಿರುತ್ತಾರೆ. ಹಾಗಾಗಿ, ಅವರು ಯಾವ ಔಷಧಿಗಳನ್ನು ಸೇವಿಸುತ್ತಿದ್ದಾರೆ ಎಂಬುದು ನಿಮಗೆ ತಿಳಿದಿರುವುದು ತುಂಬ ಮುಖ್ಯ.
 • ಅವರು ಸರಿಯಾಗಿ ಆಹಾರ ಮತ್ತು ದ್ರವವನ್ನು ತೆಗೆದುಕೊಳ್ಳುವಂತೆ ನೋಡಿಕೊಳ್ಳಿ. 
 • ತುರ್ತು ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂಬ ಯೋಜನೆಯನ್ನು ರೂಪಿಸಿ ಇಟ್ಟುಕೊಂಡಿರಿ.
 • ಒಂದು ವೇಳೆ ನೀವು ಕ್ಲಿನಿಕಲ್ ಹೃದಯರಕ್ತನಾಳದ ಆರೈಕೆಯ ತಂಡದ ಭಾಗವಾಗಿದ್ದರೆ, ಇಲ್ಲಿರುವ ಮಾರ್ಗದರ್ಶನ ಪಟ್ಟಿ ನಿಮಗೆ ನೆರವಾಗಬಹುದು. ಅಧಿಕಾರಿಗಳು ಮತ್ತು ಅಧಿಕೃತ ಚಾನಲ್‍ಗಳು6 ಹೊರಡಿಸಿರುವ ಸೂಚನೆಗಳನ್ನು ಇದು ಹೊಂದಿದೆ.

ಮತ್ತು ಬಹುಮುಖ್ಯವಾಗಿ COVID-19 ಬಗ್ಗೆ ಇತ್ತೀಚಿನ ಮಾಹಿತಿಯನ್ನು ಅನುಸರಿಸುತ್ತಿರಿ ಹಾಗೂ ಅಪ್‍ಡೇಟ್ ಆಗುತ್ತಿರಿ. ಮಾಹಿತಿಯನ್ನು ವಿಶ್ವಾಸಾರ್ಹ ಚಾನಲ್‌ಗಳಿಂದಲೇ ಪಡೆಯಿರಿ ಹಾಗೂ ನಕಲಿ ಸುದ್ದಿಗಳಿಗೆ ಬಲಿಯಾಗಬೇಡಿ!


ಉಲ್ಲೇಖಗಳು:

 1. Report of the WHO-China Joint Mission on Coronavirus Disease 2019 (COVID-19) [Internet]. World Health Organisation. 2020 [cited 2020 Mar 15]. Available from: https://www.who.int/docs/default-source/coronaviruse/who-china-joint-mission-on-covid-19-final-report.pdf
 2. Coronavirus Disease 2019 (COVID-19) Provides Potent Reminder of the Risk of Infectious Agents [Internet]. American College of Cardiology. 2020 [cited 2020 Mar 15]. Available from: https://www.acc.org/latest-in-cardiology/articles/2020/03/01/08/42/feature-coronavirus-disease-2019-covid-19-provides-potent-reminder-of-the-risk-of-infectious-agents
 3. Ruan Q, Yang K, Wang W, Jiang L, Song J. Clinical predictors of mortality due to COVID-19 based on an analysis of data of 150 patients from Wuhan, China. Intensive Care Medicine [Internet]. 2020 Mar 3 [cited 2020 Mar 15];1–3. Available from: https://link.springer.com/article/10.1007%2Fs00134-020-05991-x
 4. CDC. Coronavirus Disease 2019 (COVID-19) [Internet]. Centers for Disease Control and Prevention. 2020 [cited 2020 Mar 15]. Available from: https://www.cdc.gov/coronavirus/2019-ncov/specific-groups/high-risk-complications.html
 5. Advice for public [Internet]. who.int. 2019 [cited 2020 Mar 15]. Available from: https://www.who.int/emergencies/diseases/novel-coronavirus-2019/advice-for-public
 6. 5.COVID-19 Clinical Guidance For the CV Care Team [Internet]. American College of Cardiology. 2020 Feb [cited 2020 Mar 17]. Available from: https://www.acc.org//~/media/Non-Clinical/Files-PDFs-Excel-MS-Word-etc/2020/02/S20028-ACC-Clinical-Bulletin-Coronavirus.pdf

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.