prevent-further-complications-of-chronic-kidney-disease
Reading Time: 2 minutes

ತಜ್ಞರಿಂದ ವಿಮರ್ಶೆ – ಅಶ್ವಿನಿ ಎಸ್.ಕಾನಡೆ, ನೋಂದಾಯಿತ ಡಯಾಟೀಶಿಯನ್ ಮತ್ತು ಪ್ರಮಾಣೀಕೃತ ಡಯಾಬಿಟೀಸ್ ಶಿಕ್ಷಕರು. ಇವರಿಗೆ 17 ವರ್ಷಗಳ ಅನುಭವವಿದೆ

ಆರೋಗ್ಯಕರ ಕಿಡ್ನಿಗಳು ನಿಮ್ಮ ರಕ್ತದಿಂದ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ಫಿಲ್ಟರ್ ಮಾಡುತ್ತವೆ. ನಿಮಗೆ ವಯಸ್ಸಾದಂತೆ, ಮೂತ್ರಪಿಂಡದ ಕಾರ್ಯಕ್ಷಮತೆಯಲ್ಲಿ ಕೆಲವು ಏರುಪೇರು ಕಂಡುಬರಬಹುದು. ದೀರ್ಘಕಾಲದ ಕಿಡ್ನಿ ಕಾಯಿಲೆ (ಸಿಕೆಡಿ) ಎನ್ನುವುದು ವರ್ಷಗಳು ಕಳೆದಂತೆ ಕಿಡ್ನಿಯು ತನ್ನ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುವ ಸ್ಥಿತಿಯಾಗಿದೆ. ಆಗ ಕಿಡ್ನಿಗಳು ಅವು ಹೇಗೆ ಕೆಲಸ ಮಾಡಬೇಕೋ ಹಾಗೇ ಮಾಡುವುದಿಲ್ಲ.

ಇದಕ್ಕೆ ಸರಿಯಾಗಿ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ, ಸಮಯ ಕಳೆದಂತೆ ನಿಮ್ಮ ಕಿಡ್ನಿಗಳಿಗೆ ದೊಡ್ಡ ಮಟ್ಟದ ಹಾನಿಯಾಗುವುದು ಖಂಡಿತ. ಅಂತಿಮವಾಗಿ, ಕೆಲವೇ ವರ್ಷಗಳಲ್ಲಿ ಕಿಡ್ನಿಗಳ ಸಾಮರ್ಥ್ಯ ಸಂಪೂರ್ಣವಾಗಿ ಕುಗ್ಗಿ ಹೋಗುತ್ತದೆ. ಈ ಹಾನಿಯ ಸಾಮಾನ್ಯ ಕಾರಣವೇನೆಂದರೆ ದೀರ್ಘಕಾಲದಲ್ಲಿ ಅಧಿಕ ರಕ್ತದ ಸಕ್ಕರೆಯನ್ನು ನಿಯಂತ್ರಿಸದೇ ಇರುವುದು.

ಜನರು ತಿಳಿದುಕೊಂಡಿರುವುದಕ್ಕಿಂತ ಹೆಚ್ಚು, ಸಿ.ಕೆ.ಡಿಯು ಸಾಮಾನ್ಯವಾಗಿಬಿಟ್ಟಿದೆ. ಹೆಚ್ಚಿನ ಸಂದರ್ಭಗಳಲ್ಲಿ, ಕಿಡ್ನಿಗೆ ಹೆಚ್ಚು ಹಾನಿಯಾಗುವವರೆಗೂ ಸಮಸ್ಯೆಗಳನ್ನು ಗುರುತಿಸಿರುವುದಿಲ್ಲ. ಆದರೆ ಅದೃಷ್ಟವಶಾತ್, ಇದನ್ನು ಆಗದಂತೆ ತಡೆಯಬಹುದಾಗಿದೆ. ನಿಮಗೆ ಈಗಾಗಲೇ ಸಿಕೆಡಿ ಸಮಸ್ಯೆ ಇದ್ದರೆ, ಅದರ ತೊಡಕುಗಳನ್ನು ತಡೆಗಟ್ಟಲು ನೀವು ಕ್ರಮಗಳನ್ನು ತೆಗೆದುಕೊಳ್ಳಬಹುದು.

 

1. ಅಪಾಯಕಾರಿ ಅಂಶಗಳನ್ನು ಹೊರದೂಡಿ

ಡಯಾಬಿಟಿಸ್ ಮತ್ತು ಅಧಿಕ ರಕ್ತದೊತ್ತಡದ ಅಂಶಗಳೇ ಸಿಕೆಡಿ’ಯಾಗಿ ಮಾರ್ಪಡುವ ಸಾಧ್ಯತೆಗಳಿವೆ, ಆದರೆ ಇದನ್ನು ತಡೆಯಲೂ ಸಾಧ್ಯವಿದೆ. ಆರೋಗ್ಯಕರ ಆಹಾರ ಆಯ್ಕೆಗಳನ್ನು ಮಾಡುವುದರ ಮೂಲಕ, ನಿಮ್ಮ ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಕಡಿತಗೊಳಿಸುವ ಮೂಲಕ, ಆರೋಗ್ಯಕರ ತೂಕವನ್ನು ಕಾಪಾಡಿಕೊಂಡು, ನಿಮ್ಮ ಕೊಲೆಸ್ಟರಾಲ್ ಮಟ್ಟವನ್ನು ನಿಯಂತ್ರಿಸುವಂತಹ ಜೀವನಶೈಲಿಯ ಮಾರ್ಪಾಡುಗಳ ಮೂಲಕ, ಡಯಾಬಿಟಿಸ್ ಮತ್ತು ಅಧಿಕ ರಕ್ತದೊತ್ತಡಕ್ಕೆ ತುತ್ತಾಗುವ ಸಾಧ್ಯತೆಗಳನ್ನು ಇಳಿಮುಖಗೊಳಿಸಿ. ಇದು  ಮುಂಬರುವ ಸಿಕೆಡಿಯ ಅಪಾಯವನ್ನು ಸಹ ಕುಗ್ಗಿಸುತ್ತದೆ.

  1. ಅಸ್ತಿತ್ವದಲ್ಲಿರುವ ಸಮಸ್ಯೆಗಳನ್ನು ನಿರ್ವಹಿಸುವುದು

ನಿಮ್ಮ ರಕ್ತದಲ್ಲಿನ ಸಕ್ಕರೆ ಮತ್ತು ರಕ್ತದೊತ್ತಡವನ್ನು ಹಿಡಿತದಲ್ಲಿಡಿ. ರಕ್ತದಲ್ಲಿನ ಸಕ್ಕರೆಯನ್ನು ಸರಿಯಾಗಿ ನಿಯಂತ್ರಿಸದಿರುವುದೇ ಸಿಕೆಡಿ ಉಂಟಾಗಲು  ಪ್ರಮುಖ ಅಂಶವಾಗಿದೆ, ಅಲ್ಲದೇ ನೀವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ, ಅದು ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಕಿಡ್ನಿಯ ಕಾಯಿಲೆಯನ್ನು ತಡೆಗಟ್ಟಲು ಈ ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸುವುದು ಉತ್ತಮ ಮಾರ್ಗವಾಗಿದೆ. ರಕ್ತದಲ್ಲಿನ ಸಕ್ಕರೆಯ ಹಾಗೂ ರಕ್ತದೊತ್ತಡದ ಮಟ್ಟಗಳನ್ನು ಹಿಡಿತದಲ್ಲಿರಿಸುವುದರಿಂದ ನೀವು ಕಿಡ್ನಿ ಕಾಯಿಲೆಯ ಅಪಾಯವನ್ನು ಮತ್ತು ಅದರ ಬೆಳವಣಿಗೆಯನ್ನು  ಗಮನಾರ್ಹವಾಗಿ ಕುಗ್ಗಿಸಬಹುದು. 

  1. ದೈಹಿಕವಾಗಿ ಸಕ್ರಿಯರಾಗಿರಿ

ದೈಹಿಕ ಚಟುವಟಿಕೆಗಳನ್ನು ನಿಮ್ಮ ದಿನಚರಿಯ ಭಾಗವನ್ನಾಗಿಸಿಕೊಳ್ಳಿ. ನಿಯಮಿತವಾಗಿ ವ್ಯಾಯಾಮ ಮಾಡಿ. ಇದು ನಿಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದರ ಮೂಲಕ ಮತ್ತು ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ ಮತ್ತು  ಕಿಡ್ನಿ ಕಾಯಿಲೆಯ ಬೆಳವಣಿಗೆಯ ಅಪಾಯವನ್ನು ಕುಗ್ಗಿಸುತ್ತದೆ.

  1. ಧೂಮಪಾನವನ್ನು ತ್ಯಜಿಸಿ

ಧೂಮಪಾನದಿಂದ ದೂರ ಸರಿಯಿರಿ. ಧೂಮಪಾನವು ಅನೇಕ ರೋಗಗಳಿಗೆ ಕಾರಣವಾಗುವ ಅಪಾಯಕಾರಿ ಅಂಶವನ್ನು ಹೊಂದಿಗೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇದು ನಿಮ್ಮ ಕಿಡ್ನಿಗಳನ್ನೂ ಸಹ ಹಾಳುಗೆಡವಬಹುದು, ಮತ್ತು ಸಿಕೆಡಿಯ ಬೆಳವಣಿಗೆ ಮತ್ತು ಅದರ ಪ್ರಗತಿಗೆ ಸಹಕಾರಿಯಾಗಬಹುದು. ಧೂಮಪಾನವು ಡಯಾಬಿಟಿಸ್ ಮತ್ತು ಅಧಿಕ ರಕ್ತದೊತ್ತಡ ಇರುವ ಜನರಲ್ಲಿ ಕಿಡ್ನಿಯ ವೈಫಲ್ಯಕ್ಕೆ ಕಾರಣವಾಗುತ್ತದೆ ಎಂದು ಅಧ್ಯಯನಗಳು ತೋರಿಸಿವೆ.(1,2)

  1. ಮದ್ಯಪಾನಕ್ಕೆ ಮಿತಿ ಇರಲಿ

ಆಲ್ಕೋಹಾಲನ್ನು ಕಡಿತಗೊಳಿಸಿ. ಮಿತವಾಗಿ ಮಧ್ಯಪಾನ ಮಾಡುವುದು ಹಾನಿಕಾರಕವಲ್ಲ, ಆದರೆ ಅತಿಯಾದ ಮದ್ಯಪಾನ ಸಿಕೆಡಿಯ ದವಡೆಗೆ ನಿಮ್ಮನ್ನು ದೂಡಬಹುದು.(2) ಇದಲ್ಲದೆ; ಅಧಿಕ ರಕ್ತದೊತ್ತಡಕ್ಕೆ ಮದ್ಯಪಾನ ಸೇವನೆಯು ಸಹ ಒಂದು ಕಾರಣವಾಗಿದೆ ಎಂಬುದು ನೆನೆಪಿನಲ್ಲಿರಲಿ.

  1. ನೀವು ತೆಗೆದುಕೊಳ್ಳುವ ಔಷಧಿಗಳ ಮೇಲೆ ನಿಗಾವಹಿಸಿ

ನಿಮ್ಮ ನೋವುಗಳಿಗೆ ಔಷಧಿ ಅಂಗಡಿಯಲ್ಲಿ ಸಿಗುವ ನೋವು-ನಿವಾರಕ ಔಷಧಿಗಳನ್ನು ಹೆಚ್ಚು ಬಳಸಬೇಡಿ, ಇದು ನಿಮ್ಮ ಕಿಡ್ನಿಗಳನ್ನು ಹಾಳುಗೆಡವಬಹುದು. ಎನ್‌ಎಸ್‌ಎಐಡಿ (ನಾನ್‌ಸ್ಟೆರಾಯ್ಡ್ ಆಂಟಿ ಇನ್ಫ್ಲಾಮೇಟರಿ ಡ್ರಗ್) ನೋವು ನಿವಾರಕಗಳಾದ ಐಬುಪ್ರೊಫೇನ್, ನ್ಯಾಪ್ರೊಕ್ಸೆನ್, ಇತ್ಯಾದಿಗಳ ದೀರ್ಘಕಾಲದ ಬಳಕೆಯು ಸಿಕೆಡಿಗೆ ನಿಮ್ಮನ್ನು ಬೇಗನೆ ತುತ್ತಾಗಿಸುತ್ತದೆ. ಈ ಔಷಧಿಗಳು ತುಂಬಾ ಹಾನಿಕಾರಕವಾಗಿದೆ.(3,4)

  1. ನಿಯಮಿತ ತಪಾಸಣೆಗಳನ್ನು ತಪ್ಪಿಸಬೇಡಿ

ಸಾಮಾನ್ಯವಾಗಿ, ಸಿಕೆಡಿಯ ಆರಂಭಿಕ ಹಂತಗಳಲ್ಲಿ ಅದರ ಯಾವುದೇ ಗುಣಲಕ್ಷಣಗಳನ್ನು ಗುರುತಿಸಲಾಗುವುದಿಲ್ಲ. ಏನೂ ಮಾಡಲಾಗದ ಹಂತಕ್ಕೆ ಅದು ತಲುಪಿದಾಗ ಮಾತ್ರವೇ ಅದು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಪ್ರತಿ ವರ್ಷ ನಿಮ್ಮ ಕಿಡ್ನಿಗಳನ್ನು ಪರೀಕ್ಷಿಸುವುದು, ಅದಕ್ಕೇನಾದರೂ ಹಾನಿಯಾಗಿದೆಯೇ ಎಂಬುದನ್ನು ಕಂಡುಹಿಡಿಯಲು ನೆರವಾಗುತ್ತದೆ. ಹಾಗಾಗಿ ವರ್ಷಕ್ಕೊಮ್ಮೆ ಪರೀಕ್ಷೆ ಮಾಡಿಸಲು ಮರೆಯದಿರಿ. ಇದನ್ನು ಮೊದಲೇ ಪತ್ತೆ ಹಚ್ಚಿ ಅದಕ್ಕೆ ಚಿಕಿತ್ಸೆ ನೀಡಿದರೆ, ಕಿಡ್ನಿಯ ಕಾಯಿಲೆಯನ್ನು ತಕ್ಕಮಟ್ಟಿಗೆ ನಿಭಾಯಿಸಬಹುದು ಮತ್ತು ಅದನ್ನು ವಿಫಲವಾಗದಂತೆ ತಡೆಯಬಹುದು. ನೀವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ, ನಿಮ್ಮ ವೈದ್ಯರು ನಿರ್ದಿಷ್ಟವಾದ ಅಧಿಕ ರಕ್ತದೊತ್ತಡದ ಔಷಧಿಗಳನ್ನು ನಿಮಗೆ ಶಿಫಾರಸು ಮಾಡಬಹುದು, ಅದು ಪ್ರಯೋಜನಕಾರಿ ಪರಿಣಾಮಗಳನ್ನು ಬೀರಬಹುದು. ನಿಮ್ಮ ಕಿಡ್ನಿಗಳಿಗೆ ಹಾನಿಯುಂಟುಮಾಡುವ ಔಷಧಿಗಳನ್ನು ತಪ್ಪಿಸುವ ಕುರಿತು  ನಿಮ್ಮ ವೈದ್ಯರು ನಿಮಗೆ ತಿಳಿಸಬಹುದು.

ಉಲ್ಲೇಖಗಳು:

  1. Yacoub R, Habib H, Lahdo A, et al. Association between smoking and chronic kidney disease: a case control study. BMC Public Health. 2010;10:731. doi:10.1186/1471-2458-10-731.
  2. Anoop Shankar, Ronald Klein, Barbara E. K. Klein; The Association among Smoking, Heavy Drinking, and Chronic Kidney Disease, American Journal of Epidemiology, Volume 164, Issue 3, 1 August 2006, Pages 263–271, https://doi.org/10.1093/aje/kwj173
  3. Gooch K, Culleton BF, Manns BJ, Zhang J, Alfonso H, Tonelli M, Frank C, Klarenbach S, Hemmelgarn BR. NSAID use and progression of chronic kidney disease. Am J Med. 2007 Mar;120(3):280.e1-7. PubMed PMID: 17349452.
  4. Plantinga L, Grubbs V, Sarkar U, et al. Nonsteroidal Anti-Inflammatory Drug Use Among Persons With Chronic Kidney Disease in the United States. Annals of Family Medicine. 2011;9(5):423-430. doi:10.1370/afm.1302

 

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.