Reading Time: 2 minutes

ನಾವು ಪವಿತ್ರ ರಂಜಾನ್ ಮಾಸವನ್ನು ಸಮೀಪಿಸುತ್ತಿದ್ದೇವೆ, ಪ್ರಪಂಚದಾದ್ಯಂತದ ಮುಸ್ಲಿಮರು ಹಗಲು ಹೊತ್ತಿನಲ್ಲಿ ಒಂದು ತಿಂಗಳ ಉಪವಾಸವನ್ನು ಕೈಗೊಳ್ಳಲು ಸಜ್ಜಾಗುತ್ತಿದ್ದಾರೆ. ಆದರೆ ದೀರ್ಘಕಾಲದ ಆರೋಗ್ಯದ ಸಮಸ್ಯೆಯನ್ನು ಹೊಂದಿರುವ ರೋಗಿಗಳ ಮೇಲೆ ಈ ಉಪವಾಸವು ಯಾವ ಪರಿಣಾಮ ಬೀರುತ್ತದೆ? ಬನ್ನಿ ತಿಳಿದುಕೊಳ್ಳೋಣ.

ಪ್ರಪಂಚದಾದ್ಯಂತ ಮುಸ್ಲಿಮರು ಪ್ರತಿ ವರ್ಷ ರಂಜಾನ್ ತಿಂಗಳಲ್ಲಿ ಮುಂಜಾನೆಯಿಂದ ಮುಸ್ಸಂಜೆಯವರೆಗೆ ಸತತ 29 ರಿಂದ 30 ದಿನಗಳವರೆಗೆ ಉಪವಾಸ ಮಾಡುತ್ತಾರೆ1. ಈ ಸಮಯದಲ್ಲಿ, ಉಪವಾಸ ಮಾಡುವವರೆಲ್ಲರೂ ತಮ್ಮ ಆಹಾರ ಪದ್ಧತಿ ಮತ್ತು ಮಲಗಿ ಎದ್ದೇಳುವ ನಮೂನೆಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆ2. ಆದಾಗ್ಯೂ, ದೀರ್ಘಕಾಲದವರೆಗಿನ ಉಪವಾಸ ಅಥವಾ ಅನಾರೋಗ್ಯಕರ ಉಪವಾಸವು ಡಯಾಬಿಟಿಸ್‌ನಂತಹ ದೀರ್ಘಕಾಲದ ಸಮಸ್ಯೆ ಹೊಂದಿರುವ ಜನರಲ್ಲಿ ತೊಂದರೆಗಳನ್ನು ಉಂಟುಮಾಡುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕಾದ ವಿಷಯ3.

ದೀರ್ಘಕಾಲದ ಸಮಸ್ಯೆ ಹೊಂದಿರುವ ಜನರು ಉಪವಾಸ ಕೈಗೊಂಡಾಗ ಸಾಮಾನ್ಯವಾಗಿ ಕಂಡುಬರುವ ಕೆಲವು ತೊಡಕುಗಳು ಇಲ್ಲಿವೆ:

ಹೈಪೊಗ್ಲೈಸೀಮಿಯಾ

ಉಪವಾಸವು ಟೈಪ್ 2 ಡಯಾಬಿಟಿಸ್ ಮೆಲ್ಲಿಟಸ್ ಹೊಂದಿರುವ ರೋಗಿಗಳಲ್ಲಿ ಹೈಪೊಗ್ಲೈಸೀಮಿಯಾದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ಸೂಚಿಸಿವೆ4. ಈಗ, ಹೈಪೊಗ್ಲೈಸೀಮಿಯಾ ಎಂದರೇನು ಮತ್ತು ಇದು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ತಿಳಿದುಕೊಳ್ಳೋಣ. ಹೈಪೊಗ್ಲೈಸೀಮಿಯಾ ಅಥವಾ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿನ ಹಠಾತ್ ಕುಸಿತವು ಡಯಾಬಿಟಿಸ್ ಹೊಂದಿರುವ ಜನರಲ್ಲಿ ಕಂಡುಬರುತ್ತದೆ ಮತ್ತು ಅದನ್ನು ಸಾಮಾನ್ಯ ಮಟ್ಟಕ್ಕೆ ಹಿಂದಿರುಗಿಸಲು ತಕ್ಷಣವೇ ಚಿಕಿತ್ಸೆ ನೀಡಬೇಕಾಗುತ್ತದೆ. ಉಪವಾಸವು ದೀರ್ಘಕಾಲದವರೆಗೆ ಮುಂದುವರಿದರೆ ಹಾಗೂ ಹೆಚ್ಚು ಕಾಲ ರಕ್ತದಲ್ಲಿನ ಸಕ್ಕರೆಯ ಮಟ್ಟ ಕುಗ್ಗಿದ ಸ್ಥಿತಿಯಲ್ಲಿಯೇ ಇದ್ದರೆ, ಅದರಿಂದ ಆ ವ್ಯಕ್ತಿಯ ರೋಗ ಉಲ್ಬಣಿಸಬಹುದು ಅಥವಾ ಅವರು ಕೋಮಾಗೂ ಜಾರಬಹುದು5.

ಹೈಪರ್‌ಗ್ಲೈಸೀಮಿಯಾ

ಇದು ರಕ್ತದಲ್ಲಿನ ಗ್ಲುಕೋಸ್‍ನ ಮಟ್ಟವು ಅಧಿಕಗೊಂಡು ಕಣ್ಣು, ಮೂತ್ರಪಿಂಡಗಳು ಮತ್ತು ನರಗಳ ಹಾನಿ ಇತ್ಯಾದಿಗಳಂತಹ ಗಂಭೀರ ಮತ್ತು ಮಾರಣಾಂತಿಕವಾದ ತೊಡಕುಗಳನ್ನು ಉಂಟು ಮಾಡುವ ಸ್ಥಿತಿಯಾಗಿದೆ6. ರಂಜಾನ್‍ನ ಸಮಯದಲ್ಲಿ, ಇಫ್ತಾರ್ ಊಟದ ವೇಳೆ ಆಹಾರ ಕ್ರಮದ ಬಗ್ಗೆ ಎಚ್ಚರಿಕೆವಹಿಸದೆ ಇರುವುದರಿಂದ ಅಥವಾ ಡಯಾಬಿಟಿಸ್ ಔಷಧಿಗಳ ಪ್ರಮಾಣವನ್ನು ವೈದ್ಯರೊಡನೆ ಸಮಾಲೋಚಿಸದೆ ಕುಗ್ಗಿಸುವುದರಿಂದ ಹೈಪರ್‌ಗ್ಲೈಸೀಮಿಯಾ ಸಂಭವಿಸಬಹುದು7. ಹಾಗಾಗಿ, ರಂಜಾನ್ ಉಪವಾಸದ ಸಮಯದಲ್ಲಿ ಆರೋಗ್ಯಕರ ಆಹಾರ ಯೋಜನೆಗೆ ಬದ್ಧರಾಗಿರುವುದು ತುಂಬಾ ಮುಖ್ಯವಾಗಿರುತ್ತದೆ. 

ಡಯಾಬಿಟಿಕ್ ಕೀಟೋಆಸಿಡೋಸಿಸ್

ರಕ್ತದಲ್ಲಿ ಕೀಟೋನ್‌ಗಳ (ನಿಮ್ಮ ದೇಹದಲ್ಲಿ ಸಾಕಷ್ಟು ಇನ್ಸುಲಿನ್ ಇಲ್ಲದಿದ್ದಾಗ ಉತ್ಪತ್ತಿಯಾಗುವ ರಾಸಾಯನಿಕಗಳು) ಪ್ರಮಾಣ ಹೆಚ್ಚಾಗಲು ಪ್ರಾರಂಭವಾದಾಗ, ಅದು ಡಯಾಬಿಟಿಸ್ ಕೀಟೋಆಸಿಡೋಸಿಸ್‍ ಎಂಬ ಸಮಸ್ಯೆ ಉದ್ಭವವಾಗಲು ಕಾರಣವಾಗುತ್ತದೆ. ಹೆಚ್ಚುವರಿ ಕೀಟೋನ್‌ಗಳು ರಕ್ತದಲ್ಲಿನ ಆಮ್ಲವನ್ನು ಹೆಚ್ಚಿಸುತ್ತದೆ, ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹಿಡಿತದಲ್ಲಿರಿಸಿಕೊಂಡಿಲ್ಲ ಎಂಬುದರ ಸೂಚನೆಯಾಗಿದೆ8. ಉಪವಾಸವು ಲಿಪೊಲಿಸಿಸ್ ಮತ್ತು ಕೀಟೋಸಿಸ್ ಬೆಳವಣಿಗೆಯನ್ನು ಬಿರುಸಾಗಿಸುತ್ತದೆ ಮತ್ತು ಗ್ಲುಕಗಾನ್ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳಲ್ಲಿ ಕಂಡುಬಂದಿದೆ9, ಇದು ಪೊಟ್ಯಾಸಿಯಮ್ ಮಟ್ಟದಲ್ಲಿನ ಕುಗ್ಗುವಿಕೆ, ಮೆದುಳಿನೊಳಗೆ ಊತ ಕಾಣಿಸಿಕೊಳ್ಳುವುದು, ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುವುದು ಅಥವಾ ಮೂತ್ರಪಿಂಡದ ಹಾನಿಗೂ ಕಾರಣವಾಗಬಹುದು10.  

ನೀರಿನಾಂಶದ ಕೊರತೆ ಮತ್ತು ಥ್ರಾಂಬೋಸಿಸ್

ರಂಜಾನ್ ಉಪವಾಸದ ಸಮಯದಲ್ಲಿ ನೀರನ್ನು ಕುಡಿಯದೆ ಇರುವುದರಿಂದ ನೀರಿನಾಂಶದ ಕೊರತೆ ಉಂಟಾಗಬಹುದು. ಹೆಚ್ಚು ಕಾಲ ನೀರನ್ನು ಕುಡಿಯದೆ ಇರುವುದರಿಂದ, ವಿಶೇಷವಾಗಿ ಬಿಸಿ ಮತ್ತು ತೇವಾಂಶವಿರುವ ಪ್ರದೇಶಗಳಲ್ಲಿ, ತೀವ್ರ ನೀರಿನಾಂಶದ ಕೊರತೆಯುಂಟಾಗಬಹುದು11. ಈ ನೀರಿನಾಂಶದ ಕೊರತೆಯು ರಕ್ತದ ಸ್ನಿಗ್ಧತೆಯನ್ನು (ಜಿಗುಟುತನ) ಮತ್ತಷ್ಟು ಹೆಚ್ಚಿಸುತ್ತದೆ, ಇದು ಥ್ರಾಂಬೋಸಿಸ್ ಅಥವಾ ರಕ್ತದ ಹೆಪ್ಪುಗಟ್ಟುವಿಕೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ12. ಆದ್ದರಿಂದ, ಡಯಾಬಿಟಿಸ್ ರೋಗಿಗಳು, ಎದುರಾಗಬಹುದಾದ ತೊಂದರೆಗಳನ್ನು ತಡೆಗಟ್ಟಲು ಉಪವಾಸವಿಲ್ಲದ ಸಮಯದಲ್ಲಿ ಸಾಕಷ್ಟು ನೀರನ್ನು ಕುಡಿಯುವುದು ಬಹಳ ಮುಖ್ಯವಾಗಿರುತ್ತದೆ.

ದೀರ್ಘಕಾಲದ ಸಮಸ್ಯೆ ಇರುವ ಜನರಿಗೆ ರಂಜಾನ್ ಉಪವಾಸದಿಂದ ಹೊರಗುಳಿಯಲು ಅವಕಾಶವಿದೆ, ಏಕೆಂದರೆ ಇದು ಕೆಲವೊಮ್ಮೆ ಗಂಭೀರ ವೈದ್ಯಕೀಯ ತೊಂದರೆಗಳಿಗೆ ಕಾರಣವಾಗಬಹುದು. ಆದಾಗ್ಯೂ, ನೀವು ಉಪವಾಸ ಮಾಡಲೇ ಬೇಕೆಂದಿದ್ದರೆ, ರಂಜಾನ್ ಸಂಭ್ರಮಾಚರಣೆಗೆ ಈ ತೊಡಕುಗಳು ಅಡ್ಡಿಯಾಗದಂತೆ ನೋಡಿಕೊಳ್ಳಿ.

References:

 1. Mohammad Hossein Rouhani L. Is Ramadan fasting related to health outcomes? A review on the related evidence [Internet]. PubMed Central (PMC). 2020 [cited 3 February 2020]. Available from: https://www.ncbi.nlm.nih.gov/pmc/articles/PMC4274578/
 2. Abolaban H, Al-Moujahed A. Muslim patients in Ramadan: A review for primary care physicians. Avicenna Journal of Medicine. 2017;0(0):0.
 3. Al-Hader A, Abu-Farsakh N, Khatib S, Hasan Z. The Effects of Ramadan Fasting on Certain Biochemical Parameters in Normal Subjects and in Type II Diabetic Patients. Annals of Saudi Medicine. 1994;14(2):139-141.
 4. [Internet]. 2020 [cited 3 February 2020]. Available from: https://www.endocrinologynetwork.com/t2-diabetes/type-2-diabetes-and-fasting-how-dangerous-could-it-be
 5. Hypoglycemia (Low Blood Glucose) | ADA [Internet]. Diabetes.org. 2020 [cited 4 February 2020].Available from: https://www.diabetes.org/diabetes/medication-management/blood-glucose-testing-and-control/hypoglycemia
 6. Mouri M, Badireddy M. Hyperglycemia [Internet]. Ncbi.nlm.nih.gov. 2020 [cited 4 February 2020]. Available from: https://www.ncbi.nlm.nih.gov/books/NBK430900/
 7. Raveendran A, Zargar A. Diabetes control during Ramadan fasting. Cleveland Clinic Journal of Medicine. 2017;84(5):352-356.
 8. DKA (Ketoacidosis) & Ketones | ADA [Internet]. Diabetes.org. 2020 [cited 4 February 2020]. Available from: https://www.diabetes.org/diabetes/complications/dka-ketoacidosis-ketones
 9. Y F. [Diabetic ketoacidosis during the Ramadan fast]. – PubMed – NCBI [Internet]. Ncbi.nlm.nih.gov. 2020 [cited 4 February 2020]. Available from: https://www.ncbi.nlm.nih.gov/pubmed/10868172
 10. Diabetic Ketoacidosis | Cedars-Sinai [Internet]. Cedars-sinai.org. 2020 [cited 5 February 2020]. Available from: https://www.cedars-sinai.org/health-library/diseases-and-conditions/d/diabetic-ketoacidosis.html
 11. Elhadd T, Al-Amoudi A. Recommendations for Management of Diabetes During Ramadan: Response to Al-Arouj et al. Diabetes Care. 2006;29(3):744-745.
 12. Diabetes and Fasting During Ramadan [Internet]. Hamad.qa. 2020 [cited 5 February 2020]. Available from: https://www.hamad.qa/EN/your%20health/Diabetes/Pages/Diabetes-and-Fasting-During-Ramadan.aspx

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.