Reading Time: 2 minutes

ಹೊಸದಾಗಿ ಕಂಡುಬಂದಿರುವ ನಾವೆಲ್ ಕೊರೊನಾವೈರಸ್ನಿಂದ ಬರುವ ಕಾಯಿಲೆ COVID-19. ಇದು ವಿಶ್ವದ  ಬೇನೆ (ಪೆಂಡಮಿಕ್) ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಓ) ಪ್ರಕಟಿಸಿದ ಬೆನ್ನಲ್ಲೇ ಭಾರತ  ಹಾಗೂ ಜಗತ್ತಿನಾದ್ಯಂತ ಆತಂಕ ಮನೆಮಾಡಿದೆ. ಗೂಗಲ್ನಲ್ಲಿಕೊರೊನಾವೈರಸ್ಎಂದು ಹುಡುಕಿದರೆ 8.5 ಬಿಲಿಯನ್ ಫಲಿತಾಂಶಗಳು ಸಿಗುತ್ತಿವೆ. “ಇದರ ರೋಗ ಲಕ್ಷಣಗಳೇನು?” ಎಂದು  ಪ್ರಶ್ನೆ ಕೇಳಿದ ಮೇಲೆ ಅತಿ ಹೆಚ್ಚು ಕೇಳಿರುವ ಮತ್ತೊಂದು ಪ್ರಶ್ನೆಯೆಂದರೆನನಗೆ ಕಾಯಿಲೆ ಬರಬಹುದೇ?” ಎಂದು

ಕೊರೊನಾವೈರಸ್ ಕುರಿತು ವಿಶ್ವ ಆರೋಗ್ಯ ಸಂಸ್ಥೆಯವರು ಬಿಡುಗಡೆ ಮಾಡಿರುವ ವರದಿಗಳೊಂದರಲ್ಲಿ(1), ಈಗಾಗಲೇ ಧೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವವರು ಕೊರೊನಾವೈರಸ್ಸಿನಿಂದ ಉಂಟಾಗುವ ಆರೋಗ್ಯ ತೊಂದರೆಗಳಿಗೆ ಸುಲಭವಾಗಿ ತುತ್ತಾಗುವರು ಎಂದು ತಿಳಿಸಿದೆ. ಅಧ್ಯಯನಗಳ ಪ್ರಕಾರ ಅಧಿಕ ರಕ್ತದೊತ್ತಡ ಇರುವವರ ಸಾವಿನ ಮಟ್ಟ 8.4% ನಷ್ಟಿದೆ.

ಅಧಿಕ ರಕ್ತದೊತ್ತಡ ಹಾಗೂ COVID-19 (Hypertension and COVID-19)

ಅಧಿಕ ರಕ್ತದೊತ್ತಡವು ಭಾರತದ  ಎಲ್ಲಾ ಕಡೆ ಕಂಡುಬರುತ್ತದೆ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಅದೆಷ್ಟು ಹೆಚ್ಚಾಗಿದೆ ಎಂದರೆ, ಭಾರತದಲ್ಲಿ ಮೂವರಲ್ಲಿ ಒಬ್ಬರಿಗೆ ಅಧಿಕ ರಕ್ತದೊತ್ತಡ ಇದೆ ಎಂದು ಅಂದಾಜಿಸಲಾಗಿದೆ.(2) ಚೀನಾದವರಿಗೆ COVID-19 ಮೇಲಿರುವ ಅನುಭವದ ಆಧಾರದ ಮೇಲೆ, ಅಧಿಕ ರಕ್ತದೊತ್ತಡ ಇರುವವರಿಗೆ ಕೊರೊನಾವೈರಸ್ ತಗುಲಿದರೆ ಗಂಭೀರ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ ಎಂದು ಅನುಮಾನಿಸಲಾಗಿದೆ. ರಕ್ತದೊತ್ತಡವನ್ನು ಹಿಡಿತದಲ್ಲಿಟ್ಟುಕೊಳ್ಳಲು ಬಳಸುವ ಔಷಧಿಯು, ಸೋಂಕು ತಗುಲುವ ಇಲ್ಲವೇ ಕಾಯಿಲೆಯನ್ನು ತೀವ್ರಗೊಳಿಸುವ ಅಪಾಯವನ್ನು ಹೆಚ್ಚಿಸಬಹುದು ಎಂಬ ಅನುಮಾನದ ಮೇಲೆ ಮಾತನ್ನು ಹೇಳಲಾಗಿದೆ.(3) ಆದರೆ ಇದು ಇನ್ನು  ಸಾಬೀತಾಗಿಲ್ಲ. ಹಾಗಾಗಿ ಯಾವುದೇ ವದಂತಿಗಳಿಗೆ ಕಿವಿಗೊಡದೆ ಔಷಧಿಗಳ ಕುರಿತು ಹೆಚ್ಚು ತಿಳಿದುಕೊಳ್ಳಲು ನಿಮ್ಮ ವೈದ್ಯರೊಂದಿಗೆ  ಮಾತನಾಡಿ.(4)    

ತಡೆಗಟ್ಟುವ ಕ್ರಮಗಳು

ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಯುಎಸ್ಏ ದೇಶದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ (CDC) ತಿಳಿಸಿರುವ ಹಲವಾರು ಮುನ್ನೆಚ್ಚರಿಕೆ ಕ್ರಮಗಳು ಸ್ವಚ್ಛತೆಯ ಕುರಿತೇ ಆಗಿದೆ.

ನಿಮಗಾಗಿ ಕೆಲವು ಅಂಶಗಳು ಇಲ್ಲಿವೆ:(5)

 • ಒಂದು ವೇಳೆ ನಿಮ್ಮ ಸಮುದಾಯದಲ್ಲಿ COVID-19 ತಲೆದೋರಿದ್ದರೆ, ನೀವು ಮನೆಯಲ್ಲೇ ಇರಲು ಬೇಕಾದಷ್ಟು ದಿನಸಿ, ಔಷಧಿಗಳು ಹಾಗೂ ಇನ್ನಿತರೆ ವಸ್ತುಗಳು ಸಾಕಷ್ಟು ಇರುವಂತೆ ನೋಡಿಕೊಳ್ಳಿ
 • ಕಾಯಿಲೆಯಿಂದ ಬಳಲುತ್ತಿರುವ ಯಾರೊಂದಿಗೂ ಸಂಪರ್ಕ ಮಾಡದೇ ದೂರವಿರಿ.
 • ಜನಜಂಗುಳಿ ಇರುವ ಜಾಗಗಳಿಂದ ದೂರವಿರಿ ಹಾಗೂ ಅನಗತ್ಯ ತಿರುಗಾಟವನ್ನು ಮಾಡದಿರಿ.
 • ಇನ್ನು ಸ್ವಚ್ಛತೆಯ ಕುರಿತು ಹೇಳುವುದಾದರೆ, ಕೈಯನ್ನು ಆಗಾಗ ತೊಳೆಯುತ್ತಿರಿ (ಕಡೆಯಪಕ್ಷ 20 ಸೆಕೆಂಡುಗಳ ತನಕ) ಇಲ್ಲವೇ ಆಲ್ಕೋಹಾಲ್ಮೂಲದ ರಬ್ಗಳನ್ನು ಬಳಸಿ
 • ಸಾರ್ವಜನಿಕ ಜಾಗಗದಲ್ಲಿ ಏನನ್ನು ಮುಟ್ಟಲು ಹೋಗಬೇಡಿ. ವೈಯಕ್ತಿಕವಾಗಿ, ನಿಮ್ಮ ಮೂಗು, ಕಣ್ಣು ಹಾಗೂ ಮುಖ ಮುಟ್ಟಿಕೊಳ್ಳುವುದನ್ನು ತಪ್ಪಿಸಿ, ಆಗ ವೈರಸ್ ಸೋಂಕು ತಗುಲುವ ಸಾಧ್ಯತೆಯನ್ನು ಕಡಿಮೆಮಾಡಬಹುದು.
 • ಆದರೆ ಅತ್ಯಂತ ಕೆಟ್ಟ ಪರಿಸ್ಥಿತಿಗೂ ನೀವು ತಯಾರಾಗಿರಬೇಕು. ನಿಮ್ಮ ಕುಟುಂಬ ಹಾಗೂ ಗೆಳೆಯರಿಗೆ ಮೊದಲೇ ತಿಳಿಸಿರಿ, ಒಂದುವೇಳೆ ನಿಮಗೆ ಹುಷಾರು ತಪ್ಪಿದರೆ ಅವರು ನೆರವಾಗಬಹುದು
 • ನಿಮ್ಮ ಮೇಲೆ ನಿಮಗೆ ನಿಗಾ ಇರಲಿ. ಕೆಮ್ಮು, ಜ್ವರ ಹಾಗೂ ಉಸಿರಾಟದ ತೊಂದರೆಯಂತಹ ರೋಗ ಲಕ್ಷಣಗಳು ಕಂಡುಬಂದರೆ ಪ್ರತ್ಯೇಕ ಕೋಣೆಯಲ್ಲಿ ಇರಲು ಆರಂಭಿಸಿ.
 • ಮುಂದೆ, ಆರೋಗ್ಯ ಅಧಿಕಾರಿಗಳಿಗೆ ತಿಳಿಸಿ ಇಲ್ಲವೇ ಸಂಪರ್ಕಿಸಿ, ಆಗ ಅವರು ಬೇಕಾದ  ಅಗತ್ಯ ಪರೀಕ್ಷೆಗಳನ್ನು ಮಾಡಬಹುದು. ಏನೇನಾಗುತ್ತಿದೆ ಎಂದು ನಿಮ್ಮ ಡಾಕ್ಟರಿಗೆ ತಿಳಿಸುತ್ತಿರಿ.

ಜೊತೆಗೆ, COVID-19 ಮಾಹಿತಿ ಯಾವ ಮೂಲದಿಂದ ಬರುತ್ತಿದೆ ಎಂಬುದರ ಮೇಲೆ ನಿಗಾ ಇರಲಿ. ಒಂದು ಎಚ್ಚರಿಕೆಯ ಮಾತೆಂದರೆಎಲ್ಲವನ್ನೂ ನಂಬಲು ಹೋಗಬೇಡಿ. ಸುಳ್ಳು ಸುದ್ದಿಗಳು ಬೇಗನೆ ಹಬ್ಬುತ್ತವೆ. ನಂಬಬಲ್ಲ ಮೂಲಗಳಿಂದ ಬರುವ ವರದಿಗಳನ್ನು ಹಾಗೂ ಮಾಹಿತಿಯನ್ನು ಮಾತ್ರ ತಿಳಿದುಕೊಳ್ಳುತ್ತಿರಿ ಮತ್ತು ನಂಬಿ.


ಉಲ್ಲೇಖಗಳು:

 1. Report of the WHO-China Joint Mission on Coronavirus Disease 2019 (COVID-19) [Internet]. World Health Organisation. 2020 [cited 2020 Mar 15]. Available from: https://www.who.int/docs/default-source/coronaviruse/who-china-joint-mission-on-covid-19-final-report.pdf
 2. Ramakrishnan S, Zachariah G, Gupta K, Shivkumar Rao J, Mohanan PP, Venugopal K, et al. Prevalence of hypertension among Indian adults: Results from the great India blood pressure survey. Indian Heart Journal [Internet]. 2019 Jul 1 [cited 2020 Mar 15];71(4):309–313. Available from: https://www.sciencedirect.com/science/article/pii/S0019483219304201
 3. Fang L, Karakiulakis G, Roth M. Are patients with hypertension and diabetes mellitus at increased risk for COVID-19 infection? The Lancet Respiratory Medicine [Internet]. 2020 Mar [cited 2020 Mar 15]; Available from: https://www.thelancet.com/pdfs/journals/lanres/PIIS2213-2600(20)30116-8.pdf
 4. de Simone G. Position Statement of the ESC Council on Hypertension on ACE-Inhibitors and Angi [Internet]. Escardio.org. 2020 [cited 2020 Mar 15]. Available from: https://www.escardio.org/Councils/Council-on-Hypertension-(CHT)/News/position-statement-of-the-esc-council-on-hypertension-on-ace-inhibitors-and-ang
 5. CDC. Coronavirus Disease 2019 (COVID-19) [Internet]. Centers for Disease Control and Prevention. 2020 [cited 2020 Mar 15]. Available from: https://www.cdc.gov/coronavirus/2019-ncov/specific-groups/high-risk-complications.html

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.