Reading Time: 3 minutes

ನೋವೆಲ್ ಕೊರೊನಾವೈರಸ್, COVID-19 ಕಾಯಿಲೆಯನ್ನು ಪ್ಯಾಂಡೆಮಿಕ್ ಅಥವಾ ಜಾಗತಿಕ ಪಿಡುಗು ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಮೊದಲ ಬಾರಿಗೆ ಇದು ಚೈನಾದ ವುಹಾನ್ ಅಲ್ಲಿ ಕಂಡುಬಂದಾಗ ಯಾವುದೋ ಗೊತ್ತಿರದ ನ್ಯೂಮೋನಿಯಾದಂತಹ ಕಾಯಿಲೆ ಎಂದು ತಪ್ಪಾಗಿ ತಿಳಿಯಲಾಗಿತ್ತು. ಈ ವೈರಸ್ಸಿನ ಸೋಂಕು ತಗುಲಿದ ಹೆಚ್ಚಿನವರು ಸಾಮಾನ್ಯದಿಂದ ತೀವ್ರವಾದ ಉಸಿರಾಟದ ತೊಂದರೆಗಳನ್ನು ಅನುಭವಿಸುತ್ತಾರೆ. ಸೋಂಕು ತಗುಲಿದ ವ್ಯಕ್ತಿಯ ಉಸಿರಾಟದ ಹನಿಗಳಿಂದ ಈ ಕಾಯಿಲೆ ಹರಡುತ್ತದೆ, ಅದು ಕೆಮ್ಮು, ಸೀನು ಇಲ್ಲವೇ ಎಂಜಲಿನಿಂದ ಆಗಿರಬಹುದು1. ಸೋಂಕು ತಗುಲಿದೆ ಎಂದು ಸುಳಿವನ್ನು ನೀಡುವ ಕೆಲವು ಸಾಮಾನ್ಯ ರೋಗ ಲಕ್ಷಣಗಳೆಂದರೆ ಜ್ವರ, ಒಣಕೆಮ್ಮು ಹಾಗೂ ಉಸಿರಾಟದ ತೊಂದರೆ2.

ತೀವ್ರವಾದ ಸೋಂಕು ತಗುಲಿದವರು, ಅದರಲ್ಲೂ ‘ಅಪಾಯದಲ್ಲಿದ್ದಾರೆ’3 ಎಂದು ವಿಭಾಗಿಸಲಾದ ವ್ಯಕ್ತಿಗಳಲ್ಲಿ, 60 ವರ್ಷ ಮೇಲ್ಪಟ್ಟ ಹಾಗೂ ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಸೇರಿದ್ದಾರೆ. ಇದನ್ನು ಗುಣಪಡಿಸಲು ಇನ್ನೂ ಔಷಧಿ ಕಂಡುಹಿಡಿದಿರದ ಕಾರಣ, ಅಸ್ತಮಾ ಇಲ್ಲವೇ ಬ್ರಾಂಕೈಟಿಸ್‌ನಂತಹ ಕಾಯಿಲೆಯಿಂದ ನರಳುತ್ತಿರುವವರಿಗೆ ಇದರ ಎದುರು ಹೋರಾಡುವುದು ದೊಡ್ಡ ಸವಾಲಾಗಿದೆ. ಇಂತಹ ವ್ಯಕ್ತಿಗಳಿಗೆ COVID-19 ಬಂದರೆ ನ್ಯೂಮೋನಿಯಾ ಹಾಗೂ ತೀವ್ರ ಉಸಿರಾಟದ ಅಪಾಯದ ರೋಗಗಳಿಗೆ (ARDS)4 ಎಡೆಮಾಡಿಕೊಡಬಹುದು. ಜೊತೆಗೆ, ಹಲವಾರು ಕಾರಣಗಳಿಂದಾಗಿ ARDS ಬರಬಹುದು, ಅದು ಬಂದಮೇಲೆ ಅದಕ್ಕೆ ಚಿಕಿತ್ಸೆ ನೀಡಿ, ರೋಗವನ್ನು ವಾಸಿಮಾಡಿಕೊಳ್ಳುವುದು ದೊಡ್ಡ ಸವಾಲೇ ಸರಿ5. ಹಾಗಾಗಿ, ವೈರಸ್ ಸೋಂಕು ತಗುಲಿದಾಗ ನಮ್ಮ ಶ್ವಾಸಕೋಶಕ್ಕೆ ಏನಾಗುವುದು ಎಂದು ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ. ಈ ವೈರಸ್ಸಿನ ಗುಣಲಕ್ಷಣಗಳು ಸಾರ್ಸ್ (SARS) ವೈರಸ್ಸಿನ ಗುಣಲಕ್ಷಣಗಳಿಗೆ ಹೆಚ್ಚಾಗಿ ಹೋಲುವುದರಿಂದ, COVID-19 ಕೂಡ ಶ್ವಾಸಕೋಶಗಳಿಗೆ ಸಾರ್ಸ್ ತರಹದ್ದೇ ಹೊಡೆತ ಹಾಗು ಹಾನಿಯನ್ನು ಉಂಟುಮಾಡುತ್ತದೆ ಎಂದು ಅಧ್ಯಯನಗಳು ತಿಳಿಸುತ್ತವೆ6.

ಕೇಸ್ 1: ನ್ಯೂಮೋನಿಯಾ

“ನ್ಯೂಮೋನಿಯಾ” ಎಂಬ ಪದವು ಹಳೆಯ ಗ್ರೀಕ್ ಪದವಾದ “ನ್ಯೂಮಾನ್” ಎಂಬ ಪದದಿಂದ ಹುಟ್ಟಿದೆ, ಇದರರ್ಥ ಶ್ವಾಸಕೋಶ ಎಂದು. ಹಾಗಾಗಿ “ನ್ಯೂಮೋನಿಯಾ” ಎಂಬ ಪದದ ಅರ್ಥವು “ಶ್ವಾಸಕೋಶದ ಕಾಯಿಲೆ” ಎಂದಾಗಿದೆ. ಸೋಂಕು ಹೆಚ್ಚಾದಾಗ ಈ ಕಾಯಿಲೆ ಬಂದು, ಹೆಚ್ಚಿನ ಕೆಮ್ಮಿನ ಜೊತೆ ಉಸಿರಾಟದ ತೊಂದರೆಯು ಎದುರಾಗುವುದು. ಸೋಂಕು ಹೆಚ್ಚಾದಾಗ ಶ್ವಾಸಕೋಶಗಳಲ್ಲಿ ಉರಿಯೂತ ಕಾಣಿಸಿಕೊಂಡು ಅದರಲ್ಲಿ ಆಮ್ಲಜನಕದ ಹರಿದಾಟಕ್ಕೆ ತೊಂದರೆಯಾಗಿ ರೋಗ ಲಕ್ಷಣಗಳು ಕಂಡುಬರುತ್ತವೆ7

ಕೇಸ್ 2: ತೀವ್ರ ಉಸಿರಾಟದ ಅಪಾಯದ ರೋಗ (ARDS)

ಸಾಮಾನ್ಯವಾಗಿ, ಸೋಂಕು ತಗುಲಿದ 12 ದಿನಕ್ಕೆ ARDS ನಿಂದ ರೋಗಿಗಳು ಬಳಲುತ್ತಾರೆ8. ARDS ನಿಂದಾಗಿ  ಶ್ವಾಸಕೋಶದ ಗೋಡೆಗಳಿಗೆ ಹಾನಿಯಾಗುವುದು. ಶ್ವಾಸಕೋಶದಲ್ಲಿ ನೀರಿನಾಂಶ ಹೆಚ್ಚಾಗಿ, ಆಮ್ಲಜನಕವನ್ನು ಶುದ್ಧೀಕರಿಸಿ ವಿನಿಮಯ ಮಾಡುವ ಗಾಳಿಗೂಡುಗಳು ಕೂಡ ಹಾನಿಗೊಳಗಾಗಿ ರಕ್ತದಲ್ಲಿನ ಆಮ್ಲಜನಕದ ಪ್ರಮಾಣವನ್ನು ಕಡಿಮೆಮಾಡುತ್ತದೆ. ಹಲವಾರು ಕಾರಣಗಳು ಒಟ್ಟಿಗೆ ಸೇರಿ ARDS ಗೆ ದಾರಿಮಾಡಿಕೊಡಬಹುದು. ಅದಕ್ಕೆ ಈಗ ನಾವೇನು ಮಾಡಬಹುದು?

ರೋಗ ವಾಸಿಮಾಡುವುದಕ್ಕಿಂತ ರೋಗ ಬರದಂತೆ ತಡೆಗಟ್ಟುವುದು ಒಳ್ಳೆಯದು

CDC4 ಅವರ ಸಲಹೆಯಂತೆ ಈ ಕೆಳಗಿನ ಕ್ರಮಗಳನ್ನು ಯಾರು ಬೇಕಾದರು ಪಾಲಿಸಬಹುದು.

ಎಚ್ಚರಿಕೆಯಿಂದ ಸಿದ್ಧರಾಗಿ, ತುರ್ತುಪರಿಸ್ಥಿತಿಯ ಸಂದರ್ಭಗಳಲ್ಲಿ ನಿಮ್ಮನ್ನು ನೀವು ಕಾಪಾಡಿಕೊಳ್ಳಲು ಬೇಕಾದ ಕೆಲಸಗಳನ್ನು ಮಾಡಿ. COVID-19 ಸೋಂಕನ್ನು ತಡೆಗಟ್ಟಲು ಬೇಕಾದ ಕ್ರಮಗಳನ್ನು ಪಾಲಿಸಿ. ದಿನಸಿ ಹಾಗೂ ಔಷಧಿಗಳನ್ನು ಕೂಡಿಟ್ಟುಕೊಳ್ಳಿ. ನೈರ್ಮಲ್ಯತೆಯನ್ನು ಅಭ್ಯಾಸಮಾಡಿಕೊಳ್ಳಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ, ಕೈತೊಳೆಯಿರಿ (ಕನಿಷ್ಠ 20 ಸೆಕೆಂಡುಗಳು), ಜನಜಂಗುಳಿಯಿಂದ ದೂರವಿರಿ, ಅನಗತ್ಯ ತಿರುಗಾಟ ಮಾಡಬೇಡಿ.

ನಿಮಗೇನಾದರು ಅಸ್ತಮಾ ಇದ್ದರೆ, ಇಲ್ಲವೇ ಅಸ್ತಮಾದಂತಹ ಕಾಯಿಲೆಯಿರುವ ವ್ಯಕ್ತಿಗೆ ನೀವು ಆರೈಕೆ ಮಾಡುತ್ತಿದ್ದರೆ, ನಿಮಗೆ ಬೇಕಾದ ಕಿರುಪಟ್ಟಿ ಇಲ್ಲಿದೆ.

 • ಅಸ್ತಮಾ ಆರೈಕೆಯ ದಿನಚರಿಯನ್ನು ಪಾಲಿಸಿ.
 • ಡಾಕ್ಟರ್ ತಿಳಿಸಿದಂತೆ ಅಸ್ತಮಾ ಔಷಧಿಗಳನ್ನು ತೆಗೆದುಕೊಳ್ಳಿ.
 • ನಿಮ್ಮ ಇನ್‌ಹೇಲರ್ ಕೈಗೆಟುಕುವಂತಿರಲಿ; ಇನ್‌ಹೇಲರ್ ಅನ್ನು ಬಳಸುವುದು ಹೇಗೆ ಎಂದು ಕೇರ್‌ಗಿವರ್‌ಗೆ ಗೊತ್ತಿರಬೇಕು.
 • ಅಸ್ತಮಾ ಟ್ರಿಗರ್‌ಗಳು ಬರದಂತೆ ತಡೆಯಿರಿ. ಆತಂಕ ಹಾಗೂ ಒತ್ತಡ ನಿಭಾಯಿಸುವುದನ್ನು ಕಲಿಯಿರಿ.
 • ಎಲ್ಲದಕ್ಕಿಂತ ಮುಖ್ಯವಾಗಿ, ಸ್ವಚ್ಛವಾಗಿರಿ ಹಾಗೂ ಸೋಂಕಿನಿಂದ ದೂರವಿರಿ!

ಒಂದು ವೇಳೆ ತುರ್ತು ಪರಿಸ್ಥಿತಿ ಎದುರಾದರೆ, ನಿಮ್ಮ ಡಾಕ್ಟರನ್ನು ಸಂಪರ್ಕಿಸಿ ಇಲ್ಲವೇ COVID-19 ಅನ್ನು ನಿಭಾಯಿಸಲು ಭಾರತ ಸರ್ಕಾರ ನಿಗದಿಪಡಿಸಿರುವ ನೆರವಿನ ಸಂಖ್ಯೆಗೆ ಕರೆಮಾಡಿ: 91-11-23978046. ಅಲ್ಲದೇ, +91 9013151515 ಈ ನಂಬರ್‌ಗೆ ಸಂದೇಶ ಕಳುಹಿಸುವುದರ ಮೂಲಕ ವಾಟ್ಸಾಪ್ ಚ್ಯಾಟ್‌ಬಾಟ್‌ನೊಂದಿಗೆ ನೀವು ಚ್ಯಾಟ್ ಮಾಡಬಹುದು. ಇಲ್ಲವೇ, COVID-19 ಗಾಗಿ ಇರುವ ನೆರವಿನ ಇಮೇಲ್ ಐಡಿ: ncov2019[at]gmail[dot]com ಗೆ ಇಮೇಲ್ ಮಾಡಿ.


ಉಲ್ಲೇಖಗಳು:

 1.  Coronavirus [Internet]. www.who.int. [cited 2020 Mar 23]. Available from: https://www.who.int/health-topics/coronavirus#tab=tab_1
 2.  CDC. Coronavirus Disease 2019 (COVID-19) – Symptoms [Internet]. Centers for Disease Control and Prevention. 2020. Available from: https://www.cdc.gov/coronavirus/2019-ncov/symptoms-testing/symptoms.html
 3.  Wang D, Hu B, Hu C, Zhu F, Liu X, Zhang J, et al. Clinical Characteristics of 138 Hospitalised Patients With 2019 Novel Coronavirus–Infected Pneumonia in Wuhan, China. JAMA [Internet]. 2020 Feb 7; Available from: https://jamanetwork.com/journals/jama/fullarticle/2761044
 4.  CDC. Coronavirus Disease 2019 (COVID-19) [Internet]. Centers for Disease Control and Prevention. 2020 [cited 2020 Mar 23]. Available from: https://www.cdc.gov/coronavirus/2019-ncov/specific-groups/asthma.html
 5.  Matthay MA, Aldrich JM, Gotts JE. Treatment for severe acute respiratory distress syndrome from COVID-19. The Lancet Respiratory Medicine [Internet]. 2020 Mar 20 [cited 2020 Mar 23]; Available from: https://www.thelancet.com/journals/lanres/article/PIIS2213-2600(20)30127-2/fulltext
 6.  ‌Xu Z, Shi L, Wang Y, Zhang J, Huang L, Zhang C, et al. Pathological findings of COVID-19 associated with acute respiratory distress syndrome. The Lancet Respiratory Medicine [Internet]. 2020 Feb 18 [cited 2020 Mar 8];0(0). Available from: https://www.thelancet.com/journals/lanres/article/PIIS2213-2600(20)30076-X/fulltext?rss=yes&utm_campaign=update-lanres&utm_source=hs_email&utm_medium=email&utm_content=83570178&_hsenc=p2ANqtz-9uESUXj_Lm4iXDmvI7dkxjM6zR338P5y63h6v-10exFeWJ3NmnEemsd0SL_ftH9EkPEZ3SiWrzL7vAIGVMdFVtzj32qQ&_hsmi=83570178
 7.  Pneumonia | National Heart, Lung, and Blood Institute (NHLBI) [Internet]. nih.gov. 2018 [cited 2020 Mar 23]. Available from: https://www.nhlbi.nih.gov/health-topics/pneumonia
 8.  Zhou F, Yu T, Du R, Fan G, Liu Y, Liu Z, et al. Clinical course and risk factors for mortality of adult inpatients with COVID-19 in Wuhan, China: a retrospective cohort study. The Lancet [Internet]. 2020 Mar; Available from: https://www.thelancet.com/pb-assets/Lancet/pdfs/S014067362305663.pdf
 9.  Acute Respiratory Distress Syndrome | National Heart, Lung, and Blood Institute (NHLBI) [Internet]. nih.gov. 2019 [cited 2020 Mar 23]. Available from: https://www.nhlbi.nih.gov/health-topics/acute-respiratory-distress-syndrome

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.