Reading Time: 2 minutes

ತಜ್ಞರಿಂದ ವಿಮರ್ಶೆ – ಅಶ್ವಿನಿ ಎಸ್.ಕಾನಡೆ, ನೋಂದಾಯಿತ ಡಯಟೀಶಿಯನ್ ಮತ್ತು ಪ್ರಮಾಣೀಕೃತ ಡಯಾಬೀಟಿಸ್ ಶಿಕ್ಷಕರು. ಇವರಿಗೆ 17 ವರ್ಷಗಳ ಅನುಭವವಿದೆ

ಸತ್ಯಾಂಶ ಪರೀಕ್ಷಿಸಿದವರು – ಆದಿತ್ಯ ನಾರ್, ಬಿ.ಫಾರ್ಮ್, ಎಂ.ಎಸ್‌ಸಿ. ಸಾರ್ವಜನಿಕ ಆರೋಗ್ಯ ಮತ್ತು ಆರೋಗ್ಯ ಅರ್ಥಶಾಸ್ತ್ರ

ದಾಲ್ಚೀನಿ ಅಥವಾ ಚಕ್ಕೆ ಎಂದು ಕರೆಯುವ ಮಸಾಲೆಯು, ಹೆಚ್ಚಾಗಿ ಭಾರತೀಯರು ಬಳಸುವ ಸಾಂಬಾರು ಪದಾರ್ಥ. ಇದು ಸಾಂಬಾರಿನಲ್ಲಿ ಪರಿಮಳ ಬೀರುತ್ತದೆ ಹಾಗೂ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. 1990 ರಲ್ಲಿ ಮೊದಲ ಬಾರಿಗೆ ಈ ಸಾಂಬಾರು ಪದಾರ್ಥದ ಸುತ್ತ ಒಂದು ಅಧ್ಯಯನ ನಡೆಯಿತು, ಈ ಅಧ್ಯಯನವು ದಾಲ್ಚೀನಿಯಲ್ಲಿ ಇನ್ಸುಲಿನ್ ಪರಿಣಾಮವನ್ನು ಹೆಚ್ಚಿಸುವ  ಶಕ್ತಿ ಇದೆ ಎಂದು ತಿಳಿಸಿತು – ಅಂದರೆ ಗ್ಲೂಕೋಸನ್ನು ರಕ್ತದಿಂದ ಜೀವಕೋಶಗಳಿಗೆ ವರ್ಗಾಯಿಸುವ ಇನ್ಸುಲಿನ್‌ನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು, ಆದ್ದರಿಂದ ದಾಲ್ಚೀನಿ ಡಯಾಬಿಟಿಸ್‌ ಇರುವವರಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತವೆ ಎಂದು ಹೇಳಬಹುದು.(1)

ಕಾಸಿಯಾ ದಾಲ್ಚೀನಿ ಅಥವಾ  ಸಿಲೋನ್ ದಾಲ್ಚೀನಿ – ಡಯಾಬಿಟಿಸ್‌ ನಿಯಂತ್ರಿಸಲು ಯಾವುದು ಸೂಕ್ತ?  

ಡಯಾಬಿಟಿಸ್‌ ನಿಯಂತ್ರಿಸುವುದಕ್ಕಾಗಿ ದಾಲ್ಚೀನಿಯನ್ನು ಬಳಸುವುದಾದರೆ,ಕಡಿಮೆ ಬೆಲೆಯ ಕಾಸಿಯಾ ದಾಲ್ಚೀನಿಗಿಂತ ದುಬಾರಿ ದರದ ಸಿಲೋನ್ ದಾಲ್ಚೀನಿಯನ್ನು ಕೊಳ್ಳಲು ಮರೆಯದಿರಿ. ಈ ಕಾಸಿಯಾ ದಾಲ್ಚೀನಿ ಅಂಗಡಿಯಲ್ಲಿ ಸುಲಭವಾಗಿ ಸಿಗುತ್ತದೆ, ಹಾಗೂ ಇದರಲ್ಲಿ ಸಿಲೋನ್ ಅಥವಾ “ಯೋಗ್ಯ” ದಾಲ್ಚೀನಿಗಿಂತ ಜಾಸ್ತಿ ಕೂಮರಿನ್ ಅಂಶ ಇರುತ್ತದೆ. ಈ ವಿಷಯ ಗಮನಾರ್ಹವಾಗಿದೆ, ಏಕೆಂದರೆ ಕೂಮರಿನ್ ಅಂಶದಿಂದ ಹಲವರಿಗೆ ಲಿವರಿನಲ್ಲಿ ಪೆಟ್ಟಾಗಿದೆ ಎಂದು ಹಲವು ಅಧ್ಯಯನಗಳು ತಿಳಿಸಿವೆ.(2),(3)

ಪುಡಿ ರೂಪದಲ್ಲಿರುವಾಗ ಅದು ಯಾವ ದಾಲ್ಚೀನಿ ಎಂದು ಕಂಡುಹಿಡಿಯುವುದು ಒಂದು ಸವಾಲಾಗಿರುವುದರಿಂದ, ಅದರ ಕಡ್ಡಿಗಳನ್ನು ಖರೀದಿಸಿ ಮನೆಯಲ್ಲಿಯೇ ಪುಡಿ ಮಾಡಿಕೊಳ್ಳುವುದು ಒಳ್ಳೆಯದು. ಸಿಲೋನ್ ದಾಲ್ಚೀನಿ ತೆಳುವಾದ ತೊಗಟೆಯಾಗಿದ್ದು ಕಡ್ಡಿಯಂತೆ ಸುತ್ತಿಕೊಂಡಿರುತ್ತದೆ; ಕಾಸಿಯಾ ದಾಲ್ಚೀನಿ ದಪ್ಪ ತೊಗಟೆಯ ಪದರವಾಗಿದ್ದು, ಸುತ್ತಿಕೊಂಡಿರುತ್ತದೆ.

ಡಯಾಬಿಟಿಸ್‌ಗಾಗಿ ದಾಲ್ಚೀನಿ ಅಥವಾ ಚಕ್ಕೆಯನ್ನು ಬಳಸುವುದು ಹೇಗೆ

ಅರ್ಧ ಟೀ ಸ್ಪೂನ್‌ನಿಂದ 3 ಟೀ ಸ್ಪೂನ್‌ನಷ್ಟು ದಾಲ್ಚೀನಿ ಪುಡಿಯನ್ನು ಬಳಸಬಹುದು.(3) 

ನೀವು ಬಯಸುವಷ್ಟು ದಾಲ್ಚೀನಿ ಪುಡಿಯನ್ನು, ಟೀ ಇಲ್ಲವೇ ಕಾಫೀಗೆ ಸೇರಿಸಿ, ಅಥವಾ ಟೋಸ್ಟ್‌ ಅಥವಾ ಸೀರಿಯಲ್ ಮೇಲೆ ಸಿಂಪಡಿಸಿ. ದಾಲ್ಚೀನಿ ಟೀ ಮಾಡಲು, ನೀರಿಗೆ ಸಣ್ಣ ದಾಲ್ಚಿನ್ನಿ ಕಡ್ಡಿಯನ್ನು ಹಾಕಿ, ಚೆನ್ನಾಗಿ ಕುದಿಸಿ, ನಂತರ ಅದನ್ನು ಸ್ವಲ್ಪ ನಿಂಬೆ ಹಣ್ಣಿನ ರಸದೊಂದಿಗೆ ಬೆರಸಿ.

ಇನ್ನೂ ಕೆಲವರು ಖಾಲಿ ಹೊಟ್ಟೆಯಲ್ಲಿ, ಜೇನು ತುಪ್ಪದೊಂದಿಗೆ ಬೆರೆಸಿರುವ ದಾಲ್ಚೀನಿ ಪುಡಿಯನ್ನು ತೆಗೆದುಕೊಳ್ಳುತ್ತಾರೆ, ಏಕೆಂದರೆ ಹೀಗೆ ಮಾಡಿದರೆ ತೂಕ ಕಡಿಮೆಯಾಗುತ್ತದೆ ಎಂಬ ಬಲವಾದ ನಂಬಿಕೆ ಇದೆ.

ಆದರೆ ಇದು ನೆನಪಿರಲಿ

ದಾಲ್ಚೀನಿ ಲಿವರ್ ಕಾಯಿಲೆಯನ್ನು ತೀವ್ರವಾಗಿಸಬಹುದು, ಹಾಗಾಗಿ ಲಿವರ್‌ ಸಮಸ್ಯೆಗಳಿದ್ದಾಗ ದಾಲ್ಚೀನಿಯನ್ನು ತೆಗೆದುಕೊಳ್ಳುವುದು ಒಳ್ಳೆಯದಲ್ಲ.(3) ಜೊತೆಗೆ, ಮುಟ್ಟು ನಿಂತಿರುವ ಮಹಿಳೆಯರಿಗೆ ಡಯಾಬಿಟಿಸ್ ನಿಯಂತ್ರಿಸುವಲ್ಲಿ ದಾಲ್ಚೀನಿ ಪರಿಣಾಮಕಾರಿಯಾಗಿರುವುದಿಲ್ಲ.(4)

ದಾಲ್ಚೀನಿ ಹೇಗೆ ಕಾರ್ಯನಿರ್ವಹಿಸುತ್ತದೆ?

ದಾಲ್ಚಿನ್ನಿ ಅಥವಾ ಚಕ್ಕೆಯು, ಮೇದೋಜ್ಜೀರಕ ಗ್ರಂಥಿಯ ಜೀವಕೋಶಗಳಿಂದ ಇನ್ಸುಲಿನ್‌ ಉತ್ಪತ್ತಿಯನ್ನು ಹೆಚ್ಚಿಸುತ್ತದೆ ಜೊತೆಗೆ ಇನ್ಸುಲಿನ್ ಪಡೆಯುವ ನರಗಳ ಚಟುವಟಿಕೆಯನ್ನು ಸುಧಾರಿಸುತ್ತವೆ; ಅಲ್ಲದೇ, ಇದು ಜೀವಕೋಶಗಳ ಗ್ಲುಕೋಸನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಸುಧಾರಿಸುತ್ತದೆ ಎಂದು ನಂಬಲಾಗಿದೆ.(5)

ಆದರೆ, ಒಂದು ಸಣ್ಣ ಸಮಸ್ಯೆ ಇದೆ – ಹಲವು ಅಧ್ಯಯನಗಳಲ್ಲಿ ಭರವಸೆಯ ಫಲಿತಾಂಶಗಳು ಸಿಕ್ಕಿದ್ದು ಪ್ರಾಣಿಗಳಿಂದ. ಮಾನವನ ಕುರಿತು ಕೆಲವು ಕ್ಲಿನಿಕಲ್ ಅಧ್ಯಯನಗಳು ನಡೆಸಲಾಗಿದ್ದರೂ ಸಹ, ಅದರ ಫಲಿತಾಂಶಗಳನ್ನು ವ್ಯಾಖ್ಯಾನಿಸುವುದು ಸುಲಭವಲ್ಲ, ಸಮಯ ಇಲ್ಲದಿರುವುದು ಹಾಗೂ ಕಳಪೆ ವಿನ್ಯಾಸದ ಪ್ರಯೋಗಗಳು ಇದಕ್ಕೆ ಮುಖ್ಯ ಕಾರಣವಾಗಿವೆ. ಇನ್ನೊಂದು ಮುಖ್ಯ ಕಾರಣವೆಂದರೆ ಈ ಅಧ್ಯಯನಗಳು ಸಿಲೋನ್ ದಾಲ್ಚೀನಿಗಿಂತಲೂ ಹೆಚ್ಚಾಗಿ ಕಾಸಿಯಾ ದಾಲ್ಚಿನ್ನಿಗೆ ಸಂಬಂಧಿಸಿವೆ – ಇದು ಇನ್ನೊಂದು ಬಗೆಯ ಕಷ್ಟವಾಗಿದೆ.(2)

ಹಾಗಾದರೆ, ದಾಲ್ಚೀನಿ ಡಯಾಬಿಟಿಸ್‌ಗೆ ಸೂಕ್ತವೆ?

ಡಾ.ಕಲಾರಂಜನಿ, ಬಿಎಎಂಎಸ್, ಹೀಗೆ ಹೇಳುತ್ತಾರೆ. “ಸಾಂಪ್ರದಾಯಿಕವಾಗಿ, ದಾಲ್ಚೀನಿಯನ್ನು ಕೆಲವು ನಿರ್ದಿಷ್ಟ ಔಷಧಿಗಳೊಂದಿಗೆ ಬಳಸಿದಾಗ ಮಾತ್ರವೇ ಅದರಿಂದ ಡಯಾಬಿಟಿಸ್ ಇರುವವರಿಗೆ ಲಾಭ. ಡಯಾಬಿಟಿಸ್ ಇರುವ ವ್ಯಕ್ತಿಗೆ ಯಾವ ನಿರ್ದಿಷ್ಟ ಮದ್ದು ಸೂಕ್ತವಾಗಿದೆ ಎಂಬುದನ್ನು, ಆರ್ಯುವೇದ ವೈದ್ಯರು ಆ ವ್ಯಕ್ತಿಯ ದೇಹದ ಆಕಾರವನ್ನು ಅರಿತುಕೊಂಡು ನಿರ್ಧರಿಸಬೇಕಾಗುತ್ತದೆ.”  

ಅಡಿಬರಹ

ಡಾ. ಎ. ಕಲಾರಂಜನಿ, ಬೆಂಗಳೂರಿನ ಕೆ ಆರ್ ಪುರಂನಲ್ಲಿರುವ ಸಂಜೀವನಿ ಆಯುರ್ ಕ್ಲಿನಿಕಲ್ಲಿ ಆರ್ಯುವೇದದ ವೈದ್ಯರು.

 

ಉಲ್ಲೇಖಗಳು:

  1. Khan, N.A.Bryden, M.M. Polansky, R.A. Anderson. Insulin potentiating factor and chromium content of selected foods and spices. Biol Trace Elem Res. 1990 Mar; 24(3):183-8. Available at: https://www.ncbi.nlm.nih.gov/pubmed/1702671?access_num=1702671&link_type=MED&dopt=
  2. ACS News Service Weekly PressPac. Quantification of Flavoring Constituents in Cinnamon: High Variation of Coumarin in Cassia Bark from the German Retail Market and in Authentic Samples from Indonesia. Journal of Agricultural and Food Chemistry. Nov, 2010. Available at: https://www.acs.org/content/acs/en/pressroom/presspacs/2010/acs-presspac-november-3-2010/levels-of-coumarin-in-cassia-cinnamon-vary-greatly-even-in-bark-from-the-same-tree.html
  3. Does Cinnamon Help Diabetes? Available at https://www.webmd.com/diabetes/cinnamon-and-benefits-for-diabetes
  4. Deng. A Review of the Hypoglycemic Effects of Five Commonly Used Herbal Food Supplements. Recent Pat Food Nutr Agric. 2012;  Apr 1; 4(1); 50–60. Available at https://www.ncbi.nlm.nih.gov/pmc/articles/PMC3626401/
  5. Ransinghe, R.Jayawardana, P. Galappaththy, G.R. Constantine, G.N. de Vas, P. Katulanda. Efficacy and safety of ‘true’ cinnamon (Cinnamomum zeylanicum) as a pharmaceutical agent in diabetes: a systematic review and meta-analysis. Diabet Med. 2012 Dec; 29(12); 1480-92. doi: 10.1111/j.1464-5491.2012.03718.x.
  6. B. Medagama. The glycaemic outcomes of Cinnamon, a review of the experimental evidence and clinical trials. Nutr J. 2015; 14:108.  doi: 10.1186/s12937-015-0098-9

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.