Reading Time: 3 minutes

ಡಯಾಬಿಟಿಸ್‌ ಇರುವವರ ದೇಹದಲ್ಲಿ ಸಾಕಷ್ಟು ಇನ್ಸುಲಿನ್‌ ಉತ್ಪಾದನೆಯಾಗುವುದಿಲ್ಲ ಅಥವಾ ಅದನ್ನು ಸರಿಯಾಗಿ ಬಳಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿರುವುದಿಲ್ಲ. ಇದರಿಂದ ವ್ಯಕ್ತಿಯ ರಕ್ತದಲ್ಲಿ ಸಕ್ಕರೆಯ ಹರಡುವ ಮಟ್ಟ ಹೆಚ್ಚಾಗಿ, ಕಿಡ್ನಿ, ಹೃದಯ, ಮೆದುಳು, ನರ, ಕಣ್ಣು ಹಾಗೂ ರಕ್ತನಾಳಗಳು ಹಾನಿಗೊಳಗಾಗುತ್ತವೆ. ಇದರ ಜೊತೆಗೆ, ತೂಕ ಹೆಚ್ಚಿದ್ದರೂ, ದೇಹದಲ್ಲಿ ಇನ್ಸುಲಿನ್‌ ಪ್ರತಿರೋಧ ಶಕ್ತಿ ಹೆಚ್ಚಾಗಬಹುದು(1), ಹೀಗೆ ಪ್ರತಿರೋಧ ಶಕ್ತಿ ಹೆಚ್ಚಾಗುವುದರಿಂದ ನಿಮ್ಮ ದೇಹವು ಇನ್ಸುಲಿನ್‌ ಅನ್ನು ಸರಿಯಾಗಿ ಬಳಸಲು ಸಾಧ್ಯವಾಗುವುದಿಲ್ಲ. ಇದೇ ಕಾರಣಕ್ಕಾಗಿಯೇ ಡಯಾಬಿಟಿಸ್‌ ಇರುವವರು ಸರಿಯಾದ ಆಹಾರಕ್ರಮವನ್ನು ನಿಭಾಯಿಸಬೇಕೆಂದು ಹೇಳಲಾಗುತ್ತದೆ. ಹಾಗಾದರೆ ಆರೋಗ್ಯಕರ ಆಹಾರಕ್ರಮವನ್ನು ಪರಿಣಾಕಾರಿಯಾಗುವಂತೆ ಅಳವಡಿಸಿಕೊಳ್ಳುವುದು ಹೇಗೆ?

ವೀರ್‌ ರಾಮ್‌ಲೋಗನ್‌, ದ ಫುಡ್‌ ಅನಲಿಸ್ಟ್ಸ್‌ನ ಸಂಸ್ಥಾಪಕರು: ಕ್ಯಾಲರಿಯನ್ನು ಎಣಿಸಲು ಮಾನವ-ಚಾಲಿತ ಸೇವೆಯನ್ನು ನೀಡುವ ಇರುವ, ಡಯಾಬಿಟಿಸ್‌ ಇರುವವರು ಅನುಸರಿಸಲೇಬೇಕಾದ ಡಯಾಬಿಟಿಸ್‌-ಸ್ನೇಹಿ ಆಹಾರಕ್ರಮದ ಬಗ್ಗೆ ಒಂದಿಷ್ಟು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಲು ನಮಗೆ ಸಹಾಯ ಮಾಡಲಿದ್ದಾರೆ.

ಡಯಾಬಿಟಿಸ್‌ ಇರುವಾಗ ಆಹಾರಕ್ರಮದಲ್ಲಿ ಪಾಲಿಸಬೇಕಾದ ನಿಯಮಗಳು:

– ಊಟ ತಪ್ಪಿಸಬೇಡಿ, ಅದರಲ್ಲೂ ಬೆಳಗಿನ ಉಪಾಹಾರವನ್ನು ಕಡ್ಡಾಯವಾಗಿ ತೆಗೆದುಕೊಳ್ಳಿ
– ಸ್ವಲ್ಪ ಸ್ವಲ್ಪ ತಿನ್ನಿ, ನಿಯಮಿತವಾಗಿ ತಿನ್ನಿ
– ಕಾರ್ಬ್‌ ಸೇವನೆಯನ್ನು ಲೆಕ್ಕ ಮಾಡಿ
– ಕಡಿಮೆ ಗ್ಲೈಸೆಮಿಕ್‌ ಇಂಡೆಕ್ಸ್‌ ಇರುವ ಕಾರ್ಬ್‌ಗಳನ್ನು ಆರಿಸಿ
– ಕಾರ್ಬ್ ಇರುವ ಊಟದೊಂದಿಗೆ ಪ್ರೋಟೀನ್‌ ಹಾಗೂ ಅಗತ್ಯವಾದ ಕೊಬ್ಬನ್ನು ಸೇರಿಸಿ, ಆ ಮೂಲಕ ಊಟದಲ್ಲಿನ ಗ್ಲೈಸೆಮಿಕ್‌ ಲೋಡನ್ನು ಕಡಿಮೆ ಮಾಡಿ
– ಮಧ್ಯಾಹ್ನ 4 ಗಂಟೆಯ ನಂತರ ಹಣ್ಣುಗಳನ್ನು ತಿನ್ನಬೇಡಿ
– ಸಕ್ಕರೆಯ ಅಂಶ + ಕೊಬ್ಬಿನಾಂಶ ಅಧಿಕವಾಗಿರುವ ಆಹಾರದ ಸೇವನೆಯನ್ನು ಕಡಿಮೆ ಮಾಡಿ
– ಊಟ ಮಾಡುವಾಗ ಆಹಾರದ ಪ್ರಮಾಣವನ್ನು ನಿಯಂತ್ರಿಸುವ ಅಭ್ಯಾಸ ಮಾಡಿ
– ಪ್ಯಾಕ್‌ ಮಾಡಿರುವ ಆಹಾರದಲ್ಲಿರುವ ಗುಪ್ತ ಪದಾರ್ಥಗಳನ್ನು ತಿಳಿಯಲು ಪ್ಯಾಕ್‌ ಮೇಲಿರುವ ಲೇಬಲ್‌ಗಳನ್ನು ಓದಿ, ಹಾಗೆಯೇ ಆಹಾರ ಪ್ರಮಾಣ: ಕ್ಯಾಲರಿ ಅನುಪಾತದ ಮೇಲೆ ಗಮನ ವಹಿಸಿ.
– ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ ಮಾಡಿ
– ಸಕ್ಕರೆಯಿಂದ ಸಿಹಿಗೊಳಿಸಿರುವ ಪಾನೀಯಗಳನ್ನು ಹಾಗೂ ತಿನಿಸುಗಳನ್ನು ಸೇವಿಸಬೇಡಿ
– ಹಣ್ಣನ್ನು ಜ್ಯೂಸ್‌ ಮಾಡಿ ಕುಡಿಯುವ ಬದಲು ಹಾಗೆಯೇ ತಿನ್ನಿ (ಜ್ಯೂಸ್‌ಗಳನ್ನು ತಪ್ಪಿಸಿ)
– ನಟ್ಸ್‌ ಹಾಗೂ ಎಣ್ಣೆಕಾಳುಗಳು ಇಲ್ಲವೇ ಹಲವು ಡೈರಿ ಉತ್ಪನ್ನಗಳಂತಹ ಕಡಿಮೆ ಕಾರ್ಬ್‌ ಇರುವ ತಿಂಡಿಗಳನ್ನು ಆಯ್ಕೆ ಮಾಡಿ
– ತಟ್ಟೆಯಲ್ಲಿ ಪ್ರೋಟೀನ್‌ ಪಾಲು ಗರಿಷ್ಠವಾಗಿರುವಂತೆ ನೋಡಿಕೊಳ್ಳಿ
– ಸಕ್ಕರೆಯ ಬದಲಿಗೆ ಸ್ವೀಟ್ನರ್‌ಗಳನ್ನು ಬಳಸಿ
– ಆಲೂಗಡ್ಡೆ ಅಥವಾ ಬ್ರೆಡ್‌ ಬದಲಿಗೆ ತರಕಾರಿಯನ್ನು ನೆಂಚಿಕೊಳ್ಳುವ ಪದಾರ್ಥವಾಗಿಸಿಕೊಳ್ಳಿ
– ಗೋಧಿ ಹಿಟ್ಟಿನ ಬದಲಿಗೆ ಹೆಚ್ಚು ಫೈಬರ್‌ ಇರುವ ಧಾನ್ಯಗಳ ಹಿಟ್ಟನ್ನು ಬಳಸಿ
– ಸ್ಟಾರ್ಚ್-ರಹಿತ ತರಕಾರಿಗಳಿಗೆ ಹೆಚ್ಚು ಆದ್ಯತೆ ಕೊಡಿ
– ಕಾರ್ಬ್‌ ಕಡಿಮೆ ಇರುವ ಡೈರಿ ಉತ್ಪನ್ನಗಳನ್ನು ಆರಿಸಿ
– ದಿನಗಳು ಕಳದಂತೆ ಕಾರ್ಬ್‌ ಸೇವನೆಯನ್ನು ಆದಷ್ಟು ಕಡಿಮೆ ಮಾಡಿ
– ನಿಮ್ಮ ಊಟಕ್ಕೆ ಆರೋಗ್ಯಕರ ಕೊಬ್ಬುಗಳನ್ನು ಸೇರಿಸಿ
– ಮ್ಯಾಕ್ರೋ-ಕೌಂಟರ್‌ ಜೊತೆಗೆ ನಿಮ್ಮ ಕಾರ್ಬ್‌ ಸೇವನೆಯನ್ನು ಲೆಕ್ಕವಿಡಿ ಹಾಗೂ ಟ್ರ್ಯಾಕ್‌ ಮಾಡಿ

ಮೇಲೆ ತಿಳಿಸಿರುವ ಸಾಮಾನ್ಯ ನಿಯಮಗಳಲ್ಲಿ ಕೆಲವು ಪ್ರಮುಖ ಅಂಶಗಳನ್ನು ಇನ್ನಷ್ಟು ವಿವರವಾಗಿ ಈ ಕೆಳಗೆ ತಿಳಿಸಲಿದ್ದೇವೆ.

ರಕ್ತದಲ್ಲಿನ ಸಕ್ಕರೆಯ ಮಟ್ಟದ ಏರಿಕೆಯನ್ನು ತಪ್ಪಿಸಲು ಗ್ಲೈಸೆಮಿಕ್‌ ಲೋಡನ್ನು ಪರಿಗಣಿಸಿ

ಕಾರ್ಬ್‌-ಹೆಚ್ಚಾಗಿರುವ ಆಹಾರದಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ಎಷ್ಟು ಏರುತ್ತದೆ ಎಂಬುದನ್ನು ಗ್ಲೈಸೆಮಿಕ್‌ ಲೋಡ್‌ ಸೂಚಿಸುತ್ತದೆ. ಜಿಎಲ್‌ (GL) ಹಾಗೂ ಜಿಐ (GI) ಅಂಶ ಅಧಿಕವಾಗಿರುವ ಆಹಾರವನ್ನು ಸೇವಿಸಿದಾಗ, ರಕ್ತದಲ್ಲಿ ಸಕ್ಕರೆಯ ಮಟ್ಟ ಏರುತ್ತದೆ, ಇದರಿಂದ ಸ್ವಲ್ಪ ಹೊತ್ತಿನವರೆಗೆ ಹೊಟ್ಟೆ ತುಂಬಿಂದಂತೆ ಅನಿಸುತ್ತದೆ; ಆದರೆ, ನಂತರ ಸಕ್ಕರೆ ಮಟ್ಟ ಒಂದೇ ಸಮನೆ ಕಡಿಮೆಯಾಗುತ್ತದೆ, ಆಗ ನಿಮಗೆ ಮತ್ತೆ ಆಹಾರಕ್ಕಾಗಿ (ವಿಶೇಷವಾಗಿ ಕಾರ್ಬ್‌ಗಾಗಿ) ಹಸಿವಾಗಲು ಶುರುವಾಗುತ್ತದೆ, ಹೀಗೆ ಅಂತಿಮವಾಗಿ ನೀವು ಅಗತ್ಯಕ್ಕಿಂತ ಹೆಚ್ಚಿನ ಕ್ಯಾಲರಿಗಳನ್ನು ಸೇವಿಸುತ್ತೀರಿ. ಇದು ತೂಕ ಹೆಚ್ಚಿಸುವುದರ ಜೊತೆಗೆ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗಲು ನೇರ ಕಾರಣವಾಗುತ್ತದೆ. ಗ್ಲೂಕೋಸ್‌ನ ಅತ್ಯುತ್ತಮ ಬಳಕೆಗಾಗಿ, ಜಿಐ ಕಡಿಮೆ ಇರುವ ಆಹಾರವನ್ನು ಆಯ್ಕೆ ಮಾಡಿ ಹಾಗೂ ಕಡಿಮೆ ಗ್ಲೈಸೆಮಿಕ್‌ ಲೋಡ್‌ ಹೊಂದಿರುವ ಊಟವನ್ನು ಸೇವಿಸಿ. ಇದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟದ ಸಮತೋಲನವನ್ನು ಕಾಪಾಡಿಕೊಳ್ಳುವಾಗ ನಿಮಗೆ ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿದಂತೆ ಅನಿಸುತ್ತದೆ.

ಆಹಾರ ಪ್ರಮಾಣವನ್ನು ನಿಯಂತ್ರಿಸುವ ಅಭ್ಯಾಸ ಮಾಡಿ

ಆಹಾರ ಪ್ರಮಾಣವನ್ನು ನಿಯಂತ್ರಿಸುವುದರಿಂದ ನಿಮ್ಮ ಆಹಾರ ಸೇವನೆಯಲ್ಲಿ ಕಾರ್ಬೋಹೈಡ್ರೇಟ್‌ನ ಪ್ರಮಾಣದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ. ಇದು ವಿಶೇಷವಾಗಿ ಗ್ಲೂಕೋಸನ್ನು, ನಿರಂತರವಾಗಿ ಹಾಗೂ ನಿಯಂತ್ರಿತ ಪ್ರಮಾಣದಲ್ಲಿ ರಕ್ತದಲ್ಲಿ ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ ಕ್ಯಾಲರಿ ಸೇವನೆಯನ್ನು ನಿಯಂತ್ರಿಸುವ ಮೂಲಕ ತೂಕ ಹೆಚ್ಚಾಗದಂತೆ ಕಾಪಾಡಿಕೊಳ್ಳಲು ಇದು ನೆರವಾಗುತ್ತದೆ, ಪರಿಣಾಮವಾಗಿ ನಿಮ್ಮ ದೇಹದ ಇನ್ಸುಲಿನ್‌ ಸ್ಪಂದನೆ ಹೆಚ್ಚುತ್ತದೆ ಹಾಗೂ ರಕ್ತದಲ್ಲಿನ ಗ್ಲೂಕೋಸ್‌ ಮಟ್ಟ ಹೆಚ್ಚು ಸಮತೋಲನವಾಗಿರಲು ಕಾರಣವಾಗುತ್ತದೆ.

ಆಹಾರ ಪದಾರ್ಥಗಳನ್ನು ಕೊಳ್ಳುವಾಗ ಪೌಷ್ಠಿಕಾಂಶದ ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳಿ 

ಆಹಾರದ ಉದ್ಯಮವು, ಡಯಾಬಿಟಿಸ್‌ ಇರುವವರಿಗೆ ಅನುಕೂಲವಾಗಲೆಂದೇ ನೂರಾರು ಆರೋಗ್ಯಕರ ಪರ್ಯಾಯಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಡಯಾಬಿಟಿಸ್‌-ಸ್ನೇಹಿ ಎಂದು ಕರೆಯುವಂತಹ ಸ್ವಾಭಾವಿಕವಾಗಿ ಕಡಿಮೆ ಸಕ್ಕರೆಯ ಅಂಶವನ್ನು ಹೊಂದಿರುವ ಸೂಪರ್‌-ಫುಡ್‌, ಸಾಮಾನ್ಯವಾಗಿ ಪ್ಯಾಕೇಜ್‌ ರೂಪದಲ್ಲಿ ಸಿಗುತ್ತದೆ. ಉದಾಹರಣೆಗೆ, ರಾಗಿ ಬಿಸ್ಕೇಟ್‌ಗಳು. ಆದರೆ, ಸಂಸ್ಕರಿಸಿ ಪರಿಷ್ಕರಿಸಿರುವ ಈ ಬಿಸ್ಕೇಟ್‌ನಲ್ಲಿ ಧಾನ್ಯದ ಮೂಲ ಸತ್ವಗಳು ಇರುವುದಿಲ್ಲ. ವಾಸ್ತವವಾಗಿ, ಇದೊಂದು ಮಾರುಕಟ್ಟೆಯ ತಂತ್ರವಾಗಿದೆ. ಉದಾಹರಣೆಗೆ, ಕಡಿಮೆ ಕೊಬ್ಬಿನಾಂಶ ಇರುವ ಆಹಾರಗಳಲ್ಲಿ ಹೆಚ್ಚು ಸಕ್ಕರೆಯಂಶ ಇರುತ್ತದೆ ಹಾಗೆಯೇ ಸಕ್ಕರೆಯ ಅಂಶ ಕಡಿಮೆ ಇರುವ ಆಹಾರಗಳಲ್ಲಿ ಹೆಚ್ಚು ಕೊಬ್ಬಿನಾಂಶ ಇರುತ್ತದೆ; ಈ ಎರಡೂ ತರಹದ ಆಹಾರಗಳು ಡಯಾಬಿಟಿಸ್‌ ಇರುವವರಿಗೆ ಸಮಾನ ಪ್ರಮಾಣದಲ್ಲಿ ಅನಾರೋಗ್ಯಕರವಾಗಿವೆ.

ಕೆಲವು ಆಹಾರಗಳಲ್ಲಿ ನಾರಿನಾಂಶ ಹೇರಳವಾಗಿರುತ್ತದೆ ಎಂದು ಹೇಳಲಾಗುತ್ತದೆ; ಆದರೆ, ಪ್ರತಿ ಬಾರಿ ಸೇವಿಸುವಾಗಲೂ ಈ ಆಹಾರಗಳಿಂದ ಸಿಗುವ ನಾರಿನಾಂಶ, ದಿನ ಒಂದಕ್ಕೆ ಸೂಚಿಸಲಾದ ಪ್ರಮಾಣದ ಶೇಕಡಾ 10 ರಷ್ಟು ಇರುವುದಿಲ್ಲ. ಅಲ್ಲದೇ, ತಿಳಿಯದ ಸಾಮಾನ್ಯರು ಲೇಬಲ್‌ನಲ್ಲಿರುವ ಗುಪ್ತ ಪದಾರ್ಥಗಳ ಉದ್ದೇಶ ಹಾಗೂ ಅವುಗಳ ಪರ್ಯಾಯ ಹೆಸರುಗಳ ಮಾಹಿತಿಯ ಕೊರತೆಯಿಂದಾಗಿ ಸುಲಭವಾಗಿ ಮೋಸ ಹೋಗುತ್ತಾರೆ. ಹಾಗಾಗಿ, ಲೇಬಲ್‌ಗಳ ಹಿಂದಿರುವ ತಂತ್ರ ಹಾಗೂ ಸಂಸ್ಕರಿಸುವ ವಿಧಾನಗಳ ಬಗ್ಗೆ ನೀವಾಗಿಯೇ ತಿಳಿದುಕೊಳ್ಳುವುದು ಆರೋಗ್ಯಕರ ಆಹಾರ ಸೇವನೆಯ ಬಗ್ಗೆ ನಿರ್ಲಕ್ಷಿಸದೇ ತಿಳಿಯಬೇಕಾದ ಪ್ರಮುಖ ಅಂಶವಾಗಿದೆ.

ಇದಿಷ್ಟು ಆರೋಗ್ಯಕರ ಆಹಾರದ ಬಗೆಗಿನ ಕೆಲವು ಪ್ರಮುಖ ಅಂಶಗಳಾಗಿದ್ದು, ಇವು ಡಯಾಬಿಟಿಸ್‌ ಇರುವವರಿಗೆ ನೆರವಾಗುತ್ತವೆ. ಈ ನಡವಳಿಕೆಗಳ ಹಾಗೂ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಶುರು ಮಾಡಿ, ಆಗ ನೀವು ತಿನ್ನುವ ವಿಧಾನಗಳಲ್ಲಿ ಹಾಗೂ ನಿಮ್ಮ ಒಟ್ಟಾರೆ ಆರೋಗ್ಯದಲ್ಲಿ ದೊಡ್ಡ ಬದಲಾವಣೆಯನ್ನೇ ಕಾಣುತ್ತೀರಿ.

ಉಲ್ಲೇಖಗಳು:

1. Barbara B. Kahn and Jeffrey S. Flier. Obesity and insulin resistance. J Clin Invest. 2000 Aug 15; 106(4): 473–481. doi: 10.1172/JCI10842, https://www.ncbi.nlm.nih.gov/pmc/articles/PMC380258/

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.