Reading Time: 2 minutes

ಪ್ರೋಟೀನ್‌ ಹಾಗೂ ಡಯಾಬಿಟಿಸ್‌ ಕುರಿತು ಬಹಳಷ್ಟು ವಿಷಯಗಳನ್ನು ತಿಳಿದಿದ್ದೇವೆ. ಪ್ರೋಟೀನ್‌ ಒಂದು ಸಣ್ಣ ನ್ಯೂಟ್ರಿಯೆಂಟ್‌ ಆಗಿದ್ದು, ಅದನ್ನು ನಿಮ್ಮ ಆಹಾರದಲ್ಲಿ ಯಾವುದೇ ಕಾರಣಕ್ಕೂ ತಪ್ಪಿಸಬಾರುದು ಏಕೆಂದರೆ ಕೋಶಗಳನ್ನು ಸರಿಪಡಿಸುವುದು ಹಾಗೂ ವಿಭಜನೆ ಮಾಡುವುದು ಅದರ ಕೆಲಸವಾಗಿದೆ.(1) ಪ್ರೋಟೀನ್‌ ಕೊರತೆಯಿಂದಾಗಿ ದೇಹದ ಬೆಳವಣಿಗೆಯಲ್ಲಿ ಹಾಗೂ ಹೊಸ ಯೌವನ ಪಡೆಯುವಲ್ಲಿ ಸಮಸ್ಯೆಯಾಗುತ್ತದೆ. ಅಲ್ಲದೇ ಪ್ರೋಟೀನ್‌ ಸಹ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮಾನಿಟರ್‌ ಮಾಡುವ ಹಾರ್ಮೋನುಗಳ ಉತ್ಪತ್ತಿಯ ಮೇಲೆ ಪರಿಣಾಮ ಬೀರಬಹುದು.(2) ಹಾಗಾಗಿ, ಆಹಾರಕ್ರಮದಲ್ಲಿ ಎಷ್ಟು ಪ್ರೋಟೀನ್‌ ಇರಬೇಕು ಎಂಬುದನ್ನು ತಿಳಿದುಕೊಳ್ಳಲು ಕಷ್ಟವಾಗಬಹುದು, ಅದರಲ್ಲೂ ಡಯಾಬಿಟಿಸ್‌ ಇದ್ದಾಗ ಇನ್ನೂ ಕಷ್ಟವಾಗಬಹುದು.

ಡಯಾಬಿಟಿಸ್‌ ಮತ್ತು ಪ್ರೋಟೀನ್

ದೇಹದಲ್ಲಿನ ಗ್ಲುಕಗನ್ ಮತ್ತು ಇನ್ಸುಲಿನ್ ಸ್ರವಿಸುವಿಕೆಯನ್ನು ಪ್ರೋಟೀನ್ ಹೆಚ್ಚಿಸುತ್ತದೆ, ಇದು ರಕ್ತದಲ್ಲಿನ ಗ್ಲೂಕೋಸ್‌ ಮಟ್ಟ ಹತೋಟಿಗೆ ತರಲು ನೆರವಾಗುತ್ತದೆ. ಆದರೆ, ಡಯಾಬಿಟಿಸ್‌ ಇರುವವರಲ್ಲಿ ಗ್ಲುಕಗನ್‌ ಮಾತ್ರ ಸ್ರವಿಸುತ್ತದೆ ಹಾಗೂ ಇನ್ಸುಲಿನ್‌ ತಡೆಹಿಡಿಯಲ್ಪಡುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಲು ಕಾರಣವಾಗುತ್ತದೆ. ಆದರೆ ದಿನದ ಮೊದಲ ಊಟವಾದ ಬೆಳಗಿನ ಉಪಹಾರದಲ್ಲಿ ಪ್ರೋಟೀನ್‌ ಸೇರಿಸುವ ಮೂಲಕ ಇದನ್ನು ನಿಭಾಯಿಸಬಹುದು.(3)

ಬೆಳಗಿನ ಉಪಹಾರದಲ್ಲಿ ಪ್ರೋಟೀನ್‌

ದಿನದ ಊಟದಲ್ಲಿ ಮುಖ್ಯವಾದ ಊಟ ಎಂದರೆ ಅದು ಬೆಳಗಿನ ಉಪಹಾರ, ವಿಶೇಷವಾಗಿ ಡಯಾಬಿಟಿಸ್‌ ಇರುವವರಿಗೆ ಇದು ತುಂಬಾ ಮುಖ್ಯವಾಗಿದೆ, ಏಕೆಂದರೆ ರಾತ್ರಿ ಇಡೀ ದೇಹವು ಊಟವಿಲ್ಲದೆ ಇರುತ್ತದೆ. ಈ ಸುದೀರ್ಘ ಅಂತರದಿಂದಾಗಿ ದೇಹವು ಹಸಿವಿನ ಸ್ಥಿತಿಯಲ್ಲಿರುತ್ತದೆ.(4) “ಹಲವರು, ಬೆಳಗಿನ ಉಪಹಾರವನ್ನು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಡಯಾಬಿಟಿಸ್‌ ಇರುವವರು, ಬೆಳಗಿನ ಉಪಹಾರವನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ನಿದ್ರೆಯ ಸುದೀರ್ಘ ಸಮಯದಿಂದ ಆದ ‘ಉಪವಾಸವನ್ನು ಮುರಿಯಲು’ ದೇಹಕ್ಕೆ ಪೋಷಕಾಂಶಗಳನ್ನು ಒದಗಿಸುವ ಉಪಹಾರದ ಅಗತ್ಯವಿರುತ್ತದೆ,” ಎಂದು ಹೇಳುತ್ತಾರೆ  ಡಾಕ್ಟರ್‌ ರೋಶನಿ ಗಾಡ್ಗೆ, ಡಯಾಬಿಟಾಲಜಿಸ್ಟ್ ಸಲಹೆಗಾರರು, ಗಾಡ್ಗೆ ಡಯಾಬಿಟಿಸ್ ಸೆಂಟರ್.

ದೇಹವು ಹಸಿವಿನ ಸ್ಥಿತಿಯಲ್ಲಿದ್ದಾಗ, ರಕ್ತದಲ್ಲಿನ ಸಕ್ಕರೆ ಮಟ್ಟ ಸಲೀಸಾಗಿ ಮೇಲೆರುತ್ತದೆ. ಅದರಲ್ಲೂ ಆಹಾರದಲ್ಲಿ ಏನಾದರೂ ಕಾರ್ಬೋಹೈಡ್ರೇಟ್‌ನ ಪ್ರಮಾಣ ಹೆಚ್ಚಾಗಿದ್ದರೆ, ಅದು ತಕ್ಷಣವೇ ಸಕ್ಕರೆಯ ಅಂಶವಾಗಿ ಬದಲಾಗುತ್ತದೆ, ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಏರಬಹುದು. ಇದನ್ನು ತಪ್ಪಿಸಲು, ಸರಿಯಾದ ಆಹಾರವನ್ನು ಆರಿಸಿಕೊಳ್ಳುವುದು ಅಗತ್ಯವಾಗಿದೆ. “ಗ್ಲೈಸೆಮಿಕ್‌ ಇಂಡೆಕ್ಸ್‌ ಕಡಿಮೆ ಇರುವ ಆಹಾರವನ್ನು ಸೇವಿಸುವುದರಿಂದ, ಊಟದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟ ಏರುವುದಿಲ್ಲ. ಹೀಗೆ ಊಟದ-ನಂತರದಲ್ಲಿ ರಕ್ತದಲ್ಲಿನ ಗ್ಲೂಕೋಸನ್ನು ನಿಭಾಯಿಸಲು ಪ್ರೋಟೀನ್‌ ಆಹಾರದ ಸೇವನೆಯನ್ನು ಹೆಚ್ಚಿಸಬೇಕು,” ಎಂದು ಡಾಕ್ಟರ್ ಗಾಡ್ಗೆ ಅವರು ಹೇಳುತ್ತಾರೆ.

ಏನನ್ನು ತಿನ್ನಬೇಕು

ಡಯಾಬಿಟಿಸ್ ಇರುವವರು ಹಾಗೂ ಇಲ್ಲದವರು, ಇಬ್ಬರಿಗೂ ಪ್ರೋಟೀನ್‌ನ ಅಗತ್ಯ ಒಂದೇ ಆಗಿದೆ. ಹಾಗಾಗಿ, ನಿಮ್ಮ ಕ್ಯಾಲರಿ ಸೇವನೆಯಲ್ಲಿ  ಶೇಕಡಾ 20 ರಿಂದ30 ರಷ್ಟು ಭಾಗ ಪ್ರೋಟೀನ್‌ ಇರಬೇಕು.(5) ನೀವು ಮಾಡಬೇಕಿರುವುದಿಷ್ಟೆ, ಪ್ರೋಟೀನ್‌ ಜೊತೆಗೆ ಏನನ್ನು ತಿನ್ನುತ್ತೀರಿ ಎಂಬುದರ ಬಗ್ಗೆ ಗಮನವಹಿಸಬೇಕು, ಏಕೆಂದರೆ ಆಹಾರವು ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಬೆಳಗಿನ ಉಪಹಾರದಲ್ಲಿ ಯಾವುದೇ ದೊಡ್ಡ ಬದಲಾವಣೆಗಳನ್ನು ಮಾಡುವ ಅಗತ್ಯವಿಲ್ಲ ಎಂಬುದು ಡಾಕ್ಟರ್ ಗಾಡ್ಗೆ ಅವರ ನಂಬಿಕೆಯಾಗಿದೆ. “ಪ್ರೋಟೀನ್-ಅಧಿಕವಾಗಿರುವ ಆಹಾರಕ್ಕಾಗಿ ನಿಮ್ಮ ಆಯ್ಕೆಗಳಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳಿ,” ಎಂದು ಅವರು ಹೇಳುತ್ತಾರೆ.

ದಿನಕ್ಕೆ ಸರಾಸರಿ 2000 ಕ್ಯಾಲರಿಗಳ ಅಗತ್ಯವಿದ್ದರೆ, 50 ರಿಂದ175 ಗ್ರಾಮಿನಷ್ಟು ಪ್ರೋಟೀನ್‌ ಅವಶ್ಯಕತೆ ಇರುತ್ತದೆ. ಇದನ್ನು ಈ ಕೆಳಗಿನ ಆಹಾರ ಪದಾರ್ಥಗಳಿಂದ ಪಡೆಯಬಹುದಾಗಿದೆ:(6)

– ಎರಡು ಮೊಟ್ಟೆಯ ಬಿಳಿ ಭಾಗ – 22 ಗ್ರಾಂ ಪ್ರೋಟೀನ್‌ ಹೊಂದಿರುತ್ತದೆ
– 10 ಬಾದಾಮಿ – 2.5 ಗ್ರಾಂ ಪ್ರೋಟೀನ್‌ ಹೊಂದಿರುತ್ತದೆ
– 100 ಗ್ರಾಂ ವಾಲ್‌ನಟ್‌ – 15 ಗ್ರಾಂ ಪ್ರೋಟೀನ್‌ ಹೊಂದಿರುತ್ತದೆ
– 100 ಗ್ರಾಂ ಪನೀರ್‌ – 18.3 ಗ್ರಾಂ ಪ್ರೋಟೀನ್‌ ಹೊಂದಿರುತ್ತದೆ
– 100 ಗ್ರಾಂ ದಾಲ್‌ – 9 ಗ್ರಾಂ ಪ್ರೋಟೀನ್‌ ಹೊಂದಿರುತ್ತದೆ
– 100 ಗ್ರಾಂ ಸೋಯಾ ಕಾಳು – 54.2 ಗ್ರಾಂ ಪ್ರೋಟೀನ್‌ ಹೊಂದಿರುತ್ತದೆ

ಇವುಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ. “2 ಮೊಟ್ಟೆಯ ಬಿಳಿ ಭಾಗದಿಂದ ಮಾಡಿದ ಆಮ್ಲೆಟ್‌ ಜೊತೆಗೆ ಚಪಾತಿ, ನಟ್ಸ್‌ (ಬಾದಾಮಿ ಇಲ್ಲವೇ ವಾಲ್‌ನಟ್ಸ್‌) ಸೇರಿಸಿದ ಗಂಜಿ, ಅನೇಕ-ಧಾನ್ಯಗಳ ದೋಸೆ, ಕರ್ಡ್‌-ಬೇಸ್ಡ್‌ ಸ್ಮೂಥಿಗಳು (ಸಕ್ಕರೆ, ಬೆಲ್ಲ ಹಾಗೂ ತುಪ್ಪ, ಇವ್ಯಾವುದನ್ನು ಹಾಕಬೇಡಿ), 1 ಲೋಟ ನಟ್ಸ್‌ ಸೇರಿಸಿರುವ ಹಾಲು, ಪನೀರ್‌ ಪರಾಠ, ಮೊಸರಿನ ಜೊತೆ ದಾಲ್‌ ಮಿಶ್ರಣ ಮಾಡಿದ ಪರಾಠ, ಸೋಯಾ ಕಾಳುಗಳನ್ನು ಹಾಕಿದ ಉಪ್ಪಿಟ್ಟು/ಪೋಹಾ,” ಇದು ಡಾಕ್ಟರ್‌ ಗಾಡ್ಗೆ ಅವರ ಸಲಹೆಗಳಾಗಿವೆ.

ಮಾಂಸ-ಪ್ರಿಯರು ಮೀನನ್ನು ತಿನ್ನುವ ವಿಧಾನದಲ್ಲಿ ಸಣ್ಣ ಬದಲಾವಣೆ ಮಾಡಿಕೊಳ್ಳಬಹದು. 100 ಗ್ರಾಂ ಮೀನಿನಲ್ಲಿ 22 ಗ್ರಾಮಿನಷ್ಟು ಪ್ರೋಟೀನ್‌ ಸಿಗುತ್ತದೆ. ಹೆಚ್ಚಿನ ಅನುಕೂಲಗಳಿಗಾಗಿ ಮೀನನ್ನು ಗ್ರಿಲ್‌ ಮಾಡಿ. ಟೋಸ್ಟ್‌ ಮೇಲಿನ ಸ್ಮೋಕ್ಡ್‌ ಸಲ್ಮಾನ್ ಮೀನು ಬೆಳಗಿನ ಉಪಹಾರಕ್ಕೆ ಒಳ್ಳೆಯ ಆಯ್ಕೆಯಾಗಿದೆ.

ಅಂತಿಮವಾಗಿ, ನಿಮ್ಮ ಆಹಾರದಲ್ಲಿ ಪ್ರೋಟೀನ್‌ ಅತ್ಯಗತ್ಯ. ಆದರೆ ಈ ಸಣ್ಣ ನ್ಯೂಟ್ರಿಯೆಂಟ್‌ (ಪ್ರೋಟೀನ್‌) ಅನ್ನು ಬೆಳಗಿನ ಉಪಹಾರಕ್ಕೆ ತೆಗೆದುಕೊಂಡರೆ ಹೆಚ್ಚಿನ ಪ್ರಯೋಜನಗಳನ್ನು ಪಡೆಯುವಿರಿ. ಪ್ರೋಟೀನ್‌ನ ಮೆಟಬಾಲಿಸಮ್‌ ಕ್ರಿಯೆಯು ನಿಧಾನವಾಗಿ ನಡೆಯುತ್ತದೆ, ಹಾಗಾಗಿ ಬೆಳಗಿನ ಉಪಹಾರಕ್ಕೆ ಪ್ರೋಟೀನ್‌-ಅಧಿಕವಾಗಿರುವ ಆಹಾರವನ್ನು ಸೇವಿಸಿದಾಗ, ಅದನ್ನು ಗ್ಲೂಕೋಸ್‌ ಆಗಿ ಬದಲಾಯಿಸಲು ಹೆಚ್ಚು ಸಮಯ ಬೇಕಾಗುತ್ತದೆ. ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 

ಉಲ್ಲೇಖಗಳು:

 

  • N.ShangS. ChaplotJ.Wu. 12 – Food proteins for health and nutrition. Woodhead Publishing Series in Food Science, Technology and Nutrition 2018, Pages 301-336 https://www.sciencedirect.com/science/article/pii/B9780081007228000139
  • Franz MJ. Protein: metabolism and effect on blood glucose levels. Diabetes Educ. 1997 Nov-Dec;23(6):643-6, 648, 650-1 https://www.ncbi.nlm.nih.gov/pubmed/9416027
  • Park YM, Heden TD, Liu Y, Nyhoff LM, Thyfault JP, Leidy HJ, Kanaley JA. A high-protein breakfast induces greater insulin and glucose-dependent insulinotropic peptide responses to a subsequent lunch meal in individuals with type 2 diabetes. J Nutr. 2015 Mar;145(3):452-8. doi: 10.3945/jn.114.202549. Epub 2014 Dec 24. https://www.ncbi.nlm.nih.gov/pubmed/25733459
  • Berg JM, Tymoczko JL, Stryer L. Section 30.3Food Intake and Starvation Induce Metabolic Changes. Biochemistry. 5th edition. https://www.ncbi.nlm.nih.gov/books/NBK22414/
  • Hamdy O, Horton ES. Protein content in diabetes nutrition plan. Curr Diab Rep. 2011 Apr;11(2):111-9. doi: 10.1007/s11892-010-0171-x. https://www.ncbi.nlm.nih.gov/pubmed/21207203
  • U.S. DEPARTMENT OF AGRICULTURE https://www.usda.gov/

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.