ಡಯಾಬಿಟಿಸ್ ನಿಮ್ಮ ಉತ್ಸಾಹಕ್ಕೆ ನೀರೆರಚಿ ನಿಮ್ಮ ಕೈಯಲ್ಲಿ ಏನೂ ಆಗುವುದಿಲ್ಲವೇನೋ ಎಂಬ ಭಾವನೆಯನ್ನು ಮೂಡಿಸುತ್ತದೆ. ಡಯಾಬಿಟಿಸ್ ಅನ್ನು ನಿಭಾಯಿಸುವುದು ಒಂದು ಸವಾಲೇ ಸರಿ, ಅದರಲ್ಲೂ ವಿಶೇಷವಾಗಿ ನೀವು ಎಣಿಸಿದ ಫಲಿತಾಂಶಗಳು ಬರದೇ ಹೋದಾಗ. ಅದಲ್ಲದೆ, ನಿಮ್ಮ ಬ್ಲಡ್ ಗ್ಲುಕೋಸ್ ಮಟ್ಟಗಳು ಏರುಪೇರಾದಾಗ, ಅದು ನಿಮ್ಮ ಮಾನಸಿಕ ಸ್ಥಿತಿ ಮತ್ತು ನಡವಳಿಕೆಯ ಮೇಲೂ ಪ್ರಭಾವ ಬೀರುತ್ತವೆ. ಬ್ಲಡ್ ಶುಗರ್ ಹೆಚ್ಚಾದ ಸಂದರ್ಭಗಳಲ್ಲಿ ತಾಳ್ಮೆ ಇಲ್ಲದಿರುವುದು ಮತ್ತು ಮನಸ್ಸು ಸರಿ ಇಲ್ಲದಿರುವುದನ್ನು ನೀವು ಈಗಾಗಲೆ ಗಮನಿಸಿರಬಹುದು. ಅಂತಹ ಪರಿಸ್ಥಿತಿಗಳಲ್ಲಿ, ಮನಸ್ಸನ್ನು ಕೆಡಿಸಿಕೊಳ್ಳುವುದು ನಿಮ್ಮ ಒತ್ತಡದ ಮಟ್ಟವನ್ನು ಹೆಚ್ಚಿಸಬಹುದು, ಆದರೆ ಅದನ್ನು ನಿರ್ಲಕ್ಷಿಸುವುದರಿಂದ ಕೂಡ ಯಾವುದೇ ಪ್ರಯೋಜನವಾಗಲಾರದು.
ಒಂದು ವೇಳೆ ನೀವು ನಿಮ್ಮ ಒತ್ತಡದವನ್ನು ಪಾಸಿಟಿವ್ ದಿಕ್ಕಿಗೆ ತಿರುಗಿಸಿದರೆ ಏನಾಗುತ್ತದೆ? ಭಾವನಾತ್ಮಕ ಸನ್ನಿವೇಶಗಳಲ್ಲಿ ಗಮನವನ್ನು ಬೇರೆಡೆಗೆ ತಿರುಗಿಸುವುದು ಅತ್ಯುತ್ತಮವಾದ ಉಪಾಯ. ಅಲ್ಲದೇ, ನೀವು ನಿಮ್ಮನ್ನು ಪಾಸಿಟಿವ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ, ನೀವು ಸುಲಭವಾಗಿ ಹೊಸ ಆರೋಗ್ಯಕರ ಅಭ್ಯಾಸಗಳನ್ನು ರೂಪಿಸಿ, ಅದನ್ನು ನಿಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ಡಯಾಬಿಟಿಸ್ ಇದ್ದರೂ ಅದರೊಂದಿಗೆ ಸುಲಭವಾಗಿ ಬದುಕಬಹುದು.
ಪ್ಲೇಡೇಟ್:
ವರ್ಷಗಳಿಂದ ಭೇಟಿ ಮಾಡದ ನಿಮ್ಮ ಸ್ನೇಹಿತ/ಸ್ನೇಹಿತೆಗೆ ಕರೆ ಮಾಡಿ ನಿಮ್ಮಿಬ್ಬರಿಗಾಗಿಯೇ “ಪ್ಲೇಡೇಟ್” ಒಂದನ್ನು ಏಕೆ ನೀವು ನಿಗದಿ ಮಾಡಬಾರದು? ನಿಮ್ಮ ಸ್ನೇಹಿತರ ಗುಂಪಿನೊಡನೆ ನಿಮ್ಮ ನೆಚ್ಚಿನ ಆಟಗಳನ್ನು ಆಡಲು ನಿಮ್ಮ ಮನೆಯಲ್ಲಿಯೇ ಒಂದು ಆಟದ ಸೆಶ್ಶನ್‌ಗಾಗಿ ವ್ಯವಸ್ಥೆಯನ್ನು ಮಾಡಿ ಅಥವಾ ಯಾವುದಾದರೂ ಒಂದು ಕೆಫೆಗೆ ತೆರಳಿ ಒಟ್ಟಿಗೆ ಬೋರ್ಡ್ ಆಟಗಳನ್ನು ಆಡಿ. ಒಂದು ವೇಳೆ ನೀವಿಬ್ಬರೂ ಬೇರೆ ಬೇರೆ ಊರಿನಲ್ಲಿ ಇದ್ದರೆ, ನಿಮಗೆ ಬೇಜಾರು ಆದಾಗಲೆಲ್ಲ ನಿಮ್ಮ ಸ್ನೇಹಿತರೊಂದಿಗೆ ಆಡಬಹುದಾದ ಬಹಳಷ್ಟು ಆನ್‍ಲೈನ್ ಮಲ್ಟಿಪ್ಲೇಯರ್ ಆಟಗಳಿವೆ.
ಧ್ಯಾನ:
ಡಯಾಬಿಟಿಸ್ ಮೇಲೆ ಧ್ಯಾನವು ಉತ್ತಮ ಪ್ರಭಾವವನ್ನು ಬೀರುವುದಲ್ಲದೆ ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ. ನಿಯಮಿತ ಧ್ಯಾನವು ನಿದ್ರೆಯ ಮಾದರಿ, ಒತ್ತಡ, ಆತಂಕ ಮತ್ತು ಆಲೋಚನೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಸರಳವಾಗಿ ಹೇಳುವುದಾದರೆ, ಧ್ಯಾನದಿಂದ ಭಾವನಾತ್ಮಕ ಯೋಗಕ್ಷೇಮ ಮತ್ತು ದೈಹಿಕ ಯೋಗಕ್ಷೇಮ ದೊರೆಯುತ್ತದೆ.
ಬಿಸಿ ನೀರಿನ ಸ್ನಾನ:
ಹಿತಕರವಾದ ಅನುಭವವನ್ನು ಕೊಡುವುದಲ್ಲದೆ, ಇದು ನಿಮ್ಮ ಮಾನಸಿಕ ಸ್ಥಿತಿಯಲ್ಲಿನ ಬದಲಾವಣೆಯನ್ನು ತೊಡೆದು ನಿಮ್ಮ ಮನಸ್ಸನ್ನು ವಿಶ್ರಾಂತಿಯ ಸ್ಥಿತಿಗೆ ಕೊಂಡೊಯ್ಯಲು ನೆರವಾಗುತ್ತದೆ. ಬಿಸಿನೀರು ನಿಮ್ಮ ಮನಸ್ಸಿನ ಒತ್ತಡವನ್ನು ತೊಲಗಿಸುತ್ತದೆ ಹಾಗೂ ಮಲಗುವ ಮುಂಚೆ ಬಿಸಿ ನೀರಿನ ಸ್ನಾನ ಮಾಡುವುದು ಪರಿಪೂರ್ಣತೆಯ ಅನುಭವವನ್ನು ಕೊಡುತ್ತದೆ[1]. ಅಧಿಕ ತಾಪಮಾನವು ನಿಮ್ಮ ಸೆರಟೋನಿನ್ ಮಟ್ಟಗಳನ್ನು ಹೆಚ್ಚಿಸುತ್ತದೆ. ಸೆರಟೋನಿನ್ ಒಂದು ಸಂತೋಷದ ಹಾರ್ಮೋನ್ ಆಗಿದ್ದು, ಮನಸ್ಥಿತಿ, ಗುಪ್ತ ಬಯಕೆ, ಹಸಿವು ಮತ್ತು ಸಂತೃಪ್ತತೆಯನ್ನು ನಿಯಂತ್ರಿಸಲು ಇದು ಅವಶ್ಯಕವಾಗಿದೆ. ಹಾಗಾಗಿ, ದಿನವೆಲ್ಲ ಕೆಲಸ ಮಾಡಿ ದಣಿದಾಗ ಮಾಡುವಂತಹ ಬಿಸಿನೀರಿನ ಸ್ನಾನ ನಿಮ್ಮ ಮನಸ್ಥಿತಿಯನ್ನು ಮತ್ತು ನಿಮ್ಮ ಶಕ್ತಿಯ ಮಟ್ಟಗಳನ್ನು ಕೂಡಲೇ ಹೆಚ್ಚಿಸುತ್ತದೆ.
ಒಂದು ಒಳ್ಳೆಯ ಪುಸ್ತಕವನ್ನು ಓದಿ:
ನೀವು ಓದುವಾಗ ನಿಮ್ಮ ದಿನನಿತ್ಯದ ಸಮಸ್ಯೆಗಳ ಬಗ್ಗೆ ನೀವು ಯೋಚಿಸುವುದಿಲ್ಲ, ನೀವು ಬೇರೆಯೊಂದು ಪ್ರಪಂಚದಲ್ಲಿ ಇರುತ್ತೀರಿ, ಈ ಕ್ರಿಯೆ ನಿಮ್ಮ ಆತಂಕವನ್ನು ಕುಗ್ಗಿಸುತ್ತದೆ. ನಿಮ್ಮ ಮನಸ್ಸು ಶಾಂತ ಸ್ಥಿತಿಯನ್ನು ತಲುಪುತ್ತದೆ. ಅಲ್ಲದೇ, ನೀವು ಒಂದು ವೇಳೆ ವ್ಯಕ್ತಿತ್ವ ವಿಕಸನ ಅಥವಾ ಆಧ್ಯಾತ್ಮಿಕ ಪುಸ್ತಕಗಳನ್ನು ಓದುವುದಾದರೆ, ನಿಮ್ಮ ಸಮಸ್ಯೆಗಳಿಗೆ ಉತ್ತರವನ್ನು ಹಾಗೂ ಅದನ್ನು ಜೀವನದಲ್ಲಿ ಅಳವಡಿಸುಕೊಳ್ಳುವ ಉಪಾಯಗಳನ್ನು ಆ ಪುಸ್ತಕಗಳಲ್ಲಿ ಕಂಡುಕೊಳ್ಳುತ್ತೀರಿ. ನೀವು ಆ ವಿಷಯಗಳನ್ನು ಅರ್ಥಮಾಡಿಕೊಂಡು ನಿಮ್ಮ ಜೀವನವನ್ನು ನಿಮ್ಮ ಹಿಡಿತಕ್ಕೆ ತಂದುಕೊಳ್ಳಲು ತಾಳ್ಮೆಯಿಂದ ಮುಂದುವರೆಯುವ ರಚನಾತ್ಮಕ ವಿಧಾನಗಳನ್ನು ಕಂಡುಕೊಳ್ಳುತ್ತೀರಿ.
ಉದ್ಯಾನವನದಲ್ಲಿ ಓಡಾಡಿ:
ಸ್ವತಃ ನಮ್ಮನ್ನೇ ನಾವು, ನಮ್ಮ ಕೆಲಸವನ್ನು ಮತ್ತು ನಮ್ಮ ಸಂಬಂಧಗಳನ್ನು ದೂಷಿಸುವಂತಹ ಸನ್ನಿವೇಶಗಳು ನಮ್ಮೆಲ್ಲರ ಅನುಭವಕ್ಕೆ ಬಂದಿರುತ್ತದೆ. ಆದರೆ ಡಯಾಬಿಟಿಸ್‍ನಂತಹ ಸಮಸ್ಯೆಯನ್ನು ನಿಭಾಯಿಸುವಂತಹ ಜವಾಬ್ದಾರಿ ಇದಕ್ಕೆ ಸೇರಿದಾಗ ಮತ್ತಷ್ಟು ಕಷ್ಟವೆನಿಸುತ್ತದೆ. ಇಂತಹ ಸಮಯದಲ್ಲಿ ನಮ್ಮ ಸಹಾಯಕ್ಕೆ ಬರುವುದೇ ಹಸಿರು ತೋಟ. ಉದ್ಯಾನವನದಲ್ಲಿ ನಿಮ್ಮ ಸ್ನೇಹಿತ/ಸ್ನೇಹಿತೆ ಅಥವಾ ನಿಮ್ಮ ಪ್ರೀತಿಪಾತ್ರರೊಡನೆ ಓಡಾಡುವುದರಿಂದ ನಿಮ್ಮ ಮನಸ್ಥಿತಿ ಉತ್ತಮಗೊಳ್ಳುವುದಲ್ಲದೆ ನಿಮ್ಮ ದಿನನಿತ್ಯದ ಚಟುವಟಿಕೆಯ ಗುರಿಯನ್ನು ಕೂಡ ಮುಟ್ಟಲು ನೆರವಾಗುತ್ತದೆ. ಪ್ರಕೃತಿ ಮತ್ತು ಹಸಿರು ಪ್ರದೇಶಗಳು ನಿಮ್ಮ ಮಾನಸಿಕ ಆರೋಗ್ಯ ಮತ್ತು ಭಾವನೆಗಳ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತವೆ. ನಿಮ್ಮ ಇಯರ್‌ಫೋನ್‌ಗಳನ್ನು ಕಿವಿಗೆ ಸಿಕ್ಕಿಸಿಕೊಳ್ಳಿ, ಹಿತವಾದ ಸಂಗೀತವನ್ನು ಪ್ಲೇ ಮಾಡಿ ಹಾಗೂ ಶಾಂತಿಯುತ ವಾತಾವರಣದಲ್ಲಿ ಮುಳುಗೇಳಿ.
ಸಾಕುಪ್ರಾಣಿಗಳೊಂದಿಗೆ ಆಟವಾಡಿ:
ನಿಸ್ಸಂದೇಹವಾಗಿ, ಸಾಕುಪ್ರಾಣಿಗಳು ನಿಮ್ಮ ಜೀವನದಲ್ಲಿ ಅನೇಕ ರೀತಿಯಲ್ಲಿ ಬದಲಾವಣೆಗಳನ್ನು ತರಬಹುದು. ಅವು ನಿಮ್ಮನ್ನು ಸಕ್ರಿಯವಾಗಿರಿಸುವುದಲ್ಲದೆ, ನಿಮ್ಮ ಒತ್ತಡವನ್ನು ನಿವಾರಿಸುವ ಅತ್ಯುತ್ತಮ ಮಾಧ್ಯಮವಾಗಿವೆ. ಇದರಲ್ಲಿ ಆಶ್ಚರ್ಯವೇನಿಲ್ಲ, ಸಾಕುಪ್ರಾಣಿಯ ಚಿಕಿತ್ಸೆ ನಿಜವಾಗಿಯೂ ಅಸ್ತಿತ್ವದಲ್ಲಿದೆ. ಆದ್ದರಿಂದ, ಮುಂದಿನ ಬಾರಿ, ನೀವು ಭಾವನಾತ್ಮಕವಾಗಿ ಕುಗ್ಗಿದಾಗ, ನಿಮ್ಮ ಸಾಕುಪ್ರಾಣಿಗಳೊಂದಿಗೆ ಆಟವಾಡಿ ಅಥವಾ ಅವುಗಳೊಂದಿಗೆ ಒಂದು ವಾಕ್ ಹೋಗಿ ಬನ್ನಿ.
ಕಡುಬಯಕೆಗಳಿಂದ ಅಥವಾ ಮುಂಗೋಪದಂತಹ ಮನಸ್ಥಿತಿಯಿಂದ ಹೊರಬರುವ ನಿಮ್ಮ ನೆಚ್ಚಿನ ವಿಧಾನ ಯಾವುದು? ಅವನ್ನು ಕಾಮೆಂಟ್ ವಿಭಾಗದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.
Reference:
- https://www.ncbi.nlm.nih.gov/pubmed/10979246