Reading Time: 2 minutes

ಡಯಾಬಿಟಿಸ್ ಇರಲಿ ಅಥವಾ ಇಲ್ಲದೇ ಹೋಗಲಿ, ವ್ಯಾಯಾಮ ಮಾಡಬೇಕು ಎಂಬ ಬಹಳಷ್ಟು ಸಲಹೆಗಳನ್ನು ನೀವು ಸಾಮಾನ್ಯವಾಗಿ ಕೇಳಿರುತ್ತೀರಿ. ಆರೋಗ್ಯ ವೃತ್ತಿಪರರು ಸೇರಿದಂತೆ ಎಲ್ಲರೂ ಚುರುಕಾದ ಜೀವನಶೈಲಿಯ ಪ್ರಯೋಜನಗಳ ಬಗ್ಗೆ ಮಾತನಾಡುವವರೆ. ಆದರೆ ಇದು ನಿಮ್ಮ ಡಯಾಬಿಟಿಸ್ ನಿರ್ವಹಿಸುವಲ್ಲಿ ಹೇಗೆ ಸಹಾಯಕ?

ನಿಮ್ಮ ಡಯಾಬಿಟಿಸ್ ಅನ್ನು ರಿವರ್ಸ್ ಮಾಡುವ ಮೂಲಕ ಆರೋಗ್ಯ ಹೆಚ್ಚಿಸಲು ಸಹಾಯ ಮಾಡುವ ವಿಧಾನಗಳು ಬಹಳಷ್ಟಿವೆ, ಅವುಗಳಲ್ಲಿ ದೈಹಿಕ ಚಟುವಟಿಕೆಯೂ ಸೇರಿದೆ. ನೀವು ವ್ಯಾಯಾಮ ಮತ್ತು ಆರೋಗ್ಯಕರ ಆಹಾರಕ್ರಮವನ್ನು ಸರಿಯಾಗಿ ಪಾಲಿಸಿದಾಗ ಮತ್ತು ಸೂಚಿಸಿದ ಔಷಧಿಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಂಡಾಗ ಮಾತ್ರವೇ ಉತ್ತಮ ಫಲಿತಾಂಶಗಳನ್ನು ಸಾಧಿಸಲು ಸಾಧ್ಯವಾಗುವುದು.

ನಿಮ್ಮ ಡಯಾಬಿಟಿಸ್ ಅನ್ನು ನಿರ್ವಹಿಸಲು ವ್ಯಾಯಾಮ ಹೇಗೆ ಸಹಾಯಕ ಎಂದು ನೋಡೋಣ ಬನ್ನಿ:

  1. ಬ್ಲಡ್ ಗ್ಲುಕೋಸ್ ನಿಯಂತ್ರಣದಲ್ಲಿ ಸುಧಾರಣೆ

ನಿಯಮಿತ ವ್ಯಾಯಾಮವು ಇನ್ಸುಲಿನ್ ಸೆನ್ಸಿಟಿವಿಟಿಯನ್ನು ಹೆಚ್ಚಿಸುತ್ತದೆ, ಇದರಿಂದ ಮಾಂಸಖಂಡಗಳು ಇನ್ಸುಲಿನ್ ಅನ್ನು ಉತ್ತಮವಾಗಿ ಬಳಸಿಕೊಳ್ಳುವಂತಾಗಿ, ದೇಹವು ಮತ್ತಷ್ಟು ಉತ್ತಮವಾಗಿ ಗ್ಲುಕೋಸ್ ಹೀರಿಕೊಳ್ಳುತ್ತದೆ. ಬ್ಲಡ್ ಶುಗರ್ ನಿಯಂತ್ರಿಸಲು ವ್ಯಾಯಾಮವು ಸಹಾಯ ಮಾಡುವ ಇನ್ನೊಂದು ವಿಧಾನವೆಂದರೆ, ಇನ್ಸುಲಿನ್ ಲಭ್ಯತೆಯ ಹೊರತಾಗಿಯೂ, ಸಂಕುಚಿತ ಸ್ನಾಯುಗಳಿಗೆ ಶಕ್ತಿಗಾಗಿ ಗ್ಲೂಕೋಸ್ ಅನ್ನು ಬಳಸಲು ಅವಕಾಶ ಮಾಡಿಕೊಡುವುದು. ಒಟ್ಟಾರೆಯಾಗಿ, ವ್ಯಾಯಾಮದಿಂದ ಬ್ಲಡ್ ಶುಗರ್ ಉತ್ತಮ ಮಟ್ಟಗಳನ್ನು ತಲುಪುತ್ತದೆ, ಅಂದರೆ ಉತ್ತಮವಾಗಿ ಡಯಾಬಿಟಿಸ್ ನಿಭಾಯಿಸಬಹುದಾಗಿದೆ.

  1. ತೂಕದ ನಿರ್ವಹಣೆ

ಬಹಳಷ್ಟು ಡಯಾಬಿಟಿಸ್ ಪ್ರಕರಣಗಳು, ವಿಶೇಷವಾಗಿ ಭಾರತದಲ್ಲಿ, ಅತಿಯಾದ ದೇಹದ ತೂಕ ಮತ್ತು ಬೊಜ್ಜಿಗೆ ಸಂಬಂಧಿಸಿವೆ. ಆ ಹೆಚ್ಚುವರಿ ತೂಕ ಅಥವಾ ಕೊಬ್ಬನ್ನು ಕರಗಿಸುವುದರಿಂದ ಡಯಾಬಿಟಿಸ್ ಅನ್ನು ಹೆಚ್ಚು ಉತ್ತಮವಾಗಿ ನಿಭಾಯಿಸಬಹುದು ಮತ್ತು ಇತರ ಜೀವನಶೈಲಿಗೆ ಮತ್ತು ತೂಕಕ್ಕೆ ಸಂಬಂಧಿಸಿದ ಕಾಯಿಲೆಗಳ ಅಪಾಯವನ್ನು ಕುಗ್ಗಿಸಬಹುದು. ದೈಹಿಕ ಚಟುವಟಿಕೆಯು ತೂಕ ಇಳಿಕೆ ಮತ್ತು ನಿರ್ವಹಣೆಯಲ್ಲಿ ಬರುವ ವಿವಿಧ ದಿನಚರಿಯ ಪ್ರಮುಖ ಭಾಗವಾಗಿದೆ.

  1. ಡಯಾಬಿಟಿಸ್‍ಗೆ ಸಂಬಂಧಿಸಿದ ಇತರೆ ತೊಂದರೆಗಳನ್ನು ಕಡಿಮೆ ಮಾಡುತ್ತದೆ

ಡಯಾಬಿಟಿಸ್ ಅನ್ನು ಸರಿಯಾಗಿ ನಿಭಾಯಿಸದಿದ್ದರೆ, ದೀರ್ಘಕಾಲದ ಮೂತ್ರಪಿಂಡದ ಕಾಯಿಲೆ, ನರಗಳ ಹಾನಿ, ಹಲ್ಲಿನ ಸಮಸ್ಯೆಗಳು, ಕಣ್ಣಿನ ಹಾನಿ, ಮತ್ತು ಖಿನ್ನತೆಯಂತಹ ಹಲವಾರು ತೊಂದರೆಗಳಿಗೆ ಕಾರಣವಾಗಬಹುದು. ಅಂತಹ ಸಮಸ್ಯೆಗಳಿಂದ ದೂರ ಇರುವ ಉತ್ತಮ ಉಪಾಯ ಏನೆಂದರೆ ಜೀವನಶೈಲಿಯಲ್ಲಿ ಚುರುಕಾಗಿಸಿಕೊಳ್ಳುವುದು, ಆಗ ನೀವು ಡಯಾಬಿಟಿಸ್ ಅನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವ ಮೂಲಕ ಇತರೆ ತೊಂದರೆಗಳ ಬೆಳವಣಿಗೆಯನ್ನು ತಪ್ಪಿಸಬಹುದು.

  1. ಒತ್ತಡ-ನಿವಾರಕ

ಒತ್ತಡ ಪ್ರತಿಯೊಬ್ಬರ ಜೀವನದ ಒಂದು ಭಾಗ ಆಗುತ್ತಲೇ ಬಂದಿದೆ. ಆದರೆ ನಿಮ್ಮ ಆಯ್ಕೆಯ ಯಾವುದೇ ದೈಹಿಕ ಚಟುವಟಿಕೆಯನ್ನು ನೀವು ಪ್ರಜ್ಞಾಪೂರ್ವಕವಾಗಿ ನಿಮ್ಮ ಜೀವನಶೈಲಿಯಲ್ಲಿ ಅಳವಡಿಸಿಕೊಂಡರೆ ಅದು ನಿಮ್ಮ ಒತ್ತಡದ ಮಟ್ಟಗಳನ್ನು ಗಮನಾರ್ಹವಾಗಿ ಇಳಿಸುತ್ತವೆ. ಇದು ರಕ್ತಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ದೇಹದಲ್ಲಿ ಆಮ್ಲಜನಕದ ಸೇವನೆಯನ್ನು ಉತ್ತೇಜಿಸುತ್ತದೆ. ಜೊತೆಗೆ, ಕೇವಲ ವ್ಯಾಯಾಮ ಮಾಡುವ ಒಂದು ಕ್ರಿಯೆ, ನಿಮ್ಮ ಮನಸ್ಸನ್ನು ಇತರ ಸಮಸ್ಯೆಗಳಿಂದ ಮತ್ತು ಚಿಂತೆಗಳಿಂದ ದೂರ ತೆಗೆದುಕೊಂಡು ಹೋಗಿ ಸ್ವಲ್ಪ ಕಾಲ ನಿಮ್ಮ ಮೇಲೆ ಕೇಂದ್ರೀಕರಿಸಲು ನೆರವಾಗುತ್ತದೆ.

  1. ಮನಸ್ಥಿತಿಯನ್ನು ಸುಧಾರಿಸುತ್ತದೆ

ಪರಿಣಾಮಕಾರಿ ವ್ಯಾಯಾಮದ ದಿನಚರಿ ಮೆದುಳು ಮತ್ತು ನರಮಂಡಲಗಳಲ್ಲಿ ಎಂಡಾರ್ಫಿನ್‍ಗಳ ಬಿಡುಗಡೆಯನ್ನು ಪ್ರಚೋದಿಸುತ್ತದೆ. ಈ ಹಾರ್ಮೋನುಗಳು ನಿಮಗೆ ಸಕಾರಾತ್ಮಕ ಮತ್ತು ಉತ್ಸಾಹಭರಿತ ಭಾವನೆಯನ್ನು ಉಂಟುಮಾಡುತ್ತದೆ ಮತ್ತು ನೋವನ್ನು ಸಹ ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಈ ಪರಿಣಾಮವು ಆತ್ಮವಿಶ್ವಾಸದ ಹೆಚ್ಚಳಕ್ಕೆ ಕಾರಣವಾಗಬಹುದು. ಮನಸ್ಸು ಸಂತೋಷದ ಸ್ಥಿತಿಯಲ್ಲಿದ್ದಾಗ ನೋಡುವ ದೃಷ್ಟಿಕೋನ ಸಕಾರಾತ್ಮಕವಾಗಿರುತ್ತದೆ, ಇದು ಡಯಾಬಿಟಿಸ್ ಅನ್ನು ಹಿಮ್ಮುಖವಾಗಿರಿಸಲು ನಿಮಗೆ ಸಹಾಯ ಮಾಡುತ್ತದೆ.

  1. ನಿಮಗೆ ಶಕ್ತಿ ನೀಡಿ, ಆರೋಗ್ಯವಂತರನ್ನಾಗಿಸಿ, ಸಂತುಷ್ಟರನ್ನಾಗಿಸುತ್ತದೆ

ನಿಯಮಿತ ವ್ಯಾಯಾಮವು ನಿಮ್ಮ ಸ್ನಾಯು, ಕೀಲು ಮತ್ತು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಉತ್ತಮ ರೋಗನಿರೋಧಕ ಶಕ್ತಿ ಮುಂದೆ ಆಗಬಹುದಾದ ಆರೋಗ್ಯದ ಸಮಸ್ಯೆಗಳನ್ನು ಬರದಂತೆ ತಡೆಯುತ್ತದೆ. ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ನೀವು ನಿಮಗಾಗಿ ಮೀಸಲಿಟ್ಟ ಸಮಯದಂತೆ, ಇಲ್ಲಿ ನೀವು ನಿಮ್ಮ ಚೆಂತೆಗಳನ್ನು ಹಿಂದಕ್ಕೆ ಬಿಟ್ಟು ನಿಮ್ಮ ಮೇಲೆ ಗಮನ ಹರಿಸಬಹುದು. 

ಡಯಾಬಿಟಿಸ್ ನಿಮ್ಮ ಜೀವನದ ಎಲ್ಲಾ ಆಯಾಮಗಳನ್ನು ಅಡ್ಡಿಪಡಿಸುವ ಒಂದು ಸ್ಥಿತಿಯಾಗಬಹುದು. ಸರಿಯಾದ ಪ್ರಮಾಣದ ಶಿಸ್ತು ಮತ್ತು ಪ್ರೇರಣೆಯೊಂದಿಗೆ ನೀವು ಅದನ್ನು ನಿರ್ವಹಿಸಬಹುದು. ದೈಹಿಕ ಚಟುವಟಿಕೆ ಅಥವಾ ವ್ಯಾಯಾಮ ಎಂದ ಕೂಡಲೆ ಅಧಿಕ ತೀವ್ರತೆಯ ವ್ಯಾಯಾಮ ಅಥವಾ ಕ್ರಾಸ್‍ಫಿಟ್ ಅಥವಾ ಹೆವಿ ಕಾರ್ಡಿಯೋಗಳನ್ನು ಮಾಡಬೇಕೆಂದೇನಿಲ್ಲ. ನಿಮ್ಮ ದೇಹದ ಮಾತುಗಳನ್ನು ಕೇಳುವುದು ಮತ್ತು ಅದಕ್ಕೆ ತನ್ನದೇ ಆದ ವೇಗವನ್ನು ಕಂಡುಕೊಳ್ಳಲು ಬಿಡುವುದು ಇಲ್ಲಿ ತುಂಬ ಮುಖ್ಯವಾಗಿರುತ್ತದೆ. ವಿಭಿನ್ನ ತೀವ್ರತೆಯ ವಿಭಿನ್ನ ಚಟುವಟಿಕೆಗಳನ್ನು ಒಳಗೊಂಡ ಮಿಶ್ರಿತ ವ್ಯವಸ್ಥೆಯ ಯೋಜನೆ ನಿಮ್ಮ ಆಸಕ್ತಿಯನ್ನು ಹಿಡಿದಿಡಲು ಉತ್ತಮವಾಗಿ ಕೆಲಸ ಮಾಡುತ್ತದೆ.

ಅಲ್ಲದೇ, ಬಹಳ ಸಮಯದಿಂದ ನೀವು ಜಡ ಜೀವನಶೈಲಿಯನ್ನು ನಡೆಸಿಕೊಂಡು ಬಂದಿದ್ದರೆ, ನೀವು ನಿಮ್ಮ ವೈದ್ಯರೊಡನೆ ಮಾತನಾಡಿ ನೀವು ಏನು ಮಾಡಬೇಕೆಂದುಕೊಂಡಿದ್ದೀರೋ ಅದನ್ನು ವಿವರಿಸಿ ಹಾಗೂ ನಿಧಾನವಾಗಿ ಪ್ರಾರಂಭಿಸಿ. ಈ ಸಕಾರಾತ್ಮಕ ಬದಲಾವಣೆಯ ಪ್ರತಿ ಹಂತದಲ್ಲಿಯೂ ನೀವು ಪ್ರಯೋಜನಗಳನ್ನು ಅನುಭವಿಸುವಿರಿ.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.