COVID-19, ಡಿಸೆಂಬರ್ 2019ರಂದು ಚೈನಾದಲ್ಲಿ ಕಂಡುಬಂದ ನಾವೆಲ್ ಕೊರೊನಾ ವೈರಸ್‌ನಿಂದ ಹರಡುತ್ತಿರುವ ಈ ಕಾಯಿಲೆ ಜಾಗತಿಕ ಸಮೂಹದಲ್ಲಿ ಭಯದ ಅಲೆಯನ್ನೇ ಎಬ್ಬಿಸಿದೆ. 11ನೇ ಮಾರ್ಚ್ 2020(1) ರಂದು, ವಿಶ್ವ ಆರೋಗ್ಯ ಸಂಸ್ಥೆ COVID-19 ಅನ್ನು ಒಂದು ವಿಶ್ವದ ಬೇನೆ (ಪೆಂಡಮಿಕ್) ಎಂದು ಗುರುತಿಸಿದೆ.(2) ಅಲ್ಲದೇ, 14ನೇ ಮಾರ್ಚ್‌ರಂದು ವಿಶ್ವ ಆರೋಗ್ಯ ಸಂಸ್ಥೆ ಹೊರತಂದಿರುವ ವರದಿಯ2 ಪ್ರಕಾರ ಜಗತ್ತಿನಾದ್ಯಂತ 1.4 ಲಕ್ಷ ಮಂದಿ ಈ ಕಾಯಿಲೆಗೆ ತುತ್ತಾಗಿದ್ದಾರೆ.
ಈ ಕಾಯಿಲೆ ಯಾರಿಗೆ ಬೇಕಾದರೂ ಬರಬಹುದು, ಆದರೆ ಚೈನಾದಿಂದ ಬಂದಿರುವ ಮೊದಲ ಹಂತದ ಸಂಶೋಧನೆಯಲ್ಲಿ, ಈಗಾಗಲೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಹಿರಿಯ ವಯಸ್ಸಿನವರಿಗೆ(3) ಇದು ಹೆಚ್ಚು ಮಾರಕವಾಗಿದೆ ಎಂದು ತಿಳಿಸಿದೆ. ಇಂತಹ ಆರೋಗ್ಯ ಸಮಸ್ಯೆಗಳಲ್ಲಿ ಒಂದು ಡಯಾಬಿಟಿಸ್, ಇದು 9.2% ಸಾವಿನ ಮಟ್ಟವನ್ನು ಹೊಂದಿದೆ. ಇದನ್ನು ನೋಡಿದರೆ ಭಾರತ ಹೆಚ್ಚಿನ ಅಪಾಯದಲ್ಲಿದೆ ಎಂದು ತಿಳಿಯುತ್ತದೆ, ಏಕೆಂದರೆ ಐಡಿಎಫ್ 2019ರ ವರದಿಯ ಪ್ರಕಾರ ಭಾರತದಲ್ಲಿ 77 ಮಿಲಿಯನ್ ಮಂದಿ ಡಯಾಬಿಟಿಸ್‌ನಿಂದ4 ಬಳಲುತ್ತಿದ್ದಾರೆ. ಈ ಕಾಯಿಲೆಯನ್ನು ಗುಣಪಡಿಸುವ ಮದ್ದು ಇಲ್ಲವೇ ಲಸಿಕೆ(ವ್ಯಾಕ್ಸಿನ್) ಇನ್ನೂ ದೊರಕದ ಕಾರಣ, ನಮಗಿರುವ ಒಂದೇ ಒಂದು ದಾರಿ ಎಂದರೆ ಅದನ್ನು ತಡೆಗಟ್ಟುವುದು.
ಇದನ್ನು ಹೇಗೆ ತಡೆಯುವುದು?
ಈ ಒಂದು ಮಾಹಿತಿನ್ನು ಪದೇ ಪದೇ ಹೇಳಲಾಗುತ್ತಿದೆ. ವೈಯಕ್ತಿಕ ಸ್ವಚ್ಛತೆಯನ್ನು ಅಭ್ಯಾಸ ಮಾಡಿಕೊಳ್ಳಿ ಹಾಗೂ ಅದನ್ನು ನಿರ್ವಹಿಸಿ. ಈ ಮಾತು ಡಯಾಬಿಟಿಸ್ ಇರುವವರಿಗೆ ಇನ್ನೂ ಹೆಚ್ಚು ಅನ್ವಯವಾಗುತ್ತದೆ, ಏಕೆಂದರೆ ಡಯಾಬಿಟಿಸ್ ರೋಗಿಗಳು ನ್ಯೂಮೋನಿಯಾದಂತಹ(5) ಉಸಿರಾಟದ ಸೋಂಕುಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ. ಇವನ್ನು ಬಿಟ್ಟು ನೀವು ಈ ಕೆಳಗಿನ ಸರಳ ಸಂಗತಿಗಳನ್ನು ಪಾಲಿಸಬಹುದು.(6)
- ಕೈಗಳನ್ನು ತೊಳೆಯುವುದು (20 ಸೆಕೆಂಡುಗಳ ಕಾಲ), ಆಲ್ಕೋಹಾಲ್- ಹೊಂದಿರುವ ಸ್ಯಾನಿಟೈಜರ್‌ಗಳನ್ನು ಬಳಸುವುದು. ಮುಖ, ಮೂಗು ಹಾಗೂ ಕಣ್ಣುಗಳನ್ನು ಮುಟ್ಟಿಕೊಳ್ಳದಂತೆ ಎಚ್ಚರವಹಿಸುವುದು. ಹೀಗೆ ಪ್ರತಿದಿನ ಇಂತಹ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ.
- ನೀವು ಹೊರಗಡೆ ಹೋದಾಗ ನಿಮ್ಮ ಹಾಗೂ ಇನ್ನೊಬ್ಬರ ನಡುವೆ 6 ಅಡಿಗಳ ಅಂತರ ಇರುವಂತೆ ನೋಡಿಕೊಳ್ಳಿ. ಜನಜಂಗುಳಿ ಇರುವ ಜಾಗಗಳಿಂದ ದೂರವಿರಿ ಹಾಗೂ ಅನಗತ್ಯ ತಿರುಗಾಟವನ್ನು ಮಾಡದಿರಿ.
- ನೀವು ವಾಸವಿರುವ ಪ್ರದೇಶದಲ್ಲಿ COVID-19 ತಲೆದೋರಿದ್ದರೆ ಆದಷ್ಟೂ ಮನೆಯಲ್ಲೇ ಇರಿ.
ಡಯಾಬಿಟಿಸ್ ಇರುವ ವ್ಯಕ್ತಿ ಏನು ಮಾಡಬೇಕು?
- ನೀವು ಡಯಾಬಿಟಿಸ್ ಇರುವ ವ್ಯಕ್ತಿಯಾಗಿದ್ದರೆ, ಒಳ್ಳೆಯ ಗ್ಲೈಸೆಮಿಕ್ ಮಟ್ಟವನ್ನು ಕಾಯ್ದುಕೊಳ್ಳಿ
- ಪ್ರೋಟೀನ್ ಹಾಗೂ ಮಿನರಲ್‌ಗಳು ಹೇರಳವಾಗಿರುವ ಆಹಾರ ಪದರ್ಥಗಳನ್ನು ಕೂಡಿಟ್ಟುಕೊಳ್ಳಿ.
- ಜಿಮ್‌ನಿಂದ ದೂರವಿರಿ ಆದರೆ ವ್ಯಾಯಾಮದಿಂದಲ್ಲ. ಕಟ್ಟುಮಸ್ತಾಗಿರಲು ಮನೆಯಲ್ಲೇ ಮಾಡುವ ವ್ಯಾಯಾಮದ ಯೋಜನೆ ರೂಪಿಸಿಕೊಳ್ಳಿ.
ನಮಗೆ ಕಾಯಿಲೆ ಬಂದರೆ ಏನು ಮಾಡಬೇಕು?
ಒಂದು ವೇಳೆ COVID-19 ಸೋಂಕು ತಗುಲಿರಬಹುದು ಎಂದು ಕಂಡುಬಂದರೆ, ಡಯಾಬಿಟಿಸ್ ಹಾಗೂ COVID-19 ಮೇಲಿನ ಅಧ್ಯಯನ ಈ ಕೆಳಗಿನ ಸಲಹೆಗಳನ್ನು ನೀಡುತ್ತದೆ:
- ಕಾಯಿಲೆಯ ದಿನಗಳನ್ನು ಕಳೆಯಲು ಕೆಲಸದ-ಯೋಜನೆ ರೂಪಿಸಿಕೊಂಡು ಸಿದ್ಧವಾಗಿರಿ(7, 8)
- ನಿಮ್ಮ ರೋಗಲಕ್ಷಣಗಳ ಕುರಿತು ಹತ್ತಿರದ ಆರೋಗ್ಯ ಅಧಿಕಾರಿಗಳಿಗೆ ತಿಳಿಸಿ
- ಇನ್ಸುಲಿನ್ ಹಾಗೂ ಇತರೆ ಡಯಾಬಿಟಿಸ್ ಔಷಧಿಗಳನ್ನು ನಿಲ್ಲಿಸದೇ ಮುಂದುವರಿಸಿ
- ಸಾಕಷ್ಟು ನೀರಿನ ಪದಾರ್ಥಗಳನ್ನು ತೆಗೆದುಕೊಳ್ಳಿ
- ಹೊತ್ತಿಗೆ ಸರಿಯಾಗಿ ತಿನ್ನುತ್ತಿರಿ
- ರಕ್ತದ ಸಕ್ಕರೆ ಮಟ್ಟವನ್ನು ಕಾಲಕಾಲಕ್ಕೆ ನೀವೇ-ಪರಿಶೀಲಿಸಿಕೊಳ್ಳುತ್ತಿರಿ
- 14 ದಿನಗಳ ಕಾಲ ಇಲ್ಲವೇ ರೋಗಲಕ್ಷಣಗಳು ಮರೆಯಾಗುವ ತನಕ ನೀವು ಪ್ರತ್ಯೇಕವಾಗಿರಿ. ಸರ್ಕಾರ ತಿಳಿಸುವ ಸಲಹೆಗಳನ್ನು ಪಾಲಿಸಿ
ಅದೇ ಹೊತ್ತಿನಲ್ಲಿ ಕೆಮ್ಮು, ಜ್ವರ ಹಾಗೂ ಉಸಿರಾಟದ ತೊಂದರೆಗಳಂತಹ ರೋಗ ಲಕ್ಷಣಗಳ ಮೇಲೆ ಒಂದು ಕಣ್ಣಿಟ್ಟಿರಿ. ಇಂತಹ ಯಾವುದೇ ರೋಗ ಲಕ್ಷಣಗಳು ಕಂಡುಬಂದರೆ ಕೂಡಲೇ ನಿಮ್ಮ ಡಾಕ್ಟರನ್ನು ಭೇಟಿಮಾಡಿ.
ಜೊತೆಗೆ ಒಂದು ಮಾತು ನೆನಪಿನಲ್ಲಿರಲಿ, ಇಂತಹ ಆಪತ್ತಿನ ಕಾಲದಲ್ಲಿ, ಬೇರೆ ಬೇರೆ ಮಾಧ್ಯಮಗಳ ಮೂಲಕ ಸುಳ್ಳುಸುದ್ದಿಗಳು ಹರಿದು ಬರುತ್ತವೆ. ತಪ್ಪುಮಾಹಿತಿಗಳಿಗೆ ಗಮನಕೊಡದಿರಿ, ವಿಶ್ವ ಆರೋಗ್ಯ ಸಂಸ್ಥೆಯಂತಹ ಅಧಿಕೃತವಾದ ಹಾಗು ನಂಬಬಲ್ಲ ಮಾಧ್ಯಮಗಳ ಮಾಹಿತಿಯನ್ನು ಮಾತ್ರ ಪಾಲಿಸಿ ಆರೋಗ್ಯವನ್ನು ರಕ್ಷಿಸಿಕೊಳ್ಳಿ.
ಉಲ್ಲೇಖಗಳು:
- WHO Director-General’s opening remarks at the media briefing on COVID-19 – 11 March 2020 [Internet]. www.who.int. 2020 [cited 2020 Mar 15]. Available from: https://www.who.int/dg/speeches/detail/who-director-general-s-opening-remarks-at-the-media-briefing-on-covid-19—11-march-2020
- Situation Report -54 SITUATION IN NUMBERS total and new cases in last 24 hours [Internet]. World Health Organization. 2020 Mar [cited 2020 Mar 15] p. 1. Available from: https://www.who.int/docs/default-source/coronaviruse/situation-reports/20200314-sitrep-54-covid-19.pdf?sfvrsn=dcd46351_2
- Report of the WHO-China Joint Mission on Coronavirus Disease 2019 (COVID-19) [Internet]. World Health Organisation. 2020 [cited 2020 Mar 15]. Available from: https://www.who.int/docs/default-source/coronaviruse/who-china-joint-mission-on-covid-19-final-report.pdf
- IDF Atlas 9th edition and other resources [Internet]. www.diabetesatlas.org. 2019 [cited 2020 Mar 15]. Available from: https://www.diabetesatlas.org/en/resources/?gclid=EAIaIQobChMIoIKC1cyb6AIVhxaPCh3Avw2OEAAYASAAEgLmxfD_BwE
- Gupta R, Ghosh A, Singh AK, Misra A. Clinical considerations for patients with diabetes in times of COVID-19 epidemic. Diabetes & Metabolic Syndrome: Clinical Research & Reviews [Internet]. 2020 May 1 [cited 2020 Mar 15];14(3):211–212. Available from: https://www.sciencedirect.com/science/article/pii/S1871402120300424?via%3Dihub
- CDC. Coronavirus Disease 2019 (COVID-19) [Internet]. Centers for Disease Control and Prevention. 2020 [cited 2020 Mar 15]. Available from: https://www.cdc.gov/coronavirus/2019-ncov/specific-groups/high-risk-complications.html
- Managing sick days for type 2 diabetes [Internet]. National Diabetes Service Scheme Australia. [cited 2020 Mar 15]. Available from: https://www.ndss.com.au/wp-content/uploads/fact-sheets/fact-sheet-managing-sick-days-for-type2.pdf
- Managing sick days for type 1 diabetes fact sheet – NDSS [Internet]. www.ndss.com.au. [cited 2020 Mar 15]. Available from: https://www.ndss.com.au/about-diabetes/resources/find-a-resource/managing-sick-days-for-type-1-diabetes-fact-sheet/