Reading Time: 2 minutes

17 ವರ್ಷಗಳ ಅನುಭವದೊಂದಿಗೆ ಪರಿಣಿತ-ವಿಮರ್ಶೆ: ಅಶ್ವಿನಿ ಎಸ್ ಕನಡೆ, ನೋಂದಾಯಿತ ಆಹಾರ ತಜ್ಞರು  ಹಾಗೂ ಪ್ರಮಾಣೀಕೃತ ಡಯಾಬಿಟಿಸ್ ತಜ್ಞರು.

ನಿಮಗೆ ಡಯಾಬಿಟಿಸ್ ಇದ್ದರೆ, ನಿಮ್ಮ ರಕ್ತದ ಸಕ್ಕರೆಯ ಮಟ್ಟವನ್ನು ಸರಿಯಾಗಿಟ್ಟುಕೊಳ್ಳಲು ನೀವು ಏನು ಮಾಡಬೇಕು ಏನು ಮಾಡಬಾರದು ಎನ್ನುವುದರ ಬಗ್ಗೆ ಖಂಡಿತವಾಗಿಯೂ ನಿಮಗೆ ಹಲವಾರು ಉಚಿತ ಸಲಹೆಗಳು ಸಿಗಲಿವೆ. ಇಂತಹ ಸಲಹೆಗಳಿಂದ ಹೆಚ್ಚಾನು ಹೆಚ್ಚು ಹಾನಿಯೇ ಆಗುತ್ತದೆ ವಿನಹ ಲಾಭವಲ್ಲ. ಹಾಗೂ ಇವು ಹಲವು ತಪ್ಪು ತಿಳುವಳಿಕೆಗಳಿಗೆ ದಾರಿ ಮಾಡಿಕೊಡುತ್ತವೆ. ಇವುಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬಾರದು ಮತ್ತು ಇವುಗಳನ್ನು ನಂಬಲೇಬಾರದು.

ಇಂತಹ ತಪ್ಪು ತಿಳುವಳಿಕೆಗಳಿಗೆ ನೀವು ಬಲಿಯಾಗಿದ್ದರೆ, ಚಿಂತಿಸಬೇಡಿ! ಇಂದು ಡಾಕ್ಟರ್ ಮೋಹನ್ಸ್ ಡಯಾಬಿಟಿಸ್ ಸ್ಪೆಷಾಲಿಟೀಸ್ ಸೆಂಟರ್ ಚೆನ್ನೈ ನ ಅಧ್ಯಕ್ಷರು ಹಾಗೂ ಚೀಫ್ ಡಯಾಬೆಟಾಲಜಿಸ್ಟ್ ಡಾಕ್ಟರ್ ವಿ ಮೋಹನ್ ಅವರು ಇಂತಹ ಎಲ್ಲ ತಪ್ಪು ತಿಳುವಳಿಕೆಗಳನ್ನು ದೂರ ಮಾಡಲಿದ್ದಾರೆ ಮತ್ತು ಡಯಾಬಿಟಿಸ್ ಅನ್ನು ನಿಭಾಯಿಸಲು ನೀವು ಏನು ಮಾಡಬೇಕು, ಏನು ಮಾಡಬಾರದು ಎನ್ನುವುದರ ಬಗ್ಗೆ ಸರಿಯಾದ ಮಾಹಿತಿಯನ್ನು ಕೊಡಲಿದ್ದಾರೆ.

ಕಟ್ಟುಕತೆ 1 : ಡಯಾಬಿಟಿಸ್ ಇರುವವರು ಹಣ್ಣುಗಳನ್ನು ತಿನ್ನಲೇಬಾರದು.

ನಿಜಾಂಶ: ಸಾಮಾನ್ಯವಾಗಿ, ನಿಮ್ಮ ರಕ್ತದ ಸಕ್ಕರೆಯ ಮಟ್ಟವನ್ನು ಸರಿಯಾಗಿ ನಿಭಾಯಿಸುತ್ತಿರುವಾಗ ಮಾತ್ರ ನೀವು ಹಣ್ಣುಗಳನ್ನು ತಿನ್ನಬಹುದು. ಈ ರೀತಿಯಾಗಿ, ಫ್ರುಕ್ಟೋಸ್‌ನಿಂದ ಉಂಟಾಗುವ ರಕ್ತದ ಸಕ್ಕರೆಯ ಮಟ್ಟದಲ್ಲಿನ ಹೆಚ್ಚಳ (ಹಣ್ಣುಗಳಲ್ಲಿ ಕಂಡುಬರುವ ಒಂದು ವಿಧದ ಸಕ್ಕರೆ) ನಿಮ್ಮ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ.

ಅಲ್ಲದೆ, ನೀವು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿರುವ ಹಣ್ಣುಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕವಿರುವ ಹಣ್ಣುಗಳನ್ನು ತಿನ್ನಲು ಬಯಸಿದರೆ, ದಿನದ ಉಳಿದ ವೇಳೆಯಲ್ಲಿ ನೀವು ಕಡಿಮೆ ಕಾರ್ಬೋಹೈಡ್ರೇಟ್‌ಗಳನ್ನು ತಿನ್ನುವಂತೆ ನೋಡಿಕೊಳ್ಳುವುದರ ಮೂಲಕ ಅದನ್ನು ಸಮತೋಲನಗೊಳಿಸಿ.

ಕಟ್ಟುಕತೆ: ಟೈಪ್ 2 ಡಯಾಬಿಟಿಸ್ ಅಷ್ಟೇನೂ ಗಂಭೀರವಲ್ಲದ ಒಂದು ರೀತಿಯ ಡಯಾಬಿಟಿಸ್. ನಾನದನ್ನು ನಿಭಾಯಿಸಬೇಕಾಗಿಲ್ಲ.

ನಿಜಾಂಶ: ಟೈಪ್ 2 ಡಯಾಬಿಟಿಸ್ ಅನ್ನು ಅಲಕ್ಷಿಸಬೇಡಿ! ಟೈಪ್ 1 ಡಯಾಬಿಟಿಸ್ ಇರುವ ವ್ಯಕ್ತಿಯ ಹಾಗೆ ನಿಮಗೆ ನಿರಂತರವಾಗಿ ಇನ್ಸುಲಿನ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲದಿರಬಹುದು, ಆದರೆ ಅದರರ್ಥ ಟೈಪ್ 2 ಡಯಾಬಿಟಿಸ್ ಅಷ್ಟು ಗಂಭೀರವಲ್ಲ ಹಾಗು ನೀವದನ್ನು ನೋಡಿಕೊಳ್ಳಬೇಕಾಗಿಲ್ಲ ಎಂದಲ್ಲ.

ಪರೀಕ್ಷೆ ಮಾಡಿಸಿಕೊಳ್ಳದೆ ಬಿಟ್ಟ ಡಯಾಬಿಟಿಸ್, ನಿಮ್ಮ ದೇಹದ ಬೇರೆ ಬೇರೆ ಭಾಗಗಳ ಮೇಲೆ ಪರಿಣಾಮ ಬೀರುವಂತಹ ಹಲವು ಆರೋಗ್ಯದ ತೊಂದರೆಗಳಿಗೆ ಎಡೆ ಮಾಡಿಕೊಡಬಹುದು. ಆದರೆ ಒಂದು ಒಳ್ಳೆಯ ಸಂಗತಿಯೆಂದರೆ ಜೀವನ ಶೈಲಿಯಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಈ ತೊಂದರೆಗಳಾಗುವ ಅಪಾಯವನ್ನು ಕಡಿಮೆ ಮಾಡಬಹುದು. ಅಂಥವುಗಳೆಂದರೆ ಆರೋಗ್ಯಕರವಾದ  ಊಟವನ್ನು ಮಾಡುವುದು, ವ್ಯಾಯಾಮಗಳನ್ನು ಮಾಡುವುದು, ಹೊತ್ತಿಗೆ ಸರಿಯಾಗಿ ಔಷಧಿಗಳನ್ನು ತೆಗೆದುಕೊಳ್ಳುವುದು, ಆರೋಗ್ಯಕರ ತೂಕದಲ್ಲಿರುವುದು ಇತ್ಯಾದಿ.

ಕಟ್ಟುಕತೆ: ನನಗೆ ಡಯಾಬಿಟಿಸ್ ಇರುವ ಕಾರಣ, ನಾನು ಕ್ರಮೇಣವಾಗಿ ಕುರುಡನಾಗಿಬಿಡುವೆನೇ?

ನಿಜಾಂಶ: ಡಯಾಬಿಟಿಸ್ ಇರುವ ಎಲ್ಲರೂ ಬರು ಬರುತ್ತಾ ಕುರುಡರಾಗಿಬಿಡುತ್ತಾರೆ ಎನ್ನುವುದು ನಿಜವಲ್ಲ. ಕುರುಡುತನಕ್ಕೆ ಡಯಾಬಿಟಿಸ್ ಒಂದು ಸಾಮಾನ್ಯವಾದ ಕಾರಣವಾದರೂ, ಇದು ಬಹಳ ದಿನಗಳವರೆಗೆ  ಡಯಾಬಿಟಿಸ್ ಅನ್ನು ಅಲಕ್ಷಿಸಿದಾಗ ಮಾತ್ರ ಉಂಟಾಗುತ್ತದೆ. ಕಡಿಮೆ ಏರಿಳಿತಗಳೊಂದಿಗೆ ನಿಮ್ಮ ಡಯಾಬಿಟಿಸ್ ಅನ್ನು ಸರಿಯಾಗಿ ನಿರ್ವಹಿಸಿದಲ್ಲಿ, ನಿಮ್ಮ ಜೀವನದಲ್ಲಿ ಉಂಟಾಗಬಹುದಾದ ಕಣ್ಣಿಗೆ ಸಂಬಂಧಿಸಿದ ತೊಂದರೆಗಳನ್ನು ತಡೆಯಬಹುದಾಗಿದೆ.

ಕಟ್ಟುಕತೆ: ಡಯಾಬಿಟಿಸ್ ಅನುವಂಶಿಕವಾಗಿ ಬರುತ್ತದೆ. ಅದಕ್ಕೆ ನಾನೇನೂ ಮಾಡಲಾಗುವುದಿಲ್ಲ.

ನಿಜಾಂಶ: ಮತ್ತೆ ಇದು ನಿಜವಲ್ಲ. ಕೇವಲ 40% [1] ಡಯಾಬಿಟಿಸ್ ಅನುವಂಶಿಕವಾಗಿ ಬರುತ್ತದೆ. ಅದೇ 60% ಡಯಾಬಿಟಿಸ್ ಬೊಜ್ಜು, ವ್ಯಾಯಾಮದ ಕೊರತೆ, ಕಳಪೆ ಆಹಾರ ಪದ್ಧತಿ ಮತ್ತು ಒತ್ತಡದಂತಹ ಜೀವನಶೈಲಿಯ ಕಾರಣಗಳಿಂದಾಗಿರುತ್ತದೆ. ತಂದೆ ತಾಯಿ ಇಬ್ಬರಿಗೂ ಡಯಾಬಿಟಿಸ್ ಇದ್ದರೆ ಅವರ ಎಲ್ಲ ಮಕ್ಕಳಿಗೂ ಡಯಾಬಿಟಿಸ್ ಬರುವ ಸಾಧ್ಯತೆ ಇರುತ್ತದೆ. ಆದರೆ ಪೋಷಕರಲ್ಲಿ ಒಬ್ಬರಿಗೆ ಮಾತ್ರ ಡಯಾಬಿಟಿಸ್ ಇದ್ದರೆ, ಈ ಅಪಾಯವು 50%[1] ನಷ್ಟು ಕಡಿಮೆಯಾಗುತ್ತದೆ. ಆದ್ದರಿಂದ ಒಂದು ಒಳ್ಳೆಯ ವಿಷಯವೇನೆಂದರೆ ಕುಟುಂಬದ ಹಿನ್ನೆಲೆಯಲ್ಲಿ ಡಯಾಬಿಟಿಸ್ ಇದ್ದರೂ ಸಹ ಒಳ್ಳೆಯ ಜೀವನ ಶೈಲಿ ಹಾಗೂ ಸರಿಯಾದ ತೂಕವನ್ನು ನಿಭಾಯಿಸಿದಲ್ಲಿ ಡಯಾಬಿಟಿಸ್ ಅನ್ನು ತಡೆಯಲು ಸಾಧ್ಯವಿದೆ.

ಕಟ್ಟುಕತೆ: ನಾನು ತುಂಬಾ ದಪ್ಪಗಿದ್ದೇನೆ, ಹಾಗಾಗಿ ನನಗೆ ಖಂಡಿತವಾಗಿಯೂ ಡಯಾಬಿಟಿಸ್ ಬರುತ್ತದೆ.

ನಿಜಾಂಶ: ಕಳಪೆ ಜೀವನಶೈಲಿಯ ಆಯ್ಕೆಗಳೊಂದಿಗೆ ದಪ್ಪವಾಗಿರುವುದರಿಂದ ನಿಮಗೆ ಡಯಾಬಿಟಿಸ್ ಬರುವ ಸಾಧ್ಯತೆ ಹೆಚ್ಚಿದೆ. ಆನುವಂಶಿಕ ಅಂಶವೂ ಇರುವಾಗ ಈ ಸಾಧ್ಯತೆಗಳು ಇನ್ನೂ ಹೆಚ್ಚಾಗುತ್ತವೆ. ಚಟುವಟಿಕೆಯಿಂದ ಇರುವುದು, ಒಳ್ಳೆಯ ಆಹಾರವನ್ನು ಸೇವಿಸುವುದು ಮುಂತಾದವುಗಳಿಂದ ಆರೋಗ್ಯಕರ ತೂಕವನ್ನು ಉಳಿಸಿಕೊಳ್ಳುವುದರಿಂದ ಈ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ. ಮತ್ತು ನಿಮಗೆ ಈಗಾಗಲೇ ಡಯಾಬಿಟಿಸ್ ಇದ್ದರೆ, ಆರೋಗ್ಯಕರ ಜೀವನಶೈಲಿ ಮತ್ತು ತೂಕವನ್ನು ಕಡಿಮೆ ಮಾಡಿಕೊಳ್ಳುವುದರ ಮೂಲಕ ಇದನ್ನು ತಡೆಗಟ್ಟಬಹುದಾಗಿದೆ[2].

ಕಟ್ಟುಕತೆ:  ವೈದ್ಯರು ಇನ್ಸುಲಿನ್ ತೆಗೆದುಕೊಳ್ಳಲು ಶುರುಮಾಡಿ ಎಂದರೆ, ನನ್ನ ಡಯಾಬಿಟಿಸ್ ಪರಿಸ್ಥಿತಿ ತುಂಬಾ ಹದಗೆಟ್ಟಿದೆ ಎಂದರ್ಥ

ನಿಜಾಂಶ: ಇದರಲ್ಲಿ ಸ್ವಲ್ಪ ಮಾತ್ರ ಸತ್ಯಾಂಶ ಇದೆ. ಟೈಪ್ 2 ಡಯಾಬಿಟಿಸ್ ಇರುವ ಜನರಲ್ಲಿ, ಮೊದ ಮೊದಲಿಗೆ ಇನ್ಸುಲಿನ್ ಅವಶ್ಯಕತೆ ಇರುವುದಿಲ್ಲ. ಆದರೆ ಸಮಯ ಕಳೆದಂತೆ, ಪ್ಯಾಂಕ್ರಿಯಾಸ್ ಸರಿಯಾಗಿ ಕೆಲಸ ಮಾಡಲಿಲ್ಲ ಅಂದರೆ ಅಥವಾ ಟ್ಯಾಬ್ಲೆಟ್ ಕೆಲಸ ಮಾಡುತ್ತಿಲ್ಲವೆಂದರೆ, ಚಿಕೆತ್ಸೆಗಾಗಿ ಇನ್ಸುಲಿನ್ಅನ್ನು ಆರಿಸಿಕೊಳ್ಳಬೇಕಾಗುತ್ತದೆ.  ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದೀರ ಅಂದರೆ ನಿಮ್ಮ ಪರಿಸ್ಥಿತಿ ಹದಗೆಟ್ಟಿದೆ ಎಂದಲ್ಲ. ಯಾಕೆಂದರೆ ಇನ್ಸುಲಿನ್ ತೆಗೆದುಕೊಳ್ಳಲು ಶುರುಮಾಡಿದ ಮೇಲೂ, ಜನರು ಪರಿಪೂರ್ಣ ಮತ್ತು ಆರೋಗ್ಯಕರ ಜೀವನ ನಡೆಸಬಹುದು.

 

ಆಕರಗಳು:

  1. Rashmi B. Prasad, and Leif Groop. Genetics of Type 2 Diabetes—Pitfalls and Possibilities. Genes (Basel). 2015 Mar; 6(1): 87–123. Published online 2015 Mar 12. doi: 10.3390/genes6010087 https://www.ncbi.nlm.nih.gov/pmc/articles/PMC4377835/
  2. J P H Wilding. The importance of weight management in type 2 diabetes mellitus. Int J Clin Pract. 2014 Jun; 68(6): 682–691. Published online 2014 Feb 18. doi: 10.1111/ijcp.12384  https://www.ncbi.nlm.nih.gov/pmc/articles/PMC4238418/

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.