ನಿಮ್ಮ ರಕ್ತದಲ್ಲಿರುವ ಗ್ಲೂಕೋಸ್ನ ಅಂದಾಜು ಮಟ್ಟವನ್ನು ತಕ್ಷಣದಲ್ಲಿ ಪಡೆಯಲು ಗ್ಲೂಕೋಮೀಟರ್ ಒಂದು ಅಮೂಲ್ಯ ಸಾಧನ. ಈ ಸಾಧನ ಅತ್ಯಂತ ಅಗ್ಗವಾಗಿದ್ದು ಮತ್ತು ಪರೀಕ್ಷಿಸಿಲು ಪ್ರಯೋಗಾಲಯಗಳಿಗಿಂತಲು ಹೆಚ್ಚು ಅನುಕೂಲಕರವಾಗಿರುವುದು ಮಾತ್ರವಲ್ಲದೆ ಪುನಾರವರ್ತಿತ ಪರೀಕ್ಷೆಗಳಿಗೆ ಹಾಗೂ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸ್ವಯಂ ಮೇಲ್ವಿಚಾರಣೆ ಮಾಡಲು ಅನುವು ಮಾಡಿಕೊಡುತ್ತದೆ.
ಅದಾಗ್ಯೂ, ಗ್ಲೂಕೋಮೀಟರ್ಗಳ ಬಳಕೆ ಸೀಮಿತವಾಗಿರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಿಳಿಯಲು ಗ್ಲೂಕೋಮೀಟರ್ಗಳನ್ನು ಏಕಮಾತ್ರ ಸಾಧನವಾಗಿ ಅವಲಂಬಿಸಿರಬಾರದು.
ಡಾ. ರೈ ಕ್ಲಿನಿಕ್, ಜೋಗೇಶ್ವರಿ, ಇಲ್ಲಿ ಡಾಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಪ್ರಕಾಶ್ ಟಿ ರೈ ರವರ ಪ್ರಕಾರ “ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸರಿಯಾದ ರೀತಿಯಲ್ಲಿ ನಿಯಂತ್ರಿಸುವುದರಿಂದ ಡಯಾಬಿಟಿಸ್ ಅನ್ನು ತಡೆಯಬಹುದಾಗಿದೆ. ರಕ್ತದಲ್ಲಿನ ಗ್ಲೂಕೊಸ್ ಮಟ್ಟವನ್ನು ಸ್ವಯಂ ಮೇಲ್ವಿಚಾರಣೆ (SMBG) ಮಾಡುವುದರಿಂದ ನಿಮ್ಮ ರಕ್ತದಲ್ಲಿರುವ ಸಕ್ಕರೆಯ ಮಟ್ಟದ ಬಗ್ಗೆ ನಿಮಗೊಂದು ಸಣ್ಣ ಅಂದಾಜು ಸಿಗುತ್ತದೆ, ಗ್ಲುಕೋಮೀಟರ್ನ ನಿಖರತೆ ಮತ್ತು ತಂತ್ರವನ್ನು ಖಚಿತಪಡಿಸಿಕೊಳ್ಳಲು ಇದನ್ನು ಲ್ಯಾಬ್ ಪರೀಕ್ಷೆಗಳೊಂದಿಗೆ ಹೋಲಿಕೆ ಮಾಡಿ ನೋಡಬೇಕಾಗುತ್ತದೆ. ”.
ಮೊದಲನೆಯದಾಗಿ, ಗ್ಲುಕೋಮೀಟರ್ಗಳು ಸಾಮಾನ್ಯವಾಗಿ ಹಿಂದಿನ ರಕ್ತದಲ್ಲಿನ ಗ್ಲೂಕೋಸ್ ರೀಡಿಂಗ್ಗಳನ್ನು ಉಳಿಸಿಕೊಳ್ಳುವುದಿಲ್ಲ. ಅದಾಗ್ಯೂ, ಕೆಲವು ಹೊಸ ಉಪಕರಣಗಳು ಹಿಂದಿನ ರೀಡಿಂಗ್ಗಳನ್ನು ಸಂಗ್ರಹಿಸಿರುತ್ತವೆ, ಆದರೆ ಕಾಲ ಕಳೆದಂತೆ ಅವು ಹೇಗಿದೆ ಎಂದು ಸುಲಭವಾಗಿ ವೀಕ್ಷಿಸುವ ಅವಕಾಶವಿರುವುದಿಲ್ಲ. ಇಂತಹ ಸಂದರ್ಭದಲ್ಲಿ ವೆಲ್ತಿ ಅಪ್ಲಿಕೇಶನ್ ನಿಮ್ಮ ಸಹಾಯಕ್ಕೆ ಬರುತ್ತದೆ. ಈ ಅಪ್ಲಿಕೇಶನ್ ಅನ್ನು ನಿಮ್ಮ ಸ್ಮಾರ್ಟ್ ಪೋನಿನಲ್ಲಿ ಬಳಸುವ ಮುಖಾಂತರ ಎಲ್ಲಿದ್ದರು ನೀವು ನಿಮ್ಮ ಡೇಟಾವನ್ನು ಸುಲಭವಾಗಿ ಸಂಗ್ರಹಿಸಿಡಬಹುದು ಮತ್ತು ಪಡೆಯಬಹುದಾಗಿದೆ.
ಗ್ಲುಕೋಮೀಟರ್ ನಿಮ್ಮ ರಕ್ತದಲ್ಲಿರುವ ಗ್ಲೂಕೋಸ್ (ಸಕ್ಕರೆ) ಅಂಶವನ್ನು, ನಿಮ್ಮ ಬೆರಳಿನ ಸಣ್ಣ ರಕ್ತನಾಳಗಳಿಗೆ ಚುಚ್ಚಿದರೆ ಬರುವ ರಕ್ತದ ಹನಿಯಿಂದ ಪತ್ತೆ ಹಚ್ಚುತ್ತದೆ, ಈ ವಿಧಾನದಿಂದ ನಿಮಗೆ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿದಾಗ ಸಿಗುವ ಫಲಿತಾಂಶಕ್ಕೆ ಹೋಲಿಸಿದರೆ ಅಂದಾಜು 10-20% ಅಂತರದಲ್ಲಿ ಸಾಮ್ಯತೆಯುಳ್ಳ ಫಲಿತಾಂಶ ಸಿಗುತ್ತದೆ. ಅದಾಗ್ಯೂ, ಸ್ವಯಂ ಮೇಲ್ವಿಚಾರಣೆಯ ದೃಷ್ಟಿಯಿಂದ ನೋಡುವುದಾದರೆ ಈ ಗ್ಲೂಕೊಸ್ ಮಟ್ಟವನ್ನು ಒಪ್ಪಬಹುದಾಗಿದೆ, ಒಂದು ವೇಳೆ ರೀಡಿಂಗ್ ತೀರ ಹೆಚ್ಚು ಅಥವಾ ತೀರ ಕಡಿಮೆ ಅಥವಾ ಹಳೆಯ ರೀಡಿಂಗ್ಗೆ ಹೋಲಿಸಿ ನೋಡಿದಾಗ ಭಾರಿ ವ್ಯತ್ಯಾಸ ಕಂಡುಬಂದಲ್ಲಿ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿ ಧೃಡೀಕರಿಸಿಕೊಳ್ಳಬೇಕು.
ಕೋಣೆಯ ತಾಪಮಾನ, ಎತ್ತರ, ಪಟ್ಟಿಗಳ ನಡುವಿನ ವ್ಯತ್ಯಾಸಗಳು, ಬೆರಳಿನ ಚುಚ್ಚುವಿಕೆಯಿಂದ ಬಂದ ರಕ್ತದ ಗುಣಮಟ್ಟ, ಸಾಧನದ ಸ್ಥಿತಿ ಅಥವಾ ಸ್ಟ್ರಿಪ್, ಕ್ಯಾಲಿಬ್ರೇಷನ್ ಕೋಡ್ ದೋಷಗಳು ಮುಂತಾದ ಅಂಶಗಳು ಗ್ಲುಕೋಮೀಟರ್ ಬಳಸಿ ಪಡೆದ ಅಳತೆಯ ಮೇಲೆ ಪ್ರಭಾವ ಬೀರುತ್ತವೆ.
ಗ್ಲೂಕೊಮೀಟರ್ ಎಚ್ಬಿಎ1ಸಿಯನ್ನು ಅಳೆಯುವುದಿಲ್ಲ. ಎಚ್ಬಿಎ1ಸಿ ಅಥವಾ ಗ್ಲೈಕೇಟೆಡ್ ಹಿಮೋಗ್ಲೋಬಿನ್, ಇದು ನಮಗೆ ಕಳೆದ ಎರಡು ತಿಂಗಳ ಅವಧಿಯಲ್ಲಿನ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನೀಡಿದರೆ, ಗ್ಲುಕೋಮೀಟರ್ ಆ ಕ್ಷಣದ ರಕ್ತದಲ್ಲಿನ ಗ್ಲೂಕೋಸ್ ರೀಡಿಂಗ್ ನೀಡುತ್ತದೆ. ಹೀಗಾಗಿ, ಒಬ್ಬರ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ಒಂದು ನಿರ್ದಿಷ್ಟ ಅವಧಿಯಲ್ಲಿ ಏನೆಂಬುದನ್ನು ಅರ್ಥಮಾಡಿಕೊಳ್ಳಲು ಡಾಕ್ಟರಿಗೆ ಮತ್ತು ಪರೀಕ್ಷೆಗೆ ಒಳಪಡುವ ವ್ಯಕ್ತಿ ಇಬ್ಬರಿಗೂ ಎಚ್ಬಿಎ1ಸಿ ಸಹಾಯ ಮಾಡುತ್ತದೆ.
ಆದ್ದರಿಂದ, ನಿಮ್ಮ ಗ್ಲುಕೋಮೀಟರ್ ಅನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುವುದು ಮುಖ್ಯ, ಪ್ರಯೋಗಾಲಯ ಪರೀಕ್ಷೆಗಳ ವಿರುದ್ಧ ನಿಯತಕಾಲಿಕವಾಗಿ ಅವುಗಳನ್ನು ಪರಿಶೀಲಿಸಿ, ಹಾಗೂ ಎಚ್ಬಿಎ1ಸಿಯಂತಹ ಇನ್ನಿತರೆ ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವುದರಿಂದ ನೀವು ನಿಮ್ಮ ಗ್ಲೂಕೋಸ್ ಮಟ್ಟದ ಬಗ್ಗೆ ಹೆಚ್ಚು ಅರ್ಥಮಾಡಿಕೊಳ್ಳುತ್ತೀರಿ ಮತ್ತು ವೆಲ್ತಿ ಅಪ್ಲಿಕೇಶನ್ನಂತಹ ಅಪ್ಲಿಕೇಶನ್ಗಳನ್ನು ಬಳಸಿ. ಇದು ನಿಮ್ಮ ರಕ್ತದಲ್ಲಿರುವ ಗ್ಲೂಕೋಸ್ ಅಂಶವನ್ನು ಉತ್ತಮವಾಗಿ ಪತ್ತೆ ಹಚ್ಚುವುದು ಮತ್ತು ನಿಮ್ಮ ಆರೋಗ್ಯ ಹಾಗೂ ಜೀವನಶೈಲಿಯ ಬಗ್ಗೆ ಉತ್ತಮ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.