diabetes treatment insulin myths facts
Reading Time: 2 minutes

ಸಾಮಾನ್ಯವಾಗಿ, ಡಯಾಬಿಟಿಸ್‌ನಿಂದ ಬಳಲುತ್ತಿರುವ ಜನರು ತಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಾಪಾಡಿಕೊಳ್ಳಲು ಇನ್ಸುಲಿನ್ ಬಳಸಬೇಕಾಗುತ್ತದೆ. ನಿಯಮಿತವಾಗಿ, ಚುಚ್ಚುಮದ್ದಿನಿಂದ ಚುಚ್ಚಿಕೊಳ್ಳುವುದು ಬೇಸರವೆನಿಸಬಹುದು, ಆದರೆ ಅದರ ಬಳಕೆಯ ಸುತ್ತ ಇರುವ ಕಟ್ಟುಕತೆಗಳನ್ನು ದೂರಮಾಡಿ ನೋಡಿದರೆ, ಇದರಿಂದ ಹಾರ್ಮೋನಿಗೆ ಪ್ರಮುಖವಾದ ಪ್ರಯೋಜನಗಳಿವೆ ಎಂಬುದು ತಿಳಿಯುತ್ತದೆ. ಇನ್ಸುಲಿನ್ ಬಳಕೆಯ ಬಗ್ಗೆ ಇರುವ 6 ಕಟ್ಟುಕತೆಗಳು ಇಲ್ಲಿವೆ, ಅದನ್ನು ಬಹಿರಂಗಪಡಿಸಲಾಗಿದೆ!

ಕಟ್ಟುಕತೆ 1: ಇನ್ಸುಲಿನನ್ನು ಶಿಫಾರಸು ಮಾಡಿದ್ದಾರೆ ಅಂದರೆ ಡಯಾಬಿಟಿಸನ್ನು ನಿರ್ವಹಿಸುವಲ್ಲಿ ನಾನು ಸೋತಿದ್ದೇನೆ ಎಂದರ್ಥ.

ಡಯಾಬಿಟಿಸ್, ವಿಶೇಷವಾಗಿ ಟೈಪ್ 2 ಡಯಾಬಿಟಿಸ್, ಒಂದು ಪ್ರಗತಿಶೀಲ ಕಾಯಿಲೆ. ಕೆಲವು ಸಂದರ್ಭಗಳಲ್ಲಿ ಕೆಲವೊಬ್ಬರ ಪ್ಯಾನ್‌ಕ್ರಿಯಾಸ್ ವೈದ್ಯರು ಬಯಸಿದಂತೆ ಚಿಕಿತ್ಸೆಗೆ ಸ್ಪಂದಿಸದೆ ಇರಬಹುದು. ವೈದ್ಯರು ಇನ್ಸುಲಿನನ್ನು ಶಿಫಾರಸು ಮಾಡುವುದು ಇಂತಹ ಸಂದರ್ಭದಲ್ಲೇ. ಹಾಗಾಗಿ, ಇದು ನಿಮ್ಮ ಡಯಾಬಿಟಿಸನ್ನು ನೀವು ಹೇಗೆ ನಿರ್ವಹಿಸುತ್ತಿದ್ದೀರಿ ಎಂಬುದರ ಪ್ರತಿಬಿಂಬ ಅಲ್ಲ. ಅದಕ್ಕೆ ಕಾರಣ ನಿಮ್ಮ ಪ್ಯಾನ್‌ಕ್ರಿಯಾಸ್ ನಿಮ್ಮ ದೇಹದ ಇನ್ಸುಲಿನ್ ಅಗತ್ಯಗಳನ್ನು ಪೂರೈಸುತ್ತಿಲ್ಲ ಅಷ್ಟೆ.

ಕಟ್ಟುಕತೆ 2: ಇನ್ಸುಲಿನನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ ಮೇಲೆ ನನ್ನ ಜೀವನವು ಕಷ್ಟಕರವಾಗಿರುತ್ತದೆ.

ಇದಕ್ಕಿಂತ ದೊಡ್ಡ ಸುಳ್ಳು ಇನ್ನೊಂದಿಲ್ಲ. ತಜ್ಞರ ಪ್ರಕಾರ, ಇನ್ಸುಲಿನ್ ತೆಗೆದುಕೊಳ್ಳುವುದರಿಂದ ಡಯಾಬಿಟಿಸ್‌ನಿಂದ ಬಳಲುತ್ತಿರುವ ವ್ಯಕ್ತಿಯು ತನ್ನ ಜೀವನದ ಬಗ್ಗೆ ಹೆಚ್ಚು ಸಕಾರಾತ್ಮಕ ಭಾವನೆ ಹೊಂದಲು ಮತ್ತು ಹೆಚ್ಚು ಶಕ್ತಿಯುತರಾಗಲು ಸಹಾಯ ಮಾಡುವುದಲ್ಲದೆ, ಅವರ ದೈನಂದಿನ ಚಟುವಟಿಕೆಯನ್ನು ಯಾವುದೇ ತೊಂದರೆಯಿಲ್ಲದೆ ಸುಲಭವಾಗಿ ಮಾಡಲು ಸಹಾಯ ಮಾಡುತ್ತದೆ. ಹೌದು, ಸರಿಯಾಗಿ ತಿನ್ನುವುದು ಮತ್ತು ನಿಗದಿತ ಸಮಯಕ್ಕೆ ನಿಮ್ಮ ಇನ್ಸುಲಿನನ್ನು ತೆಗೆದುಕೊಳ್ಳಲು ಸ್ವಲ್ಪ ಯೋಜನೆಯ ಅಗತ್ಯವಿರುತ್ತದೆ. ಆದರೆ ಮಾಡಬೇಕಾಗಿರುವುದು ಸಣ್ಣ ಪುಟ್ಟ ಹೊಂದಾಣಿಕೆಗಳು ಅಷ್ಟೆ. ಸಾಧ್ಯವಾದರೆ, ನಿಮ್ಮ ಊಟ ಮತ್ತು ಚಟುವಟಿಕೆಗಳನ್ನು ಸೂಕ್ತವಾಗಿ ಯೋಜಿಸುವ ವಿಧಾನಗಳ ಬಗ್ಗೆ ನಿಮ್ಮ ವೈದ್ಯರೊಂದಿಗೆ ಮಾತನಾಡಿ.

ಕಟ್ಟುಕತೆ 3: ಇನ್ಸುಲಿನ್ ತೂಕವನ್ನು ಹೆಚ್ಚಿಸುತ್ತದೆ

ನಿಮ್ಮ ದೇಹವು ಆಹಾರದಿಂದ ಪಡೆಯುವ ಶಕ್ತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಇನ್ಸುಲಿನ್ ಸಹಾಯ ಮಾಡುತ್ತದೆ. ಹಾಗಾಗಿ, ಸ್ವಲ್ಪ ಪ್ರಮಾಣದಲ್ಲಿ ತೂಕ ಹೆಚ್ಚಾಗಬಹುದು. ನಿಜ ಹೇಳಬೇಕೆಂದರೆ, ನಿಮ್ಮ ತೂಕವನ್ನು ಸಮರ್ಥವಾಗಿ ನಿರ್ವಹಿಸುವುದೇ ಡಯಾಬಿಟಿಸ್ ನಿರ್ವಹಣೆಯ ಒಂದು ಪ್ರಮುಖ ಭಾಗ, ಅದು ಅತಿಯಾದ ತೂಕದ ಹೆಚ್ಚಳವನ್ನು ಖಂಡಿಸುತ್ತದೆ.

ಕಟ್ಟುಕತೆ 4: ಇನ್ಸುಲಿನ್ ಬಳಕೆಯು ತೊಡಕುಗಳಿಗೆ ಮತ್ತು ಸಾವಿಗೆ ಕಾರಣವಾಗುತ್ತದೆ

ಇನ್ಸುಲಿನ್ ಬಳಕೆಯು ತೀವ್ರವಾದ ಮತ್ತು ಮಾರಣಾಂತಿಕ ಪರಿಣಾಮಗಳನ್ನು ಹೊಂದಿದೆ ಎಂಬ ನಂಬಿಕೆಯು, ಹಿಂದಿನ ಕುಟುಂಬ ಸದಸ್ಯರು ಅಥವಾ ಸ್ನೇಹಿತರಿಗೆ ಏನಾಯಿತು ಎಂಬುದನ್ನು ನೋಡಿರುವುದರಿಂದ ಬಂದಂತಹ ಸಾಮಾನ್ಯ ಕಟ್ಟುಕತೆ. ವಾಸ್ತವವಾಗಿ, ಇನ್ಸುಲಿನ್ ಬಳಕೆಯು ಅನಿಯಂತ್ರಿತ ಡಯಾಬಿಟಿಸ್‌ನಿಂದ ಬಳಲುತ್ತಿರುವವರಿಗೆ ಬರಬಹುದಾದ ತೊಂದರೆಗಳ ಅಪಾಯವನ್ನು ಕುಗ್ಗಿಸುತ್ತದೆ.

ಕಟ್ಟುಕತೆ 5: ಇನ್ಸುಲಿನ್ ಒಂದು ವ್ಯಸನಕಾರಿ

ಸ್ವಭಾವದಿಂದಲೇ, ಇನ್ಸುಲಿನ್ ವ್ಯಸನಕಾರಿಯಾಗಿರಲು ಸಾಧ್ಯವಿಲ್ಲ ಏಕೆಂದರೆ ಅದು ನಿಮ್ಮ ದೇಹವು ಕಾರ್ಯನಿರ್ವಹಿಸಲು ಅಗತ್ಯವಿರುವ ಒಂದು ಅಂಶ. ಇನ್ಸುಲಿನ್ ವ್ಯಸನಕಾರಿಯಾಗಬಹುದು ಎಂಬ ನಂಬಿಕೆ ಸಂಪೂರ್ಣವಾಗಿ ಆಧಾರರಹಿತವಾಗಿದೆ.

ಕಟ್ಟುಕತೆ 6: ಕೊನೆಯ ಹಂತದಲ್ಲಿ ಬಳಸುವ ಚಿಕಿತ್ಸೆಯೆ ಇನ್ಸುಲಿನ್

ಇನ್ಸುಲಿನ್ ಎನ್ನುವುದು ಅತ್ಯಂತ ಮುಂದುವರಿದ ಮತ್ತು ಗಂಭೀರವಾದ ಡಯಾಬಿಟಿಸ್ ಹೊಂದಿರುವ ರೋಗಿಗಳು ಬಳಸುವ ಚಿಕಿತ್ಸೆಯ ವಿಧಾನ ಎಂಬುದು ಸಾಮಾನ್ಯ ನಂಬಿಕೆ. ಆದರೆ, ತಜ್ಞರ ಪ್ರಕಾರ, ಇನ್ಸುಲಿನನ್ನು ಹೆಚ್ಚಾಗಿ ನಂತರದ ಹಂತಗಳಲ್ಲಿ ಶಿಫಾರಸು ಮಾಡುತ್ತಾರೆ ಏಕೆಂದರೆ ರೋಗಿಯು ಅದನ್ನು ಮೊದಲ ಹಂತಗಳಲ್ಲಿ ಬಳಸಲು ಹಿಂಜರಿದಿರುತ್ತಾರೆ. ಆದರೆ ಈಗ, ಡಯಾಬಿಟಿಸ್‌ಗೆ ಸಂಬಂಧಿಸಿದ ತೊಂದರೆಗಳನ್ನು ನಿಧಾನಗೊಳಿಸಲು ಅಥವಾ ತಡೆಗಟ್ಟಲು ಹೆಚ್ಚಿನ ವೈದ್ಯರು ಇದನ್ನು ರೋಗದ ಪ್ರಗತಿಯಲ್ಲಿ ಮೊದಲೇ ಶಿಫಾರಸು ಮಾಡುತ್ತಿದ್ದಾರೆ.

 

ಉಲ್ಲೇಖಗಳು:

  1. American Diabetes Association, Clinical Diabetes 2007 Jan; 25(1): 39-40.
  2. Diabetes: Treating the Coming Tsunami, Geralyn R. Spollett, Diabetes Spectr, 2013
  3. Pharmacotherapy of Diabetes: Past, Present, and Future: Preface, R. Keith Campbell, Diabetes Spectr, 2014
  4. Real Life With Diabetes: What Clinicians Need to Hear, Anne L. Peters et al., Medscape

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.