Reading Time: 2 minutes

ಮನೆಯಲ್ಲಿಯೇ ರಕ್ತದಲ್ಲಿನ ಗ್ಲುಕೋಸ್ ಮಟ್ಟದ ಬಗ್ಗೆ ನಿಗಾವಹಿಸುವುದು ತುಂಬಾ ಸುಲಭ. ಜೊತೆಗೆ ನಿಮ್ಮ ಡಯಾಬಿಟಿಸನ್ನು ಸರಿಯಾಗಿ ನಿಯಂತ್ರಿಸುತ್ತಿದ್ದೀರಿ ಎಂದು ತಿಳಿಯಲು ಇದುವೇ ಸರಿಯಾದ ದಾರಿ.

ಡಾ. ಕೀರ್ತಿ ಸಮುದ್ರ, ಎಂಡಿ, ಡಯಾಬಿಟಿಸ್ ಕೇರ್ ಕ್ಲಿನಿಕ್, ನ್ಯೂ ಪನ್ವೇಲ್, ಇವರ ಪ್ರಕಾರ “ರಕ್ತದಲ್ಲಿನ ಗ್ಲುಕೋಸ್ ಬಗ್ಗೆ ತಾವೇ-ನಿಗಾವಹಿಸುವುದು ಡಯಾಬಿಟಿಸ್ ನಿರ್ವಹಣೆಯಲ್ಲಿ ತುಂಬಾ ಮುಖ್ಯವಾದದ್ದು. ಇತ್ತೀಚೆಗೆ ಹೆಚ್ಚು ಹೆಚ್ಚು ರೋಗಿಗಳು ಈ ವಿಧಾನವನ್ನು ಬಳಸಲು ಶುರು ಮಾಡಿದ್ದಾರೆ. ರೋಗಿಗಳು ತೋರಿಸುವ ಮಾಹಿತಿಯ ಆಧಾರದ ಮೇಲೆ ವೈದ್ಯರು ಚಿಕಿತ್ಸೆಯನ್ನು ಬದಲಾಯಿಸುತ್ತಾರೆ, ಹಾಗಾಗಿ ಇದರಲ್ಲಿ ಯಾವುದೇ ತಪ್ಪಾಗದಂತೆ ನೋಡಿಕೊಳ್ಳಬೇಕು. ಪರೀಕ್ಷೆಯ  ಗುಣಮಟ್ಟ, ಶೇಖರಣೆ, ವಿಧಾನ, ಸಮಯ ಮತ್ತು ಗ್ಲುಕೋಮೀಟರ್ ಹಾಗೂ ಸ್ಟ್ರಿಪ್ಸ್‌ ಕುರಿತ ಎಲ್ಲಾ ಮುಖ್ಯವಾದ ಅಂಶಗಳ ಬಗ್ಗೆ ಕಾಳಜಿವಹಿಸಬೇಕು. ಕೇವಲ ಮೀಟರಿನ ವಿವರಗಳ ಮೇಲೆ ಅವಲಂಬಿತವಾಗುವುದು ಒಳ್ಳೆಯದಲ್ಲ. ಅವಾಗಾವಾಗ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸುವುದು, HbA1c ಮತ್ತು CGM ಅಥವಾ AGP ಗಳು ಡಯಾಬಿಟಿಸ್‍ನ ಸರಿಯಾದ ನಿರ್ವಹಣೆಯಲ್ಲಿ ನೆರವಾಗುತ್ತವೆ.”

ಅದಾಗ್ಯೂ, ನಿಮ್ಮ ಗ್ಲುಕೋಮೀಟರ್‌ನ ಫಲಿತಾಂಶ ಯಾವಾಗಲೂ ಸರಿಯಿಲ್ಲದಿರಬಹುದು. ಸರಿಯಿಲ್ಲದ ಫಲಿತಾಂಶಕ್ಕೆ ಕಾರಣ ಕೇವಲ ಕೆಟ್ಟ ಉಪಕರಣವಲ್ಲದೇ, ಉಪಕರಣವನ್ನು ಸರಿಯಾಗಿ ಬಳಸದಿರುವುದೂ ಆಗಿರಬಹುದು. ನಿಮ್ಮ ಮನೆಯಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಅಳೆಯುವಾಗ ನೀವು ಸಾಮಾನ್ಯವಾಗಿ ಮಾಡುವ ಕೆಲವು ತಪ್ಪುಗಳು ಇಲ್ಲಿವೆ:

  1. ಅಲ್ಕೋಹಾಲ್‍ಯುಕ್ತ ಕ್ಲೆನ್ಸರ್ ಅಥವಾ ಲೋಷನ್‍ಗಳ ಬಳಕೆ:

ಇವನ್ನು ಸೂಜಿ ಚುಚ್ಚುವ ಜಾಗದಲ್ಲಿ ಬಳಸಿದಾಗ, ರಕ್ತದ ಮಾದರಿಯನ್ನು ತೆಳ್ಳಗೆ ಮಾಡಿ, ರಕ್ತದ ಸಕ್ಕರೆಯ ಮಟ್ಟದ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತವೆ. ನಿಮ್ಮ ಬೆರಳನ್ನು ಸೂಜಿಯಿಂದ ಚುಚ್ಚುಕೊಳ್ಳುವುದಕ್ಕಿಂತ ಮುಂಚೆ ಸೋಂಕುನಿವಾರಕಗಳನ್ನು ಬಳಸಬೇಡಿ.

  1. ಹಸಿಯಾದ ಕೈಗಳು:

ನಿಮ್ಮ ಕೈಯಲ್ಲಿರುವ ಅಥವಾ ಪರೀಕ್ಷೆಯ ಸ್ಟ್ರಿಪ್‍ನಲ್ಲಿ ಇರುವ ತೇವಾಂಶ ರಕ್ತದ ಮಾದರಿಯನ್ನು ತೆಳುಗೊಳಿಸಿ ಫಲಿತಾಂಶದ ನಿಖರತೆಯ ಮೇಲೆ ಪರಿಣಾಮ ಬೀರುತ್ತದೆ.

  1. ಅಸಮರ್ಪಕ ರಕ್ತದ ಮಾದರಿ:

ಅಗತ್ಯಕ್ಕಿಂತ ಕಡಿಮೆ ರಕ್ತದ ಮಾದರಿಯನ್ನು ಪರೀಕ್ಷೆಯ ಸ್ಟ್ರಿಪ್‍ನಲ್ಲಿ ಬಳಸುವುದು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ಹಾಗಂತ, ನಿಮ್ಮ ಬೆರಳನ್ನ ಜೋರಾಗಿ ಒತ್ತಿ ಪರೀಕ್ಷೆ ಮಾಡಿಕೊಳ್ಳಲು ಹೋಗಬೇಡಿ. ಬದಲಾಗಿ, ಪರೀಕ್ಷೆಗಿಂತ ಮುಂಚೆ ನಿಮ್ಮ ಕೈಗಳನ್ನು ಚೆನ್ನಾಗಿ ತಿಕ್ಕಿಕೊಳ್ಳಿ. ಇದು ರಕ್ತದ ಹರಿಯುವಿಕೆಗೆ ಸಹಾಯ ಮಾಡುತ್ತದೆ. ಬಳಿಕ ಬೆರಳಿನ ತುದಿಗೆ ಚುಚ್ಚಿ, ನಿಮ್ಮ ಕೈಗಳನ್ನು ತೂಗುಬಿಡಿ, ಇದರಿಂದ ರಕ್ತವು ನೈಸರ್ಗಿಕವಾಗಿ ಹರಿಯುವಂತೆ ಆಗುತ್ತದೆ.

  1. ಬೆರಳನ್ನು ತುಂಬಾ ಜೋರಾಗಿ ಹಿಸುಕುವುದು:

ಒಂದು ವೇಳೆ ರಕ್ತದ ಮಾದರಿ ಕಮ್ಮಿ ಇದ್ದಾಗ, ನಿಮ್ಮ ಬೆರಳನ್ನು ತುಂಬಾ ಜೋರಾಗಿ ಹಿಸುಕುವುದರಿಂದ ಜೀವಕೋಶಗಳ ಸುತ್ತಲಿರುವ ಇಂಟರ್‌ಸ್ಟಿಶಿಯಲ್ ಎನ್ನುವ ದ್ರವವು ರಕ್ತದ ಮಾದರಿಯ ಜೊತೆ ಸೇರಿಕೊಂಡು, ನಿಮ್ಮ ರಕ್ತದ ಗ್ಲುಕೋಸ್ ಪರೀಕ್ಷೆಯ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು.

  1. ಕ್ರಮವಾಗಿ ಪರೀಕ್ಷಿಸಿಕೊಳ್ಳದಿರುವುದು:

ಒಂದು ವೇಳೆ ನೀವು ಕ್ರಮಬದ್ಧವಾಗಿ ಊಟ ಮಾಡುವ ಅಭ್ಯಾಸ ಹೊಂದಿದ್ದರೆ, ಪ್ರತಿದಿನ ನಿಯಮಿತ ಸಮಯದಲ್ಲಿ ನಿಮ್ಮ ರಕ್ತದ ಗ್ಲುಕೋಸ್ ಮಟ್ಟವನ್ನು ಪರೀಕ್ಷಿಸುವ ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ವೈದ್ಯರು ಸೂಚಿಸಿದ ಸಮಯದಲ್ಲಿ ರಕ್ತದ ಗ್ಲುಕೋಸ್ ಮಟ್ಟವನ್ನು ಪರೀಕ್ಷೆ ಮಾಡಿಕೊಂಡರೆ ಒಳ್ಳೆಯದು.

  1. ತಪ್ಪಾಗಿ ಚುಚ್ಚಿಕೊಳ್ಳುವುದು

ಲ್ಯಾನ್ಸೆಟ್ ಅನ್ನು 2.2 ಮಿಮಿಗಿಂತ ಹೆಚ್ಚಿನ ಆಳದಲ್ಲಿ ಚುಚ್ಚಿಕೊಳ್ಳಬಾರದು, ಇದು ಅಗತ್ಯಕ್ಕಿಂತ ಹೆಚ್ಚಿನ ಆಳಕ್ಕೆ ಹೋಗಿ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ಅದಲ್ಲದೇ ಇದು ಬೆರಳಿನ ಊತಕ್ಕೂ ಕಾರಣವಾಗಬಹುದು.

  1. ಪರೀಕ್ಷೆಯ ಜಾಗವನ್ನು ಆರಿಸಿಕೊಳ್ಳುವುದು

ಬೆರಳುಗಳ ಕೆಳಭಾಗದಲ್ಲಿ ಪರೀಕ್ಷಿಸಿಕೊಳ್ಳುವುದರಿಂದ ನೋವುಂಟಾಗುತ್ತದೆ, ಬಳಿಕ ಅದು ಊತಕ್ಕೆ ಕಾರಣವಾಗುತ್ತದೆ. ಬೆರಳುಗಳ ತುದಿ ಅಥವಾ ಬದಿಯಿಂದ ರಕ್ತ ತಗೆದುಕೊಳ್ಳುವುದು ಉತ್ತಮ. ಬೆರಳುಗಳನ್ನು ಹೊರತುಪಡಿಸಿ ಬೇರೆ ಕಡೆಯಿಂದ ತಗೆದುಕ್ಕೊಳ್ಳುವ ರಕ್ತದ ಮಾದರಿಗಳು ಸರಿಯಾದ ಫಲಿತಾಂಶ ನೀಡುವುದಿಲ್ಲ. ಬೇರೆ ಕಡೆಯಿಂದ ಪಡೆದ ರಕ್ತದಲ್ಲಿ, ನಿಮ್ಮ ಫಲಿತಾಂಶ ಏರಿಪೇರಾದರೆ, ಮತ್ತೊಮ್ಮೆ ಬೆರಳ ತುದಿಯಿಂದ ರಕ್ತ ಪಡೆದುಕೊಂಡು ರಕ್ತದ ಗ್ಲುಕೋಸ್ ಮಟ್ಟ ಏರುತ್ತಿದ್ದೆಯೇ ಅಥವಾ ಇಳಿಯುತ್ತಿದೆಯೇ ಎಂದು ತಿಳಿದುಕೊಳ್ಳಿ.

  1. ಪರೀಕ್ಷೆಯ ಸ್ಟ್ರಿಪ್‍ಗಳನ್ನು ಪರೀಶೀಲಿಸುವುದು

ಎಲ್ಲಾ ಗ್ಲುಕೋಮೀಟರ್‌ಗಳು ಅವಧಿ ಮುಗಿದ ಟೆಸ್ಟ್ ಸ್ಟ್ರಿಪ್‍ಗಳನ್ನು ತಿರಸ್ಕರಿಸುವುದಿಲ್ಲ. ಬದಲಾಗಿ, ಅವು ಸರಿಯಾದ ಫಲಿತಾಂಶವನ್ನು ತೋರಿಸದೇ ಇರಬಹುದು. ಸರಿಯಾದ ಫಲಿತಾಂಶಕ್ಕಾಗಿ, ಗ್ಲುಕೋಮೀಟರನ್ನು ಬಳಸುವುದಕ್ಕಿಂತ ಮುಂಚೆ ನಿಮ್ಮ ಟೆಸ್ಟ್ ಸ್ಟ್ರಿಪ್‍ಗಳು ಸರಿಯಾಗಿವೆಯೇ ಎಂದು ಪರೀಕ್ಷಿಸಿಕೊಳ್ಳಿ.

  1. ಸರಿಪಡಿಸುವಿಕೆಯ ಕ್ರಮಗಳನ್ನು ಕೈಗೊಳ್ಳದಿರುವುದು

ನಿಮ್ಮ ಪರೀಕ್ಷೆಯ ಫಲಿತಾಂಶಗಳನ್ನು ವಿಶ್ಲೇಷಿಸಿ ಮತ್ತು ಸೂಕ್ತ ಕ್ರಮಗಳನ್ನು ಕೈಗೊಳ್ಳಿ. ಒಂದು ವೇಳೆ ನಿಮ್ಮ HbA1c ಹೆಚ್ಚಿದ್ದಲ್ಲಿ ಅದು ಉಪವಾಸದ ಸಮಯದಲ್ಲಿ ಮಾಡಿರುವ ರಕ್ತದ ಗ್ಲುಕೋಸ್ ಪರೀಕ್ಷೆಯಿಂದ ಇರಬಹುದು. ಊಟವಾದ ಬಳಿಕ ಮತ್ತೊಮ್ಮೆ ಪರೀಕ್ಷಿಸಿ ಮತ್ತು ಫಲಿತಾಂಶವನ್ನು ಪರಿಶೀಲಿಸಿ.

  1. ನಿಮ್ಮ ವಸ್ತುಗಳನ್ನು ಸರಿಯಾಗಿ ಶೇಖರಿಸಿಡದೇ ಇರುವುದು

ನಿಮ್ಮ ಗ್ಲುಕೋಮೀಟರ್, ಟೆಸ್ಟ್ ಸ್ಟ್ರಿಪ್ಸ್ ಮತ್ತು ಲ್ಯಾನ್ಸೆಟ್‍ಗಳನ್ನು ಸ್ವಚ್ಛವಾದ ಮತ್ತು ಒಣ ಜಾಗದಲ್ಲಿಡಿ. ಯಾವುದೇ ರೀತಿಯ ತೇವಾಂಶ, ಹೆಚ್ಚು ಅಥವಾ ಕಡಿಮೆ ತಾಪಮಾನ ನಿಮ್ಮ ಟೆಸ್ಟ್ ಸ್ಟ್ರಿಪ್ ಮತ್ತು ಗ್ಲುಕೋಮೀಟರ್‌ನ ಮೇಲೆ ಪರಿಣಾಮ ಬೀರಬಹುದು. ಪುನಃ ಅಂಟಿಸಬಹುದಾದ ಚೀಲಗಳನ್ನು ಬಳಸಿ ನಿಮ್ಮ ವಸ್ತುಗಳನ್ನು ಒಣ ಸ್ಥಿತಿಯಲ್ಲಿಡಿ.

ಸಕ್ಕರೆ ಮಟ್ಟವನ್ನು ಅಳೆಯುವುದು ಒಂದು ರೋಗನಿರ್ಣಯ ವಿಧಾನ, ಇದು ಚಿಕಿತ್ಸೆಯ ವಿಧಾನವಲ್ಲ. ಇದು ನಿಮಗೆ ಸಮಸ್ಯೆ ಇದೆಯೇ ಎಂದು ತಿಳಿಸುತ್ತದೆಯೇ ಹೊರತು, ನಿಮ್ಮ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ನಿಮ್ಮ ಸಕ್ಕರೆಯ ಮಟ್ಟವನ್ನು ತಿಳಿದುಕೊಂಡು ಅದನ್ನು ತಹಬದಿಗೆ ತರಲು ಕ್ರಮಕೈಗೊಳ್ಳದಿದ್ದಲ್ಲಿ, ಇದು ನಿಮ್ಮ ಪರಿಸ್ಥಿತಿಯನ್ನು ನಿಯಂತ್ರಿಸಲು ಸಹರಿಸುವುದಿಲ್ಲ. ಗ್ಲುಕೋಮೀಟರ್‌ ಬಳಸಿ ರೀಡಿಂಗ್‌ಗಳನ್ನು ಪಡೆಯುವಾಗ, ತಮ್ಮ ಡಯಾಬಿಟಿಸನ್ನು ನಿಭಾಯಿಸಲು  ಆ ರೀಡಿಂಗ್‌ಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ನೀವೇ ತಿಳಿದುಕೊಳ್ಳುವುದು ತುಂಬಾ ಮುಖ್ಯ.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.