Reading Time: 2 minutes

ಡಯಾಬಿಟಿಸ್ ತಜ್ಞರನ್ನು ಮುಂದಿನ ಬಾರಿ ಕಾಣುವಾಗ, ನಿಮಗೆ ತಿಳಿದಿರಬೇಕೆಂದು ಡಾಕ್ಟರ್‌ಗಳು ಬಯಸುವ ಐದು ಸಂಗತಿಗಳನ್ನು ನವಿ ಮುಂಬೈಯಲ್ಲಿರುವ ಅಪೋಲೊ ಮತ್ತು ಫೋರ್ಟಿಸ್ ಆಸ್ಪತ್ರೆಯ ಎಂಡೋಕ್ರಿನೋಲಾಜಿಸ್ಟ್, ಡಾ. ತೇಜಲ್ ಲಥಿಯಾ, ನಮಗೆ ತಿಳಿಸಿಕೊಟ್ಟಿದ್ದಾರೆ.

ನಾನು ದಿನನಿತ್ಯ ಬಹಳಷ್ಟು ಡಯಾಬಿಟಿಕ್‌ಗಳನ್ನು ಭೇಟಿಯಾಗ್ತೀನಿ. ನಮ್ಮ ರೋಗಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಒಂದು ವಿಷಯ ಅಂದರೆ ತಪ್ಪುತಿಳುವಳಿಕೆ.

ಡಯಾಬಿಟಿಸ್‌ನಂತಹ ಸಮಸ್ಯೆಗಳು ಕಾಣಿಸಿಕೊಂಡಾಗ ಬಹಳಷ್ಟು ತಪ್ಪುಮಾಹಿತಿಗಳನ್ನು ಹರಿದಾಡುವುದು ವಿಶೇಷ ಏನಲ್ಲ. ನಮ್ಮ ಬೆರಳ ತುದಿಯಲ್ಲಿಯೇ ಈಗ ಮಾಹಿತಿಗಳು ಸಿಗುತ್ತಿರುವುದರಿಂದ, ಸತ್ಯವನ್ನು ಕಟ್ಟುಕಥೆಯೊಂದಿಗೆ ಸುಲಭವಾಗಿ ತಳುಕು ಹಾಕಬಹುದಾಗಿದೆ.

ಆದರೆ ಆರೋಗ್ಯದ ವಿಚಾರ ಬಂದಾಗ, ಸರಿಯಾದ ಮೂಲಗಳಿಂದ ಬಂದಂತಹ ಸರಿಯಾದ ಮಾಹಿತಿಗಳಷ್ಟೆ, ಆರೋಗ್ಯದಿಂದ ಮತ್ತು ಸಂತೋಷದಿಂದ ಜೀವನವನ್ನು ನಡೆಸಲು ನಮಗೆ ಸಹಾಯ ಮಾಡುವುದು. ಆ ಸಲುವಾಗಿ ನಿಮಗೆ ಸಹಾಯ ಮಾಡಲು, ನಮ್ಮ ರೋಗಿಗಳು ಸಾಮಾನ್ಯವಾಗಿ ಹೊಂದಿರುವ (ಬಹುಶಃ ನೀವು ಹೊಂದಿರಬಹುದಾದ) 5 ಅನುಮಾನಗಳನ್ನು ನಾನಿಲ್ಲಿ ಸ್ಪಷ್ಟಪಡಿಸಲು ಬಯಸುತ್ತೇನೆ:

ಡಯಾಬಿಟಿಸ್ ಔಷಧಿಗಳು ನಿಮಗೆ ತೊಂದರೆ ಕೊಡುವುದಿಲ್ಲ:

ಆದರೆ ಅನಿಯಂತ್ರಿತ ಡಯಾಬಿಟಿಸ್ ಮೆಲ್ಲಿಟಸ್ ಖಂಡಿತವಾಗಿ ತೊಂದರೆ ಕೊಡುತ್ತದೆ!

ಆರೋಗ್ಯಕರ ಆಹಾರ ತಿನ್ನಿ, ವ್ಯಾಯಾಮ ಮತ್ತು ಧ್ಯಾನದಲ್ಲಿ ಪಾಲ್ಗೊಳ್ಳಿ. ಪ್ರಾಕೃತಿಕ ಮದ್ದುಗಳಾದ ಹಾಗಲಕಾಯಿ, ಜಾಮುನ್, ದಾಲ್ಚಿನ್ನಿ (ಚಕ್ಕೆ) ಸೇರಿದಂತೆ ನಿಮ್ಮಿಷ್ಟದ ಎಲ್ಲಾ ಪರ್ಯಾಯ ಔಷಧಿಗಳನ್ನು ನೀವು ಪ್ರಯತ್ನಿಸಬಹುದು, ಆದರೆ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಆಗದಿದ್ದರೆ, ತಡ ಮಾಡದೇ ಅಲೋಪತಿ ಔಷಧಿಗಳನ್ನು ಪ್ರಾರಂಭಿಸಿ.

ಯಾವುದೇ ಅಲೋಪತಿ ಔಷಧಿಗಳು, ವಿಶೇಷವಾಗಿ ಡಯಾಬಿಟಿಸ್‌ಗೆ ಸಂಬಂಧಿಸಿದ ಔಷಧಿಗಳು ಮಾರುಕಟ್ಟೆಗೆ ಬರುವ ಮೊದಲು, ಸ್ವಇಚ್ಚೆಯಿಂದ ಬಂದ ಸಾವಿರಾರು ಮಾನವರ ಮೇಲೆ ಪ್ರಯೋಗವಾಗಿ ಸುರಕ್ಷತೆಯ ಪರೀಕ್ಷೆಗೆ ಒಳಪಟ್ಟಿರುತ್ತವೆ. ಹಾಗಾಗಿ, ಇವು ನಿಮಗೆ ಹಾನಿ ಮಾಡುವುದು ದೂರದ ಮಾತು, ಬದಲಿಗೆ ನಿಮ್ಮ ಜೀವಕ್ಕೆ ಇವು ಸಂಜೀವಿನಿ ಆಗಬಲ್ಲವು.

ಹರ್ಬಲ್ ಮತ್ತು ಅಲೋಪತಿ ಔಷಧಿಗಳನ್ನು ಬೆರೆಸುವುದು? ಈ ಕುರಿತು ನೋಡೋಣ ಬನ್ನಿ.

ಇನ್ಸುಲಿನ್ ಚಿಕಿತ್ಸೆಯು ಸಾವನ್ನು ತಂದೊಡ್ಡುವುದಿಲ್ಲ:

ರದೃಷ್ಟವಶಾತ್, ನಮ್ಮ ದೇಶದಲ್ಲಿನ ಈಗಿನ ಸನ್ನಿವೇಶ ಹೇಗಿದೆ ಎಂದರೆ, ಡಯಾಬಿಟಿಸ್ ಬಂದಾಗ ಪ್ರಾಥಮಿಕ ಹಂತದ ವರ್ಷಗಳನ್ನು ಡಯಾಬಿಟಿಸ್‌ಗೆ ಪರಿಹಾರ ಹುಡುಕುವುದರಲ್ಲಿಯೇ ಅಥವಾ ಪರ್ಯಾಯ ಔಷಧಿಗಳನ್ನು ತೆಗೆದುಕೊಳ್ಳುವುದುರಲ್ಲಿಯೇ ವ್ಯರ್ಥ ಮಾಡುತ್ತಾರೆ. ಇನ್ಸುಲಿನ್ ಚಿಕಿತ್ಸೆಯನ್ನು ಪ್ರಾರಂಭಿಸುವ ಹೊತ್ತಿಗೆ ತುಂಬಾ ತಡವಾಗಿರುತ್ತದೆ.

ಅಷ್ಟರಲ್ಲಿ ಆಗಲೇ, ರೋಗಿಯು ಕಣ್ಣು, ಕಿಡ್ನಿಯಂತಹ ಮುಂತಾದ ಅಂಗಗಳ ಸಮಸ್ಯೆಗೆ ಗುರಿಯಾಗಿರುತ್ತಾನೆ. ಇನ್ಸುಲಿನ್ ಪ್ರಾರಂಭಸಿದ ನಂತರ ಈ ಸಂಗತಿಗಳು ಬೆಳಕಿಗೆ ಬರುವ ಕಾರಣ ಇನ್ಸುಲಿನ್ ಮೇಲೆ ಆರೋಪ ಹೊರಿಸಲಾಗುತ್ತದೆ.

ಹಾಗಾಗಿ ಇದು ಇನ್ಸುಲಿನ್ ಸಮಸ್ಯೆಯಲ್ಲ, ಬದಲಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹಿಡಿತಕ್ಕೆ ತೆಗೆದುಕೊಳ್ಳದಿರುವುದೇ ಈ ಹಾನಿಗೆ ಕಾರಣವಾಗಿರುತ್ತದೆ. ಇಲ್ಲಿ ಇನ್ಸುಲಿನ್ ಪಾತ್ರ ಏನೇನೂ ಇರುವುದಿಲ್ಲ.

ಇನ್ಸುಲಿನ್ ಚಿಕಿತ್ಸೆಯ ಕುರಿತು ನಿಮಗಿರುವ ಎಲ್ಲಾ ಅನುಮಾನಗಳನ್ನು ಇಲ್ಲಿ ಬಗೆಹರಿಸಿಕೊಳ್ಳಿ.

ಡಯಾಬಿಟಿಸ್ ಇರುವವರು ಎಷ್ಟು ಬೇಕಾದರೂ ಹಣ್ಣುಗಳನ್ನು ತಿನ್ನಬಹುದು ಎಂಬುದು ಸುಳ್ಳು: ಡಯಾಬಿಟಿಸ್ ಇರುವವರು ಹಣ್ಣುಗಳನ್ನು ಎಷ್ಟು ಬೇಕಾದರೂ ತಿನ್ನಬಹುದಾಗಿದ್ದು, ಅವುಗಳಲ್ಲಿರುವ ಸಕ್ಕರೆಯಂಶವು ಫ್ರುಕ್ಟೋಸ್ ಆಗಿರುವುದರಿಂದ, ಅದನ್ನು ಹೀರಿಕೊಳ್ಳಲು ಇನ್ಸುಲಿನ್‌ನ ಅವಶ್ಯಕತೆ ಇರುವುದಿಲ್ಲ ಎಂಬ ಬಹಳಷ್ಟು ವಿಡಿಯೋ ತುಣುಕುಗಳು ಇತ್ತೀಚೆಗೆ ಎಲ್ಲೆಡೆ ಹರಿದಾಡಿ, ಜನರನ್ನು ತಪ್ಪುದಾರಿಗೆ ಎಳೆದಿವೆ.

ಇದು ಖಂಡಿತ ಸುಳ್ಳು!

ಎಲ್ಲಾ ಬಗೆಯ ಕಾರ್ಬೋಹೈಡ್ರೇಟ್‌ಗಳು ಕೊನೆಗೆ ಗ್ಲುಕೋಸ್ ಆಗಿ ಪರಿವರ್ತನೆಯಾಗುತ್ತವೆ, ಹಾಗೆಯೇ ಅದಕ್ಕೆ ತಕ್ಕಂತೆ ದೇಹದಿಂದ ಇನ್ಸುಲಿನ್ ಪ್ರತಿಕ್ರಿಯೆ ಬೇಕಿರುತ್ತದೆ. ಹಾಗಾಗಿ ಹೆಚ್ಚೆಚ್ಚು ಹಣ್ಣುಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಖಂಡಿತ ಏರಿಕೆಯಾಗುತ್ತದೆ ಮತ್ತು ರೋಗಿಗಳಿಗೆ ಹೆಚ್ಚಿನ ಸಮಸ್ಯೆಗಳನ್ನು ತಂದೊಡ್ಡುತ್ತದೆ.

ಆರೋಗ್ಯವಂತ ಮಗುವನ್ನು ಹೊಂದಲು ಗರ್ಭಿಣಿಯರು ಸಿಕ್ಕಾಪಟ್ಟೆ ತಿನ್ನಬೇಕು ಎಂಬುದು ಸುಳ್ಳು: ಆರೋಗ್ಯವಂತ ಮಗುವನ್ನು ಹೊಂದಲು ಹೆಚ್ಚು ಊಟ ಅಥವಾ ಕಡಿಮೆ ಊಟ ಮಾಡಬೇಕು ಎನ್ನುವುದಕ್ಕಿಂತಲೂ, ಸರಿಯಾಗಿ ಊಟ ಮಾಡಬೇಕು ಎಂದರೆ ಸೂಕ್ತವಾಗುತ್ತದೆ.

ಗರ್ಭಿಣಿಯರಾಗುವುದಕ್ಕೂ ಮೊದಲು ಅಥವಾ ಗರ್ಭಿಣಿಯರಾದ ಕೂಡಲೇ ಡಯಾಬಿಟಿಸ್‌ಗೆ ಒಳಗಾಗುವ ಮಹಿಳೆಯರ ಸಂಖ್ಯೆಯಲ್ಲಿ ಆತಂಕಕಾರಿ ಏರಿಕೆ ಕಂಡುಬಂದಿದೆ. ಏಕಿರಬಹುದು?

ಜಡ ಜೀವನಶೈಲಿ, ಕ್ಯಾಲರಿ ಭರಿತ ಆಹಾರಕ್ರಮ, ದಿನವಿಡೀ ಕೆಲಸದ ಒತ್ತಡ, ಡಯಾಬಿಟಿಸ್ ಇರುವ ಕುಟುಂಬ ಸದಸ್ಯರು – ಈ ಎಲ್ಲಾ ಅಂಶಗಳು ಗರ್ಭಾವಸ್ಥೆಯಲ್ಲಿ ಡಯಾಬಿಟಿಸ್ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಗರ್ಭಿಣಿ ಮಹಿಳೆಯರ ಆಹಾರವು ಸಾಕಷ್ಟು ಕ್ಯಾಲರಿಯನ್ನು ಹೊಂದಿರಬೇಕು ಜೊತೆಗೆ ಮಗುವಿನ ಆರೋಗ್ಯಕರ ಬೆಳವಣಿಗೆಗಾಗಿ ವಿಟಮಿನ್‌ಗಳು, ಖನಿಜಾಂಶಗಳು, ಮತ್ತು ಪ್ರೋಟೀನ್‌ನಿಂದ ತುಂಬಿರಬೇಕು. ಕ್ಯಾಲರಿ ಹೆಚ್ಚಾದಷ್ಟು ಡಯಾಬಿಟಿಸ್ ಅಪಾಯ ಹೆಚ್ಚಾಗುತ್ತದೆ ಅಲ್ಲದೆ ಮಗುವಿಗೆ ಕೂಡ ತೊಂದರೆಯಾಗಬಹುದು.

ಹಾಗಾಗಿ, ಮಹಿಳೆಯರು ಕಡಿಮೆ ತಿನ್ನಬೇಕು, ಹೆಚ್ಚು ವ್ಯಾಯಾಮ ಮಾಡಬೇಕು ಹಾಗೂ ಆರೋಗ್ಯದಿಂದರಬೇಕು!

ಕೊನೆಯದಾಗಿ…

ನಿಮ್ಮ ಆರೋಗ್ಯ ಸಂಬಂಧಿತ ಪ್ರಶ್ನೆಗಳಿಗೆ ಇಂಟರ್‌ನೆಟ್ ಹುಟುಕಾಟವನ್ನು ನೆಚ್ಚಿಕೊಳ್ಳಬೇಡಿ: ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುವ ಕೆಲವು ಆರೋಗ್ಯ ಸಂಬಂಧಿತ ಘಟನೆಗಳನ್ನು ನಮ್ಮನ್ನು ಕಂಗೆಡಿಸುತ್ತವೆ.

ಆದರೆ ನೆನಪಿಡಿ, ಅಂತರ್ಜಾಲಗಳಲ್ಲಿ ಹರಿದಾಡುವ ಬಹಳಷ್ಟು ಸುದ್ದಿಗಳು ಪರಿಶೀಲನೆಗೊಳಪಟ್ಟಿರುವುದಿಲ್ಲ, ಹೆಚ್ಚು ಹಂಚಿಕೆಗಳನ್ನು ಮತ್ತು ವೀಕ್ಷಣೆಗಳನ್ನು ಪಡೆಯಲು ಅಥವಾ ದಿಕ್ಕುತಪ್ಪಿಸಬೇಕೆಂದೆ ಅವುಗಳನ್ನು ಸಿದ್ಧಪಡಿಸಿರಲಾಗಿರುತ್ತದೆ. ಕೆಲವು ನಿರ್ದಿಷ್ಟ ವೆಬ್‌ಸೈಟ್‌ಗಳು ಡಯಾಬಿಟಿಸನ್ನು ಗುಣಪಡಿಸುತ್ತೇವೆ ಎಂದು ಆಶ್ವಾಸನೆ ಕೊಟ್ಟು, ಒಂದು ನಿರ್ದಿಷ್ಟ ಆಹಾರಕ್ರಮವನ್ನು, ನಿರ್ದಿಷ್ಟ ಸಪ್ಲಿಮೆಂಟ್‌ಗಳನ್ನು, ಅಥವಾ ಗಿಡಮೂಲಿಕೆ ಮದ್ದುಗಳನ್ನು ಕೊಳ್ಳಿ ಎಂದು ಹೇಳುತ್ತಿರುತ್ತವೆ.

ಇಲ್ಲೊಂದು ಅಂಶವನ್ನು ಗಮನಿಸಿ – ಈ ಚಿಕಿತ್ಸೆಗಳು ಚೆನ್ನಾಗಿ ಕೆಲಸ ಮಾಡುವುದಾದರೆ, ನಮ್ಮ ಕ್ಲಿನಿಕ್‌ಗೆ ಪ್ರತಿದಿನ ಬಹಳಷ್ಟು ರೋಗಿಗಳು ಡಯಾಬಿಟಿಸ್ ದೂರುಗಳನ್ನು ಏಕೆ ಹೊತ್ತು ತರುತ್ತಾರೆ?

ಬಹಳಷ್ಟು ಮೋಸಗಾರರು ಡಯಾಬಿಟಿಸನ್ನು ಗುಣಪಡಿಸುತ್ತೇವೆ ಎಂದು ಹೇಳಿ, ಹತಾಶೆ ಹೊಂದಿರುವ ಡಯಾಬಿಟಿಸ್ ರೋಗಿಗಳಿಂದ ಸುಲಿಗೆ ಮಾಡುತ್ತಾರೆ. ಗಿಡಮೂಲಿಕೆ, ಸಪ್ಲಿಮೆಂಟ್‌, ಹೆಲ್ತ್ ಫಾರ್ಮ್ ಹಾಗೂ ಲೆಕ್ಕವಿಲ್ಲದಷ್ಟು ಆಹಾರಕ್ರಮ ಹೇಳಿ ಸಾವಿರಾರು ರೂಪಾಯಿಗಳನ್ನು ರೋಗಿಗಳಿಂದ ಖರ್ಚು ಮಾಡಿಸುತ್ತಾರೆ ಆದರೆ ಕಾಯಿಲೆ ಮಾತ್ರ ಗುಣವಾಗದೇ ಉಳಿಯುತ್ತದೆ.

ಹಾಗಾಗಿ ಎಚ್ಚರದಿಂದಿರಿ! ಹೊಸ ಆಹಾರಕ್ರಮವನ್ನು ಅಥವಾ ಸಪ್ಲಿಮೆಂಟ್‌ಗಳನ್ನು ಪ್ರಾರಂಭಿಸುವುವ ಮೊದಲು ನಿಮ್ಮ ಡಾಕ್ಟರ್ ಬಳಿ ಒಮ್ಮೆ ಚರ್ಚಿಸಿ – ಅವರಿಗೆ ನಿಮ್ಮ ವೈದ್ಯಕೀಯ ಇತಿಹಾಸ ತಿಳಿದಿರುತ್ತದೆ ಜೊತೆಗೆ, ನಿಮ್ಮ ಡಯಾಬಿಟಿಸನ್ನು ನಿಭಾಯಿಸಲು ಏನು ಸಹಾಯಕ್ಕೆ ಬರುತ್ತದೆ ಎಂಬುದು ಕೂಡ ಅವರಿಗೆ ತಿಳಿದಿರುತ್ತದೆ.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.