Reading Time: 3 minutes

ಕೈ ಮತ್ತು ಕಾಲುಗಳಲ್ಲಿ ಜುಮ್ಮೆನಿಸಿದಂತೆ ಆಗುವುದು, ಸೂಜಿ ಚುಚ್ಚಿದಂತಾಗುವುದು, ನೋವು ಕಾಣಿಸಿಕೊಳ್ಳುವುದು ಮತ್ತು ಮರಗಟ್ಟಿದಂತಾಗುವುದು, ಡಯಾಬಿಟಿಸ್ ಇರುವವರಲ್ಲಿ ನರಗಳಿಗೆ ಹಾನಿಯಾಗಿದೆ ಎಂಬುದನ್ನು ಸೂಚಿಸುತ್ತದೆ. ಸಾಮಾನ್ಯವಾಗಿ ಇದನ್ನು ಡಯಾಬಿಟಿಕ್ ನ್ಯೂರೋಪತಿ ಎಂದು ಹೇಳುತ್ತಾರೆ. ನಿಜ ಹೇಳುವುದಾದರೆ, ನಿಮ್ಮ ದೇಹದಲ್ಲಿ ಬಹಳ ಸಮಯದಿಂದ ಅಧಿಕ ಮಟ್ಟದ ಬ್ಲಡ್ ಶುಗರ್ ಇದ್ದಾಗ ಉಂಟಾಗುವ ಡಯಾಬಿಟಿಸ್‍ನ ಸಾಮಾನ್ಯ ತೊಡಕುಗಳಲ್ಲಿ ಇದೂ ಒಂದು. 

ಡಯಾಬಿಟಿಕ್ ನ್ಯೂರೋಪತಿ ಎಂದರೇನು?

ಡಯಾಬಿಟಿಸ್‍ಗೆ ಸಂಬಂಧಿಸಿದ ನರಗಳ ಸಮಸ್ಯೆಯನ್ನು ಡಯಾಬಿಟಿಕ್ ನ್ಯೂರೋಪತಿ ಎನ್ನುತ್ತಾರೆ. ತೊಂದರೆಗೊಳಗಾದ ದೇಹದ ಭಾಗವನ್ನು ಆಧರಿಸಿ, ಡಯಾಬಿಟಿಕ್ ನ್ಯೂರೋಪತಿ ಅನ್ನು ಹೀಗೆ ವರ್ಗೀಕರಿಸಲಾಗಿದೆ:

– ಪೆರಿಫರಲ್ ನ್ಯೂರೋಪತಿ
– ಸೆನ್ಸರಿ ನ್ಯೂರೋಪತಿ
– ಆಟೋನಾಮಿಕ್ ನ್ಯೂರೋಪತಿ
– ಫೋಕಲ್ ನ್ಯೂರೋಪತಿ

ಈ ಬರಹದಲ್ಲಿ ನಾವು ಪೆರಿಫರಲ್ ನ್ಯೂರೋಪತಿ ಬಗ್ಗೆ ಇನ್ನೂ ವಿವರವಾಗಿ ಮಾತನಾಡಲಿದ್ದೇವೆ.

ಪೆರಿಫರಲ್ ನ್ಯೂರೋಪತಿ

ಪೆರಿಫರಲ್ ನ್ಯೂರೋಪತಿಯಿಂದ ಆಗುವ ಹಾನಿಯಿಂದ ನಿಮ್ಮ ತೋಳು ಮತ್ತು ಕಾಲುಗಳ ಪರಿಧಿಯಲ್ಲಿರುವ ನರಗಳು ಪ್ರಭಾವಕ್ಕೊಳಗಾಗುತ್ತವೆ ಹಾಗೂ ಇದರಿಂದ ಜುಮ್ಮೆನಿಸುವಿಕೆ, ನೋವು ಮತ್ತು ಮರಗಟ್ಟುವಿಕೆಯ ಅನುಭವ ಉಂಟಾಗುತ್ತದೆ.

ಈ ಲಕ್ಷಣಗಳು ಮೊದಲು ಪಾದದಲ್ಲಿ ಕಾಣಿಸಿಕೊಂಡು ನಂತರ ಕೈಯಲ್ಲಿ ಕಾಣಿಸಿಕೊಳ್ಳುತ್ತದೆ, ಕ್ರಮೇಣ ಇಡೀ ಕಾಲಿಗೆ ಹರಡುತ್ತದೆ. ಇದರ ಅನುಭವ ಸ್ಟಾಕಿಂಗ್ (ಸಾಕ್ಸ್) ಅಥವಾ ಗ್ಲೌಸ್ ಅನ್ನು ಹಾಕಿಕೊಳ್ಳುವ ಅನುಭವಕ್ಕೆ ಹೋಲುತ್ತದೆ. ವೈದ್ಯರು ಇದನ್ನು ‘ಸ್ಟಾಕಿಂಗ್-ಗ್ಲೋವ್’ ನಮೂನೆ ಎಂದೂ ಸಹ ಕರೆಯುತ್ತಾರೆ. ಕೆಲವರಲ್ಲಿ ಮುಟ್ಟಿದಾಗ ಆಗುವ ಸಂವೇದನೆ ತುಂಬಾ ಹೆಚ್ಚಿರುತ್ತದೆ.

ಇದಕ್ಕೆ ಚಿಕಿತ್ಸೆಯನ್ನು ತೆಗೆದುಕೊಳ್ಳದಿದ್ದರೆ, ವರ್ಷಗಳು ಕಳೆದಂತೆ ಹಾನಿಗೊಳಗಾದ ನರಗಳು ಮತ್ತಷ್ಟು ಹಾನಿಗೊಳಗಾಗಬಹುದು (10 ರಿಂದ 20 ವರ್ಷ), ಹಾಗೂ ಈ ಕೆಳಗಿನ ಹೆಚ್ಚುವರಿ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು:

– ನಿಶ್ಯಕ್ತಿ ಮತ್ತು ತಲೆಸುತ್ತುವುದು
– ಮಾಂಸಖಂಡಗಳು ಕಡಿಮೆ ಆಗಬಹುದು, ಹಾಗಾಗಿ ತೂಕದ ಇಳಿಕೆ
– ಸಮತೋಲನ ಕಳೆದುಕೊಳ್ಳುವುದು
– ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳು
– ಲೈಂಗಿಕ ಚಟುವಟಿಕೆಗೆ ಸಂಬಂಧಿಸಿದ ತೊಂದರೆಗಳು
– ಪಾದಗಳಲ್ಲಿ ಅಲ್ಸರ್ ಆಗುವುದು

ಈ ರೋಗಲಕ್ಷಣಗಳ ಬೆಳವಣಿಗೆ ಕ್ರಮೇಣವಾಗಿ ಆಗುವುದರಿಂದ, ಅವು ತೀವ್ರವಾಗುವವರೆಗೆ ಅಥವಾ ಜಟಿಲವಾಗುವವರೆಗೆ ನೀವು ಅವುಗಳನ್ನು ಗಮನಿಸದೇ ಹೋಗಬಹುದು. 

ಭಾರತದಲ್ಲಿ ಡಯಾಬಿಟಿಸ್‍ನಿಂದ ಬಳಲುತ್ತಿರುವ ಶೇ. 10.5-32.2% ರಷ್ಟು ಜನರು ಈಗಾಗಲೇ ಪೆರಿಫರಲ್ ನ್ಯೂರೋಪತಿಯಿಂದ ಬಳಲುತ್ತಿದ್ದು, ಅವರಲ್ಲಿ ಸರಿಸುಮಾರು 50% ನಷ್ಟು ಜನರು ಕಾಯಿಲೆಯ ಇರುವಂತಹ ಸಂದರ್ಭದಲ್ಲಿ ಈ ಸಮಸ್ಯೆಯನ್ನು ಬೆಳೆಸಿಕೊಳ್ಳುತ್ತಾರೆ.(1)

ಪೆರಿಫರಲ್ ನ್ಯೂರೋಪತಿಯ ಅಪಾಯ ಯಾರಿಗೆಲ್ಲ ಇದೆ?

ಒಂದು ವೇಳೆ ನೀವು ಈ ಕೆಳಗಿನ ಅಂಶಗಳನ್ನು ಹೊಂದಿದ್ದರೆ, ನೀವು ಕೂಡ ಈ ಸಮಸ್ಯೆಯನ್ನು ಹೊಂದುವ ಸಾಧ್ಯತೆ ಇರುತ್ತದೆ:

– ನಿಮ್ಮ ವಯಸ್ಸು 55 ವರ್ಷಕ್ಕಿಂತ ಹೆಚ್ಚಿದ್ದರೇ
– ಡಯಾಬಿಟಿಸ್ ಬಂದು ಬಹಳಷ್ಟು ವರ್ಷಗಳಾಗಿದ್ದರೆ
– ನಿಮ್ಮ ಬ್ಲಡ್ ಶುಗರ್ ಮಟ್ಟಗಳನ್ನು ನಿಯಂತ್ರಿಸುವಾಗ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ
– ನಿಮಗೆ ಅಧಿಕ ರಕ್ತದೊತ್ತಡವಿದ್ದರೆ
– ನಿಮ್ಮ ತೂಕ ಹೆಚ್ಚಿದ್ದರೆ

ಪೆರಿಫರಲ್ ನ್ಯೂರೋಪತಿ ಹೇಗೆ ಬೆಳವಣಿಗೆ ಹೊಂದುತ್ತದೆ?

ಪೆರಿಫರಲ್ ನ್ಯೂರೋಪತಿ ಹೇಗೆ ಬೆಳವಣಿಗೆಯಾಗುತ್ತದೆ, ಅದರ ನಿಖರವಾದ ಕಾರ್ಯವಿಧಾನ ಏನು ಎಂಬುದು ಸಂಶೋಧಕರಿಗೆ ಇನ್ನೂ ಸರಿಯಾಗಿ ತಿಳಿದುಬಂದಿಲ್ಲ. ಆದರೆ, ಅಧಿಕ ಬ್ಲಡ್ ಗ್ಲುಕೋಸ್ ಮಟ್ಟಗಳೇ ಮುಖ್ಯ ಕಾರಣ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಇತ್ತೀಚಿನ ಅಧ್ಯಯನಗಳು, ಅಧಿಕ ಬ್ಲಡ್ ಗ್ಲುಕೋಸ್ ಮಟ್ಟಗಳು ಮಾತ್ರವಲ್ಲದೆ, ಮೆಟಬಾಲಿಕ್ ಸಮಸ್ಯೆಗಳು ಮತ್ತು ರಕ್ತನಾಳಗಳಲ್ಲಿ ಆಗುವ ಬದಲಾವಣೆಗಳು, ಅಧಿಕ ರಕ್ತದೊತ್ತಡ, ಹೆಚ್ಚಿದ ದೇಹದ ಕೊಬ್ಬು ವಿಶೇಷವಾಗಿ ಸೊಂಟದ ಸುತ್ತಲಿನ ಕೊಬ್ಬು, ಮತ್ತು ಅಧಿಕ ಕೊಲೆಸ್ಟರಾಲ್ ಮಟ್ಟಗಳು ಕೂಡ ಪೆರಿಫರಲ್ ನ್ಯೂರೋಪತಿಯ ಬೆಳವಣಿಗೆಗೆ ಕೊಡುಗೆ ನೀಡಿವೆ ಎಂದು ತೋರಿಸಿವೆ.

ಇದಲ್ಲದೆ, ರಕ್ತದಲ್ಲಿ ಹೆಚ್ಚಿದ ಸಕ್ಕರೆ ಪ್ರಮಾಣವು ರಕ್ತನಾಳಗಳನ್ನು ಹಾನಿಗೊಳಿಸುತ್ತದೆ, ಇದು ಕೈ ಮತ್ತು ಕಾಲುಗಳಲ್ಲಿ ಇರುವ ನರದ ಅಂಗಾಂಶಗಳ ರಕ್ತದ ಪೂರೈಕೆಯ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ನರದ ಅಂಗಾಂಶಗಳಿಗೆ ಸರಿಯಾಗಿ ಆಮ್ಲಜನಕದ ಪೂರೈಕೆ ಆಗದೇ ಎಂದಿಗೂ ಸರಿಪಡಿಸಲಾಗದ ಹಾನಿ ಸಂಭವಿಸುತ್ತದೆ.(2)

ಪೆರಿಫರಲ್ ನ್ಯೂರೋಪತಿಯ ಆರೈಕೆ ಮತ್ತು ನಿರ್ವಹಣೆ

ದುರದೃಷ್ಟವಶಾತ್, ಡಯಾಬಿಟಿಕ್ ನ್ಯೂರೋಪತಿಗೆ ಚಿಕಿತ್ಸೆ ಇಲ್ಲ. ನಿಮ್ಮ ವೈದ್ಯರು ಕೆಲವು ರೋಗಲಕ್ಷಣಗಳಿಗೆ ಪರಿಹಾರವಾಗಿ ಔಷಧಿಗಳನ್ನು ಪ್ರಿಸ್ಕ್ರೈಬ್ ಮಾಡಬಹುದು, ಉದಾಹರಣೆಗೆ, ನೋವು ನಿವಾರಕ, ಆ್ಯಂಟಿ-ಸೀಜರ್ ಔಷಧಿಗಳು ಅಥವಾ ಆ್ಯಂಟಿಡಿಪ್ರೆಸೆಂಟ್‍ಗಳು. ಕ್ಯಾಪ್ಸೈಸಿನ್ ಕ್ರೀಮ್‌ನಂತಹ ಕ್ರೀಮ್ ಅಥವಾ ಮುಲಾಮುಗಳ ರೂಪದಲ್ಲಿರುವ ಟಾಪಿಕಲ್ ಚಿಕಿತ್ಸೆಗಳು ರೋಗಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ.

ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿರ್ವಹಿಸುವುದು ಮುಂದೆ ಆಗುವ ನರಗಳ ಹಾನಿಯನ್ನು ತಡೆಗಟ್ಟುವ ಉತ್ತಮ ಮಾರ್ಗವಾಗಿದೆ.

ಈ ಕೆಳಗಿನ ಸಲಹೆಗಳು ಸ್ಥಿತಿಯನ್ನು ನಿಯಂತ್ರಿಸಲು ಸಹ ನೆರವಾಗಬಹುದು:

– ಸಾಧ್ಯವಾದಷ್ಟು ವ್ಯಾಯಾಮ ಮಾಡಿ. ವ್ಯಾಯಾಮ ನಿಮ್ಮ ನೋವನ್ನು ನಿವಾರಿಸುವುದು ಮಾತ್ರವಲ್ಲದೆ ನಿಮ್ಮ ಮನಸ್ಥಿತಿಯನ್ನು ಕೂಡ ಸುಧಾರಿಸುತ್ತದೆ. ವಾಕ್ ಮಾಡುವುದು, ಹೂದೋಟದ ಕೆಲಸ ಮಾಡುವುದು, ಮನೆ ಕೆಲಸಗಳನ್ನು ಮಾಡಿಕೊಳ್ಳುವುದು, ಮತ್ತು ಯಾವುದೇ ಮಿತವಾದ ಚಟುವಟಿಕೆಯನ್ನು ವ್ಯಾಯಾಮ ಎಂದೇ ಪರಿಗಣಿಸಲಾಗುವುದು.
– ನಿಮ್ಮ ಪಾದಗಳನ್ನು ಚೆನ್ನಾಗಿ ನೋಡಿಕೊಳ್ಳಿ. ಪ್ರತಿ ಸಂಜೆ ನಿಮ್ಮ ಪಾದಗಳನ್ನು ಮೃದುವಾಗಿ ಸ್ವಚ್ಛಗೊಳಿಸಿ, ನಂತರ ಒಣಗಿಸಿದ ಮೇಲೆ, ಮಾಯಿಶ್ಚರೈಸರ್ ಹಚ್ಚಿರಿ. ನಿಮ್ಮ ಪಾದಗಳ ಮೇಲೆ ಕಡಿತ, ಗುಳ್ಳೆ ಅಥವಾ ಗಾಯಗಳು ಇವೆಯೇ ಎಂದು ನಿಯಮಿತವಾಗಿ ಪರಿಶೀಲಿಸಿ; ಒಂದು ವೇಳೆ ಇದ್ದು, ಅದು ಗುಣವಾಗಲು ಹೆಚ್ಚು ಸಮಯ ತೆಗೆದುಕೊಂಡರೆ ಕೂಡಲೇ ನಿಮ್ಮ ಡಾಕ್ಟರನ್ನು ಕಾಣಿ.
– ನೀವು ಡಯಾಬಿಟಿಕ್ ನ್ಯೂರೋಪತಿಯಿಂದ ಬಳಲುತ್ತಿದ್ದರೆ ಧೂಮಪಾನವಂತೂ ಮಾಡುವ ಹಾಗೆಯೇ ಇಲ್ಲ, ಏಕೆಂದರೆ ಅದರಿಂದ ಪಾದಗಳ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ. ಧೂಮಪಾನ ನೋವಿನ ಸಂವೇದನೆಯನ್ನು ಕೂಡ ಹೆಚ್ಚಿಸುತ್ತದೆ.(3)
– ಮದ್ಯಪಾನ ಕಡಿಮೆ ಮಾಡಿ.
– ಒಂದು ಜೊತೆ ಒಳ್ಳೆ ಶೂಗಳನ್ನು ಕೊಂಡುಕೊಳ್ಳಿ. ನಿಮ್ಮ ಶೂಗಳು ಆರಾಮದಾಯಕವಾಗಿರಬೇಕು ಮತ್ತು ಅದರಲ್ಲಿ ಸಾಕಷ್ಟು ಸ್ಥಳ ಇರಬೇಕು. ಹೀಲ್ಸ್ ಮತ್ತು ಫ್ಲಿಪ್-ಫ್ಲಾಪ್‍ಗಳನ್ನು ಕೊಂಡುಕೊಳ್ಳಬೇಡಿ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಆರೋಗ್ಯಕರ ಆಹಾರಕ್ರಮ ಅತ್ಯಗತ್ಯ:

– ಸಕ್ಕರೆಭರಿತ ಮತ್ತು ಕೊಬ್ಬಿನಿಂದ ತುಂಬಿರುವ ಅಹಾರಗಳನ್ನು ಮಿತವಾಗಿ ಸೇವಿಸಿ.
– ಸಣ್ಣ ಪ್ರಮಾಣದಲ್ಲಿ ತಿನ್ನಿ ಆದರೆ ಆಗಾಗ ತಿನ್ನುತ್ತಿರಿ; ದಿನದಲ್ಲಿ ಕನಿಷ್ಠ ಪಕ್ಷ 5 ಊಟಗಳನ್ನು ಸೇವಿಸಿ.
– ಸಾಕಷ್ಟು ಹಣ್ಣು ಮತ್ತು ತರಕಾರಿಗಳನ್ನು ತಿನ್ನಿ.
– ಹಣ್ಣಿನ ಜ್ಯೂಸ್‍ಗಳನ್ನು ಕುಡಿಯಬೇಡಿ ಏಕೆಂದರೆ ಅದರಲ್ಲಿ ನಾರಿನಂಶ ಕಡಿಮೆ ಇರುತ್ತದೆ ಹಾಗೂ ಸಕ್ಕರೆ ಹೆಚ್ಚಿರುತ್ತದೆ.
– ತಾಜಾ ಬೆರಿ, ಕಿತ್ತಳೆ ಹಣ್ಣು, ಮತ್ತು ಸೇಬು ಹಣ್ಣುಗಳನ್ನು ಸೀಮಿತ ಪ್ರಮಾಣಗಳಲ್ಲಿ ಸೇವಿಸುವುದು ತುಂಬ ಪ್ರಯೋಜನಕಾರಿ.
– ಆಲೂಗಡ್ಡೆ ಮತ್ತು ಜೋಳದಂತಹ ಕಾರ್ಬ್ ಹೆಚ್ಚಿರುವ ತರಕಾರಿ ಸೇವನೆಯನ್ನು ತಪ್ಪಿಸಿ, ಮತ್ತು ನಾರಿನಾಂಶ ಹೆಚ್ಚಿರುವ ಕಾರಣ ಲೆಟ್ಟುಸ್ ಅಥವಾ ಪಾಲಕದಂತಹ ಹಸಿರು ಸೊಪ್ಪನ್ನು ಸೇವಿಸಿರಿ. ಆದರೆ, ಮುಟ್ಟಲೇ ಬಾರದು ಎಂಬಂತಹ ತರಕಾರಿಗಳು ಯಾವುದು ಇಲ್ಲ.
– ಧಾನ್ಯದ ಆಹಾರಗಳಿಗೆ ಶಿಫ್ಟ್ ಆಗಿ.
– ಸಾಧ್ಯವಾದಷ್ಟು, ಚಿಪ್ಸ್, ಬಿಸ್ಕತ್ತು, ತಿನ್ನಲು ಸಿದ್ಧವಿರುವ ಆಹಾರಳಂತಹ ಸಂಸ್ಕರಿಸಿದ ಆಹಾರಗಳ ಸೇವನೆ ತಪ್ಪಿಸಿ.

ಪೆರಿಫರಲ್ ನ್ಯೂರೋಪತಿಯನ್ನು ಇನ್ನಷ್ಟು ಚೆನ್ನಾಗಿ ನಿರ್ವಹಿಸಲು, ನಿಮ್ಮ ವೈದ್ಯರು ಕೆಲವು ಚಿಕಿತ್ಸೆಗಳನ್ನು ಶಿಫಾರಸು ಮಾಡಬಹುದು:

  1. ಟ್ರಾನ್ಸ್‌ಕ್ಯುಟೇನಿಯಸ್ ಎಲೆಕ್ಟ್ರಿಕಲ್ ನರ್ವ್ ಸ್ಟಿಮುಲೇಷನ್ (TENS) ಒಂದು ವಿಧಾನವಾಗಿದ್ದು, ಇದರಲ್ಲಿ ಮೃದುವಾದ ವಿದ್ಯುತ್ ಪ್ರವಾಹವನ್ನು, ದೇಹಕ್ಕೆ ಅಂಟಿಸಿರುವ ಎಲೆಕ್ಟ್ರೋಡ್‍ಗಳ ಮೂಲಕ ಹರಿಸಲಾಗುವುದು.
  2. ನರದ ನೋವನ್ನು ನಿವಾರಿಸುವಲ್ಲಿ ಫಿಸಿಯೋಥೆರಪಿ ಕೂಡ ಸಹಕಾರಿಯಾಗಿದೆ. ಸಲಹೆಗಳಿಗಾಗಿ ನೀವು ನಿಮ್ಮ ವೈದ್ಯರೊಡನೆ ಮಾತನಾಡಬಹುದು.

ಇಷ್ಟೆ ಅಲ್ಲದೆ, ಕೆಲವು ಯೋಗಾಸನ ಭಂಗಿಗಳು ಕೂಡ ದೇಹದಲ್ಲಿ, ವಿಶೇಷವಾಗಿ ಪಾದಗಳಲ್ಲಿ, ರಕ್ತಪರಿಚಲನೆಯನ್ನು ಹೆಚ್ಚಿಸಲು ನೆರವಾಗಬಲ್ಲವು. ನಿಮಗೆ ಯೋಗದ ಬಗ್ಗೆ ಯಾವುದೇ ಅನುಭವವಿಲ್ಲದಿದ್ದರೆ, ಪ್ರಮಾಣೀಕೃತ ಯೋಗ ಶಿಕ್ಷಕರ ಮಾರ್ಗದರ್ಶನ ತೆಗೆದುಕೊಳ್ಳುವುದು ಉತ್ತಮ. ಯೋಗವು ನೋವು ನಿವಾರಣೆಗೆ ನೆರವಾಗುವುದಲ್ಲದೆ, ನಿಮ್ಮನ್ನು ಚುರುಕಾಗಿಡಲು, ಒತ್ತಡವನ್ನು ನಿವಾರಿಸಲು ಮತ್ತು ನಿಮ್ಮ ಆತ್ಮ ಜಾಗೃತಿಯನ್ನು ಹೆಚ್ಚಿಸಲೂ ನೆರವಾಗುತ್ತದೆ.

ಉಲ್ಲೇಖಗಳು:

  1. S.Trivedi, A. Pandit, A., G. Ganguly, G., & Das, S. K. (2017). Epidemiology of Peripheral Neuropathy: An Indian Perspective. Annals of Indian Academy of Neurology20(3), 173–184.
  2. M. Zychowska, E. Rojewska, B. Przewlocka, J. Mika. Mechanisms and pharmacology of diabetic neuropathy – experimental and clinical studies. Pharmacological Reports. (2013) 65, 1601-1610. ISSN 1734-1140.
  3. American Academy of Neurology. Understanding Peripheral Neurology.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.