Reading Time: 2 minutes

ಡಿಸ್ಲಿಪಿಡೀಮಿಯ ಎಂಬ ಪದವು, ರಕ್ತದಲ್ಲಿ ಸಾಮಾನ್ಯವಾಗಿ ಸರಾಸರಿಗಿಂತಲೂ ಹೆಚ್ಚು ಅಳತೆಯಲ್ಲಿ ಲಿಪಿಡ್‍ಗಳು ಇಲ್ಲವೆ ಕೊಲೆಸ್ಟರಾಲ್ ಇರುವುದನ್ನು ಸೂಚಿಸುತ್ತದೆ. ನಿಮಗೆ ಡಿಸ್ಲಿಪಿಡೀಮಿಯ ಇದ್ದರೆ, ನೀವು ಹೃದಯ ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ.(1) ಹೇಳುವ ಅಗತ್ಯವಿಲ್ಲದಿದ್ದರೂ, ನಿಮ್ಮ ಲಿಪಿಡ್ ಮಟ್ಟವನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು ಈ ಹೊತ್ತಿನಲ್ಲಿ ತುಂಬಾ ಅವಶ್ಯಕ.

ಡಿಸ್ಲಿಪಿಡೀಮಿಯಕ್ಕೆ ಸದ್ಯಕ್ಕೆ ಇರುವ ಚಿಕಿತ್ಸೆಗಳ ಬಗ್ಗೆ ನಾವಿಲ್ಲಿ ತಿಳಿಸುತ್ತೇವೆ.(1,2) ನಿಮ್ಮ ಲಿಪಿಡ್/ಕೊಲೆಸ್ಟರಾಲ್ ಮಟ್ಟವು ಸ್ವಲ್ಪ ಕೂಡ ಏರಿದ್ದರೂ, ನೀವು ನಿಮ್ಮ ಜೀವನಶೈಲಿಯಲ್ಲಿ ಮಾರ್ಪಾಡುಗಳನ್ನು ಮಾಡಬೇಕಾಗಬಹುದು. ನೆನಪಿಡಿ, ಕೊಲೆಸ್ಟರಾಲ್ ಮಟ್ಟದಲ್ಲಿ ಸಣ್ಣ ಪ್ರಮಾಣದ ಇಳಿಕೆಯಾದರೂ ಕೂಡ, ಹೃದಯ ಸಂಬಂಧಿ ರೋಗಗಳು ಬರುವ ಸಾಧ್ಯತೆ ತುಂಬ ಕಮ್ಮಿಯಾಗುತ್ತದೆ.(1)

ಜೀವನ ಶೈಲಿಯ ಮಾರ್ಪಾಡುಗಳು[1]

 • ಧೂಮಪಾನ ನಿಲ್ಲಿಸುವುದು

ಇದು ನಿಮ್ಮ ಕೊಲೆಸ್ಟರಾಲ್ ಮಟ್ಟದ ಮೇಲೆ ಪ್ರಭಾವ ಬೀರಬಲ್ಲ ಅತೀ ಮುಖ್ಯವಾದ ಅಂಶಗಳಲ್ಲೊಂದಾಗಿದೆ. ನೀವು ಧೂಮಪಾನ ಮಾಡುವವರಾದರೆ, ಅದನ್ನು ನಿಲ್ಲಿಸುವುದರ ಬಗ್ಗೆ ಗಂಭೀರವಾಗಿ ಯೋಚಿಸಿ.[2][3] ಧೂಮಪಾನ ನಿಲ್ಲಿಸಲು ನಿಮಗೆ ಹಲವಾರು ದಾರಿಗಳಿವೆ. ಇದರಿಂದ ನಿಮ್ಮ ಲಿಪಿಡ್ ಪ್ರಮಾಣವು ಸರಿದಾರಿಗೆ ಬರುವುದಲ್ಲದೆ, ನಿಮ್ಮ ಹೃದಯದ ಆರೋಗ್ಯದ ಇತರೆ ಅಂಶಗಳಾದ ರಕ್ತದೊತ್ತಡವೂ ಸ್ಥಿರಗೊಳ್ಳುತ್ತದೆ.

 • ·ಆಹಾರಕ್ರಮ ಮತ್ತು ಪೋಷಣೆ

ನೀವು ಲೋ ಕಾರ್ಬ್, ಲೋ ಫ್ಯಾ಼ಟ್, ಕ್ಯಾಲರಿ ಕೌಂಟಿಂಗ್ ಮುಂತಾದ ಹಲವಾರು ಆಹಾರಕ್ರಮಗಳನ್ನು ಅನುಸರಿಸಬಹುದು. ನೀವು ನ್ಯೂಟ್ರಿಷನಿಸ್ಟ್ ಅವರ ನೆರವನ್ನು ಕೂಡ ಪಡೆಯಬಹುದು. ಯಾವ ಆಹಾರಕ್ರಮ ತುಂಬಾ ಒಳ್ಳೆಯದು ಎನ್ನುವುದು ಚರ್ಚಾಸ್ಪದವಾದರೂ, ಆರೋಗ್ಯಕರ ಆಹಾರ ತಿನ್ನುವ ಅಭ್ಯಾಸಗಳು ಸಾಮಾನ್ಯವಾಗಿ ಕೆಲಸ ಮಾಡುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಹಾಗಿದ್ದರೆ, ಏಕೆ ನೀವು ಇಂದಿನಿಂದ ಆರೋಗ್ಯಕರ ಆಹಾರ ತಿನ್ನಬಾರದು?

 •  ತೂಕ

ತೂಕ ಇಳಿಸಿಕೊಳ್ಳುವುದು ಮತ್ತೊಂದು ಮಹತ್ವದ ಸಂಗತಿಯಾಗಿದೆ. ಇದರಿಂದ ಕೊಲೆಸ್ಟರಾಲ್ ಇಳಿಕೆಯೂ ಒಳಗೊಂಡಂತೆ, ಇನ್ನೂ ಹಲವಾರು ಪ್ರಯೋಜನಗಳಿವೆ. ತೂಕ ಇಳಿಸಿಕೊಳ್ಳುವುದು ನಿಮಗೆ ಹಿತವನ್ನು ಉಂಟುಮಾಡುವುದರ ಜೊತೆಗೆ, ನಿಮ್ಮ ಅಂದವನ್ನೂ ಹೆಚ್ಚಿಸುತ್ತದೆ.

 • ದೈಹಿಕ ಚಟುವಟಿಕೆ

ಪ್ರಮುಖವಾಗಿ ಏರೋಬಿಕ್ ವ್ಯಾಯಾಮಗಳು ಮತ್ತು ಕೆಲವು ಸ್ನಾಯು ವೃದ್ಧಿಯ ಕಸರತ್ತುಗಳಂತಹ ದೈಹಿಕ ಚಟುವಟಿಕೆಗಳನ್ನು, ವಾರದಲ್ಲಿ ಕನಿಷ್ಠ ಒಂದು ಇಲ್ಲವೆ ಎರಡು ಬಾರಿ ಮಾಡುವುದರಿಂದ ಕೊಲೆಸ್ಟರಾಲ್, ರಕ್ತದೊತ್ತಡ, ಸಕ್ಕರೆ ಕಾಯಿಲೆ ಇನ್ನೂ ಮುಂತಾದ ಹಲವಾರು ರೋಗಗಳನ್ನು ಹತೋಟಿಯಲ್ಲಿಡಬಹುದು. ಇವು ಎಷ್ಟು ಪರಿಣಾಮಕಾರಿಯೆಂದು ಮತ್ತೆ ಮತ್ತೆ ಸಾಬೀತುಪಡಿಸಿದ ಅಧ್ಯಯನಗಳಿಗೆ ಕೊರತೆಯಿಲ್ಲ. ಆದರೆ, ಕೇವಲ ಪಾರ್ಕ್‌ನಲ್ಲಿ ಸಂಜೆಯ ನಡಿಗೆ ಮಾಡಿದರೆ ಸಾಲದು; ಹಿತಮಿತವಾದ ವ್ಯಾಯಾಮಗಳಿಂದ ಹಿಡಿದು, ಬಿರುಸಾದ ವ್ಯಾಯಾಮಗಳ ತನಕ ನೀವು ಕಡಿಮೆ ಅಂದರೂ ಪ್ರತಿ ವಾರ 150 ನಿಮಿಷಗಳ ಕಾಲ ವ್ಯಾಯಾಮ ಮಾಡಬೇಕು.

 • ಒತ್ತಡ

ಆಧುನಿಕ ಜೀವನದ ಕ್ರೆಡಿಟ್‍ ಕಾರ್ಡ್‍ಗಳು, ಕಾಲೇಜಿನ ಶುಲ್ಕಗಳು, ಇಎಮ್ಐ ಇವೆಲ್ಲ ತುಂಬ ಒತ್ತಡವನ್ನು ಹೇರಿ, ನೇರವಾಗಿ ಹೃದಯದ ಆರೋಗ್ಯಕ್ಕೆ ಹಲವಾರು ಬಗೆಯಲ್ಲಿ ಹಾನಿ ಮಾಡುತ್ತವೆ. ನೀವಿನ್ನೂ ಯೋಗ, ಧ್ಯಾನ ಇಲ್ಲವೆ ಪ್ರಾಣಾಯಾಮ ಮಾಡುತ್ತಿಲ್ಲವಾದರೆ, ಮೊದಲು ಯಾವುದಾದರೊಂದನ್ನು ಶುರುಮಾಡಿ. (ಮೂರನ್ನೂ ಮಾಡಿದರೆ ತುಂಬ ಒಳ್ಳೆಯದು).

ಚಿಕಿತ್ಸೆಗಳು

 •  ಸ್ಟ್ಯಾಟಿನ್ಸ್

ಸ್ಥೂಲಕಾಯದವರಲ್ಲಿ ಇರುವ ಸಕ್ಕರೆ ಕಾಯಿಲೆ ಇಲ್ಲವೆ ಹೃದಯ ಆರೋಗ್ಯದ ವಿಷಯಕ್ಕೆ ಬಂದರೆ, ಸ್ಟ್ಯಾಟಿನ್ಸ್ ಮನೆಮಾತಾದ ಔಷಧಿ. ಈ ಔಷಧಿ, ಡಿಸ್ಲಿಪಿಡೀಮಿಯ ಚಿಕಿತ್ಸೆಯ ತಳಹದಿಯಾಗಿದೆ. ಅನಾರೋಗ್ಯಕರ ಕೊಲೆಸ್ಟರಾಲ್‌ ಅನ್ನು ಕಡಿಮೆ ಮಾಡುವಲ್ಲಿ ಇದು ತುಂಬ ಪರಿಣಾಮಕಾರಿಯಾಗಿದ್ದು, ಇದರಿಂದ ಸಮಸ್ಯೆ ಇನ್ನೂ ಜಟಿಲವಾಗುವ ಸಾಧ್ಯತೆ ಕಡಿಮೆಯಾಗುತ್ತದೆ.

 • ಕೊಲೆಸ್ಟಿರಮೀನ್, ನಿಯಾಸಿನ್ (ನಿಕೋಟಿನಿಕ್ ಆ್ಯಸಿಡ್) ಮತ್ತು ಎಜೆ಼ಟಿಮಿಬ್

ಯಾರಿಗೆಲ್ಲ ಸ್ಟ್ಯಾಟಿನ್ಸ್ ಆಗಿಬರುವುದಿಲ್ಲವೊ, ಅವರು ಮುಂದೆ ಹೇಳುವ ಕೊಲೆಸ್ಟರಾಲ್‌ ತಗ್ಗಿಸುವ ಔಷಧಿಗಳನ್ನು ಬಳಸಬಹುದು. ಕೆಲವೊಮ್ಮೆ, ಕೊಲೆಸ್ಟರಾಲ್‌ ಅನ್ನು ಕಮ್ಮಿ ಮಾಡುವುದು ಬಹಳ ಕಷ್ಟ ಆದಾಗ, ಸ್ಟ್ಯಾಟಿನ್ಸ್ ಜೊತೆಗೆ ಈ ಔಷಧಿಗಳನ್ನು ಸಹ ಸೇರಿಸಿಕೊಳ್ಳಬಹುದು.

 • ಹೊಸ ಚಿಕಿತ್ಸೆಗಳು

ವಿಜ್ಞಾನ ಪ್ರತಿದಿನ ಅಭಿವೃದ್ಧಿ ಹೊಂದುತ್ತಿದೆ ಹಾಗು ಡಿಸ್ಲಿಪಿಡೀಮಿಯ ಇರುವ ಮಂದಿಯನ್ನು ಈ ಪ್ರಕ್ರಿಯೆಯಲ್ಲಿ ಕಡೆಗಣಿಸಲಾಗಿಲ್ಲ. ಹೊಸ ಔಷಧಿಗಳನ್ನು (ಉದಾ: ಅಲಿರೊಕ್ಯುಮ್ಯಾಬ್ ಮತ್ತು ಎವೊಲೊಕ್ಯುಮ್ಯಾಬ್) ಬಿಡುಗಡೆ ಮಾಡಲಾಗಿದೆ ಹಾಗು ನೀವಿದನ್ನು ಓದುತ್ತಿರುವಂತೆ ಇತರ ಔಷಧಿಗಳು ಪರೀಕ್ಷೆಗೊಳಪಟ್ಟಿವೆ.(3) ಆದರೂ, ಈ ಔಷಧಿಗಳ ಕಟ್ಟುನಿಟ್ಟಾದ ಪ್ರಯೋಗ ಮತ್ತು ಮೌಲ್ಯಮಾಪನಕ್ಕೆ ಸಾಕಷ್ಟು ಸಮಯ ಹಿಡಿಯುತ್ತದೆ ಹಾಗು ಅವು ಅಡ್ಡ ಪರಿಣಾಮಗಳಿಂದ ಮುಕ್ತವಾಗೇನೂ ಇರುವುದಿಲ್ಲ. ಆದ್ದರಿಂದ,  ನಿಮ್ಮ ಜಿಮ್ ಸದಸ್ಯತ್ವವನ್ನು ಈಗಲೇ ನಿಲ್ಲಿಸದಿರಿ!

ನಿಮಗೆ ಅಧಿಕ ಕೊಲೆಸ್ಟರಾಲ್‌ ಸಮಸ್ಯೆ ಇದ್ದರೆ ಹತಾಶರಾಗದಿರಿ. ಅದನ್ನು ಎಚ್ಚರಿಕೆಯ ಸಂಕೇತ ಎಂದು ಪರಿಗಣಿಸಿ. ನಿಮ್ಮ ಆಲಸ್ಯದ ಜೀವನಶೈಲಿಯನ್ನು ಬದಲಾಯಿಸಿ ಹಾಗು ಅಗತ್ಯ ಬಿದ್ದಾಗ ಚಿಕಿತ್ಸೆ ಪಡೆಯಿರಿ. ಪರಿಣಾಮಕಾರಿ ಔಷಧಿಗಳು ದೊರೆಯುತ್ತವೆ, ಆದರೆ ಅವುಗಳ ಸಾಮರ್ಥ್ಯಕ್ಕೆ ಒಂದು ಮಿತಿಯಿದೆ (ಉದಾ: ಅವು ಕೇವಲ ಕೊಲೆಸ್ಟರಾಲ್‌ ಇಳಿಸುತ್ತವೆ)  ಅದೇ ಜೀವನಶೈಲಿಯ ಮಾರ್ಪಾಡುಗಳು ಸಕಲ ಪ್ರಯೋಜನಗಳನ್ನು ಒದಗಿಸುತ್ತವೆ.

ಆಕರಗಳು:

 1. Anderson TJ, Gregoire J, Pearson GJ, Barry AR, Couture P, Dawes M, et al. 2016 Canadian Cardiovascular Society guidelines for the management of dyslipidemia for the prevention of cardiovascular disease in the adult. Canadian Journal of Cardiology. 2016 Nov 1;32(11):1263-82.
 2. Carreras ET, Polk DM. Dyslipidemia: Current therapies and guidelines for treatment. US Cardiol. Rev. 2017;11:10-5.
 3. Rader DJ. New therapeutic approaches to the treatment of dyslipidemia. Cell metabolism. 2016 Mar 8;23(3):405-12.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.