Reading Time: 2 minutes

ತಜ್ಞರಿಂದ ವಿಮರ್ಶೆ – ಅಶ್ವಿನಿ ಎಸ್.ಕಾನಡೆ, ನೋಂದಾಯಿತ ಡಯಟಿಶಿಯನ್ ಮತ್ತು ಪ್ರಮಾಣೀಕೃತ ಡಯಾಬಿಟಿಸ್ ಶಿಕ್ಷಕರು. ಇವರಿಗೆ 17 ವರ್ಷಗಳ ಅನುಭವವಿದೆ

ಸತ್ಯಾಂಶ ಪರೀಕ್ಷಿಸಿದವರು – ಆದಿತ್ಯ ನಾರ್, ಬಿ.ಫಾರ್ಮ್, ಎಂ.ಎಸ್‌ಸಿ. ಸಾರ್ವಜನಿಕ ಆರೋಗ್ಯ ಮತ್ತು ಆರೋಗ್ಯ ಅರ್ಥಶಾಸ್ತ್ರ

ಡಯಾಬಿಟಿಸ್ ಎಂಬುದು ಸೈಲೆಂಟ್ ಕಿಲ್ಲರ್‌ ಆಗಿದ್ದು ಅದು ನಿಮ್ಮ ದೇಹದ ಪ್ರತಿಯೊಂದು ಅಂಗವನ್ನು ಹಾನಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಸಮಯಕ್ಕೆ ಸರಿಯಾಗಿ ಇದರತ್ತ ಗಮನಹರಿಸದೆ ಇದ್ದರೆ ಮಾರಣಾಂತಿಕವಾದ ಆರೋಗ್ಯ ಸಮಸ್ಯೆಗಳಾಗುವ ಸಾಧ್ಯತೆಗಳನ್ನು ಇದು ಹೆಚ್ಚಿಸುತ್ತದೆ.

ಆದ್ದರಿಂದ, ಆಹಾರ, ವ್ಯಾಯಾಮ ಮತ್ತು ಸಕ್ಕರೆಯ ಮಟ್ಟಗಳತ್ತ ಗಮನಹರಿಸುವುದರ ಹೊರತಾಗಿ, ಡಯಾಬಿಟಿಸ್‌ನ ಈ ಕೆಲವು ಗಂಭೀರ ಸಮಸ್ಯೆಗಳಿಗೆ ಸಂಬಂಧಿಸಿದ ಎಚ್ಚರಿಕೆ ಚಿಹ್ನೆಗಳ ಬಗ್ಗೆ ತಿಳಿದಿರುವುದು ನಿಮ್ಮ ಆರೋಗ್ಯ ಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸಲು ನೆರವಾಗುತ್ತದೆ.

ಪಾದಗಳಲ್ಲಿ ಜುಮ್ಮೆನಿಸುವಿಕೆ

ಸಕ್ಕರೆಯ ಮಟ್ಟ ಹೆಚ್ಚಾಗುವುದರಿಂದ ಕೈ ಕಾಲುಗಳ ನರಗಳಿಗೆ ಹಾನಿ ಉಂಟಾಗುತ್ತದೆ ಮತ್ತು ಡಯಾಬಿಟಿಕ್ ಪೆರಿಫೆರಲ್ ನ್ಯೂರೋಪತಿ ಎಂಬ ವ್ಯಾಧಿಗೆ ಇದು ಕಾರಣವಾಗುತ್ತದೆ. ಈ ಸಮಸ್ಯೆಯ ಆರಂಭಿಕ ಚಿಹ್ನೆಗಳಲ್ಲಿ ಬೆರಳುಗಳು ಮತ್ತು ಕಾಲ್ಬೆರಳುಗಳಲ್ಲಿ ಜುಮ್ಮೆನಿಸುವ ಭಾವನೆಯು ಒಂದು. ನಿಮಗೆ ಡಯಾಬಿಟಿಸ್ ಇದ್ದೂ, ನಿಮಗೆ ಮರಗಟ್ಟುವಿಕೆ ಅಥವಾ ಜುಮ್ಮೆನಿಸುವ ಅನುಭವವಾದರೆ, ಅದರ ಮೂಲ ಕಾರಣವನ್ನು ಪತ್ತೆ ಮಾಡಲು ನರವಿಜ್ಞಾನಿಗಳನ್ನು ಭೇಟಿ ಮಾಡಿ, ಅವರಿಂದ ಸ್ಕ್ರೀನಿಂಗ್ ಪರೀಕ್ಷೆಯನ್ನು ಪಡೆಯಿರಿ.

ಹುಣ್ಣು ಮತ್ತು ಗುಳ್ಳೆಗಳಾಗುವುದು

ಅನಿಯಂತ್ರಿತ ಡಯಾಬಿಟಿಸ್ ಹೊಂದಿರುವ ಪ್ರತಿಯೊಬ್ಬರಲ್ಲೂ ತಂತಾನೆ ಗುಳ್ಳೆಗಳು ಏಳುವುದು ವಿಭಿನ್ನವಾಗಿರುತ್ತದೆ. ಡಯಾಬಿಟಿಸ್ ಗುಳ್ಳೆಗಳು ಹೆಚ್ಚಾಗಿ ಬೆರಳುಗಳು, ಕಾಲ್ಬೆರಳುಗಳು ಮತ್ತು ಕಾಲುಗಳ ಮೇಲೆ ಕಾಣಿಸಿಕೊಳ್ಳುತ್ತವೆ. ಈ ಹುಣ್ಣುಗಳು ಮತ್ತು ಗುಳ್ಳೆಗಳಿಗೆ ಕಾರಣವೇನು ಎಂಬುದರ ಬಗ್ಗೆ ನಿರ್ದಿಷ್ಟ ವಿವರಣೆಯಿಲ್ಲ.

ಗಾಯಗಳು ಸರಿಯಾಗಿ ಗುಣವಾಗದೆ ಇರುವುದು

ಡಯಾಬಿಟಿಸ್, ಕಾಲ ಕಳೆದಂತೆ, ರಕ್ತ ಪರಿಚಲನೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಇದರಿಂದಾಗಿ ಗಾಯಗಳನ್ನು ಪರಿಣಾಮಕಾರಿಯಾಗಿ ಗುಣಪಡಿಸುವುದು ದೇಹಕ್ಕೆ ಕಷ್ಟವಾಗುತ್ತದೆ. ಇದರಿಂದ ಒಂದು ಸಣ್ಣ ಗಾಯ, ಗುಳ್ಳೆ ಹಾಗೂ ನೋವನ್ನು ಗುಣಪಡಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ, ನಿಮ್ಮ ಡಯಾಬಿಟಿಸ್ಅನ್ನು ನಿಯಂತ್ರಣಕ್ಕೆ ತರಲು ಇದು ಎಚ್ಚರಿಕೆಯ ಗಂಟೆಯಾಗಿದೆ. 

ಚರ್ಮದ ತೊಂದರೆಗಳು

ಗುಣಪಡಿಸುವ ಸಾಮರ್ಥ್ಯದ ಜೊತೆಗೆ, ಡಯಾಬಿಟಿಸ್‌ನಿಂದಾಗುವ ಕಳಪೆ ರಕ್ತ ಪರಿಚಲನೆಯಿಂದಾಗಿ ಕೂಡ ದೇಹಕ್ಕೆ ಸೋಂಕುಗಳ ವಿರುದ್ಧ ಹೋರಾಡಲು ಕಷ್ಟವಾಗುತ್ತದೆ. ಆದ್ದರಿಂದ ದೇಹದ ಯಾವುದೇ ಭಾಗದಲ್ಲಿ ಕೆಂಪಾಗುವಿಕೆ, ದದ್ದುಗಳು, ತುರಿಕೆ ಚರ್ಮ ಅಥವಾ ಉರಿಯೂತವನ್ನು ನೀವು ಗಮನಿಸಿದರೆ, ಇದು ಡಯಾಬಿಟಿಸ್‌ನ ಪರಿಣಾಮದಿಂದಾಗಿರುವ ಚರ್ಮದ ಸೋಂಕನ್ನು ಸೂಚಿಸುತ್ತದೆ.

ಪಾದಗಳಲ್ಲಿ ಊತ

ಡಯಾಬಿಟಿಕ್ ರೋಗಿಗಳಲ್ಲಿ ಊದಿಕೊಂಡ ಪಾದಗಳು ಮತ್ತು ಕಾಲುಗಳ ಸೆಳೆತವು ಡಯಾಬಿಟಿಕ್ ನೆಫ್ರೋಪತಿ ಎಂಬ ಮತ್ತೊಂದು ಗಂಭೀರ ಸಮಸ್ಯೆಯನ್ನು ಸೂಚಿಸುತ್ತದೆ. ಕಿಡ್ನಿಗಳು ದೇಹದಿಂದ ತ್ಯಾಜ್ಯ ಮತ್ತು ಹೆಚ್ಚುವರಿ ದ್ರವವನ್ನು ತೆಗೆದುಹಾಕುತ್ತವೆ. ವರ್ಷಗಳು ಕಳೆದಂತೆ ಅಧಿಕ ರಕ್ತದ ಸಕ್ಕರೆ ಪ್ರಮಾಣವು ಕಿಡ್ನಿಗಳನ್ನು ಹಾನಿಗೊಳಿಸುತ್ತದೆ ಮತ್ತು ಸರಿಯಾಗಿ ಕಾರ್ಯನಿರ್ವಹಿಸುವುದನ್ನು ತಡೆಯುತ್ತದೆ. ಇದು ದೇಹದಲ್ಲಿ ನೀರಿನ ಶೇಖರಣೆಗೆ ಕಾರಣವಾಗುತ್ತದೆ ಹಾಗೂ ಇದರಿಂದ ಪಾದಗಳಲ್ಲಿ ಊತ ಉಂಟಾಗುತ್ತದೆ. ಈ ಸ್ಥಿತಿಯು ಕೊನೆಯದಾಗಿ ಕಿಡ್ನಿ ವೈಫಲ್ಯಕ್ಕೆ ಕಾರಣವಾಗಲೂ ಬಹುದು.

ಜೀರ್ಣಕ್ರಿಯೆಯಲ್ಲಿನ ಸಮಸ್ಯೆಗಳು

ಡಯಾಬಿಟಿಸ್‌ನಲ್ಲಿ ವಾಕರಿಕೆ, ವಾಂತಿ, ಹೊಟ್ಟೆ ಉಬ್ಬುವುದು ಅಥವಾ ಅತಿಸಾರದಂತಹ ಚಿಹ್ನೆಗಳು ಜೀರ್ಣಾಂಗ ವ್ಯವಸ್ಥೆಯಲ್ಲಿ ನರಗಳ ಹಾನಿ ಅಥವಾ ಜೀರ್ಣಾಂಗ ವ್ಯವಸ್ಥೆಗೆ ಸರಿಯಾಗಿ ಆಗದ ರಕ್ತಪರಿಚಲನೆಯ ಪರಿಣಾಮದಿಂದಾಗುವ ಸೋಂಕನ್ನು ಸೂಚಿಸುತ್ತವೆ.

ದೃಷ್ಟಿ ಕುಂದುವುದು

ಡಯಾಬಿಟಿಸ್ ಇರುವ ಜನರಲ್ಲಿ ಡಯಾಬಿಟಿಕ್ ರೆಟಿನೋಪತಿ ಹೆಚ್ಚುತ್ತಿರುವ ಸಮಸ್ಯೆಯಾಗಿದ್ದು, ಕುಂದಿದ ಅಥವಾ ಮಸುಕಾದ ದೃಷ್ಟಿಯ ಲಕ್ಷಣಗಳನ್ನು ನಿರ್ಲಕ್ಷಿಸಲಾಗುತ್ತಿತ್ತು.[1] ಡಯಾಬಿಟಿಸ್ ರೋಗಿಗಳಲ್ಲಿ ರಕ್ತ ಪರಿಚಲನೆಯ ಮೇಲೆ ಉಂಟಾಗುವ ಕೆಟ್ಟ ಪರಿಣಾಮವು ತೀವ್ರವಾಗುತ್ತಿದ್ದಂತೆ, ಇದು ಕಣ್ಣುಗಳಲ್ಲಿನ ರಕ್ತನಾಳಗಳನ್ನು ಸಹ ಹಾನಿಗೊಳಿಸುತ್ತದೆ. ಚಿಕಿತ್ಸೆ ನೀಡದೆ ಬಿಟ್ಟರೆ, ಈ ಸಮಸ್ಯೆಯು ಕಣ್ಣಿನ ಪೊರೆ, ಗ್ಲೌಕೋಮಾ ಮತ್ತು ಸಂಪೂರ್ಣ ದೃಷ್ಟಿ ನಷ್ಟಕ್ಕೆ ಕಾರಣವಾಗಬಹುದು.

ಎದೆ ನೋವು

ಹೃದ್ರೋಗವು ಡಯಾಬಿಟಿಸ್‌ನ ಸಾಮಾನ್ಯ ಸಮಸ್ಯೆಗಳ ಪೈಕಿ ಒಂದಾಗಿದೆ.[1,2] ಆರಂಭದಲ್ಲಿ ಇದು  ಎದೆ ನೋವಿನ ಲಕ್ಷಣಗಳನ್ನು ತೋರದೆ ಇರಬಹುದು. ಆದರೂ ಸಹ ಈ ಎಚ್ಚರಿಕೆಯನ್ನು ನಿರ್ಲಕ್ಷಿಸುವಂತಿಲ್ಲ. ನಿಮ್ಮ ಎದೆ ನೋವಿನೊಂದಿಗೆ ಭಾರ ಅಥವಾ ಉಸಿರಾಟದ ತೊಂದರೆಯನ್ನು ಅನುಭವಿಸಿದರೆ, ಅದು ನಿಜಕ್ಕೂ ಶೋಚನೀಯ ಸ್ಥಿತಿ, ಅಲ್ಲದೇ ನೀವು ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸಬೇಕಾಗಬಹುದು. ಇದು ನಿಮ್ಲಲ್ಲೇ ಹೆಚ್ಚುತ್ತಿರುವ ಹೃದ್ರೋಗದ ಎಚ್ಚರಿಕೆಯ ಸಂಕೇತವಾಗಿರಬಹುದು.  

ಉಲ್ಲೇಖಗಳು:

[1]. Levin, M. E., & Pfeifer, M. A. (2009). The uncomplicated guide to diabetes complications. Alexandria, VA: American Diabetes Association.

[2]. Deshpande, A. D., Harris-Hayes, M., & Schootman, M. (2008). Epidemiology of Diabetes and Diabetes-Related Complications. Physical Therapy, 88(11), 1254–1264. http://doi.org/10.2522/ptj.20080020

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.