Reading Time: 3 minutes

ಸರ್ಟಿಫೈಡ್ ಡಯಾಬಿಟಿಸ್ ಎಜುಕೇಟರ್ ಆಗಿ 17 ವರ್ಷಗಳ ಅನುಭವ ಇರುವ ರಿಜಿಸ್ಟರ್ಡ್ ಡಯಟೀಶಿಯನ್ ಅಶ್ವಿನಿ ಎಸ್.ಕಾನಡೆ ಅವರು ನುರಿತ-ವಿಮರ್ಶೆ ಮಾಡಿದ್ದಾರೆ.

ದೇಹದ ಜೀವಕೋಶಗಳಿಗೆ ಬೇಕಾದ ಶಕ್ತಿ ರಕ್ತದಲ್ಲಿರುವ ಗ್ಲುಕೋಸಿನಿಂದ ಸಿಗುವುದು, ಜೀವಕೋಶಗಳು ಈ ಗ್ಲುಕೋಸನ್ನು ಹೀರಿಕೊಳ್ಳಲು ಮೇದೋಜ್ಜೀರಕ ಗ್ರಂಥಿ ಉತ್ಪಾದಿಸುವ ಇನ್ಸುಲಿನ್ ನೆರವಾಗುವುದು. ಡಯಾಬಿಟಿಸ್‌ನಲ್ಲಿ, ಒಂದೋ ದೇಹಕ್ಕೆ ಬೇಕಾಗುವಷ್ಟು ಇನ್ಸುಲಿನ್ ಉತ್ಪಾದಿಸಲು ಮೇದೋಜ್ಜೀರಕ ಗ್ರಂಥಿಗೆ ಸಾಧ್ಯವಾಗುವುದಿಲ್ಲ, ಇಲ್ಲವೇ ದೇಹದ ಜೀವಕೋಶಗಳು ಇನ್ಸುಲಿನ್‌ಗೆ ಸರಿಯಾಗಿ ಸ್ಪಂದಿಸುವುದಿಲ್ಲ, ಇದರಿಂದಾಗಿ ಅವಕ್ಕೆ ಗ್ಲುಕೋಸನ್ನು ಹೀರಿಕೊಳ್ಳಲು ಆಗುವುದಿಲ್ಲ. ಈ ಎರಡೂ ಸಂದರ್ಭಗಳಲ್ಲಿ ರಕ್ತದಲ್ಲಿನ ಗ್ಲುಕೋಸ್ ಬೇರೆಲ್ಲೂ ಹೋಗಲಾಗದೇ ರಕ್ತದಲ್ಲೇ ಹೆಚ್ಚುತ್ತಾ ಹೋಗುವುದು; ಹಾಗಾಗಿ, ಗ್ಲುಕೋಸ್ ರಕ್ತದಲ್ಲಿಯೇ ಉಳಿದು ಅಧಿಕ ರಕ್ತದ ಗ್ಲೂಕೋಸ್ ಅಥವಾ ಅಧಿಕ ರಕ್ತದ ಸಕ್ಕರೆ ಮಟ್ಟಕ್ಕೆ ಕಾರಣವಾಗುತ್ತದೆ.

ನಿಮ್ಮ ಸರಳವಾದ ಹಾಗೂ ದೈನಂದಿನ ಚಟುವಟಿಕೆಗಳಾದ ಅತಿಯಾದ ಕೆಫೀನ್ ಕುಡಿಯುವುದು ಹಾಗು ನಿಮ್ಮ ಮುಟ್ಟಿನ ದಿನಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತೀವ್ರವಾಗಿ ಹೆಚ್ಚಿಸಬಹುದು ಎಂದು ನಿಮಗೆ ತಿಳಿದಿದೆಯೇ?

ಶ್ರೀಮತಿ ಶೆರ್ಲಿ ಗಣೇಶ್, ನ್ಯೂಟ್ರಿಶನ್ & ಡಯೆಟಿಶಿಯನ್, ಕೊಲಂಬಿಯಾ ಏಷ್ಯಾ ಆಸ್ಪತ್ರೆ – ಹೆಬ್ಬಾಳ, ಬೆಂಗಳೂರು, ಕರ್ನಾಟಕ, ಇವರು ಸುಮಾರು 8 ದೈನಂದಿನ ಚಟುವಟಿಕೆಗಳ ಕುರಿತು ತಿಳಿಸುತ್ತಾರೆ, ಜೊತೆಗೆ ಇವು ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೇಗೆ ಹೆಚ್ಚಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ನೆರವಾಗುತ್ತಾರೆ.

 1. ಬೆಳಗಿನ ಉಪಾಹಾರವನ್ನು ಸೇವಿಸದಿರುವುದು:

ಬೆಳಗಿನ ಉಪಹಾರವನ್ನು ಸೇವಿಸದೆ ಮಧ್ಯಾಹ್ನದ ತನಕ ಉಪವಾಸ ಇರುವವರಲ್ಲಿ, ದಿನವಿಡೀ ರಕ್ತದಲ್ಲಿನ ಸಕ್ಕರೆ ಮಟ್ಟ ಮೇಲೇರಿರುತ್ತದೆ.(1) ಒಂದು ಅಧ್ಯಯನದಲ್ಲಿ, ಟೈಪ್ 2 ಡಯಾಬಿಟಿಸ್ ಹೊಂದಿರುವ 22 ರೋಗಿಗಳು ತಮ್ಮ ಬೆಳಗಿನ ಉಪಹಾರವನ್ನು ಸೇವಿಸದ ಕಾರಣ, ಮಧ್ಯಾಹ್ನ ಹಾಗು ರಾತ್ರಿಯ ಊಟದ ಬಳಿಕ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿನ ರಕ್ತದ ಸಕ್ಕರೆ ಮಟ್ಟವನ್ನು ಹೊಂದಿದ್ದರು ಎಂದು ಕಂಡುಬಂದಿದೆ.

 1. ಹೆಚ್ಚಿನ ಪ್ರಮಾಣದಲ್ಲಿ ಬಿಳಿ ಅಕ್ಕಿಯ ಆಹಾರವನ್ನು ಸೇವಿಸುವುದು:

ವಾರದಲ್ಲಿ ಐದು ಅಥವಾ ಹೆಚ್ಚು ಸಲ ಬಿಳಿ ಅಕ್ಕಿಯ ಅನ್ನವನ್ನು ಸೇವಿಸುವ ಜನರಿಗೆ ಟೈಪ್ 2 ಡಯಾಬಿಟಿಸ್ ಹೊಂದುವ ಅಪಾಯ ಹೆಚ್ಚಿರುತ್ತದೆ ಎಂದು ಅಧ್ಯಯನವೊಂದರಲ್ಲಿ ಗುರುತಿಸಲಾಗಿದೆ.(2) ಇದಕ್ಕೆ ವಿರುದ್ಧವಾಗಿ, ತಾವು ಸೇವಿಸುವ ಮೂರನೇ ಒಂದು ಭಾಗದಷ್ಟು ಬಿಳಿ ಅನ್ನದ ಬದಲು ಬ್ರೌನ್‌ ರೈಸ್‌ ಸೇವಿಸುವವರು ತಮ್ಮ ಡಯಾಬಿಟಿಸ್ ಅಪಾಯವನ್ನು ಶೇಕಡ 16 ರಷ್ಟು ಕಡಿಮೆ ಮಾಡಿಕೊಳ್ಳುತ್ತಾರೆ.

ಬಿಳಿ ಅಕ್ಕಿಯಲ್ಲಿ ವೇಗವಾಗಿ-ಕಾರ್ಯನಿರ್ವಹಿಸುವ ಕಾರ್ಬೋಹೈಡ್ರೇಟ್‌ಗಳು ಹೆಚ್ಚಾಗಿರುತ್ತವೆ ಹಾಗು ಫೈಬರ್ ಕಡಿಮೆ ಇರುತ್ತದೆ; ಇದರರ್ಥ ಬಿಳಿ ಅನ್ನವನ್ನು ನಾವು ತಿಂದಾಗ, ಅದು ನಮ್ಮ ರಕ್ತದಲ್ಲಿನ ಗ್ಲುಕೋಸ್ ಉತ್ಪತ್ತಿಯ ವೇಗವನ್ನು ಹೆಚ್ಚಿಸುತ್ತದೆ ಎಂದಾಗಿದೆ. ಆದರೆ ಸಂಪೂರ್ಣವಾಗಿ ಈ ಅಕ್ಕಿಯಿಂದ ತಯಾರಿಸಿದ ಆಹಾರ ಸೇವನೆಯನ್ನು ನಿಲ್ಲಿಸುವ ಅಗತ್ಯವಿಲ್ಲ. ಒಂದು ಕಪ್‌ನ ಮೂರನೇ ಒಂದು ಭಾಗದಷ್ಟು ಅಕ್ಕಿಯಲ್ಲಿ 15 ಗ್ರಾಂ ಕಾರ್ಬೋಹೈಡ್ರೇಟ್ ಇರುತ್ತದೆ ಎಂಬುದನ್ನು ನೆನಪಿನಲ್ಲಿಡಿ, ಹಾಗು ಒಂದು ಊಟಕ್ಕೆ 45-60 ಗ್ರಾಂ ಕಾರ್ಬೋಹೈಡ್ರೇಟ್‌ಗಳು ಇರಬೇಕೆಂಬುದು ಸಾಮಾನ್ಯ ಶಿಫಾರಸ್ಸಾಗಿದೆ.

 1. ಧೂಮಪಾನ:

ಧೂಮಪಾನವು ಅದರ ಸಾಮಾನ್ಯ ಹಾನಿಕಾರಕ ಪರಿಣಾಮಗಳ ಹೊರತಾಗಿ, ನಿಮ್ಮ ದೇಹವು ಇನ್ಸುಲಿನ್‌ಗೆ ಸ್ಪಂದಿಸದಂತೆ ಇರಲು ಕಾರಣವಾಗುತ್ತದೆ. ಇದಲ್ಲದೇ ಹೃದಯ ರೋಗದ ಸಾಧ್ಯತೆಯನ್ನು ಸಹ ಹೆಚ್ಚಿಸುತ್ತದೆ.

 1. ಕೆಫಿನ್ ಇರುವ ಕಾಫಿಯನ್ನು ಅತಿಯಾಗಿ ಕುಡಿಯುವುದು:

ಕೆಫಿನ್ ಇರುವ ಕಾಫಿ ಅಥವಾ ಡಿಕೆಫಿನೇಟೆಡ್ ಕಾಫಿ ಕುಡಿಯುವುದರಿಂದ ಡಯಾಬಿಟಿಸ್ ಬರುವ ಅಪಾಯವನ್ನು ಶೇಕಡ 8 ರಷ್ಟು ಕಡಿಮೆ ಮಾಡಬಹುದು ಎಂದು ಸಂಶೋಧನೆ ಹೇಳುತ್ತದೆ.(3) ಕೆಫಿನನ್ನು ಹಿತಮಿತವಾಗಿ ಸೇವಿಸಿವುದರಿಂದ, ಸಾಮಾನ್ಯವಾಗಿ ಅದು ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹಾಗೆಯೇ, ಯುವ ಹಾಗು ಆರೋಗ್ಯವಂತ ವಯಸ್ಕರರು ಒಂದು ದಿನಕ್ಕೆ 400 ಮಿಲಿಗ್ರಾಂನಷ್ಟು ಕೆಫಿನ್ ಸೇವಿಸುವುದರಿಂದ ಯಾವುದೇ ತೊಂದರೆಯಿಲ್ಲ. ಆದಾಗ್ಯೂ, ಟೈಪ್ 2 ಡಯಾಬಿಟಿಸ್ ಹೊಂದಿರುವವರು ದೀರ್ಘಕಾಲದವರೆಗೆ ಡಿಕೆಫಿನೇಟೆಡ್ ಕಾಫಿ ಸೇವಿಸಿದಾಗ, ಅವರ ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಸಾಮರ್ಥ್ಯ ಹಾಗು ಊಟದ ನಂತರದ ಇನ್ಸುಲಿನ್ ಸ್ಪಂದನೆ ದುರ್ಬಲಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.(4)

 1. ಮುಟ್ಟು:

ಋತುಚಕ್ರವನ್ನು ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಎಂಬ ಹಾರ್ಮೋನುಗಳು ನಿಯಂತ್ರಿಸುತ್ತವೆ, ಇದು ಇನ್ಸುಲಿನ್‌ನ ತಾತ್ಕಾಲಿಕ ಪ್ರತಿರೋಧಕ್ಕೆ ಕಾರಣವಾಗಬಹುದು. ಆದ್ದರಿಂದ, ನಿಮ್ಮ ಮುಟ್ಟಿನ ಅವಧಿಯ ಮೊದಲು ಅಥವಾ ಮೂರರಿಂದ ಐದು ದಿನಗಳವರೆಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣದಲ್ಲಿ ಹೆಚ್ಚಳವನ್ನು ನೀವು ಗಮನಿಸಬಹುದು. ಇದು ತಿಂಗಳಿಂದ ತಿಂಗಳಿಗೆ ಬೇರೆಯಾಗಿರುತ್ತದೆ ಮತ್ತು ಸ್ಥಿರವಾಗಿರುವುದಿಲ್ಲ, ಅಥವಾ ಬದಲಾಗಬಹುದು ಹಾಗು ಕೆಲವರಿಗೆ ತೊಂದರೆಗಳನ್ನು ಹೆಚ್ಚಿಸಬಹುದು.

 1. ಒತ್ತಡ ಅಥವಾ ಅತಿಯಾದ ದೈಹಿಕ ಚಟುವಟಿಕೆ:

ಒತ್ತಡ ಅಥವಾ ಅತಿಯಾದ ದೈಹಿಕ ಚಟುವಟಿಕೆಯಂತಹ ಸಂದರ್ಭಗಳಲ್ಲಿ ದೇಹವು ಕಾರ್ಟಿಸೋಲ್ ಮತ್ತು ಅಡ್ರಿನಾಲಿನನ್ನು ಕ್ರಮವಾಗಿ ಬಿಡುಗಡೆ ಮಾಡುತ್ತದೆ. ಇವೆರಡೂ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪ್ರಭಾವ ಬೀರಿ ಅದನ್ನು ಹೆಚ್ಚಿಸುತ್ತವೆ.

 1. ಶೀತ ಅಥವಾ ಜ್ವರ ಮುಂತಾದ ಕಾಯಿಲೆ:

ಕಾಯಿಲೆ ಅಥವಾ ಜ್ವರವನ್ನು ಎದುರಿಸಲು ದೇಹ ಉತ್ಪತ್ತಿಸುವ ಹಾರ್ಮೋನುಗಳಿಂದ ಸಹ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಹೆಚ್ಚಾಗುವುದು ಹಾಗಾಗಿ ಒಂದು ಬಗೆಯಲ್ಲಿ ಕಾಯಿಲೆಗಳು ಕೂಡ ಸಕ್ಕರೆ ಮಟ್ಟವನ್ನು ಏರಿಸುತ್ತವೆ.

 1. ನಿದ್ರೆಯನ್ನು ಮಾಡದಿರುವುದು:

ನಿಮ್ಮ ದೇಹವು ಸಾಕಷ್ಟು ನಿದ್ರೆ ಪಡೆಯದಿದ್ದರೆ ಅಥವಾ ನೀವು ನಿದ್ರೆಯನ್ನು ಮಾಡದಿದ್ದರೆ, ಅದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನೀವು ತಡರಾತ್ರಿ ಜಾಸ್ತಿ ಎಚ್ಚರವಾಗಿರುವುದರಿಂದ, ನಿಮ್ಮ ದೇಹವು ಕಾರ್ಟಿಸೋಲ್ ಎಂಬ ಹಾರ್ಮೋನನ್ನು ಹೆಚ್ಚು ಉತ್ಪಾದಿಸುತ್ತದೆ, ಇದು ನಮಗೆ ಈಗಾಗಲೇ ತಿಳಿದಿರುವಂತೆ ರಕ್ತದಲ್ಲಿನ ಸಕ್ಕರೆಯ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ.(5)

ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ, ಆದ್ದರಿಂದ ಆರೋಗ್ಯದ ವಿಷಯದಲ್ಲಿ ಯಾವುದೇ ಆಶ್ಚರ್ಯಕರವಾದ ತೊಡಕುಗಳು ಉಂಟಾಗದಿರಲು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತಪ್ಪದೇ ನಿಯಮಿತವಾಗಿ ನೋಡಿಕೊಳ್ಳುತ್ತಿರಿ.

ಉಲ್ಲೇಖ:

 1. Daniela Jakubowicz, Julio Wainstein, Bo Ahren, Zohar Landau, Yosefa Bar-Dayan and Oren Froy. Fasting Until Noon Triggers Increased Postprandial Hyperglycemia and Impaired Insulin Response After Lunch and Dinner in Individuals With Type 2 Diabetes: A Randomized Clinical Trial. Diabetes Care 2015 Jul; dc150761. https://doi.org/10.2337/dc15-0761
 2. Qi Sun, MD, ScD; Donna Spiegelman, ScD; Rob M. van Dam. White Rice, Brown Rice, and Risk of Type 2 Diabetes in US Men and Women. Arch Intern Med. 2010;170(11):961-969. doi:10.1001/archinternmed.2010.109. https://jamanetwork.com/journals/jamainternalmedicine/fullarticle/416025
 3. Huxley R1, Lee CM, Barzi F, Timmermeister L, Czernichow S, Perkovic V, Grobbee DE. Coffee, decaffeinated coffee, and tea consumption in relation to incident type 2 diabetes mellitus: a systematic review with meta-analysis. Arch Intern Med. 2009 Dec 14;169(22):2053-63. doi: 10.1001/archinternmed.2009.439. https://www.ncbi.nlm.nih.gov/pubmed/20008687/
 4. Moisey LL1, Kacker S, Bickerton AC, Robinson LE, Graham TE. Caffeinated coffee consumption impairs blood glucose homeostasis in response to high and low glycemic index meals in healthy men. Am J Clin Nutr. 2008 May;87(5):1254-61. https://www.ncbi.nlm.nih.gov/pubmed/18469247
 5. Kristen L Knutson. Impact of sleep and sleep loss on glucose homeostasis and appetite regulation. Sleep Med Clin. 2007 Jun; 2(2): 187–197. doi: 10.1016/j.jsmc.2007.03.004.  https://www.ncbi.nlm.nih.gov/pmc/articles/PMC2084401/

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.