Fruits to reduce high blood pressure-hypertension
Reading Time: 2 minutes

ಹಣ್ಣುಗಳಲ್ಲಿ ದೇಹಕ್ಕೆ ಅತಿಮುಖ್ಯವಾದ ಜೀವಸತ್ವಗಳು ಮತ್ತು ಖನಿಜಗಳು ಇರುತ್ತವೆ. ಇವು ನಿಮ್ಮ ಆರೋಗ್ಯವನ್ನು ಸುಧಾರಿಸುವಲ್ಲಿ ನೆರವಾಗುವುದು, ಹಾಗಾಗಿ ಹಣ್ಣುಗಳು ನಿಮ್ಮ ದೈನಂದಿನ ಆಹಾರಕ್ರಮದ ಪ್ರಮುಖ ಭಾಗವಾಗಿರುವುದು ಅತ್ಯಗತ್ಯ.1

ಮೇಲೆ ತಿಳಿಸಿರುವ ಈ ಮಾಹಿತಿಯನ್ನು ನಾವು ಚಿಕ್ಕಂದಿನಿಂದಲೇ ಕೇಳಿದ್ದೇವೆ ಹಾಗಾಗಿ ಈ ಮಾತು ಹಳೆಯದು ಎಂದು ಎನಿಸಿಬಹುದು, ಆದರೆ ನಮ್ಮ ಆರೋಗ್ಯಕ್ಕೆ ಹಣ್ಣುಗಳಿಂದಾಗುವ ಪ್ರಯೋಜನದ ಅರಿವಾದಾಗ, ಈ ಮಾತನ್ನು ನಿರ್ಲಕ್ಷಿಸಲು ಸಾಧ್ಯವಾಗುವುದಿಲ್ಲ. ಅಧಿಕ ರಕ್ತದೊತ್ತಡದ ಸಮಸ್ಯೆ ಇರುವವರು ಹಣ್ಣುಗಳನ್ನು ತಿನ್ನುವುದರಿಂದ, ಅದು ಅವರ ರಕ್ತದೊತ್ತಡವನ್ನು ಕುಗ್ಗಿಸಲು ನೆರವಾಗುತ್ತದೆ. ಹಾಗಾಗಿ, ಈ ಬರಹದಲ್ಲಿ ಈಗಾಗಲೇ ತಿಳಿದಿರುವ ವಿಚಾರವನ್ನು ಪುನರಾವರ್ತಿಸುವ ಬದಲಾಗಿ, “ರಕ್ತದೊತ್ತಡದವನ್ನು ಹತ್ತಿರ ಸುಳಿಯದಂತೆ ಮಾಡಲು ಹಣ್ಣುಗಳು ಹೇಗೆ ನೆರವಾಗುತ್ತವೆ?” ಅಂದರೆ ಹಣ್ಣುಗಳನ್ನು ತಿನ್ನುವುದರಿಂದ ರಕ್ತದೊತ್ತಡ ಹೇಗೆ ಕಡಿಮೆಯಾಗುತ್ತದೆ, ಇದರಿಂದ ಆರೋಗ್ಯಕರ ಆಹಾರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವಂತೆ ಪ್ರೋತ್ಸಾಹ ಹೇಗೆ ಸಿಗುತ್ತದೆ, ಎಂಬ ವಿಷಯದ ಕುರಿತು ಹೆಚ್ಚು ಒತ್ತು ನೀಡಲಾಗಿದೆ.2

ಈ ವಿಷಯವನ್ನು ಅರ್ಥಮಾಡಿಕೊಳ್ಳಲು, ಅಧಿಕ ತಕ್ತದೊತ್ತಡಕ್ಕೆ ಕಾರಣ “ಏನು” ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳೋಣ.  

ಅಧಿಕ ರಕ್ತದೊತ್ತಡಕ್ಕೆ ಕಾರಣವೇನು?

ರಕ್ತನಾಳದ ಗೋಡೆಗಳ ಮೇಲೆ ರಕ್ತವು ಸಾಮಾನ್ಯ ಒತ್ತಡಕ್ಕಿಂತ ಹೆಚ್ಚಿನ ಒತ್ತಡ ಹೇರಿದಾಗ, ಅಧಿಕ ರಕ್ತದೊತ್ತಡದ ಸಮಸ್ಯೆ ಉಂಟಾಗುತ್ತದೆ. ಈ ಸಮಸ್ಯೆಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಮಾಡದಿದ್ದರೆ, ಹೃದಯಾಘಾತ ಹಾಗೂ ಪಾರ್ಶ್ವವಾಯುವಿನ ಅಪಾಯ ಹೆಚ್ಚಾಗಬಹುದು.3 ಉಪ್ಪನ್ನು ಹೆಚ್ಚಾಗಿ ಸೇವಿಸುವುದು ಕೂಡ ಅಧಿಕ ರಕ್ತದೊತ್ತಡಕ್ಕೆ ಪ್ರಮುಖ ಕಾರಣವಾಗಬಹುದು.4 ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುವ ಇನ್ನೊಂದು ಜೈವಿಕ ಅಂಶವೆಂದರೆ, ದೇಹದಲ್ಲಿ ಹೆಚ್ಚುವರಿ ನೀರು ಉಳಿಯುವುದು. ಮೂತ್ರದ ಮೂಲಕ ಹೆಚ್ಚುವರಿ ನೀರನ್ನು ದೇಹದಿಂದ ಹೊರಹಾಕುವಲ್ಲಿ ಮೂತ್ರಪಿಂಡಗಳು ಪಾತ್ರ ಮಹತ್ವವಾಗಿದೆ. ಮೂತ್ರಪಿಂಡಗಳು ರಕ್ತದಲ್ಲಿರುವ ಹೆಚ್ಚುವರಿ ನೀರನ್ನು ಹೊರಹಾಕಲು, ರಕ್ತದಲ್ಲಿನ ಪೊಟ್ಯಾಶಿಯಮ್ ಮತ್ತು ಸೋಡಿಯಮ್‌ ಸಮತೋಲನದಲ್ಲಿರುವುದು ಅತ್ಯಗತ್ಯ.5  

ಪೊಟ್ಯಾಶಿಯಮ್‌ನಲ್ಲಿ ಏರುಪೇರು  

ರಕ್ತದಲ್ಲಿರುವ ಈ ಎರಡು ಪೋಷಕಾಂಶಗಳಲ್ಲಿ ಯಾವುದಾದರೂ ಒಂದು ಪೋಷಕಾಂಶದಲ್ಲಿ ವ್ಯತ್ಯಾಸವಾದರೂ ಸಹ ಸೋಡಿಯಮ್-ಪೊಟ್ಯಾಶಿಯಮ್ ಸಮತೋಲನದಲ್ಲಿ  ಏರುಪೇರಾಗುತ್ತದೆ. ಈ ಏರುಪೇರಿನಿಂದ, ಹೆಚ್ಚುವರಿ ನೀರನ್ನು ಹೊರಹಾಕುವ ಮೂತ್ರಪಿಂಡಗಳ ಸಾಮರ್ಥ್ಯ ಕಡಿಮೆಯಾಗಬಹುದು, ಆಗ ದೇಹದಲ್ಲಿ ಉಳಿದುಕೊಂಡ ಹೆಚ್ಚುವರಿ ನೀರು ರಕ್ತದಲ್ಲಿ ಸೇರಬಹುದು. ಇದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ.5

ರಕ್ತದಲ್ಲಿ ಸಾಕಷ್ಟು ಪೊಟ್ಯಾಶಿಯಮ್ ಇಲ್ಲದಿರುವಾಗ, ಅಧಿಕ ರಕ್ತದೊತ್ತಡದ ಅಪಾಯ ಹೆಚ್ಚಾಗುತ್ತದೆ. ಇದು ಮುಂದೆ, ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಬಹುದು. ನಿಮ್ಮ ಆಹಾರಕ್ರಮಕ್ಕೆ ಪೊಟ್ಯಾಶಿಯಮ್ ಹೇರಳವಾಗಿರುವ ಆಹಾರವನ್ನು ಸೇರಿಸುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಅಧಿಕ ರಕ್ತದೊತ್ತಡ ಇರುವವರು ಸಾಕಷ್ಟು ಹಣ್ಣುಗಳನ್ನು ತಿನ್ನದೇ ಇರುವುದು, ಅವರ ರಕ್ತದಲ್ಲಿ ಪೊಟ್ಯಾಶಿಯಮ್‌ನ ಕೊರತೆ ಉಂಟಾಗಲು ಪ್ರಮುಖ ಕಾರಣವಾಗಿದೆ.6

ದೇಹಕ್ಕೆ ಪೋಟ್ಯಾಶಿಯಮ್ ಲಭ್ಯವಾಗುವ ನೈಸರ್ಗಿಕವಾದ ಒಂದೊಳ್ಳೆಯ ಮೂಲ ಎಂದರೆ ಹಣ್ಣುಗಳು. ಸಾಕಷ್ಟು ಹಣ್ಣುಗಳನ್ನು ತಿನ್ನುವುದರಿಂದ ರಕ್ತದಲ್ಲಿ ಪೊಟ್ಯಾಶಿಯಮ್ ಮಟ್ಟ ಹೆಚ್ಚುತ್ತದೆ, ಇದು ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರಲ್ಲಿ, ಸೋಡಿಯಮ್-ಪೊಟ್ಯಾಶಿಯಮ್ ಅನ್ನು ಹಿಂದಿನಂತೆ ಸರಿದೂಗಿಸಲು ನೆರವಾಗುತ್ತದೆ. ಆಗ, ರಕ್ತದೊತ್ತಡವು ನಿಯಂತ್ರಣಕ್ಕೆ ಬರುತ್ತದೆ.7 

ಡಿಎಎಸ್‌ಎಚ್ ಆಹಾರಕ್ರಮ8, ಇದೊಂದು ಅಧಿಕರಕ್ತದೊತ್ತಡವನ್ನು ಕಡಿಮೆ ಮಾಡುವ ಆಹಾರಕ್ರಮ, ಈ ಆಹಾರಕ್ರಮದಲ್ಲಿ, ದಿನಕ್ಕೆ 4 ರಿಂದ 5 ಬಾರಿ ಹಣ್ಣುಗಳನ್ನು ತಿನ್ನುವಂತೆ ಸೂಚಿಸಲಾಗಿದೆ. ಒಂದು ಬಾರಿಗೆ ತಿನ್ನುವ ಹಣ್ಣುಗಳ ಪ್ರಮಾಣ ಈ ಕೆಳಗಿನಂತಿದೆ:

  • 1 ಮಧ್ಯಮ ಗಾತ್ರದ ಹಣ್ಣಿನ ಹೋಳು
  • ½ ಕಪ್ ಪೂರ್ವಸಿದ್ಧವಾಗಿರುವ ಅಥವಾ ಕತ್ತರಿಸಿದ ಹಣ್ಣು
  • ½ ಕಪ್ ಹಣ್ಣಿನ ರಸ 
  • ¼ ಕಪ್ ಒಣ ಹಣ್ಣು

ಹಣ್ಣಿನ ರಸಕ್ಕಿಂತ(ಜ್ಯೂಸ್) ಹಣ್ಣನ್ನು ಬಳಸುವುದು ಒಳ್ಳೆಯದು ಎಂದು ಈ ಆಹಾರಕ್ರಮದಲ್ಲಿ ಸೂಚಿಸಲಾಗಿದೆ.8

ಎಲ್ಲಾ ಹಣ್ಣುಗಳಿಂದಲೂ ಪೊಟ್ಯಾಶಿಯಮ್ ಸಿಗುತ್ತದೆ, ಆದರೆ ಕೆಲವೊಂದು ಹಣ್ಣುಗಳಲ್ಲಿ ಪೊಟ್ಯಾಶಿಯಮ್ ಸಮೃದ್ಧವಾಗಿರುತ್ತವೆ, ಹಾಗೂ ಇಂತಹ ಹಣ್ಣುಗಳನ್ನು ಪೊಟ್ಯಾಶಿಯಮ್ ಕೊರತೆಯನ್ನು ನೀಗಿಸಲು ನಿಯಮಿತವಾಗಿ ತಿನ್ನಬಹುದಾಗಿದೆ. ಪೊಟ್ಯಾಶಿಯಮ್ ಹೇರಳವಾಗಿರುವ ಹಣ್ಣುಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ:

  • ಬಾಳೆಹಣ್ಣು
  • ಕಿತ್ತಳೆ ಹಣ್ಣು
  • ಏಪ್ರಿಕಾಟ್ ಹಣ್ಣು9
  • ಕರೆಂಟ್ ಹಣ್ಣು2
  • ಟೊಮ್ಯಾಟೋ, ಟೊಮ್ಯಾಟೋ ರಸ
  • ಒಣದ್ರಾಕ್ಷಿ ಮತ್ತು ಖರ್ಜೂರ9

ಹಣ್ಣುಗಳು ಹೆಚ್ಚು ಪರಿಣಾಮಕಾರಿಯಾಗಿ ರಕ್ತದೊತ್ತಡವನ್ನು ಕಡಿಮೆ ಮಾಡಲು, ನೀವು ತಿನ್ನುವ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡಿ.2 ಪ್ಯಾಕ್ ಮಾಡಿರುವ ಹಾಗೂ ಸಂಸ್ಕರಿಸಿದ ಆಹಾರವನ್ನು ಮಿತಗೊಳಿಸಿ, ಏಕೆಂದರೆ ಇಂತಹ ಆಹಾರ ಪದಾರ್ಥಗಳಲ್ಲಿ ಸೋಡಿಯಮ್ ಹೆಚ್ಚಾಗಿರುತ್ತದೆ.10

ಹಣ್ಣುಗಳು ರಕ್ತದೊತ್ತಡವನ್ನು ಹೇಗೆ ಕಡಿಮೆ ಮಾಡುತ್ತವೆ ಎಂದು ಅರ್ಥಮಾಡಿಕೊಳ್ಳುವುದು ಜ್ಞಾನವಾದರೇ, ರಕ್ತದೊತ್ತಡವನ್ನು ಹಿಡಿತದಲ್ಲಿಟ್ಟುಕೊಳ್ಳಲು ಹಣ್ಣುಗಳನ್ನು ನಿಯಮಿತವಾಗಿ ತಿನ್ನುವ ಅಭ್ಯಾಸ ಮಾಡಿಕೊಳ್ಳುವುದು ವಿವೇಕ. 


ಉಲ್ಲೇಖಗಳು:

  1. Better Health Channel. Fruit and vegetables [Internet]. [updated 2011 Sep; cited 2019 Nov 20]. Available from: https://www.betterhealth.vic.gov.au/health/healthyliving/fruit-and-vegetables.
  2. Blood Pressure UK. Potassium rich fruits help to lower blood pressure [Internet]. [cited 2019 Nov 20]. Available from: http://www.bloodpressureuk.org/microsites/salt/Home/Howtoeatmorepotassium/Fruit.
  3. Familydoctor.org. High blood pressure [Internet]. [updated 2017 Oct 27; cited 2019 Nov 20]. Available from: https://familydoctor.org/condition/high-blood-pressure/.
  4. Heart Foundation. Managing high blood pressure [Internet]. [cited 2019 Nov 20]. Available from: https://www.heartfoundation.org.nz/wellbeing/managing-risk/managing-high-blood-pressure.
  5. Blood Pressure UK. Why potassium helps to lower blood pressure [Internet]. [cited 2019 Nov 20]. Available from: http://www.bloodpressureuk.org/microsites/salt/Home/Whypotassiumhelps.
  6. Centres for Disease Control and Prevention. The role of potassium and sodium in your diet [Internet]. [updated 2018 Jun 29; cited 2019 Nov 20]. Available from: https://www.cdc.gov/salt/potassium.htm.
  7. Blood Pressure UK. How fruits and vegetables help to lower your blood pressure [Internet]. [cited 2019 Nov 20]. Available from: http://www.bloodpressureuk.org/microsites/AfricanCaribbean/Home/Healthyeating/Fruitandveg.
  8. CardioSmart. Healthy eating: The DASH diet [Internet]. [cited 2019 Nov 20]. Available from: https://www.cardiosmart.org/~/media/Documents/Fact%20Sheets/en/zx1344.ashx.
  9. American Heart Association. How potassium can help control high blood pressure [Internet]. [updated 2016 Oct 31; cited 2019 Nov 20]. Available from: https://www.heart.org/en/health-topics/high-blood-pressure/changes-you-can-make-to-manage-high-blood-pressure/how-potassium-can-help-control-high-blood-pressure.
  10. AARP. Potassium: The secret weapon for lower blood pressure [Internet]. [updated 2018 Feb 27; cited 2019 Nov 20]. Available from: https://www.aarp.org/health/conditions-treatments/info-2018/blood-pressure-potassium-fd.html.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.