heart health diet fruits
Reading Time: 2 minutes

“ಹೆಚ್ಚಾದರೆ ಅಮೃತ ಕೂಡಾ ವಿಷ ಆಗುವುದು” ಎಂದು ಗಾದೆ ಹೇಳುತ್ತದೆ. ನಿಮ್ಮ ಕುಟುಂಬದ ವೈದ್ಯರ ಅನಿಸಿಕೆ ಕೂಡ ಅದೆ.

ಕಂಜೆಸ್ಟಿವ್ ಹಾರ್ಟ್ ಫೈಲ್ಯೂರ್‌ನಿಂದ ಬಳಲುತ್ತಿರುವ 10 ಜನರಲ್ಲಿ ಸುಮಾರು 4 ಜನರಲ್ಲಿ ಹೈಪರ್‌ಕಲೇಮಿಯಾ ಎಂಬ ಸಮಸ್ಯೆ ಉಂಟಾಗುತ್ತದೆ.[1] ಹೈಪರ್ ಎಂದರೆ ಹೆಚ್ಚು ಮತ್ತು ಕಲೇಮಿಯಾ ಎಂದರೆ ಪೊಟ್ಯಾಸಿಯಮ್ (ಇದರ ಚಿಹ್ನೆ ‘K’), ಇದರರ್ಥ ಅಧಿಕ ಪೊಟ್ಯಾಸಿಯಮ್. ಹೆಚ್ಚು ಪೊಟ್ಯಾಸಿಯಮ್ ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.

ಪೊಟ್ಯಾಸಿಯಮ್ ನಿಮ್ಮ ಹೃದಯದ ಕೆಲಸಕ್ಕೆ ಅಗತ್ಯವಿರುವ ರಾಸಾಯನಿಕಗಳಲ್ಲಿ ಒಂದು; ನಿಮ್ಮ ದೇಹದಲ್ಲಿನ ನೀರಿನ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಲು ಪೊಟ್ಯಾಸಿಯಮ್ ಅತ್ಯಗತ್ಯ. ಹೆಚ್ಚು ಪೊಟ್ಯಾಸಿಯಮ್ ನಿಮ್ಮ ದೇಹದ ಕಾರ್ಯಚಟುವಟಿಕೆಯನ್ನು ಅಡ್ಡಿಪಡಿಸಿ, ನಿಮ್ಮ ಮೂತ್ರಪಿಂಡದ ಕಾರ್ಯ ಮತ್ತು ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತದೆ, ಇದರಿಂದಾಗಿ ನೀವು ದುರ್ಬಲರಾಗುತ್ತೀರಿ.[2]

ಇಂತಹದೊಂದು ಜಟಿಲವಾದ ಸ್ಥಿತಿಗೆ ಕಾರಣವೇನು?

ಹೃದಯ ಮತ್ತು ಮೂತ್ರಪಿಂಡಗಳ ನಡುವೆ ಒಂದು ಕ್ರಿಯಾತ್ಮಕ ಸಂಬಂಧವಿದೆ. ಹೃದಯ ಮತ್ತು ಮೂತ್ರಪಿಂಡಗಳು ಮೂಲತಃ ಪರಸ್ಪರರನ್ನು ಸ್ವಲ್ಪ ಮಟ್ಟಿಗೆ ವಿರೋಧಿಸುತ್ತವೆ. ಮೂತ್ರಪಿಂಡಗಳು ದೇಹದಲ್ಲಿನ ಎಲೆಕ್ಟ್ರೋಲೈಟ್ ಸಮತೋಲನವನ್ನು, ಮೂತ್ರದ ಮೂಲಕ ಹೊರಹಾಕುವ ನೀರು ಮತ್ತು ಉಪ್ಪಿನ ಪ್ರಮಾಣವನ್ನು ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಮೂಲಕ ನಿರ್ವಹಿಸುತ್ತದೆ. ಹೃದಯವು ಪಂಪ್ ಮಾಡಬೇಕಾದ ರಕ್ತದಲ್ಲಿನ ನೀರಿನ ಪ್ರಮಾಣ ನೇರವಾಗಿ ಹೃದಯದ ಮೇಲೆ ಪರಿಣಾಮ ಬೀರುತ್ತದೆ. ರಕ್ತದಲ್ಲಿ ನೀರಿನ ಪ್ರಮಾಣ ಹೆಚ್ಚಾದಷ್ಟು, ಪಂಪ್ ಮಾಡಬೇಕಾದರೆ ಹೃದಯಕ್ಕೆ ಹೆಚ್ಚು ಹೊರೆ ಬೀಳುತ್ತದೆ. ವಿಫಲವಾದ ಹೃದಯವನ್ನು ನಿರ್ವಹಿಸಲು, ವೈದ್ಯರು ‘ನೀರಿನ ಗುಳಿಗೆ’ ಸೂಚಿಸುತ್ತಾರೆ. ಈ ಗುಳಿಗೆಗಳು ಮೂತ್ರದ ರೂಪದಲ್ಲಿ ಹೊರಹಾಕಲ್ಪಡುವ ನೀರಿನ ಪ್ರಮಾಣವನ್ನು ಹೆಚ್ಚಿಸುತ್ತವೆ; ಆದಾಗ್ಯೂ, ಇದು ರಕ್ತದಲ್ಲಿನ ಹೆಚ್ಚುವರಿ ಪೊಟ್ಯಾಸಿಯಮ್‌ಗೆ ಕಾರಣವಾಗಬಹುದು.

ಹೆಚ್ಚಿದ ಪೊಟ್ಯಾಸಿಯಮ್ ಹೃದಯದ ಮೇಲೆ ವೇಗವಾಗಿ ಪರಿಣಾಮ ಬೀರುತ್ತದೆ ಮತ್ತು ಅನಿಯಮಿತ ಹೃದಯದ ಬಡಿತಗಳು, ಪಾರ್ಶ್ವವಾಯು, ವಾಕರಿಕೆ ಮತ್ತು ಸ್ನಾಯುವಿನ ಆಯಾಸಕ್ಕೆ ಕಾರಣವಾಗುತ್ತದೆ. [1,2]

ಹೆಚ್ಚು ಕಡಿಮೆ ಎಲ್ಲ ಹಣ್ಣುಗಳು ಮತ್ತು ತರಕಾರಿಗಳು ಆರೋಗ್ಯಕರ ಪ್ರಮಾಣದ ಪೊಟ್ಯಾಸಿಯಮನ್ನು ಹೊಂದಿರುತ್ತವೆ. ನಿಮ್ಮ ದೇಹದಲ್ಲಿ ಪೊಟ್ಯಾಸಿಯಮ್‌ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವಂತಹ ಸರಿಯಾದ ಹಣ್ಣುಗಳು ಇಲ್ಲಿವೆ!

ನಿಮ್ಮ ಆಹಾರಕ್ರಮದಲ್ಲಿ ನೀವು ಸೇರಿಸಬಹುದಾದ ಹಣ್ಣುಗಳ ಪಟ್ಟಿ ಇಲ್ಲಿದೆ:

  1. ಕಲ್ಲಂಗಡಿ: ಒಂದು ಕಪ್ ಕಲ್ಲಂಗಡಿ ನಿಮ್ಮ ಸಂಜೆಯ ತಿಂಡಿಯ ಸಮಯದಲ್ಲಿ ನಿಮಗೆ ತಾಜಾತನವನ್ನು ನೀಡುತ್ತದೆ.
  2. ಅನಾನಸ್: ರುಚಿಯಾದ, ಕಟುವಾದ ಹಣ್ಣು, ನೀವು ಇದನ್ನು ಹಣ್ಣಿನ ರೂಪದಲ್ಲಿ ಅಥವಾ ರಸವಾಗಿ ಸೇವಿಸಬಹುದು.
  3. ಪೀಚ್ ಹಣ್ಣು: ಸುಟ್ಟ ಬ್ರೆಡ್‌ನ ಸ್ಲೈಸ್‌ನೊಂದಿಗೆ ಸಿಹಿಯಾದ, ರಸಭರಿತವಾದ ಪೀಚ್‌ಗಿಂತ ಉತ್ತಮವಾದದ್ದು ಇನ್ನೇನಿದೆ.
  4. ಮರಸೇಬು: ಒಂದು ಸಣ್ಣ ಮರಸೇಬಿನ ಒಳಿತು ಎಷ್ಟಿದೆ ಎಂದರೆ ಅದು ನಿಮ್ಮ ಹೃದಯ ಮತ್ತು ಮೂತ್ರಪಿಂಡಗಳನ್ನು ಆರೋಗ್ಯವಾಗಿಡಲು ಸರಿಯಾದ ಪ್ರಮಾಣದ ಪೋಷಕಾಂಶಗಳನ್ನು ಹೊಂದಿರುತ್ತದೆ.
  5. ಬೆರಿಹಣ್ಣುಗಳು/ನಯಹಣ್ಣು: ಬೆರಿಹಣ್ಣುಗಳು, ಬ್ಲ್ಯಾಕ್‌ಬೆರ್ರಿಗಳು ಮತ್ತು ಚೆರ್ರಿಗಳು ಸಹ ಬೆಳಗ್ಗೆಯಿಂದ ಮಧ್ಯಾಹ್ನದ ಹೊತ್ತಿಗೆ ತಿನ್ನಬಹುದಾದ ಅತ್ಯುತ್ತಮ ತಿಂಡಿಗಳಾಗಿವೆ.
  6. ಸೇಬು: ಒಳ್ಳೆಯ ಸೇಬು ಖಂಡಿತವಾಗಿಯೂ ವೈದ್ಯರನ್ನು ದೂರವಿರಿಸುತ್ತದೆ. ನಿಮಗೆ ಸೇಬಿನ ಜ್ಯೂಸ್ ಇಷ್ಟ ಆಗಿದ್ದರೆ, ಬೇರೆ ಪಾನೀಯಗಳ ಬದಲಿಗೆ ನೀವು ಇದನ್ನೆ ಸೇವಿಸಬಹುದಾಗಿದೆ.
  7. ದ್ರಾಕ್ಷಿಗಳು: ನಿಮ್ಮ ಸಿಹಿ ಪದಾರ್ಥಗಳ ಬಯಕೆಯನ್ನು ಪೂರೈಸಲು ದ್ರಾಕ್ಷಿ ಹಣ್ಣಿನ ಒಂದು ಗೊಂಚಲು ಅತ್ಯುತ್ತಮ ಮಾರ್ಗ! ದ್ರಾಕ್ಷಿಯಲ್ಲಿ ಕಡಿಮೆ ಪೊಟ್ಯಾಸಿಯಮ್ ಇರುವುದರಿಂದ ನಿಮಗೆ ಮೂತ್ರಪಿಂಡದ ಸಮಸ್ಯೆ ಇದ್ದರೂ ನೀವು ಇದನ್ನು ಸುರಕ್ಷಿತವಾಗಿ ತಿನ್ನಬಹುದು.
  8. ಪ್ಲಮ್ ಹಣ್ಣು: 1 ಸಣ್ಣ ಪ್ಲಮ್ ಹಣ್ಣಿನಲ್ಲಿರುವ ಪ್ರಯೋಜನಗಳನ್ನು ಇತರ ಹಣ್ಣುಗಳೊಂದಿಗೆ ಹೋಲಿಸಲಾಗುವುದಿಲ್ಲ!

ನೆನಪಿಡಿ, ಮಿತವಾಗಿ ಸೇವಿಸುವುದೆ ಕೀಲಿಕೈ! ನಿಮ್ಮ ಪೊಟ್ಯಾಸಿಯಮ್ ಮಟ್ಟವನ್ನು ಕಾಪಾಡಿಕೊಳ್ಳಲು ಈ ಯಾವುದೇ ಹಣ್ಣುಗಳಲ್ಲಿ ½ ಕಪ್ ತಿನ್ನಿರಿ, ಅಥವಾ ವೈದ್ಯರು ಸೂಚಿಸಿರುವಂತೆ ಇದನ್ನು ಸೇವಿಸಿ. ನಿಮ್ಮ ಆಹಾರದಲ್ಲಿ ಬಗೆಬಗೆಯ ಹಣ್ಣುಗಳನ್ನು ಸೇರಿಸಲು ನೀವು ಬಯಸಿದರೂ, ಅದನ್ನು ಸೀಮಿತ ಪ್ರಮಾಣದಲ್ಲಿ ಸೇರಿಸಿ. ನೀವು ಈಗಾಗಲೇ ಹೆಚ್ಚಿನ ಪೊಟ್ಯಾಸಿಯಮ್‌ನಿಂದ ಬಳಲುತ್ತಿದ್ದರೆ ಈ ಯಾವುದೇ ಹಣ್ಣುಗಳನ್ನು ಹೆಚ್ಚು ತಿನ್ನುವುದರಿಂದ ನಿಮ್ಮ ಪೊಟ್ಯಾಸಿಯಮ್ ಮಟ್ಟವು ಹೆಚ್ಚಾಗುತ್ತದೆ.

ನೀವು ಸಾಧ್ಯವಾದಷ್ಟು ತಪ್ಪಿಸಬೇಕಾದ ಹಣ್ಣುಗಳು:

  1. ಬಾಳೆಹಣ್ಣುಗಳು
  2. ಕಿತ್ತಳೆ ಹಣ್ಣು
  3. ಒಣಗಿದ ಹಣ್ಣುಗಳಾದ; ಏಪ್ರಿಕಾಟ್, ಒಣದ್ರಾಕ್ಷಿ, ಅಂಜೂರದ ಹಣ್ಣುಗಳು ಮತ್ತು ಒಣದ್ರಾಕ್ಷಿ
  4. ಆವಕಾಡೊಗಳು
  5. ಮಾವಿನಹಣ್ಣು

ನಿಮ್ಮ ಪೊಟ್ಯಾಸಿಯಮ್ ಮಟ್ಟವನ್ನು ನಿರ್ವಹಿಸುವ ಇನ್ನೊಂದು ವಿಧಾನವೆಂದರೆ, ನೀವು ತಿನ್ನುವ ಆಹಾರಗಳಲ್ಲಿ ಉಪ್ಪಿನ ಬದಲಿಗಳನ್ನು ಹುಡುಕುವುದು. ಪೂರ್ವಸಿದ್ಧ ಆಹಾರಗಳಲ್ಲಿ ಸಂರಕ್ಷಕವಾಗಿ ಬಳಸುವ ಉಪ್ಪಿನ ಬದಲಿಗಳು ನಿಮ್ಮ ಪೊಟ್ಯಾಸಿಯಮ್ ಮಟ್ಟವನ್ನು ಸಹ ಹೆಚ್ಚಿಸಬಹುದು. ಸಾಮಾನ್ಯವಾಗಿ, ಪ್ಯಾಕೇಜ್ ಮಾಡಿದ ಆಹಾರಗಳ ಲೇಬಲ್‌ಗಳು ಅಂತಹ ಮಾಹಿತಿಯನ್ನು ನೀಡುತ್ತವೆ. ಬೇಯಿಸಿದ ಪಾಲಕ್ ಸೊಪ್ಪು, ಆಲೂಗಡ್ಡೆ ಮತ್ತು ಟೊಮ್ಯಾಟೊ ಕೂಡ ಪೊಟ್ಯಾಸಿಯಮ್‌ನ ಸಮೃದ್ಧ ಮೂಲಗಳಾಗಿವೆ; ಅವುಗಳನ್ನು ತಪ್ಪಿಸಲು ಪ್ರಯತ್ನಿಸಿ. ನೀವು ಆಟಗಾರರಾಗಿದ್ದು, ಬೆಳಗ್ಗೆ ಆಟದ ಪಾನೀಯಗಳನ್ನು ಕುಡಿಯುತ್ತಿದ್ದರೆ, ಅವುಗಳಲ್ಲಿರುವ ಪೊಟ್ಯಾಸಿಯಮ್ ಅಂಶವನ್ನು ಒಮ್ಮೆ ಗಮನಿಸಿ. ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಹೊಂದಿರುವ ಕೆಲವು ಹಣ್ಣುಗಳು ಮತ್ತು ತರಕಾರಿಗಳನ್ನು ನೀವು ಇಷ್ಟಪಡುತ್ತಿದ್ದರೆ, ಆಗ ಅವುಗಳ ಪೊಟ್ಯಾಸಿಯಮ್ ಮಟ್ಟವನ್ನು ಕಡಿಮೆ ಮಾಡುವ ಒಂದು ಸುಲಭದ ದಾರಿಯೆಂದರೆ, ಅದನ್ನು ಕತ್ತರಿಸಿ, ಸಿಪ್ಪೆ ತೆಗೆದು, ಅವುಗಳನ್ನು ನೀರಿನಲ್ಲಿ ನೆನೆಸಿಡಿ, ಈ ವಿಧಾನ ಪೊಟ್ಯಾಸಿಯಮನ್ನು ಹೊರಹಾಕಲು ಸಹಾಯ ಮಾಡುತ್ತದೆ. [4]

ಯಾರೋ ಸರಿಯಾಗಿಯೇ ಹೇಳಿದ್ದಾರೆ, “ವೈವಿಧ್ಯತೆಯು ಜೀವನದ ಮಸಾಲೆ!” ಎಂದು. ಶಿಫಾರಸು ಮಾಡಬೇಕಾದ ಔಷಧಿಗಳ ಸರಿಯಾದ ಸಮತೋಲನವನ್ನು ವೈದ್ಯರು ಮತ್ತು ವಿಜ್ಞಾನಿಗಳು ಕಂಡುಹಿಡಿಯಲಿ, ನೀವು ಸರಿಯಾದ ಹಣ್ಣುಗಳ ಮಿಶ್ರಣ ಸೇವಿಸಿ ಹಾಗೂ ಆರೋಗ್ಯಕರ ಪೊಟ್ಯಾಸಿಯಮ್ ಮಟ್ಟವನ್ನು ಅತ್ಯಂತ ನೈಸರ್ಗಿಕ ರೀತಿಯಲ್ಲಿ ನಿರ್ವಹಿಸಿ.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.