heart health unknown symptoms
Reading Time: 2 minutes

ಕೆಲವು ಸಂಗತಿಗಳು ವಯಸ್ಸಿನೊಂದಿಗೆ ಮಾತ್ರ ಬರುತ್ತವೆ”, ಅಂತಹ ಸಂಗತಿಗಳಲ್ಲಿ ಹೃದ್ರೋಗವೂ ಒಂದು. ವಯಸ್ಸಾದಂತೆ, ನಿಮ್ಮ ದೇಹದಲ್ಲಿರುವ ಬೇರೆಲ್ಲಾ ಅಂಗಗಳಂತೆ, ನಿಮ್ಮ ಹೃದಯದ ಕ್ಷಮತೆ ಕೂಡ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತಾ ಬರುತ್ತದೆ. ವರ್ಷಗಳು ಉರುಳಿದಂತೆ, ವಯಸ್ಸೆಂಬುದು ಹೃದಯದ ಸಮಸ್ಯೆಗಳಿಗೆ ಅಪಾಯಕಾರಿ ಅಂಶವಾಗಿ ಪರಿಣಮಿಸುತ್ತದೆ. ಹೃದಯದ ಸಮಸ್ಯೆಗಳಲ್ಲಿ ಇಸ್ಕೀಮಿಕ್ ಹೃದ್ರೋಗ ಕೂಡ ಒಂದು. ಈ ಸಮಸ್ಯೆಯಲ್ಲಿ, ಹೃದಯಕ್ಕೆ ರಕ್ತವನ್ನು ಸಾಗಿಸುವ ರಕ್ತನಾಳಗಳ (ಕೊರೋನರಿ ಆರ್ಟರಿಗಳು) ಒಳಗೆ ಮೇಣದಂತಹ ವಸ್ತು ಕಟ್ಟಿಕೊಳ್ಳುತ್ತದೆ. ಇದು ರಕ್ತನಾಳಗಳ ಒಳಭಾಗವನ್ನು ಕಿರಿದಾಗಿಸುತ್ತದೆ. ಇದರಿಂದಾಗಿ, ಹೃದಯದ ಸ್ನಾಯುಗಳಿಗೆ ಪೂರೈಕೆಯಾಗುವ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತದೆ. ಆಮ್ಲಜನಕದ ಪೂರೈಕೆ ಕಡಿಮೆಯಾದಷ್ಟು, ನಿಮ್ಮ ಹೃದಯವು ಹೆಚ್ಚೆಚ್ಚು ಅಪಾಯವನ್ನು ಎದುರಿಸುತ್ತಾ ಹೋಗುತ್ತದೆ.(1)

ಗುಮ್ಮ

ಕೈಕಾಲುಗಳು ಊದಿಕೊಳ್ಳುವುದು, ನಿದ್ರೆ ಮಾಡುವಾಗ ಉಸಿರಾಡುವುದಕ್ಕೆ ತೊಂದರೆಯಾಗುವುದು ಅಥವಾ ದೈಹಿಕ ಚಟುವಟಿಕೆಗಳನ್ನು ಮಾಡಲು ಕಷ್ಟವಾಗುವುದು ಹೆಚ್ಚಿನ ಹೃದ್ರೋಗಗಳ ಆರಂಭಿಕ ಲಕ್ಷಣಗಳಾಗಿವೆ. ಇಸ್ಕೀಮಿಕ್ ಹೃದ್ರೋಗವು ಈ ಲಕ್ಷಣಗಳನ್ನು ತೋರಿಸಬಹುದು ಅಥವಾ ತೋರಿಸದೆಯೂ ಇರಬಹುದು. ಆರೋಗ್ಯದಿಂದ ಇರುವಂತೆ ಕಾಣುವವರು ಹಾಗೂ ಚೆನ್ನಾಗಿ ಕೆಲಸ ಮಾಡಿಕೊಂಡು ಇರುವವರು ಕೂಡ ಅನಿರೀಕ್ಷಿತ ತೊಂದರೆಗಳನ್ನು ಎದುರಿಸಬಹುದು. ಕೆಲವರಿಗೆ ಸ್ವಲ್ಪ ಎದೆನೋವಿನ ಅನುಭವವಾಗಬಹುದು, ಆದರೆ ಇನ್ನೂ ಕೆಲವರಿಗೆ ಹೃದಯಾಘಾತವಾಗುವವರೆಗೆ ಯಾವೊಂದು ಸಮಸ್ಯೆಯೂ ಕಾಣಿಸಿಕೊಂಡಿರುವುದಿಲ್ಲ.(1)(2) ಇಸ್ಕೀಮಿಯಾದ ಶೇಕಡ 80 ರಷ್ಟು ಪ್ರಕರಣಗಳು ಯಾವುದೇ ಸುಳಿವನ್ನು ನೀಡದೆ, ಎದೆನೋವಿಲ್ಲದೆ ಕಾಣಿಸಿಕೊಳ್ಳುತ್ತವೆ, 68% ಪ್ರಕರಣಗಳು ಹೃದಯಾಘಾತಕ್ಕೆ ಕಾರಣವಾಗಬಹುದು.(3) 45 ವರ್ಷ ಮೇಲ್ಪಟ್ಟ ಪುರುಷರಲ್ಲಿ ಹೃದಯ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚೆಂಬುದು ತಿಳಿದುಬಂದಿದೆ. ಮುಟ್ಟುನಿಂತಿರುವ, 45 ವರ್ಷ ಮೇಲ್ಪಟ್ಟ ಮಹಿಳೆಯರು ಕೂಡ ಇಸ್ಕೀಮಿಕ್ ಹೃದ್ರೋಗಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ.(1)

ಹೃದಯದ ಆರೋಗ್ಯ ಕಾಪಾಡಿಕೊಳ್ಳಿ

ನೀವು ಬದಲಾಯಿಸಿಕೊಳ್ಳಲಾಗದ ಸಂಗತಿಗಳಲ್ಲಿ ವಯಸ್ಸು ಕೂಡ ಒಂದು, ಆದರೆ ಇಂತಹ ಅಕಾಲಿಕ ಘಟನೆಗಳ ಸಾಧ್ಯತೆಯನ್ನು ಕಡಿಮೆ ಮಾಡಿಕೊಳ್ಳಲು ಯಾವಾಗಲೂ ಏನಾದರೂ ಇದ್ದೆ ಇರುತ್ತದೆ. ಧೂಮಪಾನ, ಜಡ ಜೀವನಶೈಲಿ, ಆಲ್ಕೋಹಾಲ್ ಸೇವನೆ, ಅನಾರೋಗ್ಯಕರ ಆಹಾರಕ್ರಮ, ಅಧಿಕ ಕೊಲೆಸ್ಟರಾಲ್ ಮಟ್ಟ, ಅಧಿಕ ರಕ್ತದೊತ್ತಡ ಮತ್ತು ಡಯಾಬಿಟಿಸ್‌ನಂತಹ ಅಂಶಗಳು ನಿಮ್ಮನ್ನು ಇಸ್ಕೀಮಿಕ್‌ನಂತಹ ಹಠಾತ್‌ ಘಟನೆಗಳಿಗೆ ಸಾಕ್ಷಿ ಮಾಡಿಬಿಡುತ್ತವೆ. ನಿಮ್ಮ ವಯಸ್ಸು, ಜನಾಂಗೀಯತೆ ಮತ್ತು ಕುಟುಂಬದ ಇತಿಹಾಸ ನಿಮ್ಮ ಹಿಡಿತದಲ್ಲಿ ಇಲ್ಲದಿದ್ದರೂ ಸಹ ನೀವು ಈ ಅಂಶಗಳ ಮೇಲೆ ಹಿಡಿತ ಸಾಧಿಸಬಹುದು.(4)

ಹೊಸ ಆರಂಭಕ್ಕೆ ತಡ ಎಂಬುದಿಲ್ಲ

ತುಂಬಾ ತಡವಾಗಿ ಜೀವನದಲ್ಲಿ ಬದಲಾವಣೆಗಳನ್ನು ಮಾಡಿಕೊಂಡ ಬಳಿಕವೂ ಪಾರ್ಶ್ವವಾಯುವಿನ ಸಾಧ್ಯತೆಯನ್ನು ಕಡಿಮೆ ಮಾಡಿಕೊಳ್ಳಬಹುದೆಂದು ಹಲವಾರು ವೈಜ್ಞಾನಿಕ ಪುರಾವೆಗಳು ಸಾಬೀತುಪಡಿಸಿವೆ. ನೀವು ಧೂಮಪಾನಿಗಳಾಗಿದ್ದರೆ, ಅದನ್ನು ಬಿಡುವ ಮೂಲಕ ಹೃದಯಾಘಾತದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಿಕೊಳ್ಳಬಹುದು. ಪಾರ್ಶ್ವವಾಯುವಿಗೆ ಗುರಿಯಾದ ನಂತರ ಧೂಮಪಾನ ಮಾಡುವುದನ್ನು ನಿಲ್ಲಿಸಿದವರು, ಮತ್ತೊಂದು ಪಾರ್ಶ್ವವಾಯುವಿನ ಸಾಧ್ಯತೆಯನ್ನು 7% ನಷ್ಟು ಕಡಿಮೆ ಮಾಡಿಕೊಂಡಿದ್ದಾರೆ ಎಂದು ಯೇಲ್ ಸ್ಕೂಲ್ ಆಫ್ ಮೆಡಿಸಿನ್ ಹೇಳುತ್ತದೆ.(5),(6)

ಜರ್ನಲ್ ಆಫ್ ಕ್ರಿಟಿಕಲ್ ರಿವ್ಯೂಸ್‌ ಇನ್ ಫುಡ್ ಸೈನ್ಸ್ ಅಂಡ್ ನ್ಯೂಟ್ರಿಶನ್‌ನಲ್ಲಿ ವಿವರವಾಗಿ ಪ್ರಕಟವಾದ ವಿಮರ್ಶೆಯು, ಹಣ್ಣು ಮತ್ತು ತರಕಾರಿಗಳನ್ನು ಆಹಾರಕ್ರಮದಲ್ಲಿ ಸೇರಿಸುವುದರಿಂದ ಕೊಲೆಸ್ಟರಾಲನ್ನು 5-10% ನಷ್ಟು ಕಡಿಮೆ ಮಾಡಬಹುದು ಎಂದು ಹೇಳುತ್ತದೆ. ಕೊಲೆಸ್ಟರಾಲ್‌ನ ಈ ಇಳಿಕೆಯು ಹೃದಯ ಸಂಬಂಧಿ ಕಾಯಿಲೆಗಳ ಮೇಲೆ ನೇರವಾಗಿ ಪ್ರಭಾವ ಬೀರುತ್ತದೆ. ರಕ್ತದಲ್ಲಿರುವ ಲಿಪಿಡ್‌ಗಳ ಮಟ್ಟದ ಮೇಲೆ ಪರಿಣಾಮ ಬೀರುವ ಅತ್ಯಗತ್ಯ ಅಂಶ, ಆಹಾರ ಆಗಿರುವುದರಿಂದ, ಇದು ರಕ್ತನಾಳಗಳಲ್ಲಿ ಮೇಣದಂತಹ ವಸ್ತು ಕಟ್ಟಿಕೊಳ್ಳುವಿಕೆಯ ಮೇಲೆ ಪರಿಣಾಮ ಬೀರುತ್ತದೆ.(7)

ಚಟುವಟಿಕೆಯಿಂದ ಇರುವುದರಿಂದಲೂ ಹೃದಯ ಸಮಸ್ಯೆಗಳನ್ನು ಕಡಿಮೆಮಾಡಿಕೊಳ್ಳಬಹುದಾಗಿದೆ. ಯೋಗ ತರಗತಿ ಅಥವಾ ಏರೋಬಿಕ್ ಕ್ಲಾಸ್‌ನಂತಹ ಗುಂಪು ಚಟುವಟಿಕೆಯಲ್ಲಿ ಪಾಲ್ಗೊಳ್ಳಿ. ಆಗಾಗ ಅಥವಾ ಭಾನುವಾರ ಬೆಳಿಗ್ಗೆ ಎಲ್ಲಾದರೂ ಸೈಕಲ್ ಸವಾರಿ ಹೋಗುವುದು ಕೂಡ ಒಳ್ಳೆ ಉಪಾಯ. ನೀವು ಬರಿ ಕ್ಯಾಲರಿಗಳನ್ನಷ್ಟೆ ಕರಗಿಸುವುದಿಲ್ಲ ಜೊತೆಗೆ ಸ್ನೇಹಿತರನ್ನು ಕೂಡ ಮಾಡಿಕೊಳ್ಳುತ್ತೀರಿ. ಪಾರ್ಶ್ವವಾಯುವಿಗೆ ದಾರಿಮಾಡಿಕೊಡುವ ಸಾಧ್ಯತೆಗಳ ಪಟ್ಟಿಯಲ್ಲಿ ಸಮಾಜದಿಂದ ದೂರ ಇರುವುದು ಕೂಡ ಸ್ಥಾನ ಪಡೆದುಕೊಂಡಿದೆ.(2) ಈ ಎಲ್ಲಾ ಅಪಾಯಕಾರಿ ಅಂಶಗಳ ವಿರುದ್ಧ ಹೋರಾಡಲು, ಜನಸಮೂಹದೊಂದಿಗೆ ಬೆರೆಯಿರಿ, ಚಾರಣಕ್ಕೆ ಹೋಗಿ, ಧೂಮಪಾನವನ್ನು ಈಗಲೇ ಬಿಟ್ಟುಬಿಡಿ ಹಾಗೂ ನಿಮ್ಮ ಆಹಾರಕ್ಕೆ ಬಣ್ಣಬಣ್ಣದ ತರಕಾರಿಗಳನ್ನು ಸೇರಿಸಿ.

ಉಲ್ಲೇಖಗಳು:

  1. Ischemic Heart Disease [Internet]. [cited 2019 Jul 23]. Available from: https://www.nhlbi.nih.gov/health-topics/ischemic-heart-disease.
  2. Silent ischemia and ischemic heart disease [Internet]. [updated 2015 Jul 31; cited 2019 Jul 23]. Available from: https://www.heart.org/en/health-topics/heart-attack/about-heart-attacks/silent-ischemia-and-ischemic-heart-disease.
  3. D’Antono B, Dupuis G, Arsenault A, Burelle D. Silent ischemia: silent after all? Can J Cardiol. 2008;24(4):285-291. doi:10.1016/s0828-282x(08)70178-8.
  4. Heart attack risk factors. [Internet]. [cited 2019 Jul 23]. Available from: https://www.heartfoundation.org.au/your-heart/know-your-risks/heart-attack-risk-factors.
  5. Dinh PC, Schrader LA, Svensson CJ, Margolis KL, Silver B, Luo J. Smoking cessation, weight gain, and risk of stroke among postmenopausal women. Prev Med. 2019 Jan;118:184-190. doi: 10.1016/j.ypmed.2018.10.018.
  6. Epstein KA, Viscoli CM, Spence JD, Young LH, Inzucchi SE, Gorman M, et. al. Smoking cessation and outcome after ischemic stroke or TIA. Neurology. 2017 Oct 17;89(16):1723-1729. doi: 10.1212/WNL.0000000000004524.
  7. Alissa EM, Ferns GA. Dietary fruits and vegetables and cardiovascular diseases risk. Crit Rev Food Sci Nutr. 2017 Jun 13;57(9):1950-1962. doi: 10.1080/10408398.2015.1040487.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.