heart-patients-exercise-tips
Reading Time: 2 minutes

ದೈಹಿಕ ವ್ಯಾಯಾಮದಿಂದಾಗಿ ಹೃದಯದ ಆರೋಗ್ಯಕ್ಕಾಗುವ ಒಳಿತಿನ ಬಗ್ಗೆ ಎಷ್ಟು ಒತ್ತಿ ಹೇಳಿದರು ಕಡಿಮೆ. ವ್ಯಾಯಾಮವು ಹೃದಯದ ಸ್ನಾಯುಗಳನ್ನು ಬಲಗೊಳಿಸುತ್ತದೆ, ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಹಾಗೂ ಹೃದಯವು ದೇಹಾದ್ಯಂತ ರಕ್ತವನ್ನು ಪಂಪ್ ಮಾಡುವ ಕ್ಷಮತೆಯು ಹೆಚ್ಚಿಸುತ್ತದೆ. ಈ ಕಾರಣಗಳಿಗಾಗಿಯೆ ಡಾಕ್ಟರ್‌ಗಳು ಹೃದಯದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ವ್ಯಾಯಾಮ ಮಾಡಲು ತಿಳಿಸುತ್ತಾರೆ. ಅದಾಗ್ಯೂ, ಎಷ್ಟು ಪ್ರಮಾಣದಲ್ಲಿ ವ್ಯಾಯಾಮ ಮಾಡಬೇಕೆಂಬುದು ಹೃದಯದ ಸ್ಥಿತಿಗತಿಗಳ ಮೇಲೆ ಅವಲಂಬಿತವಾಗಿರುತ್ತದೆ. ಯಾವ ರೋಗಿಯು ಆಗಷ್ಟೆ ಕೆಲವು ದಿನಗಳ ಹಿಂದೆ ಹೃದಯಾಘಾತಕ್ಕೆ ಅಥವಾ ಶಸ್ತ್ರಚಿಕಿತ್ಸೆಗೆ ಒಳಗಾಗಿರುತ್ತಾರೊ ಅಂತಹವರು ದೈನಂದಿನ ವ್ಯಾಯಾಮದಲ್ಲಿ ಪುನಃ ತೊಡಗಿಸಿಕೊಳ್ಳುವ ಮುನ್ನ ಅತಿ ಜಾಗೃತಿ ವಹಿಸುವುದು ಉತ್ತಮ, ಯಾಕೆಂದರೆ ಅಂತಹ ಸಂದರ್ಭಗಳಲ್ಲಿ ವ್ಯಾಯಾಮವು ಶ್ರಮದಾಯಕವಾಗಿದ್ದು ಹೃದಯದ ಶಕ್ತಿಯನ್ನು ತೀರ ಕುಗ್ಗಿಸಿ ಘಾಸಿ ಮಾಡುತ್ತದೆ.

ನೀವು ಒಂದು ವೇಳೆ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದರೆ ವ್ಯಾಯಾಮದಲ್ಲಿ ಪಾಲಿಸಬೇಕಾದ ಸುರಕ್ಷಿತ ಸಲಹೆಗಳು ಹೀಗಿವೆ.

1. ನಿಮ್ಮ ಡಾಕ್ಟರನ್ನು ಭೇಟಿಮಾಡಿ

ವ್ಯಾಯಾಮಗಳಲ್ಲಿ ಪಾಲ್ಗೊಳ್ಳುವ ಮೊದಲು ನಿಮ್ಮ ಡಾಕ್ಟರನ್ನು ಭೇಟಿ ಮಾಡಿ ಕೆಲವು ವಿಷಯಗಳ ಕುರಿತು ಚರ್ಚಿಸುವುದು ಅನಿವಾರ್ಯ. ನಿಮ್ಮ ಡಾಕ್ಟರ್ ನಿಮಗೆ ವ್ಯಾಯಾಮವನ್ನು ಎಂದಿನಿಂದ ಪ್ರಾರಂಭಿಸಬೇಕು, ಒಂದು ವಾರದಲ್ಲಿ ಎಷ್ಟು ಪ್ರಮಾಣದ ವ್ಯಾಯಾಮದಲ್ಲಿ ತೊಡಗಿಸಿಕೊಂಡರೆ ಉತ್ತಮ, ಮತ್ತು ವ್ಯಾಯಾಮವನ್ನು ಯಾವ ವಿಧಾನಗಳ ಮೂಲಕ ಶುರುಮಾಡುವುದು ಸೂಕ್ತ ಎಂಬುದನ್ನು ನಿಮ್ಮ ಸ್ಥಿತಿಗತಿಗಳನ್ನು ಪರಿಶೀಲಿಸಿ ನಿಮಗೆ ತಿಳಿಸಿಕೊಡುತ್ತಾರೆ. “ವ್ಯಾಯಾಮವನ್ನು ಸರಿಯಾದ ಲೆಕ್ಕಚಾರದಲ್ಲಿ ಮತ್ತು ಕ್ರಮಬದ್ಧವಾಗಿ ತೊಡಗಿಸಿಕೊಳ್ಳುವುದು ಹಾಗೂ ವ್ಯಾಯಾಮದ ಪ್ರಮಾಣವನ್ನು ಅಥವಾ ಸಮಯವನ್ನು ಹಂತಹಂತವಾಗಿ ಏರಿಸುವುದು ಬಹಳ ಮುಖ್ಯ” ಎಂದು ಎಐಐಎಂಎಸ್‍ನಲ್ಲಿ ಹೃದಯತಜ್ಞರಾಗಿರುವ ಡಾ. ಸುದೀಪ್ ಮಿಶ್ರಾ, ವಿವರಿಸುತ್ತಾರೆ.

2. ಸರಳ ವ್ಯಾಯಾಮದೊಂದಿಗೆ ಪ್ರಾರಂಭ

“ವ್ಯಾಯಾಮಗಳಲ್ಲಿ ಬಹಳಷ್ಟು ವಿಧಗಳಿದ್ದು, ಅವುಗಳಲ್ಲಿ ಐಸೊಟೊನಿಕ್, ಐಸೊಮೆಟ್ರಿಕ್ ಮತ್ತು ದೇಹವನ್ನು ಚಾಚಿ ಮಾಡುವ ವ್ಯಾಯಾಮ ಮುಂತಾದವುಗಳು. ನಡೆಯುವುದು, ಜಾಗಿಂಗ್ ಮತ್ತು ಈಜುವುದು ಇವುಗಳು ಐಸೊಟೊನಿಕ್ ವ್ಯಾಯಾಮದ ವ್ಯಾಪ್ತಿಯಲ್ಲಿ ಬರುತ್ತವೆ. ಈ ವ್ಯಾಯಾಮಗಳು ಸ್ನಾಯುಗಳ ದೊಡ್ಡ ಗುಂಪನ್ನು ಒಳಗೊಂಡಿರುತ್ತವೆ ಮತ್ತು ನಿಮ್ಮ ದೇಹದ ಮೇಲೆ ಒಟ್ಟಾರೆ ಪರಿಣಾಮ ಬೀರುತ್ತವೆ. ಪ್ರಾರಂಭಿಕ ಹಂತದಲ್ಲಿ ನಡೆಯುವುದು ಅತ್ಯಂತ ಸುಲಭವಾದ ಐಸೊಟೊನಿಕ್ ವ್ಯಾಯಾಮವಾಗಿದ್ದು. ನಿಧಾನವಾಗಿ ಮತ್ತು ನಿರಂತರವಾಗಿ ನಡೆಯುವುದನ್ನು ರೂಢಿಸಿಕೊಳ್ಳುವುದರಿಂದ ನಿಮ್ಮ ಹೆಜ್ಜೆಗಳ ಸಂಖ್ಯೆಯನ್ನು ದಿನೇದಿನೇ ಹೆಚ್ಚಿಸಿಕೊಳ್ಳಬಹುದು.” ಎಂದು ಅವರು ತಿಳಿಸುತ್ತಾರೆ.

3. ಶ್ರಮದಾಯಕ ವ್ಯಾಯಾಮಗಳನ್ನು ತಪ್ಪಸಿ:

ಐಸೊಮೆಟ್ರಿಕ್ ವ್ಯಾಯಾಮಗಳು ಸ್ವಾಭಾವಿಕವಾಗಿ ಸ್ಥಿರವಾಗಿರುತ್ತವೆ ಮತ್ತು ಅವು ಸ್ನಾಯುವಿನ ಮೇಲೆ ಪ್ರತಿರೋಧವನ್ನು ಕಾಪಾಡಿಕೊಳ್ಳುವುದು ಅಥವಾ ಹೆಚ್ಚಿಸುವುದನ್ನು ಒಳಗೊಂಡಿರಬಹುದು. ಈ ವ್ಯಾಯಾಮಗಳು ಹೃದಯದ ಸ್ನಾಯುಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಬೀರುತ್ತವೆ ಹಾಗೂ ಎದೆ ನೋವಿನಂತಹ ಚಿಹ್ನೆಗಳನ್ನು ಪ್ರಚೋದಿಸುತ್ತವೆ, ಇದರಿಂದಾಗಿ ನಿಮ್ಮ ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ. ಡಾ. ಮಿಶ್ರಾ ಹೇಳುವುದೇನೆಂದರೆ ಯಾವ ರೋಗಿಯು ಈಗಾಗಲೆ ಹೃದಯಾಘಾತಕ್ಕೆ ತುತ್ತಾಗಿರುತ್ತಾರೊ ಅಂತಹವರು ಗುಣಮುಖರಾಗದ ಹೊರತಾಗಿ ಈ ವ್ಯಾಯಾಮಗಳನ್ನು ಕಡ್ಡಾಯವಾಗಿ ಮಾಡಬಾರದು. 

4. ವಿಪರೀತ ತಾಪಮಾನದಲ್ಲಿ ವ್ಯಾಯಾಮ ತಪ್ಪಿಸಿ:

ವಿಪರೀತ ತಾಪಮಾನದಲ್ಲಿ ವ್ಯಾಯಾಮ ಮಾಡದಿರುವುದು ಗಮನದಲ್ಲಿರಿಸಿಕೊಳ್ಳಬೇಕಾದ ಮತ್ತೊಂದು ಮುಖ್ಯ ಸಂಗತಿ. “ಅತಿಯಾದ ತೇವಾಂಶ ಮತ್ತು ಅತಿಯಾದ ಚಳಿ, ಇವೆರಡು ಹೃದಯ ರೋಗಿಗಳಿಗೆ ಕೆಡುಕುಂಟು ಮಾಡುತ್ತವೆ. ತೇವಾಂಶದಿಂದಾಗಿ ತೀವ್ರ ಬಳಲಿಕೆ ಉಂಟಾಗಿ ದೇಹದಲ್ಲಿ ನೀರಿನ ಕೊರತೆಯಾಗುತ್ತದೆ ಮತ್ತು ತೀವ್ರ ಚಳಿಯು ಉಸಿರಾಟಕ್ಕೆ ತೊಂದರೆಯನ್ನುಂಟು ಮಾಡುತ್ತದೆ. ಆದರಿಂದ ಒಳಾಂಗಣದಲ್ಲಿ ವ್ಯಾಯಾಮ ಮಾಡುವುದು ಸುರಕ್ಷಿತ, ಆದರೆ ಅಲ್ಲಿ ಕೂಡ ತಾಪಮಾನವನ್ನು ನಿಯಂತ್ರಣದಲ್ಲಿಟ್ಟಿರುವುದು ಮುಖ್ಯ,” ಎಂದು ಹೇಳುತ್ತಾರೆ.

5. ನೀರನ್ನು ಹೆಚ್ಚು ಕುಡಿಯಿರಿ:

ವ್ಯಾಯಾಮ ಮಾಡುವ ವೇಳೆ ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಇರದಿರುವುದು ಹೃದಯ ರೋಗಿಗಳಿಗೆ ಬಹಳ ಅಪಾಯಕಾರಿ. “ ರೋಗಿಯು ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು; ನಿಂಬೆ ಪಾನಕ ಕುಡಿಯುವುದು ಇನ್ನು ಉತ್ತಮ ಪರ್ಯಾಯ” ಎಂದು ಅವರು ತಿಳಿಸುತ್ತಾರೆ.

6. ಯಾವಾಗ ನಿಲ್ಲಿಸಬೇಕೆಂದು ತಿಳಿದಿರಲಿ:

ನಿಮ್ಮ ವ್ಯಾಯಾಮ ದಿನಚರಿಯನ್ನು ನೀವು ಎಷ್ಟು ಸಮಯದಿಂದ ಅಭ್ಯಾಸ ಮಾಡುತ್ತಿದ್ದರೂ, ನಿಮ್ಮ ದೇಹದ ಮಾತನ್ನು ಸಹ ಕೇಳಿ. ಒಂದು ವೇಳೆ ನಿಮಗೆ ಏನಾದರು ಅಸಹಜ ಮತ್ತು ಅಹಿತಕರ ಭಾವನೆ ವ್ಯಾಯಾಮದಲ್ಲಿ ತೊಡಗಿರುವಾಗ ಮೂಡಿದಲ್ಲಿ ತಕ್ಷಣ ಅಲ್ಲಿಗೆ ವ್ಯಾಯಾಮವನ್ನು ನಿಲ್ಲಿಸಿ. ಉಸಿರಾಟದ ಸಮಸ್ಯೆ, ಶೀತ ಬೆವರು, ಅತಿಯಾದ ಬಾಯಾರಿಕೆ, ತಲೆ ತಿರುಗುವಿಕೆ, ಎದೆನೋವು, ಅತಿಯಾದ ಎದೆಬಡಿತ ಮತ್ತು ಆತಂಕ; ಇವೆಲ್ಲವೂ ಎಚ್ಚರಿಕೆಯ ಗಂಟೆಗಳು. ಒಂದುವೇಳೆ ಈ ರೀತಿಯ ಸಮಸ್ಯೆಗಳು ನಿಮ್ಮ ಗಮನಕ್ಕೆ ಬಂದರೆ ತಡಮಾಡದೆ ಕೂಡಲೆ ನಿಮ್ಮ ಡಾಕ್ಟರನ್ನು ಸಂಪರ್ಕಿಸಿ.

7. ಕೂಲ್ ಡೌನ್ ಆಗಲು ಮರೆಯದಿರಿ:

ವ್ಯಾಯಾಮ ಮುಗಿದ ನಂತರ, ಒಂದೇ ಬಾರಿಗೆ ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಭಾಗಿಯಾಗಬೇಡಿ. ಅದಕ್ಕು ಮೊದಲು ಕೆಲ ವಿಶ್ರಾಂತಿದಾಯಕ ವ್ಯಾಯಾಮ ಮಾಡಿ ಮತ್ತು ದೀರ್ಘ ಉಸಿರಾಟದೊಂದಿಗೆ ದೇಹವನ್ನು ಸಡಿಲಗೊಳಿಸುವ ಮೂಲಕ ನಿಮ್ಮ ಹೃದಯದ ಬಡಿತವನ್ನು ಸಹಜ ಸ್ಥಿತಿಗೆ ತನ್ನಿ.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.