high-blood-pressure-heart-disease
Reading Time: 1 minute

ಹೈಪರ್‌ಟೆನ್ಶನ್ ಎಂದರೇನು?

ಹೈಪರ್‌ಟೆನ್ಶನ್ ಎಂಬುದು ಒಂದು ಸ್ಥಿತಿಯಾಗಿದ್ದು, ಇದನ್ನು ಅಧಿಕ ರಕ್ತದೊತ್ತಡ ಎಂದು ಸರಳವಾಗಿ ವಿವರಿಸಬಹುದು. ರಕ್ತದೊತ್ತಡವು ಸಹಜ ಮಟ್ಟಕ್ಕಿಂತ (120/80 mmHg) ಮೇಲೇರಿದಾಗ ಅಧಿಕ ರಕ್ತದೊತ್ತಡವೆಂದು ಹೇಳಲಾಗುತ್ತದೆ, ಆದರೆ ವೈದ್ಯಕೀಯ ಮಾನದಂಡಗಳ ಪ್ರಕಾರ, ಒಬ್ಬ ವ್ಯಕ್ತಿಯು ಸತತ ಮೂರು ಬಾರಿ 130/80 mmHg ಗಿಂತ ಹೆಚ್ಚು ರೀಡಿಂಗ್ ಹೊಂದಿದ್ದರೆ ಮಾತ್ರ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂದು ಗುರುತಿಸಬಹುದಾಗಿದೆ.

ಪಾರ್ಶ್ವವಾಯು, ಹೃದಯಾಘಾತ ಮತ್ತು ಹೃದಯ ವೈಫಲ್ಯದಂತಹ ಸಮಸ್ಯೆಗಳಿಗೆ ಅಧಿಕ ರಕ್ತದೊತ್ತಡವು ಪ್ರಮುಖ ಕಾರಣವಾಗಿದೆ. ಬೊಜ್ಜು, ಧೂಮಪಾನ, ಕುಟುಂಬದ ಹಿನ್ನೆಲೆ ಮತ್ತು ಅತಿಯಾದ ಮದ್ಯಪಾನವು ರಕ್ತದೊತ್ತಡವನ್ನು ತಂದೊಡ್ಡಬಹುದಾದ ಅಪಾಯಕಾರಿ ಅಂಶಗಳಾಗಿವೆ.

ಹೃದ್ರೋಗದೊಂದಿಗೆ ಇದರ ನಂಟೇನು?

ಅಧಿಕ ರಕ್ತದೊತ್ತಡ ಅಥವಾ ಹೈಪರ್‌ಟೆನ್ಶನ್, ಲೆಫ್ಟ್ ವೆಂಟ್ರಿಕ್ಯುಲರ್‌ ಹೈಪರ್ಟ್ರೋಫಿ (LVH)ಗೆ ಕಾರಣವಾಗುವ ಮೂಲಕ ಹೃದಯ ವೈಫಲ್ಯಕ್ಕೆ ಎಡೆಮಾಡಿಕೊಡುತ್ತದೆ.[1] LVH ಸಮಸ್ಯೆಯಿದ್ದಾಗ, ಹೃದಯದ ಸ್ನಾಯುಗಳು ಗಟ್ಟಿಯಾಗುತ್ತವೆ. ಇದರ ಪರಿಣಾಮವಾಗಿ ಪ್ರತಿ ಎದೆಬಡಿತದ ನಡುವೆ ಹೃದಯದ ಸ್ನಾಯುಗಳು ಕಡಿಮೆ ವಿಶ್ರಾಂತಿ ಪಡೆಯುತ್ತವೆ. ಇದರಿಂದಾಗಿ ನಿಮ್ಮ ದೇಹದ ಪ್ರಮುಖ ಅಂಗಗಳಿಗೆ ಪೂರೈಕೆಯಾಗುವ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತದೆ, ವಿಶೇಷವಾಗಿ ಶ್ರಮಪಡುವ ವೇಳೆ. ಈ ಎಲ್ಲಾ ಕಾರಣದಿಂದಾಗಿ ನಿಮ್ಮ ದೇಹವು ಹೆಚ್ಚು ನೀರನ್ನು ಹಿಡಿದಿಡುವುದರಿಂದ, ನಿಮ್ಮ ಎದೆಬಡಿತ ಹೆಚ್ಚಾಗುತ್ತದೆ.

ಇದಕ್ಕೆ ಏನು ಮಾಡಬಹುದು?

ಇದನ್ನು ನಿಭಾಯಿಸಲು ಇರುವ ಏಕೈಕ ಮಾರ್ಗವೆಂದರೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವುದು ಅಥವಾ ಕಡಿಮೆ ಮಾಡುವುದು. ಕಾರ್ಡಿಯೋವ್ಯಾಸ್ಕ್ಯುಲರ್ ಥೆರಪಿಯ ತಜ್ಞರ ವಿಮರ್ಶೆಯಲ್ಲಿ ಪ್ರಕಟವಾದ ಅಧ್ಯಯನವೊಂದರ ಪ್ರಕಾರ, ‘ಕಾಯಿಲೆಯ ಬೆಳವಣಿಗೆಯನ್ನು ತಡೆಯಲು ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ತುಂಬ ಮುಖ್ಯವಾದ ಅಂಶವಾಗಿದೆ ಹಾಗೂ ಮುಂಚಿತ ಚಿಕಿತ್ಸೆಯು ಮುಂದಾಗಬಹುದಾದ ಹೃದಯ ವೈಫಲ್ಯ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ತಪ್ಪಿಸುತ್ತದೆ.’ [1]

References

  1. Subramaniam V, Lip GY. Hypertension to heart failure: a pathophysiological spectrum relating blood pressure, drug treatments and stroke. Expert Rev Cardiovasc Ther. 2009 Jun;7(6):703-13. doi: 10.1586/erc.09.43. PubMed PMID: 19505285.
  2. Kjeldsen SE. Hypertension and cardiovascular risk: General aspects. Pharmacol  Res. 2018 Mar;129:95-99. doi: 10.1016/j.phrs.2017.11.003. Epub 2017 Nov 7. Review. PubMed PMID: 29127059.
  3. Hypertension and cardiovascular risk: General aspects. Kjeldsen SE. Pharmacol Res. 2018 Mar;129:95-99. doi: 10.1016/j.phrs.2017.11.003. Epub 2017 Nov 7. Review.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.