high blood pressure hypertension causes unknown risks
Reading Time: 2 minutes

ಬೇರೆ ಕಾಯಿಲೆಗಳಂತೆ ಹೈಪರ್‌ಟೆನ್ಶನ್‌ ಯಾವುದೇ ದೈಹಿಕ ಗುಣಲಕ್ಷಣಗಳನ್ನು ತೋರಿಸುವುದಿಲ್ಲ, ಇದು ಒಳಗೊಳಗೇ ಬೆಳೆಯುವ ಕಾಯಿಲೆ. ಅದಲ್ಲದೇ, ಹೈಪರ್‌ಟೆನ್ಶನ್‌ ಕಾಯಿಲೆ ಇರುವ ಹಲವರಲ್ಲಿ, ಅವರ ರಕ್ತದೊತ್ತಡ ಏರುಪೇರಾಗುವ ಅಪಾಯ ಯಾವಾಗಲೂ ಹೆಚ್ಚಾಗಿರುತ್ತದೆ, ಇದರಿಂದಾಗಿ ಹೃದಯದ ಕಾಯಿಲೆ ಹಾಗೂ ಕಿಡ್ನಿಗೆ ಹಾನಿಯಾಗುವ ಸಾಧ್ಯತೆಗಳು ತುಂಬಾ ಹೆಚ್ಚು. ಆದ್ದರಿಂದ, ಹೃದಯದ ಮೇಲಾಗುವ ತೊಂದರೆಗಳನ್ನು ತಡೆಯಲು ರಕ್ತದೊತ್ತಡವನ್ನು ನಿರ್ವಹಿಸುವುದು ತುಂಬಾ ಮುಖ್ಯ. ಇದನ್ನು ತಡೆಯಲು ಇರುವ ಒಳ್ಳೆಯ ದಾರಿ ಎಂದರೆ, ಹೈಪರ್‌ಟೆನ್ಶನ್‌ ಕಾಯಿಲೆಯನ್ನು ಮತ್ತಷ್ಟು ಹೆಚ್ಚಿಸುವ ಸಂಗತಿಗಳು ಯಾವುವು ಎಂದು ತಿಳಿದುಕೊಂಡು, ಅವುಗಳ ಕುರಿತು ಎಚ್ಚರಿಕೆಯಿಂದ ಇರುವುದು.

ಒಂದು ವೇಳೆ ನಿಮಗೆ ಹೈಪರ್‌ಟೆನ್ಶನ್‌ ಇದೆ ಎಂದು ಕಂಡುಬಂದರೆ, ನಿಮ್ಮ ದೈನಂದಿನ ಚಟುವಟಿಕೆಗಳು ರಕ್ತದೊತ್ತಡದ ಮೇಲೆ ಪರಿಣಾಮ ಬೀರುವಲ್ಲಿ, ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ನೀವು ತಿಳಿದಿರಬೇಕು.

1. ಶೇಖರಿಸಿಟ್ಟಿರುವ ದಿನನಿತ್ಯದ ಆಹಾರ

ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್ ಮೆಡಿಕಲ್‌ ಸೈನ್ಸ್‌ನ (AIIMS) ಹೆಸರಾಂತ ಕಾರ್ಡಿಯಾಲಜಿಸ್ಟ್‌ ಆದ ಡಾ. ನಿತೀಶ್‌ ನಾಯಕ್‌ ಅವರು, ಹೈಪರ್‌ಟೆನ್ಶನ್‌ ಹೊಂದಿರುವ ರೋಗಿಗಳು, ಶೇಖರಿಸಿದ ಆಹಾರವನ್ನು ಸೇವಿಸುವುದರಿಂದ ಅವರ ರಕ್ತದೊತ್ತಡದ ಮೇಲೆ ಯಾವ ರೀತಿಯ ಪರಿಣಾಮಗಳು ಆಗುತ್ತಿವೆ ಎಂಬ ವಿಷಯದ ಮೇಲೆ ಬೆಳಕು ಚೆಲ್ಲುತ್ತಾರೆ. ಅವರು ಹೇಳುವ ಪ್ರಕಾರ, ಉಪ್ಪು ಹೆಚ್ಚಾಗಿರುವ ಆಹಾರಗಳು ರಕ್ತದೊತ್ತಡವನ್ನು ಹೆಚ್ಚಿಸುತ್ತವೆ. ಜೊತೆಗೆ ಬೇಕಿಂಗ್‌ ಸೋಡಾ, ಬೇಕಿಂಗ್‌ ಪೌಡರ್‌ ಹಾಗೂ ಮೋನೊಸೋಡಿಯಂ ಗ್ಲುಟಮೇಟ್‌ ಬಳಸಿ ತಯಾರಿಸಿರುವ ಆಹಾರಗಳಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾಗಿರುವುದರಿಂದ, ಇವು ಕೂಡ ರಕ್ತದೊತ್ತಡವನ್ನು ಹೆಚ್ಚಿಸುತ್ತವೆ. ಇಂತಹ ಪದಾರ್ಥಗಳು ಸಾಮಾನ್ಯವಾಗಿ ಸಂಸ್ಕರಿಸಿ ಶೇಖರಿಸಿದ ಆಹಾರಗಳಾದ ಬ್ರೆಡ್‌, ರೋಲ್‌, ಪಿಜ್ಜಾ, ಸ್ಯಾಂಡ್‌ವಿಚ್‌ ಹಾಗೂ ಕೋಳಿಮಾಂಸ, ಮೊಟ್ಟೆಯ ಮೂಲಕ ನಿಮ್ಮ ಹೊಟ್ಟೆಯನ್ನು ಸೇರಿಕೊಂಡುಬಿಡುತ್ತವೆ. 

2. ಚಿಕಿತ್ಸೆಯ ಬಳಕೆ

ನೋವು ನಿವಾರಿಸುವ ಮಾತ್ರೆಗಳನ್ನು ಇಲ್ಲವೇ ಶೀತ, ಕೆಮ್ಮು ಇದ್ದಾಗ ಡಾಕ್ಟರ್‌ ಚೀಟಿ ಇಲ್ಲದೇ ಮೆಡಿಕಲ್‌ನಲ್ಲಿ ನೇರವಾಗಿ ಸಿಗುವ ಮಾತ್ರೆಗಳನ್ನು ನೀವು ಆಗಾಗ ತೆಗೆದುಕೊಳ್ಳುತ್ತೀರಾ? ಒಂದು ವೇಳೆ, ನಿಮಗೆ ಹೈಪರ್‌ಟೆನ್ಶನ್‌ ಇದ್ದರೆ ಯಾವುದೇ ಔಷಧಿ ತೆಗೆದುಕೊಳ್ಳುವ ಮೊದಲು ಎರಡೆರಡು ಬಾರಿ ಯೋಚಿಸಿ. ಏಕೆಂದರೆ, ಈ ಔಷಧಿಗಳನ್ನು ಹೆಚ್ಚಾಗಿ ಬಳಸಿದರೆ ನಿಮ್ಮ ರಕ್ತದೊತ್ತಡ ಮೇಲೇರಿ ಅದು ಹಲವು ತೊಂದರೆಗಳಿಗೆ ಎಡೆಮಾಡಿಕೊಡಬಹುದು. ಡಾ. ನಾಯಕ್‌ ಅವರು ಹೇಳುವ ಪ್ರಕಾರ, “ಶೀತ, ಕೆಮ್ಮಿಗಾಗಿ ಬಳಸುವ ಕೆಲವು ಔಷಧಿಗಳಲ್ಲಿ ಡಿಕಂಜೆಸ್ಟೆಂಟ್‌ಗಳಿರುತ್ತವೆ ಇವು ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತವೆ. ಹಾಗೆಯೇ ಮೈಯಲ್ಲಿ ಯಾವುದಾದರೂ ಹಳೆಯ ನೋವಿದ್ದು, ಅದಕ್ಕಾಗಿ ತೆಗೆದುಕೊಳ್ಳುವ ಮಾತ್ರೆಗಳು ಕೂಡ ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತವೆ. ಮಕ್ಕಳಾಗುವುದನ್ನು ಮುಂದೂಡಲು ತೆಗೆದುಕೊಳ್ಳುವ ಮಾತ್ರೆಗಳು, ಸ್ಟೀರಾಯ್ಡ್‌, ಮಾನಸಿಕ ತೊಂದರೆಗಳಿಗೆ ನೀಡುವ ಮಾತ್ರೆಗಳು ಹಾಗೂ ಕೆಲವು ಗಿಡಮೂಲಿಕೆಯ ಔ‍ಷಧಿಗಳು ರಕ್ತದೊತ್ತಡವನ್ನು ಮೇಲೇರಿಸಬಹುದು.” 

3. ಒಂದು ವೇಳೆ ನಿಮಗೆ ದಿನದಲ್ಲಿ 2 ಲೋಟಕ್ಕಿಂತ ಹೆಚ್ಚು ಕಾಫಿ ಇಲ್ಲವೇ ಟೀ ಕುಡಿಯುವ

ಅಭ್ಯಾಸವಿದ್ದರೆ, ನಿಮಗೇ ಗೊತ್ತಿಲ್ಲದೆ ನಿಮ್ಮ ಹೈಪರ್‌ಟೆನ್ಶನ್‌ ಪರಿಸ್ಥಿತಿಯನ್ನು ನೀವು ಇನ್ನೂ ಹದಗೆಡೆಸುತ್ತಿರುವಿರಿ ಎಂದರ್ಥ. ಹೈಪರ್‌ಟೆನ್ಶನ್‌ ಇರುವವರು ಹೆಚ್ಚಾಗಿ ಕಾಫಿ ಇಲ್ಲವೇ ಟೀಯನ್ನು ಕುಡಿಯಬಾರದು ಎಂದು ಡಾ. ನಾಯಕ್‌ ಎಚ್ಚರಿಸುತ್ತಾರೆ. ಅದರಲ್ಲೂ ಕಡಿಮೆ ವಯಸ್ಸಿನ ಹೈಪರ್‌ಟೆನ್ಶನ್‌ ರೋಗಿಗಳ ಮೇಲೆ ಇದು ಹೆಚ್ಚಿನ ಕೆಟ್ಟ ಪರಿಣಾಮ ಬೀರುವುದು ಎಂದು ಅವರು ಹೇಳುತ್ತಾರೆ. 

ಹೈಪರ್‌ಟೆನ್ಶನ್‌ ಕುರಿತು ನೀವು ನಂಬಲೇಬಾರದ ಕೆಲವು ಕಟ್ಟುಕತೆಗಳು ಇಲ್ಲಿವೆ.

4. ದೈಹಿಕ ಚಟುವಟಿಕೆಯ ಕೊರತೆ

ಕೆಲಸಕ್ಕೆಂದು ಆಫೀಸಿಗೆ ಹೋಗಿ ಬರುವುದರಿಂದ ದೇಹಕ್ಕೆ ಬೇಕಾದಷ್ಟು ದೈಹಿಕ ಚಟುವಟಿಕೆ ಸಿಗುವುದು ಎಂದು ನೀವು ಅಂದುಕೊಂಡಿರಬಹುದು. ಆದರೆ ಅದು ಸುಳ್ಳು. ಒಂದು ವೇಳೆ, ದಿನವಿಡೀ ಕುಳಿತುಕೊಂಡೇ ಕೆಲಸ ಮಾಡುತ್ತಿದ್ದರೆ, ಆಗ ನೀವು ಕೆಲವು ದೈಹಿಕ ಚಟುವಟಿಕೆಗಳನ್ನು ಮಾಡಲೇಬೇಕಿರುತ್ತದೆ. ಹಲವು ಸಲಹೆ ಇಲ್ಲವೇ ಮಾರ್ಗದರ್ಶನಗಳ ಪ್ರಕಾರ, ಹೈಪರ್‌ಟೆನ್ಶನ್‌ ಇರುವವರು ತಮ್ಮ ಹೈಪರ್‌ಟೆನ್ಶನ್‌ ಪರಿಸ್ಥಿತಿ ಇನ್ನೂ ಹದಗೆಟ್ಟು ಹೋಗುವುದನ್ನು ತಡೆಯಲು, ಪ್ರತಿದಿನ ಕಡಿಮೆ ಎಂದರೂ 30 ನಿಮಿಷ ಮಧ್ಯಮ ತೀವ್ರತೆಯ ವ್ಯಾಯಾಮಗಳನ್ನು ಮಾಡಬೇಕು. ಜಾಗಿಂಗ್‌, ಈಜು ಹಾಗೂ ಸೈಕ್ಲಿಂಗ್‌ನಂತಹ ಕೆಲವು ವ್ಯಾಯಾಮಗಳನ್ನು ನೀವು ಶುರುಮಾಡಬಹುದು.

5. ಮಾನಸಿಕ/ಭಾವನಾತ್ಮಕ ಒತ್ತಡ:

ನಿಮ್ಮ ಆರೋಗ್ಯ ಎಷ್ಟು ಚೆನ್ನಾಗಿರುತ್ತದೆ ಎಂಬುದನ್ನು ನಿಮ್ಮ ಜೀವನಶೈಲಿ ತೀರ್ಮಾನಿಸುತ್ತದೆ. ಕೆಲಸದ ಮೇಲಿನ ಒತ್ತಡ, ಕೋಪ, ಅತಿಯಾದ ಆಲೋಚನೆ, ಚಿಂತೆ ಹಾಗೂ ಇರುಳಿನಲ್ಲಿ ಸರಿಯಾಗಿ ನಿದ್ದೆ ಮಾಡದೇ ಇರುವುದು ನಿಮ್ಮ ರಕ್ತದೊತ್ತಡದ ಮೇಲೆ ದೊಡ್ಡ ಪರಿಣಾಮವನ್ನು ಬೀರಿ ಆರೋಗ್ಯವನ್ನು ಹಾಳುಗೆಡುವಿ ಹಾಕಬಹುದು. ಒತ್ತಡ ಹೆಚ್ಚಾದಾಗ ನಿಮ್ಮ ಕಾರ್ಟಿಸೋಲ್, ಅಡ್ರಿನಲಿನ್‌ ಪ್ರಮಾಣ ಹೆಚ್ಚುತ್ತದೆ. ಅದರಿಂದಾಗಿ ಹೃದಯವು ವೇಗವಾಗಿ ರಕ್ತವನ್ನು ಪಂಪ್‌ ಮಾಡುತ್ತದೆ. ಕೊನೆಗೆ ಅದು ರಕ್ತದೊತ್ತಡ ಹೆಚ್ಚಾಗಲು ಕಾರಣವಾಗುತ್ತದೆ. ಹಾಗಾಗಿ, ನಿಮ್ಮ ಒತ್ತಡಕ್ಕೆ ಇರುವ ಕಾರಣಗಳನ್ನು ತಿಳಿದುಕೊಳ್ಳಿ, ದೇಹ ಹಾಗೂ ಮನಸಿಗೆ ಬೇಕು ಅನಿಸಿದಾಗ ಚೆನ್ನಾಗಿ ವಿಶ್ರಾಂತಿ ತೆಗೆದುಕೊಳ್ಳಿ. 

 

ಆಕರಗಳು:

  1. Chei CL1, Loh JK2, Soh A3, Yuan JM4,5, Koh WP6,7. Coffee, tea, caffeine, and risk of hypertension: The Singapore Chinese Health Study. Eur J Nutr. 2018 Jun;57(4):1333-1342. doi: 10.1007/s00394-017-1412-4. Epub 2017 Mar 1.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.