ಕಂದು, ಹಸಿರು, ಅಥವಾ ಕೆಂಪು, ಬೇಳೆಕಾಳುಗಳು ಯಾವುದೇ ಇರಲಿ, ಇವು ಶಕ್ತಿಯ ಅತ್ಯುತ್ತಮ ಮೂಲಗಳು. ಹೆಚ್ಚಿನ ಭಾರತೀಯ ಮನೆಗಳಲ್ಲಿ ಬೇಳೆ ಅನ್ನ ಅಥವಾ ಖಿಚ್ಡಿ ಪ್ರಧಾನ ಆಹಾರ. ಕಡಿಮೆ ಕ್ಯಾಲರಿ ಮತ್ತು ಹೆಚ್ಚು ನಾರು, ಅಮೈನೋ ಆಮ್ಲಗಳು ಮತ್ತು ಆಂಟಿಆಕ್ಸಿಡೆಂಟ್ಸ್ ಅಧಿಕವಾಗಿದ್ದು, ಅವು ಅತ್ಯುತ್ತಮ ಆಹಾರ ಪೂರಕಗಳಾಗಿವೆ. ವಾಸ್ತವವಾಗಿ, ಇವು ದೇಹಕ್ಕೆ ಅನೇಕ ಪ್ರಯೋಜನಗಳನ್ನು ಸಹ ತರಬಹುದು.
ಉದ್ದಿನ ಬೇಳೆ, ಕೆಂಪು ಬೇಳೆ, ಹೆಸರು ಬೇಳೆ, ತೊಗರಿ ಬೇಳೆ, ಕಡಲೆ ಬೇಳೆ ಮತ್ತು ರಾಜ್ಮಾ ಇವೆಲ್ಲವೂ ಜೀವಸತ್ವಗಳು, ಕಬ್ಬಿಣ, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್ ಮತ್ತು ಕಾರ್ಬೋಹೈಡ್ರೇಟ್‌ಗಳಂತಹ ಖನಿಜಗಳ ಪ್ರಮುಖ ಮೂಲವಾಗಿವೆ. ಇವು ಅತ್ಯುತ್ತಮ ಮಟ್ಟದ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.
ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಬೇಳೆಕಾಳುಗಳು ಹೇಗೆ ಸಹಾಯ ಮಾಡುತ್ತವೆ?
ಅಧಿಕ ರಕ್ತದೊತ್ತಡ ಇರುವವರು ತಮ್ಮ ದೈನಂದಿನ ಆಹಾರಕ್ರಮದಲ್ಲಿ ದ್ವಿದಳ ಧಾನ್ಯಗಳು ಮತ್ತು ಬೇಳೆಕಾಳುಗಳನ್ನು ಸೇರಿಸಬೇಕು ಎಂದು ನಮ್ಮ ತಜ್ಞ ನಿಧಿ ಧವನ್, ಎಚ್‌ಒಡಿ – ಡಯೆಟಿಟಿಕ್ಸ್, ಸರೋಜ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ದೆಹಲಿ, ಸೂಚಿಸುತ್ತಾರೆ. ಬೇಳೆಕಾಳುಗಳು ಅಲ್ಪ ಪ್ರಮಾಣದ ಪಾಲಿಅನ್‌ಸಾಚುರೇಟೆಡ್ ಫ್ಯಾಟಿ ಆಸಿಡ್ಸ್ ಹೊಂದಿರುತ್ತದೆ, ಇದು ಅಪಧಮನಿಗಳಲ್ಲಿ ಪ್ಲಾಕ್ ಅನ್ನು ರೂಪಿಸುವ ಹಾನಿಕಾರಕ ಲಿಪಿಡ್‌ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ಉತ್ತಮ ರಕ್ತ ಪರಿಚಲನೆಯನ್ನು ಉತ್ತೇಜಿಸಿ ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ದೂರ ಇಡುತ್ತದೆ. ಇದಲ್ಲದೆ, ಅವುಗಳ ನಾರಿನ ಅಂಶವು ರಕ್ತದಲ್ಲಿನ ಕೊಲೆಸ್ಟರಾಲ್ ಮಟ್ಟಕ್ಕೆ ಸಂಬಂಧಿಸಿದ ಅಸ್ವಸ್ಥತೆಗಳನ್ನು ತಪ್ಪಿಸಲು, ಕರುಳಿನಲ್ಲಿನ ಕೊಬ್ಬು ಮತ್ತು ಕೊಲೆಸ್ಟರಾಲ್ ಅನ್ನು ಹೀರಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ.
ಬೇಳೆಕಾಳುಗಳ ಮತ್ತೊಂದು ಪ್ರಯೋಜನವೇನೆಂದರೆ ಅವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಅವುಗಳಲ್ಲಿ ಹೆಚ್ಚು ನಾರಿನ ಅಂಶವಿರುವುದರಿಂದ, ಇದು ಊಟ ಮಾಡಿದ ತಕ್ಷಣ ಸಕ್ಕರೆ ಮಟ್ಟವು ತುಂಬಾ ವೇಗವಾಗಿ ಏರುವುದನ್ನು ತಡೆಯುತ್ತದೆ.
ಬೇಳೆಕಾಳುಗಳ ಸೇವನೆಯು ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುವ ಅರ್ಜಿನೈನ್ ಮತ್ತು ಇತರ ಸಂಯುಕ್ತಗಳ ಲಭ್ಯತೆಯನ್ನು ಹೆಚ್ಚಿಸಬಹುದು ಎಂದು ಸಂಶೋಧನೆ ಸೂಚಿಸಿದೆ, ಇದರಿಂದಾಗಿ ಬೇಳೆಕಾಳು-ಸಮೃದ್ಧ ಆಹಾರದ ರಕ್ತದೊತ್ತಡ-ಕಡಿಮೆಗೊಳಿಸುವ ಪರಿಣಾಮಗಳೂ ಕೂಡ ಹೆಚ್ಚಾಗುತ್ತವೆ.[1]
ನಿಮ್ಮ ಆಹಾರದಲ್ಲಿ ಬೇಳೆಕಾಳುಗಳನ್ನು ಸೇರಿಸುವ ಬಗೆಗಳು
- ನಿಮ್ಮ ಸಲಾಡ್‌ಗಳಿಗೆ ಅರ್ಧ ಬೇಯಿಸಿದ ಬೇಳೆಗಳನ್ನು ಸೇರಿಸಿ
- ರೊಟ್ಟಿಗಳನ್ನು ತಯಾರಿಸುವಾಗ ಉಳಿದ ಬೇಳೆ ಅಥವಾ ಬೇಯಿಸಿದ ಬೇಳೆಯನ್ನು ಹಿಟ್ಟಿನಲ್ಲಿ ಸೇರಿಸಬಹುದು.
- ಕಡಲೆಯಂತಹ ದ್ವಿದಳ ಧಾನ್ಯಗಳನ್ನು ಉಪ್ಪಿನೊಂದಿಗೆ ಕುದಿಸಿ ಮಧ್ಯಾಹ್ನದ ತಿಂಡಿ ಆಗಿ ಸೇವಿಸಬಹುದು
- ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಹೆಸರು, ಮಸೂರ್ ಮತ್ತು ತೊಗರಿ ಬೇಳೆಯಂತಹ ವಿವಿಧ ರೀತಿಯ ಬೇಳೆಗಳನ್ನು ಸೇರಿಸಿ
- ಕಿಡ್ನಿ ಬೀನ್ಸ್ (ರಾಜ್ಮ) ಮತ್ತು ಬೇಳೆ ಮಿಶ್ರಣದಿಂದ ಟಿಕ್ಕಿ ಅಥವಾ ಸ್ಯಾಂಡ್‌ವಿಚ್‌ಗಳನ್ನು ತಯಾರಿಸಿ
ಉಲ್ಲೇಖಗಳು:
1. Hanson M, Zahradka P, Taylor CG, Aliani M. European Journal of Nutrition. 2018 Feb;57(1):297-308. doi: 10.1007/s00394-016-1319-5. Epub 2016 Oct 21.