high-blood-pressure-treatment-home-remedies
Reading Time: 2 minutes

ನಮ್ಮಲ್ಲಿ ಅಧಿಕ ರಕ್ತದೊತ್ತಡವೆಂಬುದು ಸಾಮಾನ್ಯವಾಗಿ ವಯೋಸಹಜ ಸಮಸ್ಯೆ ಎಂಬ ತಪ್ಪು ಕಲ್ಪನೆ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ವಯೋಸಹಜವಾಗಿ ಮಾತ್ರ ಉಳಿಯದೆ ಆಧುನಿಕ ಜಗತ್ತಿನಲ್ಲಿ ಅಳವಡಿಸಿಕೊಂಡಿರೊ ವೇಗದ ಜೀವನ ಪದ್ದತಿ ಮತ್ತು ಚಿಂತಾಕ್ರಾಂತ ಜೀವನ ಶೈಲಿಯಿಂದಾಗಿ ವಯಸ್ಸಿನ ಭೇದವಿಲ್ಲದೆ ಎಲ್ಲ ವಯೋಮಾನದವರಲ್ಲು ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಅದಲ್ಲದೆ, ಈ ಅಂಶಗಳು ಹೃದಯರಕ್ತನಾಳದ ಖಾಯಿಲೆಗಳಿಗೆ ದಾರಿ ಮಾಡಿಕೊಡುತ್ತಿದ್ದು ಸೂಕ್ತ ಸಮಯದೊಳಗೆ ಇವುಗಳ ಮೇಲೆ ನಿಯಂತ್ರಣ ಸಾಧಿಸಬೇಕಾಗಿದೆ.

ನೀವು ಒಂದು ವೇಳೆ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಸಾಮಾನ್ಯವಾಗಿ ಅದರಿಂದ ಹೊರಬರಲು ಸದಾ ಮಾತ್ರೆ ನುಂಗುತ್ತಿರುತ್ತೀರಿ ಮತ್ತು ನಿಮ್ಮ ಸಂಪೂರ್ಣ ದೇಹವನ್ನ ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳುತ್ತ ಇನ್ನೆಷ್ಟು ಘಾಸಿಗೊಂಡಿದೆ ಎಂದು ತಿಳಿಯುತ್ತೀರಿ ಅಷ್ಟೆ. ಆದರೆ ಇವೆಲ್ಲವುಕ್ಕಿಂತಲ್ಲು ಪರಿಣಾಮಾಕಾರಿಯಾದ ಮತ್ತು ಆರೋಗ್ಯಕರವಾದ ದಾರಿಗಳು ಈ ಸಮಸ್ಯೆಯಿಂದ ಹೊರಬರಲು ಇವೆ. ನ್ಯೂಟ್ರಿಶನ್ ತಜ್ಞರಾದ ನಿಖಿಲ್ ಚೌಧರಿಯವರು ತಿಳಿಸುವ ಜೀವನ ಶೈಲಿಯನ್ನು, ಆಹಾರಕ್ರಮವನ್ನು ಅಳವಡಿಸಿಕೊಂಡಿದ್ದೆ ಆದಲ್ಲಿ ಯಾವುದೆ ಅಡ್ಡಪರಿಣಾಮವಿಲ್ಲದೆ ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಸುಲಭವಾಗಿ ಹೊರಬರಬಹುದಾಗಿದೆ. 

1. ಬಿಸಿಲು ಕಾಯಿಸುವುದು

ದೇಹದ ಚರ್ಮದಲ್ಲಿರುವ ನೈಟ್ರಿಕ್ ಆಕ್ಸೈಡ್ ರಕ್ತದೊತ್ತಡವನ್ನು ನಿಭಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಚರ್ಮವನ್ನು ಸೂರ್ಯನತ್ತ ಒಡ್ಡಿದ್ದಾಗ, ನೈಟ್ರಿಕ್ ಆಕ್ಸೈಡ್ ಹೆಚ್ಚಿನ ಪ್ರಮಾಣದಲ್ಲಿ ಒಸರುವ ಮೂಲಕ ರಕ್ತದ ಕಣಗಳು ಹಿಗ್ಗುತ್ತವೆ. ಇದು ರಕ್ತದೊತ್ತಡದ ಮಟ್ಟವನ್ನು ನಿಯಂತ್ರಣಕ್ಕೆ ತರುವಲ್ಲಿ ಸಹಾಯಕಾರಿಯಾಗಿದೆ.

2. ಕ್ಯಾಲ್ಸಿಯಂ ಪೂರಕ

ಹಾಲು ಮತ್ತು ಹಾಲಿನ ಉತ್ಪನ್ನಗಳು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದ್ದು, ಕೆಲವರು ಹೆಚ್ಚುವರಿ ಕ್ಯಾಲ್ಸಿಯಂ ಪೂರಕಗಳನ್ನು ಸೇವಿಸಿ ಆರೋಗ್ಯವನ್ನು ಸುಧಾರಿಸಿಕೊಳ್ಳುತ್ತಿದ್ದಾರೆ. ಕೆಲವು ಸಂಶೋಧನೆಗಳು ರಕ್ತದೊತ್ತಡದ ಹೆಚ್ಚಳವು ಕ್ಯಾಲ್ಸಿಫಿಕೇಶನ್‌ನಿಂದ ಉಂಟಾದರೆ, ದೇಹಕ್ಕೆ ಹೆಚ್ಚಿನ ಕ್ಯಾಲ್ಸಿಯಂ ಪೂರೈಸುವುದು ಅಪಾಯಕಾರಿ ಎಂದು ಸೂಚಿಸುತ್ತದೆ. ಕ್ಯಾಲ್ಸಿಯಂ ಅನ್ನು ನಿರಂತರವಾಗಿ ತೆಗೆದುಕೊಳ್ಳುವುದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿರುವುದರಿಂದ, ನಿಮ್ಮ ಆಹಾರಕ್ರಮದಲ್ಲಿ ಹೆಚ್ಚು ಕ್ಯಾಲ್ಸಿಯಂ ಅನ್ನು ಸೇರಿಸುವ ಮೊದಲು ವೈದ್ಯರೊಡನೆ ಈ ಬಗ್ಗೆ ವಿಚಾರ ಮಾಡವುದು ಉತ್ತಮ.

3. ಒತ್ತಡಗಳ ನಿಗ್ರಹಿಸುವಿಕೆ

ರಕ್ತದೊತ್ತಡಕ್ಕೆ ಪ್ರಮುಖ ಕಾರಣ ಒತ್ತಡ ಅಲ್ಲದಿದ್ದರೂ, ಇವುಗಳು ರಕ್ತದೊತ್ತಡವನ್ನು ತೀರ ಅತಿರೇಕಕ್ಕೆ ಕೊಂಡೊಯ್ಯಬಲ್ಲವು. ವಿಶೇಷವಾಗಿ, ಆ ವ್ಯಕ್ತಿಗಳು ಕೆಲಸದ ಒತ್ತಡ, ಬದುಕಿನ ನಾನಾ ತೊಂದರೆಗಳು, ಕೋಪ ತರಿಸುವಂತಹ ವಿಚಾರಗಳು ಇತ್ಯಾದಿಗಳಿಂದ ಬಳಲುತ್ತಿದ್ದರೆ. ಯೋಗ, ಆಕ್ಯುಪಂಕ್ಚರ್  ಮತ್ತು ಇನ್ನಿತರ ಸಮಾಧಾನಗೊಳ್ಳುವ ವಿಧಾನಗಳನ್ನ ಅಭ್ಯಾಸ ಮಾಡುವುದು ಒತ್ತಡಗಳಿಂದ ಹೊರಬರಲು ಅತ್ತ್ಯುತ್ತಮ ವಿಧಾನಗಳಾಗಿವೆ. 

4. ಧ್ಯಾನ ಮತ್ತು ಉಸಿರಾಟ

ಧ್ಯಾನವು ಮಾನಸಿಕ ಒತ್ತಡ ಮತ್ತು ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರಬಲ್ಲ ಅತ್ತ್ಯುತ್ತಮ ಮಾರ್ಗ. ಧ್ಯಾನದ ಮತ್ತೊಂದು ಪ್ರಮುಖ ಅಂಶವೆಂದರೆ ಉಸಿರಾಟ.ಧ್ಯಾನಸ್ತ ಸ್ಥಿತಿಯಲ್ಲಿ ಉಸಿರಾಡುವಾಗ ನಮ್ಮ ಮೂಗಿನ ಸೊಳ್ಳೆಗಳಲ್ಲಿ ಕಡಿಮೆ ಪ್ರಮಾಣದ ನೈಟ್ರಿಕ್ ಆಕ್ಸೈಡ್ ಬಿಡುಗಡೆ ಆಗುತ್ತದೆ ಎಂದು ಕಂಡುಬಂದಿದೆ. ನೈಟ್ರಿಕ್ ಆಕ್ಸೈಡ್ ನಮ್ಮ ಶ್ವಾಸಕೋಶದಲ್ಲಿರುವ ರಕ್ತನಾಳಗಳನ್ನು ಹಿಗ್ಗಿಸುವ ಮೂಲಕ ದೇಹದಲ್ಲಿನ ರಕ್ತ ಸಂಚಾರವನ್ನು ಸರಾಗಗೊಳಿಸುತ್ತವೆ.

5. ವ್ಯಾಯಾಮ ಅಭ್ಯಾಸ

ವ್ಯಾಯಾಮ ಹೃದಯದ ಸಾಮಾರ್ಥ್ಯವನ್ನು ಹೆಚ್ಚುಸುವುದರ ಜೊತೆಗೆ ರಕ್ತನಾಳಗಳ ಗೋಡೆಗಳನ್ನು ಶಾಂತಗೊಳಿಸುತ್ತದೆ. ಪ್ರತಿದಿನ ವ್ಯಾಯಾಮ ಮಾಡುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಒಮ್ಮೆ ನಿಮಗೆ 40 ವರ್ಷ ತುಂಬಿದ ನಂತರ, ವಿಶೇಷವಾಗಿ ನಿಮಗೆ ಅಧಿಕ ರಕ್ತದೊತ್ತಡದ ಸಮಸ್ಯೆ ಇದ್ದರೆ, ನಿಮ್ಮ ವೈದ್ಯರನ್ನು ಸಂಪರ್ಕಿಸಿ ಒತ್ತಡ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಈಜು, ಅಕ್ವಾ ಬೈಕ್, ಸಮತಟ್ಟಾದ ಪ್ರದೇಶದಲ್ಲಿ ಸೈಕ್ಲಿಂಗ್, ಮತ್ತು ಹದವಾದ ವಾತಾವರಣದಲ್ಲಿ ಓಡುವುದು ಇನ್ನಿತರ ತೀವ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ್ದ ಆರೋಗ್ಯ ಸ್ಥಿತಿ ಉತ್ತಮಗೊಳಿಸಲು ಇಂತಹ ಚಟುವಟಿಕೆಗಳ ಪ್ರಯೋಜನವನ್ನು ಪಡೆದುಕೊಳ್ಳಿ. ಆದಷ್ಟು ಟೆನ್ನಿಸ್, ಸ್ಕ್ವಾಶ್ ತರಹದ ಉದ್ರಿಕ್ತಗೊಳ್ಳುವ ಕ್ರೀಡೆಗಳಿಂದ ದೂರ ಇರುವುದು ಉತ್ತಮ, ವಿಶೇಷವಾಗಿ ನೀವು ಈಗಾಗಲೇ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ. ಯಾವುದೆ ಹೊಸ ಅಭ್ಯಾಸವನ್ನು ಪ್ರಾರಂಭಿಸುವ ಮುನ್ನ ಒಮ್ಮೆ ಡಾಕ್ಟರನ್ನು ಕಾಣಲು ಮರೆಯದಿರಿ.

ಈ ಮೇಲ್ಕಂಡ ಎಲ್ಲಾ ಸಲಹೆಗಳು ಸುಲಭವಾಗಿದ್ದು, ಪರಿಣಾಮಕಾರಿಯಾಗಿದ್ದು, ಮತ್ತು ಪ್ರಯತ್ನಿಸುವುದರಿಂದ ಖಂಡಿತ ಯಾವುದೇ ನಷ್ಟವಿರುವುದಿಲ್ಲ.

 

ಉಲ್ಲೇಖಗಳು:

1. Weller R.B. Blood Purif 2016;41:130-134, https://doi.org/10.1159/000441266

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.