high cholesterol cardiovascular diseases
Reading Time: 2 minutes

ವೈದ್ಯರು ಆರೋಗ್ಯದ ಕುರಿತು ಎಚ್ಚರಿಸುವಾಗ ಹೈ ಕೊಲೆಸ್ಟರಾಲ್ ಎಂಬ ಪದಬಳಕೆ ಮಾಡುವುದನ್ನು ಹೆಚ್ಚಿನ ಜನರು ಕೇಳಿರುತ್ತಾರೆ. ಇದು ನಿಮ್ಮನ್ನು ಹೃದ್ರೋಗದ ಅಪಾಯಕ್ಕೆ ಗುರಿ ಮಾಡುವುದರಿಂದ ಇದರ ಬಗ್ಗೆ ಒತ್ತಿ ಹೇಳಿರುತ್ತಾರೆ, ಅದು ಹೇಗೆ ಎಂಬುದನ್ನು ನೋಡೋಣ.

ಹೈ ಕೊಲೆಸ್ಟರಾಲ್ ಇಲ್ಲವೇ ಡಿಸ್ಲಿಪಿಡೀಮಿಯಾ ಎಂದರೇನು

ದೇಹದಲ್ಲಿ ಕೊಲೆಸ್ಟರಾಲ್ ಮತ್ತು ಟ್ರೈಗ್ಲಿಸರೈಡ್‌ ಮಟ್ಟ ನಿರಂತರವಾಗಿ ಹೆಚ್ಚಳವಾಗಲು ಕಾರಣವಾಗುವ ಮೆಟಬಾಲಿಕ್ ಅಸಹಜತೆಯನ್ನು ಹೈ ಕೊಲೆಸ್ಟರಾಲ್ (ಹೈಪರ್‌ಲಿಪಿಡೀಮಿಯಾ ಅಂತಲೂ ಕರೆಯಲಾಗುತ್ತದೆ) ಇಲ್ಲವೇ ಡಿಸ್ಲಿಪಿಡೀಮಿಯಾ ಎನ್ನಲಾಗುತ್ತದೆ. ಒಟ್ಟು ಐದು ಬಗೆಗಳಲ್ಲಿ, ಕೊಲೆಸ್ಟರಾಲ್ ಮತ್ತು ಟ್ರೈಗ್ಲಿಸರೈಡ್‌ ಎರಡನ್ನೂ ಡಿಸ್ಲಿಪಿಡೀಮಿಯಾ ಮತ್ತು ಹೈಪರ್‌ಲಿಪಿಡೀಮಿಯಾ ಹೆಚ್ಚಿಸುತ್ತದೆ ಎಂದು ಕಂಡುಬಂದಿದೆ.[1]

ಪ್ರಪಂಚದಾದ್ಯಂತ ಸಾವಿಗೆ ಕಾರಣವಾಗುವ ಸಾಮಾನ್ಯ ಅಂಶಗಳಲ್ಲಿ ಹೈ ಕೊಲೆಸ್ಟರಾಲ್ ಕೂಡ ಒಂದಾಗಿದೆ. ಒಬ್ಬ ವ್ಯಕ್ತಿಯ ಒಟ್ಟಾರೆ ಕೊಲೆಸ್ಟರಾಲ್ ಮಟ್ಟವು 5.0 mmol/L ಇಲ್ಲವೇ 190 mg/L ಗಿಂತಲೂ ಹೆಚ್ಚು ಕಂಡು ಬಂದಾಗ ಹೈ ಕೊಲೆಸ್ಟರಾಲ್ ಇರುವುದು ಕಂಡು ಬರುತ್ತದೆ.

ಇದಕ್ಕೂ ಹೃದಯದ ಕಾಯಿಲೆಗೂ ಇರುವ ನಂಟೇನು

ಜಿನೀವಾದಲ್ಲಿ ನಡೆಸಿದ ಒಂದು ಅಧ್ಯಯನದ ಪ್ರಕಾರ, ವಿಶ್ವದ ಮೂರನೇ ಒಂದು ಭಾಗದಷ್ಟು ಇಸ್ಕೀಮಿಕ್ ಹೃದ್ರೋಗವು, ಹೈಪರ್‌ಕೊಲೆಸ್ಟರಲೀಮಿಯಾದಿಂದ (ಒಂದು ಬಗೆಯ ಡಿಸ್ಲಿಪಿಡೀಮಿಯಾ) ಉಂಟಾಗುತ್ತದೆ. ಪ್ರತಿವರ್ಷ ವಿಶ್ವದ 26 ಲಕ್ಷ ಜನರು ಈ ಸಮಸ್ಯೆಯ ಕಾರಣಕ್ಕೆ ಸಾವನ್ನಪ್ಪುತ್ತಾರೆ ಎಂದು ಅಂದಾಜಿಸಲಾಗಿದೆ.(3) ಇದಲ್ಲದೇ, 2020 ರ ವೇಳೆಗೆ ಕಾರ್ಡಿಯೋವ್ಯಾಸ್ಕುಲರ್‌ ಕಾಯಿಲೆಯ ಹರಡುವಿಕೆಯು ಎರಡರಷ್ಟು ಆಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ. ಇದು ಎಚ್‌ಐವಿ/ಏಡ್ಸ್‌ಗಿಂತಲೂ ಹೆಚ್ಚಿನ ಸಾವಿಗೆ ಕಾರಣವಾಗುತ್ತದೆ.[2]

ಹೈಪರ್‌ಕೊಲೆಸ್ಟರಲೀಮಿಯಾವು (ಹೈ ಕೊಲೆಸ್ಟರಾಲ್) ವ್ಯಕ್ತಿಯ ಆರ್ಟರಿಗಳಲ್ಲಿ ಕೊಬ್ಬಿನಂತಹ ವಸ್ತು ಶೇಖರಣೆಯಾಗಲು ದಾರಿ ಮಾಡಿಕೊಡುತ್ತದೆ, ಕ್ರಮೇಣ ರಕ್ತನಾಳಗಳು ಕಿರಿದಾಗಿ ಅಥೆರೊಸ್ಕ್ಲೆರೊಸಿಸ್‌ಗೆ ಕಾರಣವಾಗುತ್ತದೆ. ಅಥೆರೊಸ್ಕ್ಲೆರೊಸಿಸ್‌ ಸಮಸ್ಯೆಯು ಹೃದ್ರೋಗ, ಹೃದಯಾಘಾತ, ಪೆರಿಫೆರಲ್ ಆರ್ಟರಿ ಕಾಯಿಲೆ ಇಲ್ಲವೇ ಪಾರ್ಶ್ವವಾಯುವಿಗೆ ಎಡೆಮಾಡಿಕೊಡುತ್ತದೆ. ಕಡಿಮೆ ಮಟ್ಟದ HDL ಜೊತೆಗೆ ಹೆಚ್ಚಿನ ಮಟ್ಟದ ಟ್ರೈಗ್ಲಿಸರೈಡ್‌ಗಳಿಂದ ಆರ್ಟರಿಗಳಲ್ಲಿ ಕೊಬ್ಬಿನಂಶ ಹೆಚ್ಚುತ್ತದೆ. ಇದರಿಂದಾಗಿ ಹೃದ್ರೋಗ ಮತ್ತು ಇತರೆ ತೊಂದರೆಗಳ ಅಪಾಯ ಹೆಚ್ಚಾಗುತ್ತದೆ.

ಹೈ ಕೊಲೆಸ್ಟರಾಲ್‌ಗೆ ಕಾರಣವಾಗುವ ಅಂಶಗಳು ಯಾವುವು?

ಹೈ ಕೊಲೆಸ್ಟರಾಲ್‌ಗೆ ಕಾರಣವಾಗುವ ಕೆಲವು ಪ್ರಮುಖ ಅಂಶಗಳೆಂದರೆ ಅಳತೆ ಮೀರಿದ ತೂಕ ಇಲ್ಲವೇ ಬೊಜ್ಜು, ಹೈಪೊಥೈರಾಯ್ಡಿಸಮ್‌, ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್, ಮೆಟಬಾಲಿಕ್ ಸಿಂಡ್ರೋಮ್, ಜೆನೆಟಿಕ್ ಪ್ರಿಡಿಸ್ಪೊಸಿಶನ್ ಇಲ್ಲವೇ ಕುಶಿಂಗ್ ಸಿಂಡ್ರೋಮ್.[4]

ಪರಿಸ್ಥಿತಿಯನ್ನು ಸರಿಪಡಿಸಿಕೊಳ್ಳಲು ಸಲಹೆಗಳು:

  1. ನಿಯಮಿತವಾಗಿ ವ್ಯಾಯಾಮ ಮಾಡಿ: ನಡಿಗೆ, ಜಾಗಿಂಗ್, ಸೈಕ್ಲಿಂಗ್ ಇಲ್ಲವೇ ಕೊಲೆಸ್ಟರಾಲ್ ಮಟ್ಟದ ಮೇಲೆ ನಿಗಾ ಇಡಲು ಸಹಾಯ ಮಾಡುವಂತಹ ಯಾವುದೇ ವ್ಯಾಯಾಮವಾದರೂ ಸರಿ.
  2. ಆರೋಗ್ಯಕರ ಆಹಾರ ತಿನ್ನಿ: ಅಧಿಕ ಕೊಲೆಸ್ಟರಾಲನ್ನು ದೂರ ಇಡಲು ಆರೋಗ್ಯಕರ ಆಹಾರಕ್ರಮವನ್ನು ಪಾಲಿಸುವುದು ತುಂಬ ಮುಖ್ಯ. ಆರೋಗ್ಯಕರ ಆಹಾರವನ್ನು ತಿನ್ನುವುದರಿಂದ ದೇಹವು ಹೀರಲ್ಪಡುವ ಕೊಬ್ಬಿನ ಪ್ರಮಾಣವು ಆರೋಗ್ಯಕರ ಮಟ್ಟದ್ದಾಗಿರುತ್ತದೆ ಹಾಗೂ ಅದು ರಕ್ತನಾಳಗಳಲ್ಲಿ ಶೇಖರಣೆಯಾಗುವುದಿಲ್ಲ.
  3. ತೂಕ ಇಳಿಸಿಕೊಳ್ಳಿ: ತಜ್ಞರ ಪ್ರಕಾರ, 10-15% ತೂಕವನ್ನು ಇಳಿಸಿಕೊಂಡರು ಕೂಡ, ಕೊಲೆಸ್ಟರಾಲ್ ಮಟ್ಟದಲ್ಲಿ ವ್ಯತ್ಯಾಸವನ್ನು ಕಾಣಬಹುದಾಗಿದೆ.
  4. ಧೂಮಪಾನವನ್ನು ಬಿಟ್ಟುಬಿಡಿ: ಧೂಮಪಾನವು ಹಲವಾರು ಕಾಯಿಲೆಗಳಿಗೆ ಕಾರಣವಾಗಿದ್ದರೂ, ಪ್ಲಾಕ್ ಕಟ್ಟಿಕೊಳ್ಳಲು ಕಾರಣವಾಗುವುದರಿಂದ ಹೃದ್ರೋಗ ಮತ್ತು ಹೃದಯಾಘಾತ ತಂದೊಡ್ಡುವ ಪ್ರಮುಖ ಕಾರಣಗಳಲ್ಲಿ ಇದು ಒಂದಾಗಿದೆ.

ಉಲ್ಲೇಖಗಳು: 

  1. Agence Francaise de Securite Sanitaire des Produits de Sante, [AFSSAPS guideline for the treatment of dyslipidemia]. Rev Prat. 2005 Oct 31; 55(16):1788-93.
  2. Dyslipidemia, obesity and other cardiovascular risk factors in the adult population in Senegal. Doupa D, Seck SM, Dia CA, Diallo FA, Kane MO, Kane A, Gueye PM, Mbaye MN, Gueye L, Jobe M. Pan Afr Med J. 2014; 19():181.
  3. OMS. Cadre Global Mondial de Suivi, Comprenant des Indicateurs, et Série de Cibles Mondiales Volontaires Pour la Lutte Contre les Maladies non Transmissibles. Geneva, Switzerland: OMS; 2012. 
  4. Mayoclinic.com/diseases-conditions/high-blood-cholesterol/symptoms-causes

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.