hypertension-treatment-blood-pressure-machine-sphyghypertension-treatment-blood-pressure-machine-sphygmomanometermomanometer
Reading Time: 2 minutes

ಸ್ಪಿಗ್ಮಾನೋಮೀಟರ್ ಅಥವಾ ರಕ್ತದೊತ್ತಡ ಗುರುತಿಸುವ ಮಾನಿಟರ್ ಒಂದು ಕೈ ಸಾಧನವಾಗಿದ್ದು, ಹೆಚ್ಚು ರಕ್ತದೊತ್ತಡದಿಂದ ಬಳಲುತ್ತಿರುವವರಿಗಾಗಿ ಇದನ್ನು ತಯಾರಿಸಲಾಗಿದೆ. ಇದು ಒದಗಿಸುವ ವಿಶ್ವಾಸಾರ್ಹ ಫಲಿತಾಂಶಗಳಿಂದಾಗಿ ಇದನ್ನು ಜಾಗತಿಕವಾಗಿ ಆರೋಗ್ಯ ವೃತ್ತಿಪರರು ಗುರುತಿಸಿದ್ದಾರೆ. ಆದಾಗ್ಯೂ, ಸಾಧನವನ್ನು ಹೆಚ್ಚು ಬಳಸಿಕೊಳ್ಳಲು ಮತ್ತು ಸರಿಯಾದ ರೀಡಿಂಗ್ ಅನ್ನು ಪಡೆಯಲು, ಅದನ್ನು ಸರಿಯಾಗಿ ನಿರ್ವಹಿಸಬೇಕು ಮತ್ತು ಸರಿಯಾಗಿ ಬಳಸಬೇಕು.

ಸ್ವಂತದೊಂದು ರಕ್ತದೊತ್ತಡ ಮಾನಿಟರನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ್ದ ಆಗುವ ಲಾಭಗಳೇನು?

 • ಮನೆಯಲ್ಲಿ ಮಾನಿಟರನ್ನು ಇಟ್ಟುಕೊಳ್ಳುವುದರಿಂದ ನಮ್ಮ ರಕ್ತದೊತ್ತಡವನ್ನು ಖುದ್ದು ನಾವೆ ಪರೀಕ್ಷೆ ಮಾಡಿಕೊಳ್ಳಬಹುದು.
 • ದೈನಂದಿನ ತಪಾಸಣೆ ನಿಮಗೆ ವಿಶ್ವಾಸಾರ್ಹ ಮತ್ತು ನಿಖರವಾದ ಅನುಸರಣೆಯನ್ನು ವೈದ್ಯರೊಂದಿಗೆ ಹೊಂದಲು ಅನುವು ಮಾಡಿಕೊಡುತ್ತದೆ.
 • ಔಷಧಿಗಳನ್ನು ತೆಗೆದುಕೊಳ್ಳುವಾಗ, ದೈಹಿಕ ಚಟುವಟಿಕೆಯನ್ನು ಅಥವಾ ಹೊಸ ಆಹಾರಕ್ರಮವನ್ನು ಪ್ರಾರಂಭಿಸುವ ಸಂದರ್ಭದಲ್ಲಿ, ಇವುಗಳು ನಿಮ್ಮ ರಕ್ತದೊತ್ತಡದ ಮೇಲೆ ಯಾವ ಬಗೆಯ ಪರಿಣಾಮ ಬೀರುತ್ತಿದೆ ಎಂದು ನೀವು ಅಳೆಯಲು ಹಾಗೂ ಮೌಲ್ಯಮಾಪನ ಮಾಡಲು ಈ ಮಾನಿಟರ್ ಸಹಕಾರಿ.

ಮನೆಯಲ್ಲಿಯೇ ರಕ್ತದೊತ್ತಡದ ಮೇಲ್ವಿಚಾರಣೆ ಮಾಡುವಾಗ ನೆನಪಿನಲ್ಲಿಡಬೇಕಾದ ಅಂಶಗಳು

ಮಾನಿಟರಿಂಗ್ ಮಾಡುವುದಕ್ಕು ಮೊದಲು ನಡೆಸುವ ದೈಹಿಕ ಚಟುವಟಿಕೆಗಳು ಅಥವಾ ಇತರೆ ಒತ್ತಡಗಳು ರಕ್ತದೊತ್ತಡದ ಗುರುತಿಸುವಿಕೆಯ ಮೇಲೆ ಪ್ರಭಾವ ಬೀರುತ್ತವೆ. ಪಟ್ಟಿಯನ್ನು ತೋಳಿಗೆ ಸರಿಯಾದ ಕ್ರಮದಲ್ಲಿ ಸುತ್ತದೆ ಇರುವುದರಿಂದ ತಪ್ಪಾದ ರೀಡಿಂಗ್ ಅನ್ನು ಮಾನಿಟರ್ ತೋರುತ್ತದೆ.

ಆರೋಗ್ಯ ತಜ್ಞರ ಅಭಿಪ್ರಾಯವೇನೆಂದರೆ ಬಹಳ‍‍‍‍‍‍‍‍‍‍‍‍‍ಷ್ಟು ಜನರು ತಮ್ಮ ರಕ್ತದೊತ್ತಡವನ್ನು ಸರಿಯಾದ ರೀಡಿಂಗ್‍ಗಳನ್ನು ಪಡೆಯದೆ ಎಡವುತ್ತಿದ್ದಾರೆ. ಈ ರೀತಿ ತಪ್ಪಾದ ಫಲಿತಾಂಶ ಪಡೆಯಲು ಪ್ರಮುಖ ಕಾರಣವೆಂದರೆ ತೋಳಿಗೆ ಪಟ್ಟಿಯನ್ನು ಸರಿಯಾದ ಕ್ರಮದಲ್ಲಿ ಸುತ್ತಿಕೊಳ್ಳದಿರುವುದು. ಸ್ಪಷ್ಟವಾದ ಮತ್ತು ನಿಖರವಾದ ಫಲಿತಾಂಶ ತಿಳಿಯಬೇಕೆಂದರೆ ಸರಿಯಾಗಿ ಮೊಣಕೈ ಮೇಲೆ ಮತ್ತು ಮೇಲ್ತೋಳಿನ ನಡುವೆ ಪಟ್ಟಿಯನ್ನು ಸುತ್ತಿರಬೇಕು.

ರಕ್ತದೊತ್ತಡದ ಪಟ್ಟಿಯನ್ನು ಧರಿಸುವುದು ಹೇಗೆ

 • ಮಾನಿಟರ್ ಖರೀದಿಸುವಾಗ ನಿಮ್ಮ ತೋಳಿನ ಅಳತೆಗೆ ಸರಿಹೊಂದುವಂತಹ ಪಟ್ಟಿಯನ್ನು ಆಯ್ಕೆ ಮಾಡಿಕೊಳ್ಳಿ.
 • ಪಟ್ಟಿಯ ಕೆಳಭಾಗವು ಮೊಣಕೈ ಮೇಲೆ ಇರುವಂತೆ ಮತ್ತು ಮೊಣಕೈ ಬಾಗಿನ ಮೇಲೆ ನೇರವಾಗಿ ಇರುವಂತೆ ನೋಡಿಕೊಳ್ಳಿ ಮತ್ತು ಯಾವುದೆ ಕಾರಣಕ್ಕು ಪಟ್ಟಿಯನ್ನು ಬಟ್ಟೆಗಳ ಮೇಲೆ ಧರಿಸಿ ರೀಡಿಂಗನ್ನು ತೆಗೆದುಕೊಳ್ಳಬೇಡಿ.
 • ಪ್ರತಿದಿನವು ಒಂದೆ ತೋಳನ್ನು ಪರೀಕ್ಷೆಗೆ ಉಪಯೋಗಿಸಿ ಮತ್ತು ಒಂದು ನಿಮಿ‍ಷ ಅಂತರದಲ್ಲಿ ಕನಿಷ್ಟ ಎರಡು ರೀಡಿಂಗ್ ಆದರೂ ತೆಗೆದುಕೊಂಡು ಅವೆರಡರ ಮಧ್ಯೆ ಏನಾದರು ವ್ಯತ್ಯಾಸ ಇದೆಯೇ ಎಂದು ಪರೀಕ್ಷಿಸಿ.

ಏನು ಮಾಡಬೇಕು ಮತ್ತು ಏನು ಮಾಡಬಾರದು

 • ಪರೀಕ್ಷೆಗೆ ಒಳಪಡುವ ಮುಂಚಿನ ಒಂದು ಗಂಟೆ ಅವಧಿಯಲ್ಲಿ ಯಾವುದೆ ಕ್ರೀಡೆ ಮತ್ತು ಪ್ರಯಾಸದಾಯಕ ಕೆಲಸದಲ್ಲಿ ತೊಡಗಿಸಿಕೊಳ್ಳಬೇಡಿ.
 • ಪರೀಕ್ಷೆಗೆ ಒಳಪಡುವ ಮುಂಚಿನ ಒಂದು ಗಂಟೆ ಅವಧಿಯಲ್ಲಿ ಯಾವುದೆ ರೀತಿಯ ತಿಂಡಿ ಊಟವನ್ನಾಗಲಿ, ಕಾಫೀ, ಟೀ, ಮದ್ಯವನ್ನು ಸೇವಿಸಬೇಡಿ.
 • ಹತ್ತು ನಿಮಿಷದ ಮಟ್ಟಿಗೆ ವಿಶ್ರಾಂತಿ ಪಡೆಯಿರಿ, ರಕ್ತದೊತ್ತಡದ ಪರೀಕ್ಷೆಯ ಮುಂಚೆ ನಿಮ್ಮ ಮೂತ್ರಚೀಲವನ್ನು ಖಾಲಿ ಮಾಡಿರಿ.
 • ನಿಮ್ಮ ಕೈ ಗಡಿಯಾರ ಮತ್ತು ಒಡವೆ ಇತ್ಯಾದಿಗಳನ್ನು ಬಿಚ್ಚಿಡುವುದರಿಂದ ತೋಳಿನಲ್ಲಿ ಉಂಟಾಗುವ ಒತ್ತಡವನ್ನು ತಪ್ಪಿಸಬಹುದು ಮತ್ತು ಮಾನಿಟರ್‌ನ ಟ್ಯೂಬಿಗೆ ಆಗುವ ಅಡಚ‍ಣೆಗಳನ್ನು ಸಹ ತಪ್ಪಿಸಬಹುದು.
 • ಕಾಲುಗಳನ್ನು ಮಡಚದೆ ನೇರವಾಗಿ ಕುಳಿತುಕೊಳ್ಳಿ ಮತ್ತು ಪಾದವನ್ನು ನೆಲದ ಮೇಲಿಡಿ.
 • ತೋಳಿನ ಸುತ್ತ ಪಟ್ಟಿಯನ್ನು ಹೆಚ್ಚು ಬಿಗಿಯಾಗಿ ಕಟ್ಟಬೇಡಿ.  
 • ಮಾನಿಟರ್‌ನಲ್ಲಿ ರೀಡಿಂಗ್ ತೆಗೆದುಕೊಳ್ಳುವಾಗ ಅಲುಗಾಡದೆ, ಮಾತನಾಡದೆ, ಏನನ್ನು ಮುಟ್ಟದೆ ಸುಮ್ಮನೆ ಕುಳಿತಿರಿ. 

ರೀಡಿಂಗ್ ಮತ್ತು ಫಲಿತಾಂಶಗಳನ್ನು ಬರೆದಿಡುವುದು

ನಿಖರವಾದ ಫಲಿತಾಂಶಗಳನ್ನು ಪಡೆಯಲು ತೋಳಿಗೆ ಸುತ್ತಿರುವ ಪಟ್ಟಿಯಲ್ಲಿರುವ ಗಾಳಿಯು ಪೂರ್ತಿಯಾಗಿ ಇಳಿಯುವವರೆಗೂ ಕಾಯಿರಿ, ತದನಂತರ ರೀಡಿಂಗ್ ದಾಖಲಿಸಿ. ಹೆಚ್ಚಿನ ಸಂದರ್ಭಗಳಲ್ಲಿ, ಸಿಗ್ನಲ್ ಮಾಪನದ ಅಂತ್ಯವನ್ನು ಸೂಚಿಸುತ್ತದೆ. ಒಂದು ವೇಳೆ ಮಾನಿಟರ್ ಅನಿರೀಕ್ಷಿತ ಅಳತೆಯ ಸೂಚನೆಗಳನ್ನು ಮತ್ತು ಭಿನ್ನ ವಿಭಿನ್ನ ಫಲಿತಾಂಶವನ್ನು ತೋರುತ್ತಿದ್ದರೆ ಅಂತಹ ಸಂದರ್ಭದಲ್ಲಿ ಕೆಲಕ್ಷಣಗಳ ನಂತರ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳುವುದು ಉತ್ತಮ. ನಿಮ್ಮ ಅನುಮಾನ ಪರಿಹಾರವಾಗದಿದ್ದಲ್ಲಿ ಡಾಕ್ಟರನ್ನು ಕಾಣುವುದು ಒಳಿತು, ಆದರೆ ಯಾವುದೆ ಸಂದರ್ಭದಲ್ಲು ತಜ್ಞರ ಸಲಹೆಯ ಹೊರತಾಗಿ ಚಿಕಿತ್ಸೆಯನ್ನು ನಿಲ್ಲಿಸಬೇಡಿ.

ನಿಮ್ಮ ರಕ್ತದೊತ್ತಡವನ್ನು ಅಳೆಯುವ ಮಾನಿಟರ್ ಎಷ್ಟೇ ನಿಖರವಾಗಿದ್ದರು ಸಹ ಪ್ರತಿ ಎರಡು ವರ್ಷಗಳಿಗೊಮ್ಮೆ ಅದನ್ನು ಪರೀಕ್ಷೆಗೆ ಒಳಪಡಿಸುವುದು ಸೂಕ್ತ. ಈ ಪರಿಶೀಲನೆಯು ಡೇಟಾದ ನಿಖರತೆಯನ್ನು ನವೀಕರಿಸಲು ಪಾದರಸ ಕಾಲಮ್ ಬಳಸಿ ಸಾಧನದ ಗುಣಮಟ್ಟವನ್ನು ಹೊಂದಿಸುವ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ.

ಕೆಲವು ಎಲಾಕ್ಟ್ರನಿಕ್ ಮಾನಿಟರ್‌ಗಳು ರಕ್ತದೊತ್ತಡವನ್ನು ಪರೀಕ್ಷೆ ಮಾಡುವುದಷ್ಟೆಯಲ್ಲದೆ ಫಲಿತಾಂಶಗಳನ್ನು ಉಳಿಸಿಕೊಳ್ಳುತ್ತವೆ, ಮತ್ತು ನೀವು ಅದನ್ನು ನೋಟ್ ಪುಸ್ತಕದಲ್ಲಿ ಕೂಡ ಬರೆದಿದಿಟ್ಟುಕೊಳ್ಳಬಹುದು. ನಿಮ್ಮ ಮೊಬೈಲ್ ಅಪ್ಲಿಕೇಶನ್‍ಗಳನ್ನು ಬಳಸಿ ಕೂಡ ಫಲಿತಾಂಶವನ್ನು ದಾಖಲೆ ಮಾಡಿಕೊಳ್ಳಬಹುದು ಮತ್ತು ಅದನ್ನು ನಿಮ್ಮ ಡಾಕ್ಟರ್‌ರೊಂದಿಗೆ ಸುಲಭವಾಗಿ ಹಂಚಿಕೊಳ್ಳಬಹುದು.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.