Pediatric Dyslipidemia
Reading Time: 3 minutes

ಹೃದಯ ಮತ್ತು ರಕ್ತನಾಳಗಳ ಮೇಲೆ ಪರಿಣಾಮ ಬೀರುವ ರೋಗಗಳು (ಹೃದಯ ರಕ್ತನಾಳ ಸಂಬಂಧಿ ಕಾಯಿಲೆಗಳು) ಜಾಗತಿಕವಾಗಿ ಸಾವಿಗೆ ಪ್ರಮುಖ ಕಾರಣಗಳಾಗಿವೆ.1,2 ಹೃದಯ ಸಂಬಂಧಿ ಕಾಯಿಲೆಗಳು ಚಿಕ್ಕವಯಸ್ಸಿನಲ್ಲಿಯೇ ಪ್ರಾರಂಭವಾಗಬಹುದು. ಹೃದಯ ರಕ್ತನಾಳದ ಕಾಯಿಲೆಗಳನ್ನು ತರಬಲ್ಲ ಅತ್ಯಂತ ಅಪಾಯಕಾರಿ ಅಂಶಗಳಲ್ಲಿ ಡಿಸ್ಲಿಪಿಡೀಮಿಯ ಕೂಡ ಒಂದು ಎಂಬುದು ನೆನೆಪಿರಲಿ.3

ಡಿಸ್ಲಿಪಿಡೀಮಿಯ ಎಂದರೇನು?

ರಕ್ತದಲ್ಲಿ ಅಸಹಜ ಲಿಪಿಡ್ (ಟ್ರೈಗ್ಲಿಸರೈಡ್ ಮತ್ತು ಕೊಲೆಸ್ಟರಾಲ್) ಮಟ್ಟಗಳು ಕಂಡುಬರುವ ಸ್ಥಿತಿಗೆ ಡಿಸ್ಲಿಪಿಡೀಮಿಯ ಎನ್ನಲಾಗುತ್ತದೆ. ಟ್ರೈಗ್ಲಿಸರೈಡ್‌ಗಳು ಎಣ್ಣೆ ಮತ್ತು ಬೇರೆ ಕೊಬ್ಬಿನಲ್ಲಿ ಕಂಡುಬರುವ ಅಂಶವಾಗಿದ್ದರೆ,4 ಕೊಲೆಸ್ಟರಾಲ್ ಒಂದು ರೀತಿಯ ದೇಹದ ಕೊಬ್ಬಾಗಿದ್ದು, ಇದು ಲಿಪೊಪ್ರೋಟೀನ್‌ಗಳು ಎಂದು ಕರೆಯಲ್ಪಡುವ ಸಣ್ಣ ಪ್ರೋಟೀನ್‌ಗಳಿಂದ ಸುತ್ತುವರೆದಿರುವ ಕಣಗಳ ಮೂಲಕ ದೇಹದೆಲ್ಲೆಡೆ ಸಂಚಾರ ನಡೆಸುತ್ತದೆ.5  ದೇಹದಲ್ಲಿ ಎರಡು ಬಗೆಯ ಲಿಪೊಪ್ರೋಟೀನ್‌ಗಳಿದ್ದು, ಒಳ್ಳೆಯ ಕೊಲೆಸ್ಟರಾಲ್ (ಹೈ ಡೆನ್ಸಿಟಿ ಲಿಪೊಪ್ರೋಟೀನ್ ಕೊಲೆಸ್ಟರಾಲ್) ಹಾಗೂ ಕೆಟ್ಟ ಕೊಲೆಸ್ಟರಾಲ್ (ಲೋ ಡೆನ್ಸಿಟಿ ಲಿಪೊಪ್ರೋಟೀನ್ ಕೊಲೆಸ್ಟರಾಲ್).6

ರಕ್ತದಲ್ಲಿ ಕೆಟ್ಟ ಕೊಲೆಸ್ಟರಾಲ್‌ನ ಮಟ್ಟ ಹೆಚ್ಚಾದಂತೆ, ರಕ್ತನಾಳಗಳ ಗೋಡೆಗಳ ಮೇಲೆ ಪ್ಲಾಕ್‌ ಕಟ್ಟಿಕೊಳ್ಳಲು ಪ್ರಾರಂಭವಾಗುತ್ತದೆ, ಇವು ರಕ್ತನಾಳಗಳ ಒಳ ತೆರುವನ್ನು ಕಿರಿದಾಗಿಸುತ್ತಾ ಹೋಗುತ್ತವೆ, ಈ ಸ್ಥಿತಿಯನ್ನು ಅಥೆರೊಸ್ಕ್ಲೂರೋಸಿಸ್ (ರಕ್ತನಾಳದ ಇಕ್ಕಟ್ಟು) ಎಂದು ಕರೆಯಲಾಗುತ್ತದೆ.6 ಇದರಿಂದ ಹೃದಯ ಮತ್ತು ಇತರೆ ಅಂಗಾಂಗಳಿಗೆ ರಕ್ತ ಹರಿಯಲು ಆಡಚಣೆ ಉಂಟಾಗುತ್ತದೆ.7 ರಕ್ತದಲ್ಲಿನ ಕೊಲೆಸ್ಟರಾಲ್‌ ಮಟ್ಟದಲ್ಲಿನ ಹೆಚ್ಚಳವು ಕೊರೊನರಿ ಆರ್ಟರಿ ಕಾಯಿಲೆಯ (ಹೃದಯಕ್ಕೆ ರಕ್ತ ಪೂರೈಕೆಯಲ್ಲಿ ಅಡಚಣೆ) ಸಾಧ್ಯತೆಯನ್ನು ಹೆಚ್ಚಿಸುತ್ತದೆ.7,8 ಹೃದಯಕ್ಕೆ ರಕ್ತ ಪೂರೈಕೆಯಲ್ಲಿ ತಡೆಯುಂಟಾದಾಗ ಹೃದಯಾಘಾತಕ್ಕೆ ಕಾರಣವಾಗಬಹುದು.6

ಮಕ್ಕಳು ಮತ್ತು ಹದಿಹರೆಯದವರಲ್ಲಿ ಡಿಸ್ಲಿಪಿಡೀಮಿಯ

ಬಾಲ್ಯದಲ್ಲಿಯೇ ಹೃದಯ ಸಂಬಂಧಿ ಕಾಯಿಲೆಗಳು ಪ್ರಾರಂಭವಾಗುತ್ತವೆ ಎಂದು ಅಧ್ಯಯನಗಳು ತೋರಿಸಿವೆ, ಡಿಸ್ಲಿಪಿಡೀಮಿಯ ಒಂದು ಪ್ರಮುಖ ಅಪಾಯಕಾರಿ ಅಂಶವಾಗಿದೆ. ದೈಹಿಕ ಚಟುವಟಿಕೆಯ ಕೊರತೆ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ತೂಕ ಹೆಚ್ಚಾಗುವುದು ಈ ಎಲ್ಲಾ ಕಾರಣಗಳು ಡಿಸ್ಲಿಪಿಡೀಮಿಯಕ್ಕೆ ಆಹ್ವಾನವನ್ನು ಇಡುವುದರಿಂದ, ಮಕ್ಕಳು ಮತ್ತು ಹದಿಹರೆಯದವರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಸಾವುಗಳನ್ನು ತಡೆಗಟ್ಟಲು ಡಿಸ್ಲಿಪಿಡೇಮಿಯಾವನ್ನು ಪರೀಕ್ಷಿಸುವುದು ಮತ್ತು ಚಿಕಿತ್ಸೆ ನೀಡುವುದು ಅಗತ್ಯವಾಗಿದೆ.3

ನಮ್ಮ ಮಗುವಿಗೆ ಡಿಸ್ಲಿಪಿಡೀಮಿಯ ಪರೀಕ್ಷೆ ಯಾವಾಗ ಮಾಡಿಸಬೇಕು? 

ಹುಟ್ಟಿದಾಗ ಲಿಪಿಡ್ ಮಟ್ಟ ಸಾಮಾನ್ಯವಾಗಿ ಕಡಿಮೆ ಇರುತ್ತದೆ. ಎರಡು ವರ್ಷ ವಯಸ್ಸಿನವರೆಗೆ ಏರುತ್ತಾ ಸಾಗುತ್ತದೆ. ಎಳೆಹರೆಯಕ್ಕೂ ಮುನ್ನ ಅತಿ ಹೆಚ್ಚಿರುತ್ತದೆ. ಅದಾದನಂತರ, ಹರೆಯದ ಕೊನೆಯಲ್ಲಿ 10-20% ನಷ್ಟು ಕಡಿಮೆಯಾಗುತ್ತದೆ, ವಯಸ್ಕರಾದಂತೆ ಮತ್ತೆ ಏರಿಕೆ ಕಂಡುಬರುತ್ತದೆ.9

ವಿವಿಧ ವಯೋಮಾನದವರು ಡಿಸ್ಲಿಪಿಡೀಮಿಯವನ್ನು ಯಾವಾಗ ಪರೀಕ್ಷಿಸಿಕೊಳ್ಳಬೇಕೆಂದು ಈ ಕೆಳಗೆ ಶಿಫಾರಸು ಮಾಡಲಾಗಿದೆ:8

2 ವರ್ಷ ಕೆಳಗಿನವರು: ಪರೀಕ್ಷೆಯ ಅವಶ್ಯಕತೆಯಿಲ್ಲ

2-8 ವರ್ಷದವರು: ಮಗು ಅಧಿಕ ರಕ್ತದೊತ್ತಡ, ಡಯಾಬಿಟಿಸ್ ಅಥವಾ ಬೊಜ್ಜನ್ನು ಹೊಂದಿದ್ದರೆ, ಇಲ್ಲವೇ ಮಗುವಿನ ತಂದೆ-ತಾಯಿ ಡಿಸ್ಲಿಪಿಡೀಮಿಯಗೆ ತುತ್ತಾಗಿದ್ದರೆ, ಅಥವಾ ಅಜ್ಜಿ-ತಾತ, ಸಂಬಂಧಿಕರು ಇಲ್ಲವೇ ಒಡಹುಟ್ಟಿದವರು ಯಾರಾದರೂ ಅಕಾಲಿಕ ಕೊರೊನರಿ ಆರ್ಟರಿ ರೋಗದಿಂದ ಬಳಲುತ್ತಿದ್ದರೆ ಮಗುವನ್ನು ಡಿಸ್ಲಿಪಿಡೀಮಿಯ ಪರೀಕ್ಷೆಗೆ ಒಳಪಡಿಸಬೇಕು

9-11 ವರ್ಷದವರು ಮತ್ತು 17-21 ವರ್ಷದವರು: ಪ್ರತಿಯೊಬ್ಬರೂ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಹೇಳಲಾಗುತ್ತದೆ

12-16 ವರ್ಷದವರು: ಕುಟುಂಬದಲ್ಲಿ ಅಥವಾ ವೈಯಕ್ತಿಕ ಹಿನ್ನಡವಳಿಯಲ್ಲಿ ಬದಲಾವಣೆ ಆದಂತಹ ಸಂದರ್ಭದಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತವೆಂದು ಹೇಳಲಾಗುತ್ತದೆ8

ಮಕ್ಕಳಲ್ಲಿ ಡಿಸ್ಲಿಪಿಡೀಮಿಯವನ್ನು ನಿಭಾಯಿಸುವುದು ಹೇಗೆ?

ಮಕ್ಕಳಲ್ಲಿ ಮತ್ತು ಹದಿಹರೆಯದಲ್ಲಿ ತಲೆದೋರುವ ಡಿಸ್ಲಿಪಿಡೀಮಿಯವನ್ನು ಜೀವನಶೈಲಿಯ ಬದಲಾವಣೆ, ಆಹಾರಪದ್ಧತಿಯ ಚಿಕಿತ್ಸೆ ಹಾಗೂ ಔಷಧೋಪಚಾರಗಳ ಮೂಲಕ ಸದೆಬಡೆಯಬಹುದು. 10

ಜೀವನಶೈಲಿಯ ಬದಲಾವಣೆ: ಮಕ್ಕಳು ಮತ್ತು ಹದಿಹರೆಯದವರು ಮಧ್ಯಮ ಹಂತದ ಅಥವಾ ಬಲವಾದ ದೈಹಿಕ ಚಟುವಟಿಕೆಯಲ್ಲಿ ನಿತ್ಯ ಪಾಲ್ಗೊಳ್ಳಬೇಕು. ಜಡ ಅಭ್ಯಾಸಗಳಾದ ವಿಡಿಯೋ ಗೇಮ್‌ಗಳನ್ನು ಆಡುವುದು, ಟೆಲಿವಿಷನ್ ನೋಡುವುದು ಮತ್ತು ಇಂಟರ್ನೆಟ್‍ನಲ್ಲಿ ಕಾಲಕಳೆಯುವುದನ್ನು ಕಡಿಮೆ ಮಾಡಬೇಕು.10

ಆಹಾರಕ್ರಮದ ಬದಲಾವಣೆ: ಆಹಾರಕ್ರಮದಲ್ಲಿನ ಬದಲಾವಣೆಯು ಆರೋಗ್ಯಕರ ಜೀವನಕ್ಕೆ ಕರೆದೊಯ್ಯುವ ಪ್ರಮುಖ ಮಾರ್ಗವಾಗಿದೆ. ಒಟ್ಟು ಕೊಬ್ಬು, ಕೊಲೆಸ್ಟರಾಲ್, ಟ್ರಾನ್ಸ್-ಫ್ಯಾಟ್ ಮತ್ತು ಸ್ಯಾಚುರೇಟೆಡ್ ಕೊಬ್ಬು ಕಡಿಮೆಯಿರುವ ಆಹಾರವನ್ನು ನಿಮ್ಮ ಮಕ್ಕಳಿಗೆ ರೂಢಿ ಮಾಡಿಸಬೇಕು.10 ಅನಾರೋಗ್ಯಕರ ಸಕ್ಕರೆಯ (ಕಚ್ಚಾ ಸಕ್ಕರೆ, ಲಾಲಿ ಪಾಪ್) ಪ್ರಮಾಣ ಕಡಿಮೆ ಆಗಬೇಕು, ಆರೋಗ್ಯಕರ ಸಕ್ಕರೆಯನ್ನು(ಅನ್ನ, ಓಟ್‌ಮೀಲ್, ಆಲೂಗೆಡ್ಡೆಯಲ್ಲಿ ಅಡಗಿರುವ ಸಕ್ಕರೆ) ತೆಗೆದುಕೊಳ್ಳುವ ಪ್ರಮಾಣವನ್ನು ಹೆಚ್ಚಿಸಬೇಕು.10,11

ಔಷಧೋಪಚಾರ: 10 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರು, 6 ರಿಂದ12 ತಿಂಗಳುಗಳ ವರೆಗೆ ಆಹಾರ ಮತ್ತು ಜೀವನಶೈಲಿಯ ಬದಲಾವಣೆಗಳನ್ನು ಮಾಡಿಕೊಂಡು ಪ್ರಯತ್ನಿಸಿದರೂ ಯಾವುದೇ ಉತ್ತಮ ಫಲಿತಾಂಶ ಬರದಿದ್ದಂತಹ ಸಂದರ್ಭದಲ್ಲಿ, ಔಷಧೋಪಚಾರಗಳ ಮೊರೆ ಹೋಗುವಂತೆ ಮಕ್ಕಳ ಡಾಕ್ಟರ್ ಸಲಹೆಯನ್ನು ನೀಡಬಹುದು.

ಹೆಚ್ಚಿನ ಮಕ್ಕಳು ತಮ್ಮ ಆರೋಗ್ಯದ ಆರೈಕೆ ಮತ್ತು ಸುರಕ್ಷತೆಗಾಗಿ ತಮ್ಮ ಹೆತ್ತವರ ಮೇಲೆ ಅವಲಂಬಿತರಾಗಿದ್ದಾರೆ.12 ಆದ್ದರಿಂದ, ಪೋಷಕರು ತಮ್ಮ ಮಕ್ಕಳಲ್ಲಿ ಡಿಸ್ಲಿಪಿಡೀಮಿಯ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯದ ಬಗ್ಗೆ ಹೆಚ್ಚು ಅರ್ಥಮಾಡಿಕೊಳ್ಳುವಲ್ಲಿ ಆರೋಗ್ಯ ಪೂರೈಕೆದಾರರೊಂದಿಗೆ ಸಾಮೂಹಿಕ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದ್ದರಿಂದ, ಪೋಷಕರು ಆರೋಗ್ಯ ತಜ್ಞರೊಂದಿಗೆ ಒಡಗೂಡಿ ಮಕ್ಕಳಿಗೆ ಬಂದೊದಗಬಹುದಾದ ಡಿಸ್ಲಿಪಿಡೀಮಿಯ ಮತ್ತು ಹೃದಯ ಸಂಬಂಧಿ ಕಾಯಿಲೆಯ ಅಪಾಯದ ಬಗ್ಗೆ ಅರ್ಥಮಾಡಿಕೊಂಡು ನಿಗಾವಹಿಸಬೇಕು.

ಉಲ್ಲೇಖ

  1. World Health Organization. Cardiovascular diseases [Internet]. [cited 2020 Jan 03]. Available from: https://www.who.int/health-topics/cardiovascular-diseases/#tab=tab_1.
  2. National Cancer Institute. Cardiovascular diseases [Internet]. [cited 2020 Jan 03]. Available from: https://www.cancer.gov/publications/dictionaries/cancer-terms/def/cardiovascular-disease.
  3. Kalra S, Gandhi A, Kalra B, Agrawal N. Management of dyslipidemia in children. Diabetol Metab Syndr. 2009 Dec 8;1(1):26.
  4. The John Hopkins Patient Guide to Diabetes. Dyslipidemia (High Cholesterol) [Internet] [cited 2020 Jan 03]. Available from: http://hopkinsdiabetesinfo.org/dyslipidemia/.
  5. Harvard Health Publishing. How it’s made: Cholesterol production in your body [Internet]. [updated 2019 July 31; cited 2020 Jan 03]. Available from: https://www.health.harvard.edu/heart-health/how-its-made-cholesterol-production-in-your-body.
  6. Centers for Disease Control and Prevention. LDL and HDL Cholesterol: “Bad” and “Good” Cholesterol [Internet] [updated 2017 Oct 31; cited 2020 Jan 03]. Available from: https://www.cdc.gov/cholesterol/ldl_hdl.htm.
  7. Centers for Disease Control and Prevention. Coronary Artery Disease (CAD) [Internet] [updated 2019 Dec 09; cited 2020 Jan 03]. Available from: https://www.cdc.gov/heartdisease/coronary_ad.htm.
  8. Coronary Artery Disease in Asian Indians. Pediatric Dyslipidemia [Internet]. [cited 2020 Jab 03]. Available from: https://cadiresearch.org/topic/children/pediatric-dyslipidemia.
  9. NCBI. Lipid Screening in Childhood for Detection of Multifactorial Dyslipidemia: A Systematic Evidence Review for the U.S. Preventive Services Task Force [Internet]. [updated 2016 Aug; cited 2020 Jan 03]. Available from: https://www.ncbi.nlm.nih.gov/books/NBK379672/.
  10. Yoon JM. Dyslipidemia in children and adolescents: when and how to diagnose and treat? Pediatr Gastroenterol Hepatol Nutr. 2014 Jun;17(2):85-92.
  11. KidsHealth. Learning About Carbohydrates [Internet]. [updated 2017 Apr; cited 2020 Jan 03]. Available from: https://kidshealth.org/en/kids/carb.html.
  12. NCBI. Parenting Matters: Supporting Parents of Children Ages 0-8 [Internet] [updated 2016 Nov 21; cited 2020 Jan 03]. Available from: https://www.ncbi.nlm.nih.gov/books/NBK402020/.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.