Reading Time: 2 minutes

ಇದನ್ನು 17 ವರ್ಷ ಅನುಭವ ಇರುವ ನುರಿತ ತಜ್ಞರಾದ ಅಶ್ವಿನಿ ಎಸ್. ಕಾನಡೆ ಅವರು ವಿಮರ್ಶಿಸಿದ್ದಾರೆ. ಇವರು ರಿಜಿಸ್ಟರ್ಡ್ ಡಯೆಟೀಷಿಯನ್ ಮತ್ತು ಸರ್ಟಿಫೈಡ್ ಡಯಾಬಿಟಿಸ್ ಎಜುಕೇಟರ್ ಆಗಿದ್ದಾರೆ.

ಇದರ ಸತ್ಯಾಂಶ ದೃಢಪಡಿಸಿದವರು ಆದಿತ್ಯ ನಾರ್, ಬಿ. ಫಾರ್ಮ್, ಎಂ.ಎಸ್. ಸಿ ಪಬ್ಲಿಕ್ ಹೆಲ್ತ್ ಮತ್ತು ಹೆಲ್ತ್ ಎಕನಾಮಿಕ್ಸ್.

ಹೊಸ ಔಷಧಿಯನ್ನು ಯಶಸ್ವಿಯಾಗಿ ಕಂಡುಹಿಡಿದು, ತಯಾರಿಸಿ, ಅದನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕಾದರೆ 10 ರಿಂದ 15 ವರ್ಷ ಬೇಕಾಗುತ್ತದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಹಲವಾರು ಸಂಶೋಧನೆಗಳು, ಸ್ಥಳೀಯ, ಸ್ವಾಭಾವಿಕವಾಗಿ ಸಿಗುವ ಮತ್ತು ಆ ಭಾಗದ ಜನರಲ್ಲಿ ಈಗಾಗಲೇ ಉಪಯೋಗದಲ್ಲಿರುವ ಔಷಧಿಗಳ ಅಧ್ಯಯನದ ಮೇಲೆ ಕೇಂದ್ರೀಕೃತವಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ.

ತಮಿಳುನಾಡಿನ ಇಬ್ಬರು ಸಂಶೋಧಕರು 2012 ರಲ್ಲಿ, ಕೊಲ್ಲಿ ಬೆಟ್ಟಗಳಲ್ಲಿರುವ (ತಮಿಳುನಾಡಿನ ನಮಕ್ಕಲ್ ಜಿಲ್ಲೆಯಲ್ಲಿದೆ) ಬುಡಕಟ್ಟು ಜನಾಂಗದವರು ಸಾಂಪ್ರದಾಯಿಕವಾಗಿ ಡಯಾಬಿಟಿಸ್ ಚಿಕಿತ್ಸೆಗೆ ಉಪಯೋಗಿಸುವ ಗಿಡಗಳ ಅಧ್ಯಯನ ನಡೆಸಿದರು. ಆಗ ಕ್ಯೂಕಂಡ್ (ಹಿಂದಿಯಲ್ಲಿ) ಅಥವಾ ಕೋಸ್ಟಮ್ (ತಮಿಳಿನಲ್ಲಿ) ಗಿಡದ ಎಳೆಗಳ ಬಳಕೆಯ ಬಗ್ಗೆ ಒಂದು ಕುತೂಹಲಕಾರಿ ಅಂಶ ಬೆಳಕಿಗೆ ಬಂದಿತು.(1)

ಈ ಗಿಡ ಮೂಲತಃ ಮಧ್ಯ ಮತ್ತು ದಕ್ಷಿಣ ಅಮೆರಿಕಾದ್ದು. ಮತ್ತು ತಡವಾಗಿ ಇದು ಭಾರತಕ್ಕೆ ಬಂತು. ಡಯಾಬಿಟಿಸ್‌ಗೆ ಸ್ವಾಭಾವಿಕವಾಗಿ ಸಿಗುವ ಪರಿಣಾಮಕಾರಿ ಔಷಧ ಎಂದು ಇಲ್ಲಿನ ಜನರಲ್ಲಿ ಪ್ರಚಾರವಾದ್ದರಿಂದ ಅದು ಇನ್ಸುಲಿನ್ ಗಿಡವೆಂದೇ ಹೆಸರುವಾಸಿಯಾಯಿತು.

ಸರಿ, ಆದರೆ  ವಿಜ್ಞಾನ ಏನೆಂದು ಹೇಳುತ್ತದೆ?

ಇನ್ಸುಲಿನ್ ಗಿಡದ ಡಯಾಬಿಟಿಸ್ ನಿಯಂತ್ರಿಸುವ ಪ್ರಭಾವವನ್ನು ಪರೀಕ್ಷಿಸಲು ಹಲವಾರು ಸಂಶೋಧನೆಗಳನ್ನು ಮಾಡಲಾಯಿತು: ಪ್ರಾಣಿಗಳು ಮತ್ತು ಪ್ರಾಣಿ ಅಂಗಾಂಶದ ಮೇಲೆ 17 ವಿವಿಧ ಅಧ್ಯಯನ ಮಾಡಲಾಯಿತು. ಈ ಗಿಡದ ಎಳಲೆಗಳ ಸಾರದಿಂದ ರಕ್ತದ ಸಕ್ಕರೆ ಪ್ರಮಾಣವನ್ನು ಯಶಸ್ವಿಯಾಗಿ ಕಡಿಮೆ ಮಾಡಬಹುದೆಂದು ಈ ಅಧ್ಯಯನಗಳು ತೋರಿಸಿವೆ.(2)

ಸರಿ… ಮನುಷ್ಯರ ಮೇಲಿನ ಅಧ್ಯಯನ?

ಈಗ ಮಾನವರ ಮೇಲೆ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ. ಇಲ್ಲಿಯವರೆಗೆ, ಭಾರತದ ಕಸ್ತೂರಿ ಬಾ ವೈದ್ಯಕೀಯ ಕಾಲೇಜಿನಲ್ಲಿ ಡಯಾಬಿಟಿಸ್ ರೋಗಿಗಳ ಮೇಲೆ ಒಂದು ಅಧ್ಯಯನವನ್ನು ಮಾತ್ರ ಮಾಡಲಾಗಿದೆ. ಈ ಅಧ್ಯಯನದ ಪ್ರಕಾರ ಇನ್ಸುಲಿನ್ ಗಿಡದ ತಾಜಾ ಎಲೆಗಳನ್ನು ತಿನ್ನುವುದರಿಂದ ಅಥವಾ 1 ಚಮಚ ಒಣಗಿದ ಎಳೆಗಳ ಪುಡಿಯನ್ನು ದಿನಾ ತಿನ್ನುವುದರಿಂದ ರೋಗಿಯ ರಕ್ತದ ಸಕ್ಕರೆ ಪ್ರಮಾಣವನ್ನು ಹಿಡಿತದಲ್ಲಿಡಬಹುದು. ಇದನ್ನು ಅಧ್ಯಯನ ಮಾಡಿದವರ ಪ್ರಕಾರ ಇದರ ಸೇವನೆಯ 15 ದಿನದ ನಂತರ ಇದು ಪ್ರಭಾವ ಬೀರಲು ಆರಂಭಿಸುವುದರಿಂದ, ಇದರ ಲಾಭ ಪಡೆದುಕೊಳ್ಳಲು ಎಲೆಯನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು.(3)

ಆದರೂ…

ನಿಮ್ಮ ಹತ್ತಿರದ ನರ್ಸರಿಗಳಲ್ಲಿ ಇನ್ಸುಲಿನ್ ಗಿಡವನ್ನು ಹುಡುಕುವ ಮುಂಚೆ, ಇನ್ನೊಂದು ಸಂಶೋಧನೆಯಿಂದ ಹೊರಬಂದಿರುವ ವಿಷಯವನ್ನು ತಿಳಿದುಕೊಳ್ಳಬೇಕು. ಇನ್ಸುಲಿನ್ ಗಿಡದ ಎಲೆಯನ್ನು ಅಧ್ಯಯನ ಮಾಡಿದಾಗ ಅದು ಮನುಷ್ಯರ ಸೇವನೆಗೆ ಸುರಕ್ಷಿತ ಎಂಬುವುದಲ್ಲದೇ, ಅದರಲ್ಲಿ ಹೆಚ್ಚಿನ ಪ್ರಮಾಣದ ಪಾಮೆಟಿಕ್ ಆ್ಯಸಿಡ್ ಇರುವುದು ಕಂಡುಬಂತು. ಈ ವಸ್ತುವು ಇಲಿಯ ಹೃದಯದ ಸ್ನಾಯುವಿನ ಜೀವಕೋಶಗಳಿಗೆ ಹಾನಿಯುಂಟುಮಾಡುವುದೆಂದು ಮತ್ತು ಮನುಷ್ಯರಲ್ಲಿ  ಅನಾರೋಗ್ಯಕಾರಿ ಕೊಲೆಸ್ಟೆರಾಲ್ (ಎಲ್ ಡಿ ಎಲ್) ಹೆಚ್ಚಿಸುತ್ತದೆಂದು ತಿಳಿಯಿತು. ಹಾಗಾಗಿ ಈ ಅಧ್ಯಯನದ ಸಂಶೋಧಕರು, ಈ ಗಿಡವನ್ನು ನಿರಂತರ ಹಾಗೂ ಹೆಚ್ಚು ದಿನಗಳ ಕಾಲ ಉಪಯೋಗಿಸಬಾರದೆಂದು ಹೇಳುತ್ತಾರೆ.(4)

ಆದ್ದರಿಂದ ಸಕ್ಕರೆ ಪ್ರಮಾಣದ ಮೇಲೆ ಇನ್ಸುಲಿನ್ ಗಿಡದ ಸಕಾರಾತ್ಮಕ ಪರಿಣಾಮವನ್ನು ಧೃಡಪಡಿಸಲು ಹೆಚ್ಚು ಸಂಶೋಧನೆಗಳು ಮಾಡಬೇಕಾಗಿದೆ. ಅಲ್ಲಿಯವರೆಗೆ ಇದರಿಂದ ದೂರವಿರುವುದೇ ಒಳ್ಳೆಯದು.

 

ಆಕರಗಳು:

  1. S. Elavarasi, K. Saravanan. Ethnobotanical Study of Plants used to treat Diabetes by Tribal People of Kolli Hills, Namakkal District, Tamil Nadu. International Journal of PharmTech Research · March 2012 Available online at: https://www.researchgate.net/profile/Saravanan_K3/publication/256296150_Ethnobotanical_Study_of_Plants_used_to_treat_Diabetes_by_Tribal_People_of_Kolli_Hills_Namakkal_DistrictTamilnadu_Southern_India/links/0c960522346df3d3f5000000/Ethnobotanical-Study-of-Plants-used-to-treat-Diabetes-by-Tribal-People-of-Kolli-Hills-Namakkal-District-Tamilnadu-Southern-India.pdf
  2. P.L. Hegde, H.A. Rao, P.N. Rao. A review on Insulin plant (Costus igneus Nak). Pharmacognosy Review. 2014; 8(15); 74-72 DOI: 10.4103/0973-7847.125536 Available online at: http://www.phcogrev.com/article.asp?issn=0973-7847;year=2014;volume=8;issue=15;spage=67;epage=72;aulast=Hegde
  3. A.J. Shetty, S.M. Parampalli, R. Bhandarkar, S. Kotian. Effect Of The Insulin Plant ( Costus Igneus ) Leaves On Blood Glucose Levels In Diabetic Patients: A Cross Sectional Study. Journal of Clinical and Diagnostic Research. 2010, June; 4(3); 2617 – 2621
  4. B. Jose, L.J. Reddy. Analysis Of The Essential Oils Of The Stems, Leaves And Rhizomes Of The Medicinalplant Costus Pictus From Southern India. International Journal of Pharmacy and Pharmaceutical Sciences. 2010; 2(2) Available online at: http://www.ijppsjournal.com/Vol2Suppl2/533.pdf

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.