Weight training and heart disease
Reading Time: 2 minutes


ತೂಕ ತರಬೇತಿ ಎನ್ನುವುದು ಶಕ್ತಿ ತರಬೇತಿಯ ವ್ಯಾಯಾಮವಾಗಿದೆ, ಇದು ಶ್ರಮಸಾಧ್ಯತೆ (ಸಹಿಷ್ಣುತೆ), ಫ್ಲೆಕ್ಸಿಬಿಲಿಟಿ ಮತ್ತು ಸಮತೋಲನದೊಂದಿಗೆ ನಾಲ್ಕು ಪ್ರಮುಖ ರೀತಿಯ ವ್ಯಾಯಾಮಗಳನ್ನು ರೂಪಿಸುತ್ತದೆ.(1) 
ಹೃದಯಾಘಾತದಂತಹ ಹೃದಯ ಸಂಬಂಧಿ ಅಪಘಾತಗಳ ನಂತರ ಅಥವಾ ನಿಮಗೆ ಹೃದಯ ಸಂಬಂಧಿ ಸಮಸ್ಯೆಗಳಿದ್ದರೆ ಈ ವ್ಯಾಯಾಮದ ಬಗ್ಗೆ ಹೆದರುವುದು ಸಹಜ.(1,2) ಆದಾಗ್ಯೂ, ಹೃದಯ ರೋಗಿಗಳು ವೇಟ್‌ಲಿಫ್ಟಿಂಗ್ ತರಬೇತಿಯಿಂದ ಪ್ರಯೋಜನ ಪಡೆಯಬಹುದು ಎಂದು ಹಲವಾರು ಅಧ್ಯಯನಗಳು ತೋರಿಸುತ್ತವೆ.(2) ಇಸ್ಕೀಮಿಕ್ ಹೃದ್ರೋಗ ಎಂದೂ ಕರೆಯಲ್ಪಡುವ ಕೊರೊನರಿಯ ಕಾಯಿಲೆ ಇರುವ ಜನರ ಕ್ರಿಯಾತ್ಮಕ ಸಾಮರ್ಥ್ಯವನ್ನು ವೇಟ್‌ಲಿಫ್ಟಿಂಗ್ ಸುಧಾರಿಸುತ್ತದೆ ಎಂದು ಪುರಾವೆಗಳು ಸೂಚಿಸುತ್ತವೆ.(2,3)

ಈ ಲೇಖನವು ಇಸ್ಕೀಮಿಕ್ ಹೃದ್ರೋಗದಂಥ ಹೃದಯ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿರುವವರು ಪಡೆಯಬಹುದಾದ ತೂಕ ತರಬೇತಿಯ ಪ್ರಯೋಜನಗಳು ಮತ್ತು ಅದರ ಸುರಕ್ಷತೆಯ ಬಗ್ಗೆ ಬೆಳಕು ಚೆಲ್ಲುತ್ತದೆ.

ಇಸ್ಕೀಮಿಕ್ ಹೃದಯ ಕಾಯಿಲೆ ಎಂದರೇನು?

ಇಸ್ಕೀಮಿಕ್ ಹೃದ್ರೋಗ ಎಂಬುದು, ರಕ್ತನಾಳಗಳು ಆಮ್ಲಜನಕ-ಸಮೃದ್ಧ ರಕ್ತವನ್ನು ಹೃದಯಕ್ಕೆ ಕೊಂಡೊಯ್ಯಲು ಸಾಧ್ಯವಾಗದ ಸ್ಥಿತಿಯಾಗಿದೆ.(3) ಪ್ಲೇಕ್ ಎಂಬ ಮೇಣದಂತಹ ಪದಾರ್ಥವು ರಕ್ತನಾಳದ ಗೋಡೆಗಳಿಗೆ ಅಂಟಿಕೊಂಡು ರಕ್ತನಾಳಗಳು ಕಿರಿದಾಗುವುದು ಅಥವಾ ಗಟ್ಟಿಯಾಗುವುದರಿಂದ, ಇದು ರಕ್ತದ ಹರಿವನ್ನು ತಡೆಯುತ್ತದೆ. ಈ ರಕ್ತಕೊರತೆಯ ಹೃದಯ ಕಾಯಿಲೆಯು ಹೃದಯಾಘಾತಕ್ಕೆ ಕಾರಣವಾಗಬಹುದು.(3)

ತೂಕ ತರಬೇತಿ ಎಂದರೇನು?

ತೂಕ ತರಬೇತಿಯನ್ನು ಪ್ರತಿರೋಧ ತರಬೇತಿ ಅಥವಾ ಶಕ್ತಿ ತರಬೇತಿ ಎಂದೂ ಕರೆಯುತ್ತಾರೆ. ಸ್ನಾಯುಗಳ ಗಾತ್ರ, ಶಕ್ತಿ ಮತ್ತು ಶ್ರಮಸಾಧ್ಯತೆ (ಸಹಿಷ್ಣುತೆ)ಯನ್ನು ಕಟ್ಟಿಕೊಳ್ಳಲು ಇದು ಸ್ನಾಯು ಕುಗ್ಗುವಿಕೆಯ ಪ್ರತಿರೋಧವನ್ನು ಬಳಸಿಕೊಳ್ಳುತ್ತದೆ. ಈ ತರಬೇತಿ ತೂಕದ ಯಂತ್ರಗಳು, ಸಹಜ ತೂಕ, ಪ್ರತಿರೋಧಕ ಬ್ಯಾಂಡ್‌ಗಳು ಮತ್ತು ನಿಮ್ಮ ಸ್ವಂತ ದೇಹದ ತೂಕವನ್ನು ಒಳಗೊಂಡಿರುತ್ತದೆ. ತೂಕ ತರಬೇತಿ ಹಲವಾರು ದೈಹಿಕ ಮತ್ತು ಮಾನಸಿಕ ಪ್ರಯೋಜನಗಳನ್ನು ನೀಡುತ್ತದೆ. ಇದು ಹೃದ್ರೋಗವನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಸಹಾಯ ಮಾಡುತ್ತದೆ. ನೀವು ಇದರಲ್ಲಿ ಪಾಲ್ಗೊಳ್ಳುವಾಗ ಸರಿಯಾದ ತಂತ್ರ ಮತ್ತು ಸುರಕ್ಷತಾ ಮಾನದಂಡಗಳನ್ನು ಅನುಸರಿಸುತ್ತೀರೆಂದು ಖಚಿತಪಡಿಸಿಕೊಳ್ಳಲು ನೀವು ಜಿಮ್‌ನಲ್ಲಿ ವೈಯಕ್ತಿಕ ತರಬೇತುದಾರರ ಮಾರ್ಗದರ್ಶನ ತೆಗೆದುಕೊಳ್ಳಬಹುದು. ತೂಕದ ತರಬೇತಿ ಕಾರ್ಯಕ್ರಮವು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಮತ್ತು ಉತ್ತಮ ಜೀವನ ಮಟ್ಟವನ್ನು ಹೊಂದಲು ನಿಮಗೆ ಸಹಾಯ ಮಾಡುತ್ತದೆ.(1)

ಇಸ್ಕೀಮಿಕ್ ಹೃದಯ ಕಾಯಿಲೆ ಇರುವ ಜನರಿಗೆ ತೂಕ ತರಬೇತಿಯಿಂದ ಸಿಗುವ ಪ್ರಯೋಜನವೇನು?

ಹೊಸ ಸಂಶೋಧನೆಯ ಪ್ರಕಾರ, ನೀವು ಹೃದ್ರೋಗ ಸಮಸ್ಯೆಯನ್ನು ಎದುರಿಸುತ್ತಿದ್ದರೂ ಸಹ ತೂಕ ತರಬೇತಿಯು ನಿಮಗೆ ಸಹಾಯ ಮಾಡುತ್ತದೆ.(5)

ಸರಿಯಾದ ಪ್ರಮಾಣದ ತೂಕ ತರಬೇತಿಯು ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸಬಲ್ಲದು. ತೂಕ ತರಬೇತಿಯನ್ನು ಹೃದ್ರೋಗ ಎದುರಿಸುತ್ತಿರುವವರು ಸುರಕ್ಷಿತವಾಗಿ ಮಾಡಬಹುದು. ಇದು ಯಾವುದೇ ಹೃದಯ ಸಮಸ್ಯೆ ಇದ್ದರೂ, ಅದರ ಅಪಾಯವನ್ನು ತಗ್ಗಿಸುತ್ತದೆ.

ತೂಕ ತರಬೇತಿಯ ಪ್ರಯೋಜನಗಳು ಹೀಗಿವೆ:

– ತೂಕ ತರಬೇತಿಯು ಹೃದಯರಕ್ತನಾಳದ ಫಿಟ್‌ನೆಸ್ ಮತ್ತು ತಿರುಗಾಡುವ ಸಾಮರ್ಥ್ಯವನ್ನು ಸುಧಾರಿಸುತ್ತದೆ(1)
-ಇದು ಸ್ನಾಯುಗಳು, ಮೂ(1)
– ಇದು ಹೃದಯದ ಸುತ್ತಲೂ ಕೊಬ್ಬಿನ ಶೇಖರಣೆಯನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ಹೃದ್ರೋಗದ ತಾಪತ್ರಯವೂ ಕಡಿಮೆ.(5)
– ತೂಕ ತರಬೇತಿ ನಿಮ್ಮ ಹೃದಯ ಸ್ನಾಯುವಿನ ಶಕ್ತಿಯನ್ನು ಸುಧಾರಿಸುತ್ತದೆ. ಕಾರ್ಡಿಯೋ ವ್ಯಾಯಾಮದೊಂದಿಗೆ ಇದನ್ನು ಕೂಡಿಸುವುದರಿಂದ, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ಅನ್ನು ಕಡಿಮೆ ಮಾಡಬಹುದು ಮತ್ತು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸಬಹುದು.(6)
– ಇದು ದೇಹದಲ್ಲಿನ ಕೊಬ್ಬನ್ನು ಒಟ್ಟಾರೆಯಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ತೆಳ್ಳಗಿನ ಸ್ನಾಯು ಖಂಡಗಳನ್ನು ಸೃಷ್ಟಿಸುತ್ತದೆ.(6) 

ನಿಮ್ಮ ಹೃದಯವು ಅನಾರೋಗ್ಯದ ಹಿನ್ನೆಲೆಯನ್ನು ಹೊಂದಿದ್ದರೆ, ತೂಕ ತರಬೇತಿಯ ಬಗ್ಗೆ ಸುರಕ್ಷತೆಯ ಕಾಳಜಿಯನ್ನು ವಹಸಬೇಕಾಗುತ್ತದೆ. ಆದಾಗ್ಯೂ, ಅಮೇರಿಕನ್ ಹಾರ್ಟ್ ಅಸೋಸಿಯೇಷನ್ (ಎಎಚ್‌ಎ) ವಾರಕ್ಕೆ ಕನಿಷ್ಠ ಎರಡು ಬಾರಿಯಾದರೂ ಶಕ್ತಿ ತರಬೇತಿಯನ್ನು ಶಿಫಾರಸು ಮಾಡುತ್ತದೆ. ತೂಕ ತರಬೇತಿಯ ಸಮಯದಲ್ಲಿ ಹೃದಯರಕ್ತನಾಳದ ವ್ಯವಸ್ಥೆಯ ಮೇಲೆ ಬೀಳುವ ಹೊರೆ ಏರೋಬಿಕ್ ವ್ಯಾಯಾಮದ ಆರೋಗ್ಯಕರ ಒತ್ತಡವನ್ನು ಹೋಲುತ್ತದೆ.(2)

ನೀವು ಇತ್ತೀಚೆಗೆ ಪಾರ್ಶ್ವವಾಯುವಿಗೆ ತುತ್ತಾಗಿದ್ದರೆ, ತೂಕ ತರಬೇತಿಯನ್ನು ಪ್ರಾರಂಭಿಸುವ ಮೊದಲು ನೀವು ನಿಮ್ಮ ಹೃದ್ರೋಗ ತಜ್ಞರನ್ನು ಸಂಪರ್ಕಿಸಬೇಕು.(1)

ನೀವು ಇತ್ತೀಚೆಗೆ ಪಾರ್ಶ್ವವಾಯುವಿಗೆ ತುತ್ತಾಗಿದ್ದರೆ, ತೂಕ ತರಬೇತಿಯನ್ನು ಪ್ರಾರಂಭಿಸುವ ಮೊದಲು ನೀವು ನಿಮ್ಮ ಹೃದ್ರೋಗ ತಜ್ಞರನ್ನು ಸಂಪರ್ಕಿಸಬೇಕು.(1) ತೂಕ ಮತ್ತು ಕಾರ್ಡಿಯೋ ತರಬೇತಿಯು ಎದೆ ನೋವು ಅಥವಾ ಇಸ್ಕೀಮಿಕ್ ಹೃದ್ರೋಗದ ಇತರ ರೋಗಲಕ್ಷಣಗಳ ಮಟ್ಟವನ್ನು ಹೆಚ್ಚಿಸುವ ಸಾಧ್ಯತೆಗಳು ಕಡಿಮೆ ಎಂದು ಅಧ್ಯಯನಗಳು ತಿಳಿಸಿವೆ.(2) ಆದರೆ ತೂಕದ ತರಬೇತಿಯನ್ನು ಪ್ರಾರಂಭಿಸುವ ಮೊದಲು ಹೃದಯರಕ್ತನಾಳದ ರೋಗಿಗಳ ಮೇಲೆ ಈ ಅಧ್ಯಯನಗಳು ನಡೆಸಲ್ಪಟ್ಟದ್ದವು, ಹಾಗೂ ಅದಾಗಲೇ ಅವರ ಹೃದಯಗಳು ಸಾಕಷ್ಟು ಒಳ್ಳೆಯ ಸ್ಥಿತಿಯಲ್ಲಿದ್ದವು. ಆದ್ದರಿಂದ ರೋಗಲಕ್ಷಣಗಳನ್ನು ತೋರುತ್ತಿದ್ದರೆ, ಅಥವಾ ಹೊಸದಾದ ರೋಗಲಕ್ಷಣಗಳು ಕಂಡುಬಂದರೆ, ತಕ್ಷಣವೇ ತರಬೇತಿಯನ್ನು ನಿಲ್ಲಿಸಿ ಹಾಗೂ ನಿಮ್ಮ ಆ ತರಬೇತಿಯನ್ನು ಮುಂದುವರಿಸುವ ಬಗೆಯಾಗಿ ನಿಮ್ಮ ಡಾಕ್ಟರ್‌ರೊಡನೆ ಚರ್ಚಿಸಿ.

ವೃತ್ತಿಪರರ ಸಹಾಯದಿಂದ ಸರಿಯಾದ ರೀತಿಯಲ್ಲಿ ಮತ್ತು ಸರಿಯಾದ ಅವಧಿಗೆ ಮಾಡಿದ ತೂಕ ತರಬೇತಿಯು ನಿಮ್ಮ ಹೃದಯದ ಆರೋಗ್ಯಕ್ಕೆ ಉಪಯುಕ್ತ ಹಾಗು ಸುರಕ್ಷಿತವಾಗಿರುತ್ತದೆ. ಒಮ್ಮೆ ನಿಮ್ಮ ಡಾಕ್ಟರ್‌ ನಿಮಗೆ ಒಪ್ಪಿಗೆ ಸೂಚಿಸಿದರೆ, ನೀವು ತೂಕ ತರಬೇತಿಯನ್ನು ಕಾರ್ಡಿಯೋ ತಾಲೀಮುಗಳೊಂದಿಗೆ ಸುರಕ್ಷಿತವಾಗಿ ರೂಢಿಸಿಕೊಳ್ಳಬಹುದು, ಮತ್ತು ಇದು ನಿಮ್ಮ ಹೃದಯವನ್ನು ಆರೋಗ್ಯವಾಗಿರಿಸುವುದರ ಮೂಲಕ ಹಾಗೂ ಇತರೇ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುವ ಮೂಲಕ ನಿಮ್ಮ ಆರೋಗ್ಯಕ್ಕೆ ಕಾವಲಾಗಿ ಕೆಲಸ ಮಾಡುತ್ತದೆ.(5)

ಸ್ವಲ್ಪ ತೂಕದ ತರಬೇತಿಯೊಂದಿಗೆ ಸಕ್ರಿಯರಾಗಿರಿ ಮತ್ತು ಆರೋಗ್ಯಕರ ಹೃದಯದ ವಾರಸುದಾರರಾಗಿರಿ!

ಉಲ್ಲೇಖ:

  1. American Heart Association. Strength and resistance training exercise [Internet]. [updated 2018 Apr 19; cited 2019 Dec 10]. Available from: https://www.heart.org/en/healthy-living/fitness/fitness-basics/strength-and-resistance-training-exercise.
  2. McKelvie RS, McCartney N. Weightlifting training in cardiac patients. Considerations. Sports Med. 1990 Dec;10(6):355-64.
  3. National Heart, Lung, and Blood Institute. Ischaemic heart disease [Internet]. [cited 2019 Dec 2]. Available from: https://www.nhlbi.nih.gov/health-topics/ischemic-heart-disease.
  4. Better Health Channel. Resistance training – health benefits [Internet]. [updated 2018 Aug; cited 2019 Dec 10]. Available from: https://www.betterhealth.vic.gov.au/health/healthyliving/resistance-training-health-benefits.
  5. Harvard Health Publishing. Give your heart health a lift [Internet]. 2019 [cited 2019 Dec 10]. Available from: https://www.health.harvard.edu/staying-healthy/give-your-heart-health-a-lift.
  6. Johns Hopkins Medicine. 3 kinds of exercise that boost heart health [Internet]. [cited 2019 Dec 10]. Available from: https://www.hopkinsmedicine.org/health/wellness-and-prevention/3-kinds-of-exercise-that-boost-heart-health.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.