Women's Day
Reading Time: 2 minutes


ಈಗ ನಾವು ಪರಿಧಮನಿಯ ಹೃದಯ ಕಾಯಿಲೆ (ಸಿಎಚ್ಡಿ) ಎಂಬ ಸಾಮಾನ್ಯ ಹೃದಯ ಕಾಯಿಲೆಯ ಕುರಿತು ತಿಳಿಯೋಣ.(1) ಸುಮಾರು 90% ಮಹಿಳೆಯರು ಸಿಎಚಡಿಯ ಅಪಾಯಕ್ಕೆ ಒಳಗಾಗುವ  ಕನಿಷ್ಠ ಒಂದು ಅಂಶ ಅಥವಾ ಲಕ್ಷಣವನ್ನು ಹೊಂದಿರುತ್ತಾರೆ ಅದು  ಅವರ ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಈ ಲೇಖನವು ಸಿಎಚಡಿಯ ಕುರಿತು ಅಗತ್ಯ ಮಾಹಿತಿಯನ್ನು ಒದಗಿಸುತ್ತದೆ.(2)

ಪರಿಧಮನಿಯ ಹೃದಯ ಕಾಯಿಲೆಯ ಕುರಿತು 

ಪರಿಧಮನಿಯ ಹೃದಯ ಕಾಯಿಲೆ ಹೃದಯ ಸ್ಥಿತಿಯಾಗಿದ್ದು, ಈ ಸಂದರ್ಭದಲ್ಲಿ ಹೃದಯದ ರಕ್ತನಾಳಗಳು ಹೃದಯ ಸ್ನಾಯುವಿಗೆ ಸಾಕಷ್ಟು ರಕ್ತವನ್ನು ಪೂರೈಸಲು ಸಾಧ್ಯವಿಲ್ಲ, ಇದು ಹೃದಯಾಘಾತ ಮತ್ತು ಹಠಾತ್ ಹೃದಯ ಸ್ತಂಭನದಂತಹ ಮಾರಣಾಂತಿಕ ತೊಂದರೆಗಳಿಗೆ ಕಾರಣವಾಗುತ್ತದೆ. ಸಿಎಚ್ಡಿಯನ್ನು ಇಸ್ಕೆಮಿಕ್ ಹೃದ್ರೋಗ ಅಥವಾ ಪರಿಧಮನಿಯ ಕಾಯಿಲೆ ಎಂದೂ ಕರೆಯುತ್ತಾರೆ.(3)

ಹೃದಯದ ರಕ್ತನಾಳಗಳೊಳಗೆ ಮೇಣದಂಥ ವಸ್ತುವು ನಿರ್ಮಾಣವಾಗುವುದರಿಂದ ಈ ರೋಗವು ಹೆಚ್ಚಾಗಿ ಬೆಳೆಯುತ್ತದೆ.(3) ಕ್ಯಾಲ್ಸಿಯಂ, ಕೊಬ್ಬು ಮತ್ತು ಕೊಲೆಸ್ಟ್ರಾಲ್‍ನಿಂದ ನಿರ್ಮಿತವಾದ ಈ ಮೇಣದ ವಸ್ತುವನ್ನು ಪ್ಲೇಕ್ ಎಂದು ಕರೆಯಲಾಗುತ್ತದೆ.(3,4) ಪ್ಲೇಕ್ ನಿರ್ಮಾಣವಾಗುವುದರಿಂದ  ರಕ್ತನಾಳಗಳು ಕಿರಿದಾಗುತ್ತವೆ.  ಇದರ ಪರಿಣಾಮವಾಗಿ ಹೃದಯಕ್ಕೆ ರಕ್ತವು ಸಾಕಷ್ಟು ಸರಬರಾಜು ಆಗುವುದಿಲ್ಲ.(3)

ಋತುಬಂಧ ಮತ್ತು ಹೃದಯದ ವಿಭಿನ್ನ ರಚನೆಗಳಿಂದಾಗಿ ಮಹಿಳೆಯರಲ್ಲಿ ಪರಿಧಮನಿಯ ಹೃದಯ ಕಾಯಿಲೆ ಪುರುಷರಿಗಿಂತ ಭಿನ್ನವಾಗಿರುತ್ತದೆ. ಋತುಬಂಧಕ್ಕೆ ಮುಂಚಿತವಾಗಿ ಮಹಿಳೆಯರು ಈಸ್ಟ್ರೊಜೆನ್ ಎಂಬ ಹಾರ್ಮೋನ್ ಅನ್ನು ಉತ್ಪಾದಿಸುತ್ತಾರೆ, ಇದು ಅವರಿಗೆ ರಕ್ತನಾಳಗಳನ್ನು ಸುಲಭವಾಗಿ ಇರಿಸಲು ಸಹಾಯ ಮಾಡುತ್ತದೆ ಮತ್ತು ಸಿಎಚಡಿಯಿಂದ ರಕ್ಷಣೆ ನೀಡುತ್ತದೆ. ಆದಾಗ್ಯೂ, ಋತುಬಂಧದ ನಂತರ ಈಸ್ಟ್ರೊಜೆನ್ ಮಟ್ಟವು ಇಳಿಯುತ್ತದೆ. ಜೊತೆಗೆ ಪುರುಷರಲ್ಲಿ ಹೋಲಿಸಿದರೆ ಮಹಿಳೆಯರಲ್ಲಿ ರಕ್ತನಾಳಗಳು ಮತ್ತು ಹೃದಯದ ಗಾತ್ರವು ಚಿಕ್ಕದಾಗಿರುತ್ತದೆ.(3)

ರೋಗನಿರ್ಣಯ ಪರೀಕ್ಷೆಗಳು ಮತ್ತು ಚಿಕಿತ್ಸಾ ವಿಧಾನಗಳು ಪುರುಷರು ಮತ್ತು ಮಹಿಳೆಯರಿಗಾಗಿ ಉತ್ತಮ ಗುಣಮಟ್ಟದಾಗಿದ್ದರೂ ಸಹ  ಪುರುಷರಿಗೆ ಹೋಲಿಸಿದರೆ ಮಹಿಳೆಯರು ಅನುಭವಿಸಬಹುದಾದ ಅಪಾಯಕಾರಿ ಅಂಶಗಳು ಮತ್ತು ರೋಗಲಕ್ಷಣಗಳಲ್ಲಿ ಕೆಲವು ಮುಖ್ಯ ವ್ಯತ್ಯಾಸಗಳಿವೆ.(3)

ಮಹಿಳೆಯರಲ್ಲಿ ಸಿಎಚ್ಡಿಗೆ ಅಪಾಯಕಾರಿ ಅಂಶಗಳು

ಸಿಎಚಡಿಗೆ ಒಳಗಾಗುವ ಅಪಾಯವನ್ನು ಹೊಂದಿರುವ ಮಹಿಳೆಯರು ಈ ಕೆಳಗಿನ ವೈದ್ಯಕೀಯ ಸ್ಥಿತಿಗಳನ್ನು ಹೊಂದಿರುತ್ತಾರೆ. ಈ ಸ್ಥಿತಿಗಳು ಮಹಿಳೆಯರಲ್ಲಿ ಸಿಎಚಡಿಯ ಅಪಾಯವನ್ನು ಹೆಚ್ಚಿಸುತ್ತವೆ:(3)

– ಆಟೋಇಮ್ಯೂನ್ ಕಾಯಿಲೆಗಳು, ಇಲ್ಲಿ ನಿಮ್ಮ ರೋಗನಿರೋಧಕ ವ್ಯವಸ್ಥೆಯು ದೇಹದ ಸಾಮಾನ್ಯ ಕೋಶಗಳ ಮೇಲೆ ದಾಳಿ ಮಾಡುವ ಕೋಶಗಳನ್ನು ಉತ್ಪಾದಿಸುವುದು(3)
– ಖಿನ್ನತೆ ಮತ್ತು ಒತ್ತಡದಂತಹ ಮಾನಸಿಕ ಆರೋಗ್ಯ ಸಮಸ್ಯೆಗಳು
– ಅಧಿಕ ತೂಕ ಮತ್ತು ಬೊಜ್ಜು
– ಮೆಟಾಬಾಲಿಕ್ ಸಿಂಡ್ರೋಮ್, ಈ ಕೆಳಗಿನ ಅಪಾಯಕಾರಿ ಅಂಶಗಳ ಉಪಸ್ಥಿತಿಯಿಂದ

ಬೆಳವಣಿಗೆಯಾಗುವುದು:(3,5)

– ಅಧಿಕ ರಕ್ತದ ಸಕ್ಕರೆ
– ತೀವ್ರ ರಕ್ತದೊತ್ತಡ
– ಹೆಚ್ಚಾದ ಸೊಂಟದ ಸುತ್ತಳತೆ
– ಉತ್ತಮ ಕೊಲೆಸ್ಟ್ರಾಲ್ದ ಕಡಿಮೆ ಮಟ್ಟ
– ರಕ್ತದಲ್ಲಿನ ನಿರ್ದಿಷ್ಟ ಕೊಬ್ಬಿನ (ಟ್ರೈಗ್ಲಿಸರೈಡ್‍ಗಳು) ಹೆಚ್ಚಿನ ಮಟ್ಟ(5)

ಈ ಕೆಳಗಿನ ಅಂಶಗಳು ಎರಡೂ ಲಿಂಗಗಳಲ್ಲಿಯೂ ಸಹ  ಸಿಎಚ್ಡಿ ಬೆಳವಣಿಗೆಯ ಅಪಾಯವನ್ನು ಹೆಚ್ಚಿಸುತ್ತವೆ; ಆದಾಗ್ಯೂ, ಮಹಿಳೆಯರಿಗೆ ಪುರುಷರಿಗಿಂತ  ಹೆಚ್ಚಿನ ಅಪಾಯವಿದೆ:(3)

– ಮಧುಮೇಹ
– ಕಡಿಮೆಯಿಂದ ಮಧ್ಯಮ ಅಧಿಕ ರಕ್ತದೊತ್ತಡ
– ಉತ್ತಮ ಕೊಲೆಸ್ಟ್ರಾಲ್ನ ಕಡಿಮೆ ಮಟ್ಟ(3,6)
– ಧೂಮಪಾನ

ಮಹಿಳೆಯರಲ್ಲಿ ಪ್ರತ್ಯೇಕವಾಗಿ ಕಂಡುಬರುವ ಈ ಕೆಳಗಿನ ಪರಿಸ್ಥಿತಿಗಳು ಮಹಿಳೆಯರಲ್ಲಿ ಸಿಎಚ್ಡಿಯ ಹೆಚ್ಚಿನ ಅಪಾಯವನ್ನುಂಟುಮಾಡುತ್ತವೆ:(3)

– ಗರ್ಭಾವಸ್ಥೆಯ ಸಮಯದಲ್ಲಿ  ಸಮಸ್ಯೆಗಳ ಇತಿಹಾಸ (ಹಿಸ್ಟ್ರಿ)
– ಗರ್ಭಾವಸ್ಥೆಯಲ್ಲಿ ರಕ್ತಹೀನತೆ
– ಎಂಡೊಮೆಟ್ರಿಯೊಸಿಸ್, ಗರ್ಭಾಶಯದ ಒಳ ಪದರದ ಮೇಲೆ ಇರುವ ಅಂಗಾಂಶವು ಇತರ ಅಂಗಗಳ ಮೇಲೆ ಇರುವ ಸ್ಥಿತಿ ಇದಾಗಿದೆ.(3,7)
– ಅಕಾಲಿಕ ಋತುಬಂಧ (40 ವರ್ಷಕ್ಕಿಂತ ಮೊದಲು)

ಮೇಲಿನ ಪರಿಸ್ಥಿತಿಗಳ ಜೊತೆಗೆ, ಜನನ ನಿಯಂತ್ರಣ ಮಾತ್ರೆಗಳ ಬಳಕೆಯಂತಹ ಕೆಲವು ಅಂಶಗಳೂ ಸಹ ಮಹಿಳೆಯರಲ್ಲಿ ಸಿಎಚ್ಡಿ ಅಪಾಯವನ್ನು ಹೆಚ್ಚಿಸುತ್ತವೆ.(3)

ಮಹಿಳೆಯರಲ್ಲಿ ಸಿಎಚ್ಡಿಯ ಲಕ್ಷಣಗಳು

ಮಹಿಳೆಯರು ಸಿಎಚ್ಡಿಯ ಯಾವುದೇ ಲಕ್ಷಣಗಳನ್ನು ಅನುಭವಿಸುವುದಿಲ್ಲ, ಮತ್ತು ಕೆಲವು ಸಲ ಅವರು ಅನುಭವಿಸಿದರೇ, ಅವು ಪುರುಷರಿಗಿಂತ ಭಿನ್ನವಾಗಿರಬಹುದು.(3) ಹೃದಯಾಘಾತದ ಸಂದರ್ಭದಲ್ಲಿ ಮಹಿಳೆಯರು ಈ ಕೆಳಗಿನ ಲಕ್ಷಣಗಳನ್ನು ಅನುಭವಿಸಬಹುದು:(3)

– ಬಳಲಿಕೆ, ಆಯಾಸ
– ಎದೆಯಲ್ಲಿ ಒತ್ತಡ ಅಥವಾ ಬಿಗಿತ
– ತಲೆತಿರುಗುವಿಕೆ
– ವಾಕರಿಕೆ
– ಹೊಟ್ಟೆ ನೋವು

ಮಹಿಳೆಯರು ಪುರುಷರಿಗಿಂತ ಕಡಿಮೆ ಎದೆನೋವು ಅನುಭವಿಸುತ್ತಾರೆ. ಇದು ಹೃದಯಾಘಾತದ ಸಾಮಾನ್ಯ ಲಕ್ಷಣವಾಗಿದೆ. ಕೆಲವು ವೇಳೆ ಅವರಿಗೆ ಅನುಭವವಾದರೂ, ಅದು ಪುರುಷರಲ್ಲಿ ಕಂಡುಬರುವುದಕ್ಕಿಂತ ಭಿನ್ನವಾಗಿರುತ್ತದೆ. ಉದಾಹರಣೆಗೆ, ವಿಶ್ರಾಂತಿ ಸಮಯದಲ್ಲಿ ಮಹಿಳೆಯರಿಗೆ ಎದೆ ನೋವು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರೆ ಎದೆ ನೋವು ಪುರುಷರಲ್ಲಿ ದೈಹಿಕ ಚಟುವಟಿಕೆಯೊಂದಿಗೆ ಉಲ್ಬಣಗೊಳ್ಳುತ್ತದೆ ಮತ್ತು ವಿಶ್ರಾಂತಿಯೊಂದಿಗೆ ಕಡಿಮೆಯಾಗುತ್ತದೆ. ಮಾನಸಿಕ ಒತ್ತಡವು ಪುರುಷರಿಗಿಂತ ಮಹಿಳೆಯರಲ್ಲಿ  ಹೆಚ್ಚು ಎದೆ ನೋವನ್ನು ಪ್ರಚೋದಿಸುವ ಸಾಧ್ಯತೆಯಿದೆ.(3)

ಮೇಲೆ ನೋಡಿದಂತೆ, ಪುರುಷರು ಮತ್ತು ಮಹಿಳೆಯರಲ್ಲಿ ಸಿಎಚಡಿಯ  ರೋಗಲಕ್ಷಣಗಳು ಭಿನ್ನವಾಗಿರುತ್ತವೆ. ಆದಾಗ್ಯೂ , ಪುರುಷರಿಗೆ ಹೋಲಿಸಿದರೆ  ಮಹಿಳೆಯರಲ್ಲಿ ಸಿಎಚಡಿಯು ಕಡಿಮೆ ಬಾರಿ ರೋಗ ನಿರ್ಣಯಕ್ಕೆ ಒಳಗಾಗುತ್ತದೆ  ಮತ್ತು ಹೆಚ್ಚು ಗಮನ ಮತ್ತು ಚಿಕಿತ್ಸೆಗೆ ಪಾತ್ರವಾಗುವುದಿಲ್ಲ.(3)

ಈ ಲೇಖನದೊಂದಿಗೆ, ನೀವು ಸಿಎಚ್ಡಿಯ ಅಪಾಯವನ್ನು ಹೊಂದಿದ್ದೀರಾ ಎಂದು ಗುರುತಿಸಲು ನಿಮಗೆ ಸಾಧ್ಯವಾಗುತ್ತದೆ. ಇದರಿಂದ ನೀವು ನಿಮ್ಮ  ಅಪಾಯಕಾರಿ ಅಂಶಗಳ ಬಗ್ಗೆ ನಿಮ್ಮ ವೈದ್ಯರೊಂದಿಗೆ ಸಕ್ರಿಯ ಸಂಭಾಷಣೆ ನಡೆಸಲು ಮತ್ತು ಹೆಚ್ಚಿನ ರೋಗನಿರ್ಣಯ ಮತ್ತು ಚಿಕಿತ್ಸೆಯ ಆಯ್ಕೆಗಳ ಅಗತ್ಯವನ್ನು ಚರ್ಚಿಸಲು ಸಹಾಯಕವಾಗುತ್ತದೆ.

ಉಲ್ಲೆಖ:

  1. Office on women’s health. Heart disease and women [Internet]. [updated 2019 Jan 30; cited 2020 Feb 29]. Available from: https://www.womenshealth.gov/heart-disease-and-stroke/heart-disease/heart-disease-and-women.
  2. Women and heart disease [Internet]. [cited 2020 Feb 19]. Available from: https://www.cardiosmart.org/Heart-Conditions/Women-and-Coronary-Artery-Disease/Understand-Your-Condition/What-Increases-Your-Risk.
  3. National Heart, Lung, and Blood Institute. Coronary heart disease [Internet]. [cited 2020 Feb 19]. Available from: https://www.nhlbi.nih.gov/health-topics/coronary-heart-disease.
  4. National Heart, Lung, and Blood Institute. Atherosclerosis [Internet]. [cited 2020 Feb 19]. Available from: https://www.nhlbi.nih.gov/health-topics/atherosclerosis.
  5. National Heart, Lung, and Blood Institute. Metabolic syndrome [Internet]. [cited 2020 Feb 29]. Available from: https://www.nhlbi.nih.gov/health-topics/metabolic-syndrome.
  6. Centres for Disease Control and Prevention. LDL and HDL cholesterol: “bad” and “good” cholesterol [Internet]. [updated 2020 Jan 31; cited 2020 Feb 19]. Available from: https://www.cdc.gov/cholesterol/ldl_hdl.htm.
  7. Endometriosis [Internet]. [cited 2020 Mar 3]. Available from: https://www.nichd.nih.gov/health/topics/endometriosis.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.