Lifestyle changes and dyslipidemia
Reading Time: 3 minutes

ಲಿಪಿಡ್‌ಗಳು ಹಾಗೂ ಕೊಲೆಸ್ಟರಾಲ್, ಜೀವಂತ ಜೀವಕೋಶಗಳ ಅವಶ್ಯಕ ಅಂಶಗಳಾಗಿವೆ; ಆದಾಗ್ಯೂ, ರಕ್ತದಲ್ಲಿನ ಈ ಲಿಪಿಡ್‌ಗಳ ಅಸಹಜ ಮಟ್ಟವು ಡಿಸ್ಲಿಪಿಡೀಮಿಯಾ ಕಾಯಿಲೆಗೆ ಕಾರಣವಾಗುತ್ತದೆ. ಹೆಚ್ಚಿನ ಮಟ್ಟದ ಕೊಲೆಸ್ಟರಾಲ್ ಹಾಗೂ ಲಿಪಿಡ್‌ಗಳು, ಹೃದಯಾಘಾತ ಅಥವಾ ಹೃದ್ರೋಗದಂತಹ ಕಾಯಿಲೆಗಳ ಅಪಾಯಕಾರಿ ಅಂಶಗಳು.1

ಹಲವು ಕಾರಣಗಳಿಂದ ರಕ್ತದಲ್ಲಿನ ಕೊಲೆಸ್ಟರಾಲ್ ಮಟ್ಟ ಹೆಚ್ಚಾಗಬಹುದು. ಅನಾರೋಗ್ಯಕರ ಅಥಾವ ಕಳಪೆ ಜೀವನಶೈಲಿಯು ಸಹ ಇದಕ್ಕೆ ಒಂದು ಪ್ರಮುಖ ಕಾರಣವಾಗಿದೆ ಎಂದು ಹಲವು ಅಧ್ಯಯನಗಳಿಂದ ತಿಳಿದು ಬಂದಿದೆ.2 ಈ ಲೇಖನದಲ್ಲಿ ಡಿಸ್ಲಿಪಿಡೀಮಿಯಾಗೆ ಕಾರಣವಾಗುವಂತಹ ಅನಾರೋಗ್ಯಕರ ಜೀವನಶೈಲಿಯ ವಿಧಾನಗಳ ಬಗ್ಗೆ ತಿಳಿಸಲಾಗಿದೆ. ಇದು ನೀವು ಹೆಚ್ಚಿನ ಕೊಲೆಸ್ಟರಾಲ್‌ನೊಂದಿಗೆ ಹೋರಾಡಲು, ಅನಾರೋಗ್ಯಕರ ಅಭ್ಯಾಸಗಳನ್ನು ಬಿಟ್ಟು ಸರಿಯಾದ ಆರೋಗ್ಯಕರ ಜೀವನಶೈಲಿಯನ್ನು ಆರಿಸಿಕೊಳ್ಳುವಂತೆ ಹೊಸ ವರ್ಷಕ್ಕೆ ಗುರಿಯನ್ನು ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. 

ಡಿಸ್ಲಿಪಿಡೀಮಿಯಾದಲ್ಲಿ ಏನಾಗುತ್ತದೆ?

  • ಡಿಸ್ಲಿಪಿಡೀಮಿಯಾದ ಗುಣಲಕ್ಷಣಗಳು ಹೀಗಿವೆ:1
  • ಹೆಚ್ಚಿನ ಮಟ್ಟದ ಕಡಿಮೆ ಸಾಂದ್ರತೆಯ ಲೈಪೋಪ್ರೋಟೀನ್ (ಎಲ್‌ಡಿಎಲ್), ಇದನ್ನು ಕೆಟ್ಟ ಕೊಲೆಸ್ಟರಾಲ್ ಅಂತಲೂ ಕರೆಯುತ್ತಾರೆ
  • ಕಡಿಮೆ ಮಟ್ಟದ ಹೆಚ್ಚಿನ ಸಾಂದ್ರತೆಯ ಲೈಪೊಪ್ರೋಟೀನ್ (ಎಚ್‌ಡಿಎಲ್), ಇದನ್ನು ಉತ್ತಮ ಕೊಲೆಸ್ಟರಾಲ್ ಅಂತಲೂ ಕರೆಯುತ್ತಾರೆ
  • ಹೆಚ್ಚಿನ ಮಟ್ಟದ ಟ್ರೈಗ್ಲಿಸರೈಡ್‌ಗಳು

ಈ ಅಸಹಜ ಲಿಪಿಡ್ ಮಟ್ಟಗಳು, ಹೃದಯದ ರಕ್ತನಾಳಗಳಲ್ಲಿ ಕೊಬ್ಬಿನ(ಪ್ಲೇಕ್) ಶೇಖರಣಗೆ ಕಾರಣವಾಗುತ್ತವೆ. ಇದರಿಂದ, ರಕ್ತನಾಳಗಳು ಗಡಸಾಗುತ್ತವೆ ಹಾಗೂ ರಕ್ತನಾಳಗಳಲ್ಲಿ ರಕ್ತ ಹರಿಯುವ ದಾರಿ ಕಿರಿದಾಗುತ್ತ ಹೋಗುತ್ತದೆ, ಇಂತಹ ಸಂದರ್ಭದಲ್ಲಿ ರಕ್ತವನ್ನು ಪೂರೈಕೆ ಮಾಡಲು ಹೃದಯವು ಹೆಚ್ಚು ಶ್ರಮ ಪಡಬೇಕಾಗುತ್ತದೆ. ಇದು ಮುಂದೆ ಹೃದಯಾಘಾತ ಅಥವಾ ಪಾರ್ಶ್ವವಾಯುವಿನಂತಹ ಕಾಯಿಲೆಗಳಿಗೆ ಕಾರಣವಾಗುತ್ತದೆ. ಆದರೆ, ಉತ್ತಮ ಕೊಲೆಸ್ಟರಾಲ್‌ನ ಆರೋಗ್ಯಕರ ಮಟ್ಟವು ರಕ್ತನಾಳಗಳಲ್ಲಿರುವ ಕೊಬ್ಬನ್ನು ತೆಗೆಯುವ ಮೂಲಕ, ಈ ಸಮಸ್ಯೆಯನ್ನು ಪರಿಹರಿಸುತ್ತದೆ.1 ಎಲ್ಲಾ ಬಗೆಯ ಕೆಟ್ಟ ಕೊಲೆಸ್ಟರಾಲ್ ದೇಹದಲ್ಲೇ ಉತ್ಪತ್ತಿಯಾಗುತ್ತದೆ. ಹಾಗಾಗಿ ಅನಾರೋಗ್ಯಕರ ಜೀವನ ಶೈಲಿಯು ಕೆಟ್ಟ ಕೊಲೆಸ್ಟರಾಲ್ ಉತ್ಪಾದನೆಯನ್ನು ಹೆಚ್ಚಾಗಿಸುವ ಮೂಲಕ ರಕ್ತದಲ್ಲಿ ಕೆಟ್ಟ ಕೊಲೆಸ್ಟರಾಲ್ ಮಟ್ಟವನ್ನು ಅಧಿಕವಾಗಿಸುತ್ತದೆ.2 

ಅನಾರೋಗ್ಯಕರ ಜೀವನಶೈಲಿಯ ನಡವಳಿಕೆಗಳು, ರಕ್ತದಲ್ಲಿನ ಕೊಲೆಸ್ಟರಾಲ್ ಮಟ್ಟಗಳ ಮೇಲೆ ಹೇಗೆ ಪ್ರಭಾವ ಬೀರುತ್ತವೆ?

ಕೆಲವು ಬಗೆಯ ನಡವಳಿಕೆಗಳು ಹಾಗೂ ಜೀವನಶೈಲಿಯ ಅಭ್ಯಾಸಗಳು ಕೊಲೆಸ್ಟರಾಲ್ ಮಟ್ಟದ ಮೇಲೆ ಕೆಟ್ಟ ಪರಿಣಾಮ ಬಿರಬಹುದು ಎಂದು ಅಧ್ಯಯನಗಳು ಸೂಚಿಸುತ್ತವೆ.

ಅವು ಈ ಕೆಳಗಿನಂತಿವೆ:2-4 

  • ಅನಾರೋಗ್ಯಕರ ಆಹಾರಕ್ರಮ: ಸ್ಯಾಚುರೇಟೆಡ್ ಕೊಬ್ಬು ಮತ್ತು ಟ್ರಾನ್ಸ್ ಕೊಬ್ಬು ಹೇರಳವಾಗಿರುವ ಆಹಾರಕ್ರಮವು, ಅಧಿಕ ಕೊಲೆಸ್ಟರಾಲ್ ಹಾಗೂ ಅದಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳಿಗೆ ಕಾರಣವಾಗಿದೆ.
  • ದೈಹಿಕ ಚಟುವಟಿಕೆಯ ಕೊರತೆ: ಚಟುವಟಿಕೆ ಇಲ್ಲದ ಅಥವಾ ಜಡ ಜೀವನಶೈಲಿಯಿಂದ ದೇಹದ ತೂಕ ಹೆಚ್ಚಾಗುತ್ತದೆ, ಇದು ಕೊಲೆಸ್ಟರಾಲ್ ಮಟ್ಟ ಏರಲು ಕಾರಣವಾಗುತ್ತದೆ.
  • ಧೂಮಪಾನ: ಧೂಮಪಾನ ಮಾಡುವುದರಿಂದ, ರಕ್ತ ನಾಳಗಳಿಗೆ ಹಾನಿಯಾಗುವುದರ ಜೊತೆಗೆ ಉತ್ತಮ ಕೊಲೆಸ್ಟರಾಲ್‌ನ ಮಟ್ಟ ಕುಗ್ಗುತ್ತದೆ.
  • ಹೆಚ್ಚುವರಿ ತೂಕ: ಅತಿಯಾದ ತೂಕ ಅಥವಾ ಬೊಜ್ಜು, ಕೆಟ್ಟ ಕೊಲೆಸ್ಟರಾಲನ್ನು ಹೆಚ್ಚಿಸಿ, ಉತ್ತಮ ಕೊಲೆಸ್ಟರಾಲನ್ನು ಕುಗ್ಗಿಸುತ್ತದೆ.

ಅನಾರೋಗ್ಯಕರ ಜೀವನಶೈಲಿಯ ನಡವಳಿಕೆಯನ್ನು ಹೊಂದಿರುವ ಜನರು ಡಿಸ್ಲಿಪೀಡಿಮಿಯಾ ಕಾಯಿಲೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು ಹೇಗೆ ಸಾಧ್ಯ?

ಅನಾರೋಗ್ಯಕರ ಜೀವನ ಶೈಲಿಯ ನಡುವಳಿಕೆಗಳನ್ನು ತೊರೆದು, ನಿಮ್ಮ ಜೀವನಶೈಲಿಯಲ್ಲಿ ಹೊಚ್ಚ ಹೊಸ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ, ಡಿಸ್ಲಿಪಿಡೀಮಿಯಾವನ್ನು ಹಿಡಿತದಲ್ಲಿ ಇಟ್ಟುಕೊಳ್ಳಬಹುದು ಹಾಗೂ ಅದರ ಅಪಾಯಗಳಿಂದ ಪಾರಾಗಬಹುದು.2 ಆದರೆ, ಜೀವನಶೈಲಿಯ ಬದಲಾವಣೆಗಳು ಡಿಸ್ಲಿಪಿಡೀಮಿಯಾ ಮೇಲೆ ಯಾವುದೇ ಮಹತ್ವದ ಪರಿಣಾಮ ತೋರದಿದ್ದಾಗ, ನಿಮ್ಮ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡಲು ಔಷಧಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.4

ಈ ವರ್ಷ  ಕೆಳಗಿನ ಸಂಕಲ್ಪಗಳನ್ನು ಮಾಡಿಕೊಳ್ಳುವ ಮೂಲಕ ನಿಮ್ಮ ಅನಾರೋಗ್ಯಕರ ಜೀವನಶೈಲಿಯ ನಡವಳಿಕೆಯನ್ನು ಅರೋಗ್ಯಕರ ಜೀವನಶೈಲಿಯನ್ನಾಗಿ ಬದಲಾಯಿಸಿ: 
    • ನಿಮ್ಮ ಆಹಾರಕ್ರಮವನ್ನು ಬದಲಾಯಿಸಿ: ಕೆಂಪು ಮಾಂಸ,ಅಧಿಕ ಕೊಬ್ಬಿರುವ ಉತ್ಪನ್ನಗಳು ಹಾಗೂ ಹುರಿದ ಆಹಾರ ಸೇವನೆಯನ್ನು ಕಡಿಮೆ ಮಾಡಿ. ಹಣ್ಣುಗಳು, ತರಕಾರಿ, ಧಾನ್ಯಗಳು, ಕೋಳಿ ಮಾಂಸ ಹಾಗೂ ಮೀನು, ಇವೆಲ್ಲವನ್ನು ಹೊಂದಿರುವಂತಹ ಆರೋಗ್ಯಕರ ಆಹಾರಕ್ರಮವನ್ನು ಆಯ್ಕೆ ಮಾಡಿಕೊಳ್ಳಿ. ನಾರಿನಾಂಶ-ಅಧಿಕವಾಗಿರುವ ಆಹಾರಕ್ರಮವು ಕೊಲೆಸ್ಟರಾಲನ್ನು ಕಡಿಮೆ ಮಾಡುತ್ತದೆ.4    
    • ದೈಹಿಕವಾಗಿ ಸಕ್ರಿಯರಾಗಿರಿ: ಪ್ರತಿದಿನ 30-45 ನಿಮಿಷಗಳ ಕಾಲ ಚುರುಕಾದ ವಾಕಿಂಗ್ ಅಥವಾ ಸೈಕ್ಲಿಂಗ್‍ನಂತಹ ದೈಹಿಕ ಚಟುವಟಿಕೆಗಳು ರಕ್ಷಣಾತ್ಮಕ ಪರಿಣಾಮವನ್ನು ಬೀರುತ್ತವೆ ಮತ್ತು5 ಏರೋಬಿಕ್ ವ್ಯಾಯಾಮಗಳು ಟ್ರೈಗ್ಲಿಸರೈಡ್‌ಗಳನ್ನು ಕುಗ್ಗಿಸುತ್ತವೆ ಮತ್ತು  ಅದನ್ನು ವಾರಕ್ಕೆ ಕನಿಷ್ಠ 120 ನಿಮಿಷಗಳ ಕಾಲ ನಿರ್ವಹಿಸಿದಾಗ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ಸೂಚಿಸಿವೆ.6 ಕೆಲವು ಅಧ್ಯಯನಗಳಲ್ಲಿ ಮಾಡಿದ ಅವಲೋಕನಗಳು ವ್ಯಾಯಾಮದೊಂದಿಗೆ ಸಂಯೋಜಿಸಲ್ಪಟ್ಟ ಆಹಾರ ಬದಲಾವಣೆಗಳು ನಿಮ್ಮ ಲಿಪಿಡ್ ಪ್ರೊಫೈಲ್ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ ಎಂದು ಸೂಚಿಸುತ್ತದೆ.7 ಚುರುಕು ನಡಿಗೆ, ಈಜುವುದು, ಸೈಕಲ್ ತುಳಿಯುವುದು ಹಾಗೂ ಡ್ಯಾನ್ಸ್ ಕ್ಲಾಸ್‌ಗೆ ಹೋಗುವುದು, ಈ ಎಲ್ಲಾ ಚಟುವಟಿಕೆಗಳು ಕೂಡ ನೆರವಾಗಬಹುದು.4
    • ಧೂಮಪಾನ ಮಾಡಬೇಡಿ: ಧೂಮಪಾನ ಮಾಡುವುದರಿಂದ ರಕ್ತದಲ್ಲಿರುವ ಒಟ್ಟಾರೆ ಕೊಲೆಸ್ಟರಾಲ್ ಮಟ್ಟ ಹೆಚ್ಚಾಗುತ್ತದೆ. ಉತ್ತಮ ಕೊಲೆಸ್ಟರಾಲ್ ಕಡಿಮೆಯಾಗುವುದರ ಜೊತೆಗೆ ಕೆಟ್ಟ ಕೊಲೆಸ್ಟರಾಲ್ ಹೆಚ್ಚಾಗುತ್ತದೆ. ಧೂಮಪಾನದ ಅಭ್ಯಾಸವನ್ನು ಬಿಡುವುದರಿಂದ, ರಕ್ತದಲ್ಲಿನ ಉತ್ತಮ ಕೊಲೆಸ್ಟರಾಲ್ ಮಟ್ಟ ಹೆಚ್ಚಾಗುತ್ತದೆ ಎಂದು ವರದಿಯಾಗಿದೆ.7
    • ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ: ನೀವು ಹೆಚ್ಚುವರಿ ತೂಕವನ್ನು ಇಳಿಸಲು ಪ್ರತಿದಿನ ವ್ಯಾಯಾಮ ಮಾಡಲು ಪ್ರಯತ್ನಿಸಬೇಕು. 10% ತೂಕ ಇಳಿಸುವುದರಿಂದ ಗಮನಾರ್ಹ ಪರಿಣಾಮ ಉಂಟಾಗುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ.4 
  • ಮದ್ಯಪಾನ: ಮದ್ಯಪಾನ ಮಾಡುವುದರಿಂದ ಉತ್ತಮ ಕೊಲೆಸ್ಟರಾಲ್ ಹೆಚ್ಚಾಗುತ್ತದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ಹಾಗಾಗಿ ಆಲ್ಕೋಹಾಲನ್ನು ದೈಹಿಕ ಚಟುವಟಿಕೆಯಂತಹ ಆರೋಗ್ಯಕರ ಜೀವನಶೈಲಿಯೊಂದಿಗೆ ತೆಗೆದುಕೊಳ್ಳುವುದರಿಂದ ಮತ್ತಷ್ಟು ಅನುಕೂಲವಾಗಬಹುದು. 

ಜೀವನಶೈಲಿಯ ಬದಲಾವಣೆಗಳ ಅನುಸರಣೆ ಕಳಪೆಯಾಗಲು ಯಾವ ಅಂಶಗಳು ಕಾರಣವಾಗಿವೆ?

ಡಿಸ್ಲಿಪಿಡೀಮಿಯಾವನ್ನು ನಿಯಂತ್ರಿಸಲು ಜೀವನಶೈಲಿಯ ಬದಲಾವಣೆಗಳನ್ನು ಸೂಚಿಸುವ ಪುರಾವೆಗಳ ಹೊರತಾಗಿಯೂ, ಈ ಕೆಳಗಿನ ಅಂಶಗಳು ಈ ಜೀವನಶೈಲಿಯ ಬದಲಾವಣೆಗಳ ಅನುಸರಣೆಯ ಮೇಲೆ ಪರಿಣಾಮ ಬೀರುತ್ತವೆ.

  • ಪ್ರೇರಣೆಯ ಕೊರತೆ
  • ಜೀವನಶೈಲಿಯಲ್ಲಿನ ಬದಲಾವಣೆಗಳಿಂದಾಗುವ ಅನುಕೂಲಗಳ ಬಗ್ಗೆ ಅರಿವಿನ ಕೊರತೆ
  • ಅನುಸರಣೆಯ ಕೊರತೆ
  • ಹೊಸ ಅಭ್ಯಾಸಗಳನ್ನು ರೂಢಿಸಿಕೊಳ್ಳಲು ಇರುವ ಅಡೆತಡೆಗಳು
  • ಮೆದುಳಿನ ಹಾನಿ ಅಥವಾ ಡಿಮೆನ್ಶಿಯಾದಂತಹ ಅರಿವಿನ ಮೇಲೆ ಪರಿಣಾಮ ಬೀರುವಂತಹ ಅಂಶಗಳು

ವೃತ್ತಿಪರರು, ಅನಾರೋಗ್ಯಕರ ಜೀವನಶೈಲಿಯ ನಡವಳಿಕೆಯನ್ನು ಹೊಂದಿರುವ ಜನರಿಗೆ ನಿಯಮಿತವಾಗಿ ಸಲಹೆ ನೀಡುವ ಮೂಲಕ ಅವರನ್ನು ಆರೋಗ್ಯಕರ ಜೀವನಶೈಲಿಯ ಕಡೆಗೆ ಪ್ರೇರೇಪಿಸಬಹುದು. ಆಗಾಗ್ಗೆ ಆಹಾರ ತಜ್ಞರೊಂದಿಗೆ ಸಂಪರ್ಕದಲ್ಲಿರುವುದರಿಂದ ಆಹಾರಕ್ರಮದಲ್ಲಿ ಬದಲಾವಣೆಗಳನ್ನು ಮಾಡುವುದು ಸುಲಭ.7 ದೈಹಿಕವಾಗಿ ಚಟುವಟಿಕೆಯಿಂದಿರಿ ಹಾಗೂ ದೇಹದ ತೂಕ ಹೆಚ್ಚು ಇದ್ದರೆ ತೂಕ ಇಳಿಸಿ, ಆಗ ಡಿಸ್ಲಿಪಿಡೀಮಿಯಾವನ್ನು ಸುಲಭವಾಗಿ ಹತೋಟಿಯಲ್ಲಿಟ್ಟುಕೊಳ್ಳಬಹುದು.4 ಅನಾರೋಗ್ಯಕರ ಜೀವನಶೈಲಿಯ ನಡವಳಿಕೆಯನ್ನು ಅರ್ಥಮಾಡಿಕೊಂಡು ಒಂದು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಡಿಸ್ಲಿಪಿಡೀಮಿಯಾವನ್ನು ಹಿಡಿತದಲ್ಲಿಡಲು ಈ ಲೇಖನವು ನಿಮಗೆ ಸಹಾಯ ಮಾಡುತ್ತದೆ ಎಂದು ನಾವು ನಂಬುತ್ತೇವೆ.   

ಅನಾರೋಗ್ಯಕರ ಜೀವನಶೈಲಿಯನ್ನು ತೊರೆದು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಹಾಗೂ ಡಿಸ್ಲಿಪಿಡೀಮಿಯಾವನ್ನು ಹತೋಟಿಯಲ್ಲಿಟ್ಟುಕೊಳ್ಳಲು ನಿಮ್ಮ ಲಿಪಿಡ್ ಮಟ್ಟವನ್ನು ನಿಯಂತ್ರಿಸುವುದು, ಇವು ಹೊಸ ವರ್ಷದ ನಿಮ್ಮ ಗುರಿಯಾಗಲಿ. 


ಉಲ್ಲೇಖಗಳು:

  1. Hormone Health Network. Dyslipidemia [Internet]. [updated 2018 May; cited 2019 Dec 18]. Available from: https://www.hormone.org/diseases-and-conditions/dyslipidemia.
  2. American Heart Association. Causes of high cholesterol [Internet]. [updated 2017 Apr 30; cited 2019 Dec 18]. Available from: https://www.heart.org/en/health-topics/cholesterol/causes-of-high-cholesterol.
  3. Centers for Disease Prevention and Control. Knowing your risk – high cholesterol [Internet]. [updated 2019 Feb 6; cited 2019 Dec 18]. Available from: https://www.cdc.gov/cholesterol/risk_factors.htm.
  4. American Heart Association. Prevention and treatment of high cholesterol (hyperlipidemia) [Internet]. [updated 2017 Apr 30; cited 2019 Dec 18]. Available from: https://www.heart.org/en/health-Ref 4 topics/cholesterol/prevention-and-treatment-of-high-cholesterol-hyperlipidemia.
  5. Puddu PE, Menotti A. The impact of basic lifestyle behaviour on health: how to lower the risk of coronary heart disease, other cardiovascular diseases, cancer and all-cause mortality. Lifestyle adaptation: a global approach. E journal of cardiology practice. 2015;13:32.
  6. Kelly RB. Diet and exercise in the management of hyperlipidemia. Am Fam Physician. 2010 May 1;81(9):1097-1102.
  7. Mannu GS, Zaman MJS, Gupta A, Rehman HU and Myint PK. Evidence of lifestyle modification in the management of hypercholesterolemia. Current Cardiol Rev. 2013 Feb 1;9(1):2-14.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.