Reading Time: 2 minutes

ಇದನ್ನು 17 ವರ್ಷ ಅನುಭವ ಇರುವ ನುರಿತ ತಜ್ಞರಾದ ಅಶ್ವಿನಿ ಎಸ್. ಕಾನಡೆ ಅವರು ವಿಮರ್ಶಿಸಿದ್ದಾರೆ. ಇವರು ರಿಜಿಸ್ಟರ್ಡ್ ಡಯೆಟೀಷಿಯನ್ ಮತ್ತು ಸರ್ಟಿಫೈಡ್ ಡಯಾಬಿಟಿಸ್ ಎಜುಕೇಟರ್ ಆಗಿದ್ದಾರೆ.

ಸಕ್ಕರೆ ಕಾಯಿಲೆ ಇರುವ ಹೆಚ್ಚಿನ ಜನರಿಗೆ ಇನ್ಸುಲಿನ್ ಚುಚ್ಚುಮದ್ದು, ಜೀವನದ ಒಂದು ಭಾಗವಾಗಿದೆ. ಹಾಗಾಗಿ, ಇದನ್ನು ತಪ್ಪಾಗಿ ತೆಗೆದುಕೊಳ್ಳುವುದರಿಂದ ಆಗುವ ತೊಂದರೆಗಳನ್ನು ತಪ್ಪಿಸಲು, ಇನ್ಸುಲಿನ್ ಅನ್ನು ಸರಿಯಾದ ರೀತಿಯಲ್ಲಿ ತೆಗೆದುಕೊಳ್ಳುವುದು ಅತ್ಯಗತ್ಯ.

ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಎಂಡೋಕ್ರೈನೊಲೊಜಿ ತಜ್ಞ ವೈದ್ಯರಾದ ಡಾ. ಫ್ರೆಡ್ ವಿಲಿಯಮ್ಸ್ ಅವರು ಒಂದು ಪಟ್ಟಿಯನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ, ನಾವು ಇನ್ಸುಲಿನ್ ಬಳಸುವಾಗ ಯಾವ ತಪ್ಪುಗಳನ್ನು ಮಾಡಬಾರದು ಮತ್ತು ಹೇಗೆ ತಪ್ಪುಗಳನ್ನು ಮಾಡದಿರುವುದು ಎಂಬುದರ ಬಗ್ಗೆ ಹೇಳಿದ್ದಾರೆ.

  1. ನಿಮ್ಮ ಇನ್ಸುಲಿನ್ ಪೆನ್ನನ್ನು ಇತರರ ಜೊತೆ ಹಂಚಿಕೊಳ್ಳುವುದು:

ಇದು ಹೆಪಟೈಟಿಸ್ ಅಥವಾ ಎಚ್. . ವಿ (ಏಡ್ಸ್ ) ಮುಂತಾದ ರಕ್ತದಿಂದ  ಹರಡುವ ಸೋಂಕಿನ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ನೀವು ಒಂದು ಇನ್ಸುಲಿನ್ ಪೆನ್ನನ್ನು ಅನೇಕಬಾರಿ ಉಪಯೋಗಿಸಬೇಕಾದರೆ ಪ್ರತಿಬಾರಿಯೂ ಅದರ ಸೂಜಿಯನ್ನು ಬದಲಾಯಿಸಬೇಕು. ಆದರೆ ಇನ್ಸುಲಿನ್ ಪೆನ್ನನ್ನು ಇತರರ ಜೊತೆ ಹಂಚಿಕೊಳ್ಳುವುದು ಸುರಕ್ಷಿತವಲ್ಲ. ಇನ್ಸುಲಿನ್ ತೆಗೆದುಕೊಳ್ಳುವಾಗ ರಕ್ತ ಮತ್ತು ಚರ್ಮದ ಕಣಗಳು ಇನ್ಸುಲಿನ್ ಕಾರ್ಟ್ರೆಜ್ ಒಳಗೆ ಹೋಗುವ ಸಾಧ್ಯತೆ ಇರುತ್ತದೆ ಎಂದು ಅಮೆರಿಕನ್ ಡಯಾಬಿಟಿಸ್ ಅಸೋಸಿಯೇಷನ್ ಎಚ್ಚರಿಕೆ ನೀಡಿದೆ.[1] ಆದ್ದರಿಂದ ಪೆನ್ನನ್ನು ಇತರರ ಜೊತೆ ಹಂಚಿಕೊಳ್ಳುವುದರಿಂದ ನಿಮಗೆ ಸುಲಭವಾಗಿ ಸೋಂಕು ತಗುಲಬಹುದು. ಮನೆಯಲ್ಲಿ ಇನ್ಸುಲಿನ್ ಬಳಸುವ ಪ್ರತಿಯೊಬ್ಬರೂ ತಮ್ಮದೇ ಆದ ಇನ್ಸುಲಿನ್ ಪೆನ್ನನ್ನು ಹೊಂದಿರುವಂತೆ ನೋಡಿಕೊಳ್ಳಿ.

  1. ಇನ್ಸುಲಿನ್ ಅನ್ನು ಸರಿಯಾಗಿ ಸಂಗ್ರಹಿಸದೇ ಇಡುವುದು:

ಒಂದುವೇಳೆ ಇನ್ಸುಲಿನ್ ಅನ್ನು ತುಂಬಾ ಬಿಸಿ ಅಥವಾ ತುಂಬಾ ತಣ್ಣನೆ ಜಾಗದಲ್ಲಿಟ್ಟರೆ, ಅದರ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಕ್ಷಮತೆ ಕಡಿಮೆಯಾಗುತ್ತದೆ. ನೀವು ಎಷ್ಟು ಸಮಯ ಅದನ್ನು ಬಿಸಿ ಅಥವಾ ತಣ್ಣನೆಯ ಜಾಗದಲ್ಲಿಡುತ್ತೀರೋ ಅದರ ಕ್ಷಮತೆ ಅಷ್ಟೇ ಕಡಿಮೆಯಾಗುತ್ತದೆ. ಇನ್ಸುಲಿನ್ ಅನ್ನು ಸಂಗ್ರಹಿಸಿಡಲು ಸೂಕ್ತವಾದ ವಾತಾವರಣವನ್ನು ಕೆಳಗೆ ನೀಡಲಾಗಿದೆ:

  •  ತೆರೆಯದ ಇನ್ಸುಲಿನ್ ಬಾಟಲಿಯನ್ನು ರೆಫ್ರಿಜಿರೇಟರ್ನಲ್ಲಿಡಬೇಕು. (ತಾಪಮಾನ 2 ರಿಂದ 7 ಡಿಗ್ರಿ ಸೆಲ್ಸಿಯಸ್ ಒಳಗೆ ಇರಲಿ)
  • ತೆರೆದ ಇನ್ಸುಲಿನ್ ಅನ್ನು ಕೊಠಡಿಯ ತಾಪಮಾನದಲ್ಲಿ ಅಥವಾ ರೆಫ್ರಿಜಿರೇಟರ್ನಲ್ಲಿ 28 ದಿನ ಇಡಬಹುದು.
  1. ಇನ್ಸುಲಿನ್ ಅನ್ನು ತಪ್ಪಾಗಿ ಚುಚ್ಚಿಕೊಳ್ಳುವುದು:

ಇನ್ಸುಲಿನ್ ಅನ್ನು ಸರಿಯಾಗಿ ಚರ್ಮದ ಕೆಳಗೆ, ಕೊಬ್ಬಿನ ಅಂಗಾಂಶ ಇರುವಲ್ಲಿ ಚುಚ್ಚಿಕೊಳ್ಳಬೇಕು. ಇದನ್ನು ಚುಚ್ಚಿಕೊಳ್ಳುವ ಕೆಲವು ಪ್ರಖ್ಯಾತ ಜಾಗಗಳೆಂದರೆ, ಹೊಟ್ಟೆ (ಹೊಕ್ಕಳಿನಿಂದ ಎರಡು ಬೆರಳು ಅಥವಾ ಕೆಲವು ಇಂಚು ದೂರದಲ್ಲಿ), ತೊಡೆಯ ಹೊರಗಿನ ಭಾಗ, ಸೊಂಟ, ಗುದದ ಮೇಲಿನ ಭಾಗ, ಬೆನ್ನಿನ ಕೆಳಭಾಗ, ತೋಳಿನ ಹಿಂಭಾಗ.[2] ಒಂದು ವೇಳೆ ಇನ್ಸುಲಿನ್ ಅನ್ನು ಆಳವಾಗಿ ನಿಮ್ಮ ಮಾಂಸಖಂಡಗಳಿಗೆ ಚುಚ್ಚಿಕೊಂಡರೆ ತುಂಬಾ ನೋವಾಗುತ್ತದೆ ಮತ್ತು ನಿಮ್ಮ ದೇಹದೊಳಕ್ಕೆ ಅದು ತಕ್ಷಣ ಹೀರಲ್ಪಡುತ್ತದೆ. ಇದೆಲ್ಲದರಿಂದ ರಕ್ತದ ಸಕ್ಕರೆಯ ಪ್ರಮಾಣ ತುಂಬಾ ಕಡಿಮೆಯಾಗಬಹುದು.

ಇನ್ಸುಲಿನ್ ಅನ್ನು ಸರಿಯಾಗಿ ಚುಚ್ಚಿಕೊಳ್ಳುವ ವಿಧಾನ ಇಲ್ಲಿದೆ:

  1. ಅಗತ್ಯವಿರುವ ಎಲ್ಲ ವಸ್ತುಗಳನ್ನು ತೆಗೆದುಕೊಳ್ಳಿ.
  2. ನಿಮ್ಮ ಕೈಗಳನ್ನು ಸೋಪು ಮತ್ತು ನೀರಿನಿಂದ ಚನ್ನಾಗಿ ತೊಳೆಯಿರಿ.
  3. ಇನ್ಸುಲಿನ್ ಮೇಲಿರುವ ಲೆಬಲ್ ನೋಡಿ ಮತ್ತು ನೀವು ಸರಿಯಾದ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದೀರೆಂದು ಖಚಿತಪಡಿಸಿಕೊಳ್ಳಿ.
  4. ತೆಗೆದುಕೊಳ್ಳಬೇಕಾಗಿರುವ ಪ್ರಮಾಣದ ಇನ್ಸುಲಿನ್ ಅನ್ನು ಸಿರಿಂಜ್ಗೆ ತುಂಬಿ. ಒಂದಕ್ಕಿಂತ ಹೆಚ್ಚು ಬಗೆಯ ಇನ್ಸುಲಿನ್ ಅನ್ನು ಸಿರಿಂಜ್ಗೆ ಹಾಕದಂತೆ ನೋಡಿಕೊಳ್ಳಿ.
  5. ಇದನ್ನು ಚರ್ಮದ ಕೆಳಗಿರುವ ಕೊಬ್ಬಿನ ಪದರಕ್ಕೆ ಚುಚ್ಚಿಕೊಳ್ಳಿ.
  6. ಅದನ್ನು ಚುಚ್ಚಿಕೊಳ್ಳುವಾಗ ಸೂಜಿಯನ್ನು ಚರ್ಮದ ಒಳಗೆ ಪೂರ್ತಿಯಾಗಿ ತಳ್ಳಿ ಮತ್ತು ಸಿರಿಂಜ್ ಅನ್ನು ನಿಧಾನವಾಗಿ ತಳ್ಳಿ, ಇನ್ಸುಲಿನ್ ಅನ್ನು ಜಾಗಕ್ಕೆ ತಲುಪುವಂತೆ ಮಾಡಿ. ಪ್ಲಂಜರ್ ಪೂರ್ತಿ ಕೆಳಗೆ ತಲುಪಿದೆಯೇ ನೋಡಿ. ಸೂಜಿಯನ್ನು ಜಾಗದಲ್ಲಿ 10 ಸೆಕೆಂಡ್ಗಳವರೆಗೆ ಇಡಿ.
  7. ಇನ್ಸುಲಿನ್ ಚುಚ್ಚಿಕೊಂಡ ನಂತರ, ಸೂಜಿಯನ್ನು ಮತ್ತು ಸಿರಿಂಜ್ ಅನ್ನು ಜಾಗರೂಕತೆಯಿಂದ ಚೂಪಾದ ವಸ್ತುಗಳನ್ನು ಬಿಸಾಡುವ ಡಬ್ಬದಲ್ಲಿ ಹಾಕಿ.
  1. ಇನ್ಸುಲಿನ್ ಅನ್ನು ಜಾಸ್ತಿ ಪ್ರಮಾಣದಲ್ಲಿ ಚುಚ್ಚಿಕೊಳ್ಳುವುದು:

ನಿಮ್ಮ ರಕ್ತದಲ್ಲಿ ಇನ್ಸುಲಿನ್ ತುಂಬಾ ಜಾಸ್ತಿ ಆದರೆ, ರಕ್ತದ ಗ್ಲುಕೋಸ್ ಪ್ರಮಾಣ ತುಂಬಾ ಕಡಿಮೆ ಆಗಬಹುದು. ರಕ್ತದ ಸಕ್ಕರೆಯ ಪ್ರಮಾಣ ತುಂಬಾ ಕಡಿಮೆ ಆದರೆ ದೇಹಕ್ಕೆ ತನ್ನ ನಿಯಮಿತ ಕೆಲಸಗಳನ್ನು ಮಾಡಲಾಗುವುದಿಲ್ಲ. ಹೈಪೊಗ್ಲೈಸಿಮಿಯಾ (ರಕ್ತದ ಸಕ್ಕರೆ ಪ್ರಮಾಣ ತುಂಬಾ ಕಡಿಮೆ) ಆದಾಗ, ದೇಹವು ತೀವ್ರ ಶಕ್ತಿಯ ಕೊರತೆಯಿಂದ ಬಳಲಿ ಅದು ತನ್ನ ಕೆಲಸವನ್ನು ನಿಲ್ಲಿಸಲಾರಂಭಿಸುತ್ತದೆ. ಒಂದುವೇಳೆ, ಸಕ್ಕರೆ ಖಾಯಿಲೆ ಇರುವ ರೋಗಿಗಳು ಕೆಲವೊಮ್ಮೆ ಜಾಸ್ತಿ ಪ್ರಮಾಣದ ಇನ್ಸುಲಿನ್ ಚುಚ್ಚಿಕೊಳ್ಳುವುದು ಅಥವಾ ಇನ್ಸುಲಿನ್ ತೆಗೆದುಕೊಂಡಮೇಲೆ ಆಹಾರ ಸೇವಿಸದಿದ್ದರೆ ಅವರ ರಕ್ತದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಾಗಬಹುದು.

  1. ಔಷಧಿಯ ಅವಧಿ ಮುಗಿಯುವ ದಿನಾಂಕವನ್ನು ಪರಿಶೀಲನೆ ಮಾಡದೇ ಇರುವುದು:

ಅವಧಿ ಮುಗಿದ ಇನ್ಸುಲಿನ್ ಪರಿಣಾಮಕಾರಿಯಾಗಿರುವುದಿಲ್ಲ. ಇನ್ಸುಲಿನ್ ಅವಧಿ ಮುಗಿಯದಿದ್ದರೂ ಅದನ್ನು ಒಂದು ತಿಂಗಳಿಗಿಂತ ಹೆಚ್ಚು ಸಮಯ ಕೊಠಡಿಯ ತಾಪಮಾನದಲ್ಲಿಟ್ಟು ಉಪಯೋಗಿಸಿದರೆ ಅದರ ಸಾಮರ್ಥ್ಯ ನಾಶವಾಗಬಹುದು.(2)

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.