Reading Time: 2 minutes

ಹೈಪರ್‌ಟೆನ್ಶನ್ ಎಂದರೇನು? ಯಾವಾಗ ನಿಮ್ಮ ರಕ್ತದೊತ್ತಡವನ್ನು HTN ಎಂದು ಪರಿಗಣಿಸಲಾಗುವುದು?

ಹೈಪರ್‌ಟೆನ್ಶನ್ ಎಂಬುದು ಅಧಿಕ ರಕ್ತದೊತ್ತಡಕ್ಕೆ ಬಳಸುವ ವೈದ್ಯಕೀಯ ಪದ. ಇದು ಇಂದಿನ ಜೀವನಶೈಲಿಯಲ್ಲಿ ಕಂಡುಬರುವ ಸಾಮಾನ್ಯ ಕಾಯಿಲೆಯಾಗಿದೆ. ಅಪಧಮನಿಗಳಲ್ಲಿ ಹರಿಯುವ ರಕ್ತದ ವೇಗವು ಸಾಮಾನ್ಯ ವೇಗಕ್ಕಿಂತ ಹೆಚ್ಚಿರುವ ಸ್ಥಿತಿಗೆ ಅಧಿಕ ರಕ್ತದೊತ್ತಡ ಎನ್ನುವರು. ನಿಮ್ಮ ರಕ್ತದೊತ್ತಡವು 140/90ಕ್ಕಿಂತ ಹೆಚ್ಚು ಕಂಡುಬಂದಲ್ಲಿ ನೀವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದೀರಿ ಎಂದರ್ಥ. ನಿಮ್ಮ ರಕ್ತದೊತ್ತಡವು 180 /120ಅನ್ನು ಮೀರಿದರೆ, ಪರಿಸ್ಥಿತಿಯ ತೀವ್ರತೆಯ ಆಧಾರದ ಮೇಲೆ ನಿಮ್ಮನ್ನು ಹಾಸ್ಪಿಟಲ್‍ಗೆ ಸೇರಿಸಬೇಕಾಗಬಹುದು.  

ಯಾರಿಗೆ ಈ ಅಧಿಕ ರಕ್ತದೊತ್ತಡದ ಅಪಾಯವಿದೆ?

ಅಧಿಕ ರಕ್ತದೊತ್ತಡವನ್ನು ತಂದೊಡ್ಡುವ ಅಪಾಯಕಾರಿ ಅಂಶಗಳು ಇಲ್ಲಿವೆ:

ವಯಸ್ಸು: ನಿಮಗೆ ವಯಸ್ಸಾದಂತೆ, ರಕ್ತನಾಳದ ಎಲಾಸ್ಟಿಸಿಟಿ ಕಡಿಮೆಯಾಗುವುದರಿಂದ ಮತ್ತು ಹಾರ್ಮೋನ್ ಬದಲಾವಣೆಯಿಂದ ಅಧಿಕ ರಕ್ತದೊತ್ತಡ ಬರುವ ಸಾಧ್ಯತೆ ಇದೆ.

ಲಿಂಗ: ಹೆಂಗಸರಿಗೆ ಹೋಲಿಸಿದರೆ ಗಂಡಸರಿಗೆ ಅಧಿಕ ರಕ್ತದೊತ್ತಡವು 45ರ ವಯಸ್ಸಿನ ಒಳಗೆ ಬರುವ ಸಾಧ್ಯತೆ ಹೆಚ್ಚಿದೆ. ಆದರೆ ಮುಟ್ಟು ನಿಂತ ಹೆಂಗಸರಲ್ಲಿ ಈಸ್ಟ್ರೊಜೆನ್‍ಗಳ ರಕ್ಷಣಾ ಸಾಮರ್ಥ್ಯ ಕುಗ್ಗುತ್ತದೆ. ಆಗ ಅವರಿಗೂ ಅಧಿಕ ರಕ್ತದೊತ್ತಡದ ಬರುವ ಅಪಾಯವಿರುತ್ತದೆ.

ಜನಾ೦ಗ: ಆಫ್ರಿಕನ್ಸ್ ಮತ್ತು ಲ್ಯಾಟಿನೋಸ್ ಜನಾಂಗದವರಲ್ಲಿ ಅಧಿಕ ರಕ್ತದೊತ್ತಡವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಜೆನೆಟಿಕ್ಸ್: ಕೌಟುಂಬಿಕ ಆರೋಗ್ಯದ ಇತಿಹಾಸವು ಅಧಿಕ ರಕ್ತದೊತ್ತಡ ಬರುವ ಸಾಧ್ಯತೆಗಳನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಅಧಿಕ ರಕ್ತದೊತ್ತಡಕ್ಕೆ ಇರುವ ಮುಖ್ಯ ಕಾರಣಗಳೇನು?

ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಿರುವ ಪ್ರಮುಖ ಅಂಶಗಳೆಂದರೆ:

ಬೊಜ್ಜು:

ನಿಮ್ಮ ತೂಕ ಹೆಚ್ಚಾದಂತೆ ನಿಮ್ಮ ಹೃದಯವು ದೇಹಕ್ಕೆ ಬೇಕಾದ ಆಕ್ಸಿಜನ್ ಮತ್ತು ಪೋಷಕಾಂಶಗಳನ್ನು ಪೂರೈಸಲು ಹೆಚ್ಚು ರಕ್ತವನ್ನು ಪಂಪ್ ಮಾಡಬೇಕಾಗುತ್ತದೆ. ಈ ಹೆಚ್ಚುವರಿ ರಕ್ತವು ಅಪಧಮನಿಯ ಗೋಡೆಗಳ ಮೇಲೆ ಹೆಚ್ಚಿನ ಒತ್ತಡವನ್ನು ಹೇರುತ್ತವೆ.

ದೈಹಿಕ ಚಟುವಟಿಕೆಯ ಕೊರತೆ:

ಜಡ ಜೀವನಶೈಲಿಯಿಂದಾಗಿ ನಿಮ್ಮ ಹೃದಯ ಮತ್ತು ನಾಡಿಬಡಿತ ಹೆಚ್ಚುತ್ತದೆ. ಇದರ ಪರಿಣಾಮವಾಗಿ ನಿಮ್ಮ ಹೃದಯವು ರಕ್ತವನ್ನು ಪಂಪ್ ಮಾಡಲು ಹೆಚ್ಚು ಕಷ್ಟಪಡುವುದು, ಇದರಿಂದಾಗಿ ಅಪಧಮನಿಗಳ ಮೇಲೆ ಹೆಚ್ಚಿನ ಒತ್ತಡ ಬೀಳುವುದು. ಇವೆಲ್ಲದರ ಜೊತೆಗೆ ದೈಹಿಕ ವ್ಯಾಯಾಮದ ಕೊರತೆಯಿಂದಾಗಿ ಹೆಚ್ಚು ದಪ್ಪಗಾಗುವ ಅಪಾಯವಿರುತ್ತದೆ.

ತಂಬಾಕು ಮತ್ತು ಧೂಮಪಾನ ಸೇವನೆ:

ಜಗಿಯುವ ತಂಬಾಕು ಮತ್ತು ಧೂಮಪಾನ ಅಲ್ಪ ಅವಧಿಯವರೆಗೆ ನಿಮ್ಮ ರಕ್ತದ ಒತ್ತಡವನ್ನು ಹೆಚ್ಚಿಸುತ್ತವೆ. ಹಾಗೆಯೇ, ದೀರ್ಘಾವಧಿಯಲ್ಲಿ, ತಂಬಾಕಿನಲ್ಲಿರುವ ರಾಸಾಯನಿಕವು ನಿಮ್ಮ ಅಪಧಮನಿಗಳನ್ನು ದಪ್ಪ ಹಾಗೂ ಗಟ್ಟಿಯಾಗಿಸುತ್ತದೆ, ಇದರಿಂದ ರಕ್ತ ಪರಿಚಲನೆಗೆ ಕಷ್ಟವಾಗುತ್ತದೆ.

ತಂಬಾಕು ಮತ್ತು ಧೂಮಪಾನ ಸೇವನೆ:

ಜಗಿಯುವ ತಂಬಾಕು ಮತ್ತು ಧೂಮಪಾನ ಅಲ್ಪ ಅವಧಿಯವರೆಗೆ ನಿಮ್ಮ ರಕ್ತದ ಒತ್ತಡವನ್ನು ಹೆಚ್ಚಿಸುತ್ತವೆ. ಹಾಗೆಯೇ, ದೀರ್ಘಾವಧಿಯಲ್ಲಿ, ತಂಬಾಕಿನಲ್ಲಿರುವ ರಾಸಾಯನಿಕವು ನಿಮ್ಮ ಅಪಧಮನಿಗಳನ್ನು ದಪ್ಪ ಹಾಗೂ ಗಟ್ಟಿಯಾಗಿಸುತ್ತದೆ, ಇದರಿಂದ ರಕ್ತ ಪರಿಚಲನೆಗೆ ಕಷ್ಟವಾಗುತ್ತದೆ.

ಆಹಾರ ಕ್ರಮ ಸರಿಯಿಲ್ಲದಿರುವುದು:

ಶೇಖರಿಸಿದ ಆಹಾರ ಮತ್ತು ಜಂಕ್ ಫುಡ್‍ಗಳನ್ನು ಅತಿಯಾಗಿ ಸೇವಿಸುವುದರ ಜೊತೆಗೆ, ಹಣ್ಣು ಮತ್ತು ತರಕಾರಿಗಳ ಬಳಕೆಯನ್ನು ಕಡಿಮೆ ಮಾಡಿದಾಗ, ನಿಮ್ಮ ದೇಹದಲ್ಲಿನ ಸೋಡಿಯಂ ಮಟ್ಟ ಹೆಚ್ಚುತ್ತದೆ ಹಾಗೂ ಪೊಟ್ಯಾಸಿಯಂನ ಮಟ್ಟ ಕುಸಿಯುತ್ತದೆ. ಎಲೆಕ್ಟ್ರೋಲೈಟ್‍ಗಳ ಈ ಅಸಮತೋಲನವು ದೇಹದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಮತ್ತು ರಕ್ತದ ಪರಿಮಾಣ ಹೆಚ್ಚುವುದಕ್ಕೆ ಕಾರಣವಾಗುತ್ತದೆ.

ಈ ಕಾರಣಗಳ ಜೊತೆಗೆ ರಕ್ತದೊತ್ತಡಕ್ಕೆ ಕಾರಣವಾಗುವ ಇನ್ನಿತರ ಅಂಶಗಳೆಂದರೆ:

 • ಒತ್ತಡ
 • ಗರ್ಭಧಾರಣೆ
 • ಡಯಾಬಿಟಿಸ್
 • ಕಿಡ್ನಿ ರೋಗಗಳು
 • ನಿದ್ದೆಯಲ್ಲಿ ಉಸಿರುಕಟ್ಟುವಿಕೆ
 • ಔಷಧಿಗಳಾದ ಕೋರ್ಟಿಕೊಸ್ಟಿರಾಯಡ್ಸ್, ಓರಲ್ ಕಾಂಟ್ರಾಸೆಪ್ಟಿವ್ಸ್, ಮತ್ತು ಡಿಕಂಜೆಸ್ಟಂಟ್ಸ್

ಅಧಿಕ ರಕ್ತದೊತ್ತಡದ ಲಕ್ಷಣಗಳು ಯಾವುವು?

ಅಧಿಕ ರಕ್ತದೊತ್ತಡದ ಅತ್ಯಂತ ಅಪಾಯಕಾರಿ ಅಂಶವೆಂದರೆ, ಯಾವುದೇ ಲಕ್ಷಣಗಳಿಲ್ಲದೆ ಹಲವಾರು ವರ್ಷಗಳಿಂದ ಈ ರೋಗವನ್ನು ನೀವು ಹೊಂದಿರಬಹುದು. ಈ ರೋಗವನ್ನು ಪತ್ತೆಮಾಡಲು ಇರುವ ಒಂದೇ ಒಂದು ದಾರಿಯೆಂದರೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸುವುದು.

ಹೀಗಿದ್ದರೂ, ಸಾಮಾನ್ಯವಾಗಿ ಕಂಡುಬರುವ ಕೆಲವು ಗುಣಲಕ್ಷಣಗಳೆಂದರೆ:

 • ತಲೆನೋವು
 • ನಿಶ್ಯಕ್ತಿ
 • ದೃಷ್ಟಿಯ ತೊಂದರೆಗಳು
 • ಉಸಿರಾಟದ ತೊಂದರೆ
 • ಹೃದಯದ ಬಡಿತದಲ್ಲಿ ಏರುಪೇರು
 • ಎದೆ, ಕುತ್ತಿಗೆ ಇಲ್ಲವೇ ಕಿವಿಗಳು ಹೊಡೆದುಕೊಳ್ಳುವುದು.
 • ಎದೆ ನೋವು
 • ಮೂಗಿನಲ್ಲಿ ರಕ್ತಸ್ರಾವ

ಅಧಿಕ ರಕ್ತದೊತ್ತಡದಿಂದ ಆಗುವ ದೀರ್ಘಕಾಲದ ಪರಿಣಾಮಗಳೇನು?

ರಕ್ತದೊತ್ತಡದಿಂದಾಗಿ ಅಪಧಮನಿಯ ಗೋಡೆಯ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಇದರಿಂದ ದೇಹದ ರಕ್ತನಾಳ ಮತ್ತು ಇತರೆ ಅಂಗಾಂಗಗಳಿಗೆ ಹಾನಿಯಾಗುತ್ತದೆ.

ಅಧಿಕ ರಕ್ತದೊತ್ತಡದಿಂದಾಗುವ ಕೆಲವು ಧೀರ್ಘಾವಧಿ ಪರಿಣಾಮಗಳು:

 • ಹೃದಯಾಘಾತ ಅಥವಾ ಪಾರ್ಶ್ವವಾಯು
 • ಎಥೆರೋಸ್‍ಕ್ಲೆರೋಸಿಸ್
 • ಆ್ಯನೂರಿಸಮ್
 • ಹೃದಯ ವೈಫಲ್ಯ
 • ಕಿಡ್ನಿ ತೊಂದರೆಗಳು
 • ದೃಷ್ಟಿ ನಷ್ಟ
 • ವಾಸ್ಕ್ಯುಲರ್ ಡೆಮೆನ್ಶಿಯ

ಅಧಿಕ ರಕ್ತದೊತ್ತಡಕ್ಕೆ ಇರುವ ಚಿಕಿತ್ಸೆಗಳೇನು?

ಅಗತ್ಯವಿರುವ ಔಷಧಿ ಮತ್ತು ನಿಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳುವ ಮೂಲಕ ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆಯನ್ನು ನೀಡಬಹುದು.

ಡಯಾಬಿಟಿಸ್ ಅಥವಾ ಮೂತ್ರಪಿಂಡ ರೋಗದಿಂದ ನಿಮಗೇನಾದರು ಅಧಿಕ ರಕ್ತದೊತ್ತಡ ಬಂದಿದ್ದಲ್ಲಿ, ಮೊದಲು ಅದಕ್ಕೆ ವೈದ್ಯರು ಸೂಕ್ತ ಚಿಕಿತ್ಸೆಯನ್ನು ನೀಡುತ್ತಾರೆ.

ಅಧಿಕ ರಕ್ತದೊತ್ತಡಕ್ಕೆ ಇರುವ ಚಿಕಿತ್ಸೆಗಳೇನು?

ಅಗತ್ಯವಿರುವ ಔಷಧಿ ಮತ್ತು ನಿಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳುವ ಮೂಲಕ ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆಯನ್ನು ನೀಡಬಹುದು.

ಡಯಾಬಿಟಿಸ್ ಅಥವಾ ಮೂತ್ರಪಿಂಡ ರೋಗದಿಂದ ನಿಮಗೇನಾದರು ಅಧಿಕ ರಕ್ತದೊತ್ತಡ ಬಂದಿದ್ದಲ್ಲಿ, ಮೊದಲು ಅದಕ್ಕೆ ವೈದ್ಯರು ಸೂಕ್ತ ಚಿಕಿತ್ಸೆಯನ್ನು ನೀಡುತ್ತಾರೆ.

ಔಷಧಿಗಳ ಜೊತೆಗೆ, ನೀವು ಈ ಕೆಳಗಿನ ಜೀವನಶೈಲಿಯ ಬದಲಾವಣೆಗಳನ್ನು ಮಾಡಿಕೊಳ್ಳಬಹುದು:

 • ತೂಕ ಇಳಿಸುವಿಕೆ;
 • ದಿನಕ್ಕೆ 30 ನಿಮಿಷದಂತೆ ಒಂದು ವಾರದಲ್ಲಿ ಐದು ದಿನ ವ್ಯಾಯಾಮ ಮಾಡಿ;
 • ಮದ್ಯಪಾನವನ್ನು ಮಿತಗೊಳಿಸಬೇಕು: ವಾರಕ್ಕೆ 4 ಬಾರಿಗಿಂತ ಹೆಚ್ಚು ತೆಗೆದುಕೊಳ್ಳಬಾರದು;
 • ಧೂಮಪಾನವನ್ನು ಬಿಟ್ಟುಬಿಡಿ;
 • ಹಣ್ಣು ಮತ್ತು ತರಕಾರಿಗಳನ್ನು ಪ್ರತಿದಿನ ಐದು ಬಾರಿ ಸೇವಿಸಿ;
 • ಆಹಾರದಲ್ಲಿ ಉಪ್ಪನ್ನು ಕಡಿಮೆ ಮಾಡಿ. ಹಾಗೆಯೇ, ಸೋಡಿಯಂ ಹೆಚ್ಚಾಗಿರುವ ಆಹಾರ ಪದಾರ್ಥಗಳಾದ ಚೀಸ್, ಉಪ್ಪಿನಕಾಯಿ, ಗೊಜ್ಜು ಮತ್ತು ಹಪ್ಪಳವನ್ನು ಕಡಿಮೆ ಸೇವಿಸಿ;
 • ಕರಿದ ತಿನಿಸುಗಳು, ಜಂಕ್ ಫುಡ್ ಮತ್ತು ಸಿಹಿತಿನಿಸುಗಳನ್ನು ಕಡಿಮೆಮಾಡಿ;

ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ DASH ಆಹಾರ ಕ್ರಮ ಸಹಾಯಕವಾಗಿದೆ. ನೀವು ಈ ಆಹಾರ ನಿಯಮಗಳನ್ನು ತಿಳಿಯಲು ಈ ಲಿಂಕ್‌ಅನ್ನು ಕ್ಲಿಕ್ ಮಾಡಿ :https://www.nhlbi.nih.gov/health-topics/dash-eating-plan

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.