Reading Time: 2 minutes

ಸಕ್ಕರೆ ಹಾಗೂ ವಿಟಮಿನ್‌ಗಳ ಉತ್ತಮ ಮೂಲವಾಗಿರುವ ಖರ್ಜೂರ ಹಣ್ಣುಗಳು, ವಿಶೇಷವಾಗಿ ರಂಜಾನ್ ಸಮಯದಲ್ಲಿ ಬಹಳಷ್ಟು ಪ್ರಯೋಜನಕಾರಿಯಾಗಿರುತ್ತವೆ. ಹಾಗೆಯೇ, ನಾರು ಮತ್ತು ಕಾರ್ಬೋಹೈಡ್ರೇಟ್‌ಗಳ ಅತ್ಯುತ್ತಮ ಮೂಲಗಳಾಗಿರುವ ಈ ಖರ್ಜೂರ ಹಣ್ಣುಗಳು, ಉಪವಾಸದಿಂದ ಉಂಟಾಗುವ ರಕ್ತದಲ್ಲಿನ ಕಡಿಮೆ ಸಕ್ಕರೆ ಮಟ್ಟ, ತಲೆನೋವು ಹಾಗೂ ಆಲಸ್ಯದಂತಹ ಸಮಸ್ಯೆಗಳೊಂದಿಗೆ ಹೋರಾಡಲು ನೆರವಾಗುತ್ತವೆ1. ಬರೀ ಇಷ್ಟೇ ಅಲ್ಲ, ಖರ್ಜೂರದ ಹಣ್ಣಿನ ಉಪಯೋಗಗಳ ಬಗ್ಗೆ ನಾವು ತಿಳಿಯುವುದು ಇನ್ನೂ ಬಹಳಷ್ಟಿದೆ. 

10 ಪ್ರಮುಖ ಪ್ರಭೇದಗಳು ಹಾಗೂ ನೂರಾರು ಬಗೆಗಳಲ್ಲಿ ಸಿಗುವ ಖರ್ಜೂರದ ಹಣ್ಣು, ರಂಜಾನ್ ತಿಂಗಳಿನಲ್ಲಿ ಉಪವಾಸ ಮುರಿಯಲು ಬಳಸುವ ಈ ಹಣ್ಣು ಮೆಚ್ಚುಗೆಯ ತಿನಿಸುಗಳಲ್ಲಿ ಒಂದಾಗಿದೆ. ಸಕ್ಕರೆ ಹಾಗೂ ಪೋಷಕಾಂಶಗಳ ಉತ್ತಮ ಮೂಲಗಳಾಗಿರುವ ಖರ್ಜೂರದ ಹಣ್ಣುಗಳು, ದೇಹದ ಶಕ್ತಿಯನ್ನು ಮರುಉತ್ಪಾದಿಸಲು ನೆರವಾಗುತ್ತವೆ. 

ಖರ್ಜೂರದ ಹಣ್ಣು ತಿಂದು ಉಪವಾಸ ಮುರಿಯುವುದು ಹಿಂದಿನಿಂದ ರೂಢಿಯಲ್ಲಿರುವ ರಂಜಾನ್‌ನ ಸಂಪ್ರದಾಯವಾಗಿದೆ. ಹದೀತ್ ಸಾಹಿತ್ಯದ ಪ್ರಕಾರ, ಅಲ್ಲಾಹುವಿನ ದೂತ ತನ್ನ ಪ್ರಾರ್ಥನೆ ಮಾಡುವ ಮೊದಲು ಮಾಗಿದ ಖರ್ಜೂರದೊಂದಿಗೆ ಉಪವಾಸ ಮುರಿಯುತ್ತಿದ್ದ2. ಹಾಗಾಗಿ ರಂಜಾನ್ ಸಮಯದಲ್ಲಿ ಖರ್ಜೂರದ ಹಣ್ಣನ್ನು ತಿನ್ನುವುದು, ಆಧ್ಯಾತ್ಮಿಕ ಮಹತ್ವವನ್ನು ಸಹ ತೋರುತ್ತದೆ.

ಖರ್ಜೂರದ ಮರವು ಮಧ್ಯಪೂರ್ವದಲ್ಲಿ ಸುಧೀರ್ಘವಾದ ಇತಿಹಾಸವನ್ನು ಹೊಂದಿದ್ದು, ಈ ಮರವನ್ನು ಸಾವಿರಾರು ವರ್ಷಗಳಿಂದ ಬೆಳೆಸಲಾಗುತ್ತಿದೆ. ಬಿಸಿಯಾಗಿರುವ ಒಣ ವಾತಾವರಣವು, ಖರ್ಜೂರದ ಮರವನ್ನು ಬೆಳೆಸಲು ಸೂಕ್ತವಾದ ಪರಿಸರವಾಗಿದೆ.2

ವಿವಿಧ ಬಗೆಯ ಖರ್ಜೂರದ ಹಣ್ಣುಗಳು

ವಿಭಿನ್ನ ರಚನೆ, ಬಣ್ಣ, ಹಾಗೂ ರುಚಿಗಳನ್ನು ಹೊಂದಿರುವ ಹಲವು ಬಗೆಯ ಖರ್ಜೂರದ ಹಣ್ಣುಗಳು ಲಭ್ಯವಿವೆ. ಆದರೆ ಖರ್ಜೂರದ ಹಣ್ಣಿನ ಹತ್ತು ಪ್ರಮುಖ ಪ್ರಭೇದಗಳು ಹೀಗಿವೆ:

 1. ಬಾರ್ಹಿ
 2. ಡೆಗ್ಲೆಟ್ ನೂರ್
 3. ಫಾರ್ಡ್
 4. ಹಲಾವಿ
 5. ಖಾದ್ರಾವಿ
 6. ಖಲಾಸ್
 7. ಖಸಬ್
 8. ಲುಲು
 9. ಮದ್ಜೂಲ್
 10. ಜಹೀದಿ

ಖರ್ಜೂರದ ಹಣ್ಣಿನ ಪೌಷ್ಟಿಕ ಲಾಭಗಳು

ಖರ್ಜೂರ ಹಣ್ಣುಗಳಲ್ಲಿ ಆ್ಯಂಟಿಆಕ್ಸಿಡೆಂಟ್ ಹಾಗೂ ಆ್ಯಂಟಿಮೈಕ್ರೊಬಿಯಲ್ ಗುಣಲಕ್ಷಗಳಿರುತ್ತವೆ, ಎಂದು ತಿಳಿದು ಬಂದಿದೆ3. ಪ್ರತಿಯೊಂದು ಬಗೆಯ ಖರ್ಜೂರದ ಹಣ್ಣಿನ ಪೋಷಕಾಂಶಗಳ ಮಾಹಿತಿಯನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

ಬಗೆತೇವಾಂಶಪ್ರೋಟೀನ್ಲಿಪಿಡ್ಆ್ಯಶ್‌ಗ್ಲೂಕೋಸ್ಫ್ರಕ್ಟೋಸ್ಸುಕ್ರೋಸ್ನಾರುಶಕ್ತಿ
ಬಾರ್ಹಿ29.52.30.11.429.727.6ಎನ್‌ಡಿ9.4239
ಡೆಗ್ಲೆಟ್ ನೂರ್21.22.40.12.314.812.338.08.9271
ಫಾರ್ಡ್27.72.10.11.830.230.2ಎನ್‌ಡಿ8.0251
ಹಲಾವಿ12.22.30.51.934.334.36.77.8315
ಖದ್ರಾವಿ9.52.20.41.930.331.9ಎನ್‌ಡಿ23.8261
ಖಲಾಸ್22.32.10.11.436.531.70.05.9282
ಖಾಸಾಬ್16.51.60.11.636.735.10.08.4295
ಲುಲು21.32.50.11.635.336.5ಎನ್‌ಡಿ2.7298
ಮದ್ಜೂಲ್21.01.80.11.734.333.90.56.7283
ಜಹೀದಿ8.32.00.41.730.135.911.611.0322

ಮೆದ್ಜೂಲ್ ಅಥವಾ ಮದ್ಜೂಲ್, ಹಾಗೂ ಡೆಗ್ಲೆಟ್ ನೂರ್ ಬಗೆಯ ಖರ್ಜೂರ ಹಣ್ಣಗಳನ್ನು ಸಾಮಾನ್ಯವಾಗಿ ಹೆಚ್ಚು ತಿನ್ನುತ್ತಾರೆ. ಉಪವಾಸವನ್ನು ಮುರಿಯಲು ಖರ್ಜೂರದ ಹಣ್ಣುಗಳನ್ನೇಕೆ ತಿನ್ನಬೇಕು ಎಂಬುದಕ್ಕೆ ಕೆಲವು ಕಾರಣಗಳು ಈ ಕೆಳಗಿನಂತಿವೆ. 

 1. ಖರ್ಜೂರದ ಹಣ್ಣುಗಳು ತಿನ್ನುವುದು ಸುಲಭ, ಹಾಗಾಗಿ ಉಪವಾಸ ಮುಗಿದ ನಂತರ ಹೊಟ್ಟೆಯು ಖಾಲಿಯಾಗಿದ್ದಾಗ, ಹೊಟ್ಟೆ ಕೆಡವುದು ನಿಮಗೆ ಇಷ್ಟವಿಲ್ಲದ್ದಿದ್ದರೆ, ತಿನ್ನಲು ಖರ್ಜೂರದ ಹಣ್ಣುಗಳನ್ನು ಆಯ್ಕೆ ಮಾಡುವುದು ಉತ್ತಮ ವಿಧಾನವಾಗಿದೆ.
 2. ಪ್ರತಿಯೊಂದು ಮೆದ್ಜೂಲ್ ಖರ್ಜೂರದ ಹಣ್ಣಿನಲ್ಲಿ 1.6 ಗ್ರಾಮ್ ನಾರು ಇರುತ್ತದೆ, ಒಂದು ದಿನಕ್ಕೆ ಮನುಷ್ಯನ ದೇಹಕ್ಕೆ ಅಗತ್ಯವಿರುವ 5% ನಾರು ಈ ಹಣ್ಣಿನಿಂದ ಸಿಗುತ್ತದೆ. ಇದು ಆರೋಗ್ಯಕರ ಕೊಲೆಸ್ಟರಾಲ್ ಮತ್ತು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸಿ, ದೇಹವನ್ನು ಆರೋಗ್ಯವಾಗಿರಿಸುತ್ತದೆ.
 3. ಖರ್ಜೂರದ ಹಣ್ಣು ಪೊಟ್ಯಾಷಿಯಮ್‌‍ನ ಅದ್ಭುತ ಮೂಲವಾಗಿದೆ, ಇದು ಅನೇಕ ಮೂಲಭೂತ ಶಾರೀರಿಕ ಪ್ರಕ್ರಿಯೆಗಳಿಗೆ ಜೀವಾಧಾರಕ ಖನಿಜವಾಗಿದೆ. 
 4. ಖರ್ಜೂರ ಹಣ್ಣುಗಳಿಂದ ಕಂಡುಬರುವ ಇತರ ಪೋಷಕಾಂಶಗಳೆಂದರೆ, ಮೆಗ್ನೀಸಿಯಮ್, ತಾಮ್ರ, ವಿಟಮಿನ್ ಬಿ, ಮ್ಯಾಂಗನೀಸ್, ಕಬ್ಬಿಣ, ರಿಬೋಫ್ಲಾವಿನ್ ಮತ್ತು ವಿಟಮಿನ್ ಕೆ.
 5. ಖರ್ಜೂರದಲ್ಲಿ ಕಂಡುಬರುವ ಆಲ್ಕಲೈನ್ ಲವಣಗಳು, ಮಾಂಸ ಇಲ್ಲವೇ ಕಾರ್ಬೋಹೈಡ್ರೇಟ್‌ಗಳನ್ನು ಅತಿಯಾಗಿ ತಿನ್ನುವುದರಿಂದ ಉಂಟಾಗುವ ರಕ್ತದಲ್ಲಿನ ಆಸಿಡಿಟಿ ಸಮಸ್ಯೆಯನ್ನು ಕುಗ್ಗಿಸಲು ನೆರವಾಗುತ್ತವೆ. 

ಈ ಪ್ರಯೋಜನಗಳಿಂದಾಗಿ  ಖರ್ಜೂರದ ಹಣ್ಣು, ರಂಜಾನ್ ಸಮಯದಲ್ಲಿ ತಮ್ಮ ಉಪವಾಸವನ್ನು ಮುರಿಯಲು ರುಚಿಕರವಾದ ಹಾಗೂ ಆರೋಗ್ಯಕರವಾದುದನ್ನು ಬಯಸುವವರಿಗೆ ಒಳ್ಳೆಯ ಆಯ್ಕೆಯಾಗಿದೆ. 

References:

 1. Ghnimi S, Umer S, Karim A, Kamal-Eldin A. Date fruit ( Phoenix dactylifera L.): An underutilized food seeking industrial valorization. NFS Journal. 2017;6:1-10.
 2. Dadach, Zin Eddine. 9 HABITS OF THE PROPHET MUHAMMAD THAT SCIENCE LATER PROVED. 2019.
 3. Rahmani A, Aly S, Ali H, Babiker A, Srikar S, Khan A. Therapeutic effects of date fruits (Phoenix dactylifera) in the prevention of diseases via modulation of anti-inflammatory, anti-oxidant and anti-tumour activity. International Journal of Clinical and Experimental Medicine. 2014; 7(3): 483–491.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.