Reading Time: 2 minutes

ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗಲು, ಅನಾರೋಗ್ಯಕರ ಆಹಾರ ಸೇವನೆ ಕ್ರಮವು ಪ್ರಮುಖ ಕಾರಣವಾಗಿದೆ. ಸಂಸ್ಕರಿಸಿದ ಆಹಾರ ಇಲ್ಲವೇ ಕೊಬ್ಬಿನಾಂಶ ಹೆಚ್ಚಾಗಿರುವ ಆಹಾರದ ಸೇವನೆಯೇ  ದೇಹದಲ್ಲಿ ಕೊಲೆಸ್ಟರಾಲ್ ಮಟ್ಟದ ಹೆಚ್ಚಳಕ್ಕೆ ಕಾರಣ. ಮುಂದೆ ಇದು ಹೃದಯರೋಗ ಹಾಗೂ ಪಾರ್ಶ್ವವಾಯುವಿನ ಅಪಾಯ ಹೆಚ್ಚಾಗಲು ಕಾರಣವೂ ಸಹ ಆಗುತ್ತದೆ.[1,2] ಊಟದ ಅಭ್ಯಾಸಗಳಲ್ಲಿ ಚಿಕ್ಕ ಚಿಕ್ಕ ಬದಲಾವಣೆಗಳನ್ನು ಮಾಡುವ ಮೂಲಕ, ಈ ಸಮಸ್ಯೆಗಳನ್ನು ಸುಲಭವಾಗಿ ನಿಯಂತ್ರಿಸಬಹುದಾಗಿದೆ. ನಮ್ಮ ಪರಿಸರದಲ್ಲಿ ಸುಲಭವಾಗಿ ಸಿಗುವ ಕೆಲವು ನೈಸರ್ಗಿಕ ಆಹಾರಗಳಿವೆ, ಅವು ಇಂತಹ ಕಾಯಿಲೆಗಳನ್ನು ದೂರ ಇಡಲು ಸಹಾಯ ಮಾಡುತ್ತವೆ. ಸೊಯಾಬೀನ್ಸ್ ಅಂತಹ ಆಹಾರದಲ್ಲಿ ಪ್ರಮುಖವಾಗಿದೆ.ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಸೊಯಾಬೀನ್ಸ್ ಹೇಗೆ ನೆರವಾಗುತ್ತದೆ ಎನ್ನುವ ಕುರಿತು  ಮಾಹಿತಿ ಇಲ್ಲಿದೆ.

ಸೋಯಾಬೀನ್ಸ್‌ನಲ್ಲಿ ಪ್ರೋಟೀನ್‌ಗಳು ಸಮೃದ್ಧವಾಗಿರುತ್ತವೆ-

ಸೋಯಾ ಪ್ರೋಟೀನ್‌ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ದೃಢಪಟ್ಟಿದೆ. ಈ ಪ್ರೋಟೀನ್ ಪೆಪ್ಟೈಡ್‌ಗಳಿಂದ ಮಾಡಲ್ಪಟ್ಟಿದ್ದು, ಇದು ಲಿವರಿನ ಕೋಶಗಳಿಂದ ಕೆಟ್ಟ ಕೊಲೆಸ್ಟರಾಲ್ ತೆಗೆದುಕೊಳ್ಳಲು ಮತ್ತು ಸಂಸ್ಕರಿಸಲು ರಿಸೆಪ್ಟರ್‌ಗಳ ಮಟ್ಟವನ್ನು ನಿಯಂತ್ರಿಸುತ್ತದೆ. ದೇಹ ಉತ್ಪಾದಿಸುವ ಕೊಲೆಸ್ಟರಾಲನ್ನು ಸಹ ಈ ಪ್ರೋಟಿನ್ ಕುಗ್ಗಿಸುತ್ತದೆ ಎಂಬುದು ಕಂಡುಬಂದಿದೆ.[3,4]

ಸೋಯಾಬೀನ್ಸ್‌ನಲ್ಲಿ ಐಸೋಫ್ಲೆವೋನ್‌ಗಳು ಸಮೃದ್ಧವಾಗಿರುತ್ತವೆ- 

ಐಸೋಫ್ಲೆವೋನ್‌ಗಳು ಅನೇಕ ಸಸ್ಯಗಳಲ್ಲಿ ಕಂಡುಬರುವ ಜೈವಿಕ ರಾಸಾಯನಿಕ ಸಂಯುಕ್ತಗಳು. ಬರೀ ಈ ರಾಸಾಯನಿಕ ಸಂಯುಕ್ತಗಳಿಂದ, ಅನಾರೋಗ್ಯಕರ ಕೊಲೆಸ್ಟರಾಲ್ (ಎಲ್‌ಡಿಎಲ್) ಮಟ್ಟದ ಮೇಲೆ ಗಮನಾರ್ಹವಾದ ಯಾವುದೇ ಪರಿಣಾಮವಾಗುವುದಿಲ್ಲ, ಆದರೆ ಈ ರಾಸಾಯನಿಕ ಸಂಯುಕ್ತಗಳು ಸೋಯಾ ಪ್ರೋಟಿನ್‌ನೊಂದಿಗೆ ಸೇರಿದಾಗ, ಇವು ಕೊಲೆಸ್ಟರಾಲ್-ಕಡಿಮೆ ಮಾಡುವ ಪರಿಣಾಮವನ್ನು ಹೊಂದುತ್ತವೆ. ಐಸೋಪ್ಲೆವೋನ್‌ಗಳಿದ್ದಾಗ ಸೋಯಾ ಪ್ರೋಟಿನ್‌ನ ಪರಿಣಾಮ ಹೆಚ್ಚಾಗುತ್ತದೆ, ಇದು ಕೊಲೆಸ್ಟರಾಲನ್ನು ಕಡಿಮೆ ಮಾಡುವ ಸಹಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.” ಎಂದು ಅಮೇರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಒಂದು ಅಧ್ಯಯನ ತಿಳಿಸಿದೆ. ಸೋಯಾ ಬೀನ್ಸ್‌ನಲ್ಲಿರುವ ಫೈಟೊಸ್ಟೆರಾಲ್ ನಂತಹ ಇತರ ರಾಸಾಯನಿಕ ಸಂಯುಕ್ತಗಳು, ದೇಹದಲ್ಲಿನ ಅನಾರೋಗ್ಯಕರ ಕೊಲೆಸ್ಟರಾಲ್ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. [3,5,6]

ಸೋಯಾಬೀನ್ಸ್, ಪೈಬರ್‌ನ ಉತ್ತಮ ಮೂಲವಾಗಿದೆ –

ಸೋಯಾಬೀನ್ಸ್‌ನಲ್ಲಿ ಕರಗಬಲ್ಲ ಫೈಬರ್-ಪೆಕ್ಟಿನ್ ರಾಸಾಯನಿಕ ಸಹ ಇರುತ್ತದೆ. ಇದು, ದೇಹವು ಸಂಸ್ಕರಣೆ ಮಾಡಲು ಅನಾರೋಗ್ಯಕರ ಕೊಲೆಸ್ಟರಾಲ್ ತೆಗೆದುಕೊಳ್ಳುವುದನ್ನು ಬೆಂಬಲಿಸುವ ಮೂಲಕ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.[3]

ತನ್ನ ಈ ಮೂರು ಗುಣಗಳಿಂದ ಸೋಯಾ ಬೀನ್ಸ್‌, ಕೊಲೆಸ್ಟೆರಾಲನ್ನು ಗಣನೀಯವಾಗಿ ಕಡಿಮೆ ಮಾಡುವಲ್ಲಿ ಉತ್ತಮ ಆಹಾರವಾಗಿದೆ.

ನಿಮ್ಮ ಆಹಾರ ಕ್ರಮಕ್ಕೆ ಸೋಯಾ ಬೀನ್ಸ್‌ ಅನ್ನು ಸೇರಿಸುವುದು ಹೇಗೆಂದು ಈ ಕೆಳಗೆ ತಿಳಿಸಲಾಗಿದೆ.

 1. ಚಿಕನ್ ಬದಲಿಗೆ ಸೋಯಾಬೀನ್ ಚಂಕ್‌ಗಳು- ಸಸ್ಯಹಾರಿಗಳು ಒಳ್ಳೆಯ ಪ್ರೋಟಿನ್‌ಗಾಗಿ ಸೋಯಾ ಬೀನ್ ಚಂಕ್‌ಗಳನ್ನು ತಿನ್ನಬಹುದು. ಇಲ್ಲವೇ ಸೋಯಾ ಕರಿ ಮತ್ತು ಬೇಯಿಸಿದ ಸೋಯಾ ಬೀನ್ ಪ್ಯಾಟೀಸ್ ನಂತಹ ಮನೆಯಲ್ಲಿಯೇ ತಯಾರಿಸಬಹುದಾದ ಅಡುಗೆ ವಿಧಾನಗಳನ್ನು ಆರಿಸಿಕೊಳ್ಳಬಹುದು. ಇದು ತುಂಬಾ ರುಚಿಯೂ ಹೌದು.
 2. ಸೋಯಾ ಪಾನೀಯಗಳು – ಸೋಯಾದಿಂದ ಮಿಲ್ಕ್‌ಶೇಕ್‌ ಹಾಗೂ ಸ್ಮೂತಿಗಳಂತಹ ಹಲವು ಬಗೆಯ ಪಾನೀಯಗಳನ್ನು ತಯಾರಿಸಬಹುದು, ಈ ಪಾನೀಯಗಳು ಮಾರುಕಟ್ಟೆಯಲ್ಲೂ ಲಭ್ಯ. ಬೆಳಗಿನ ಉಪಹಾರಕ್ಕಾಗಿ ಸೋಯಾ ಮಿಲ್ಕಶೇಕನ್ನು ಕುಡಿಯಬಹುದು. ಇದನ್ನು ವ್ಯಾಯಾಮದ ನಂತರ ಆರೋಗ್ಯಕರ ಪಾನೀಯವಾಗಿಯೂ ಇದನ್ನು ಬಳಸಬಹುದಾಗಿದೆ. 
 3. ಸೋಯಾ ಧಾನ್ಯಗಳು – ಪ್ರತಿದಿನದ ಅಡುಗೆಯಲ್ಲಿ ಗೋಧಿ ಹಾಗೂ ಇತರೆ ಧಾನ್ಯಗಳಿಗೆ ಇದನ್ನು ಸೇರಿಸಬಹುದು. ದಿನನಿತ್ಯ ಮಾಡುವ ಹಲವಾರು ಪಾಕ ವಿಧಾನಗಳಲ್ಲಿ ಸಂಸ್ಕರಿಸಿದ ಹಿಟ್ಟನ್ನು ಬಳಸುವ ಬದಲು, ಈ ಸೋಯಾ ಧಾನ್ಯಗಳನ್ನು ಬಳಸಬಹುದು.
  ಸೋಯಾ ಧಾನ್ಯಗಳಿರುವ ಬಗೆ ಬಗೆಯ ಮಲ್ಟಿಗ್ರೈನ್ ಹಿಟ್ಟು ಸಹ ಮಾರುಕಟ್ಟೆಯಲ್ಲಿ ಈಗ ಲಭ್ಯವಿದೆ.
 1. ಟೋಫು – ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವ ಇದನ್ನು ಸೋಯಾ ಹಾಲಿನಿಂದ ತಯಾರಿಸುತ್ತಾರೆ. ಈ ಟೋಫು ಅನ್ನು ತಯಾರಿಸಲು, ಬೇಕ್ ಮಾಡುವ ವಿಧಾನ ಇಲ್ಲವೇ ಗ್ರಿಲ್ ಮಾಡುವಂತಹ ವಿವಿಧ ಪಾಕ ವಿಧಾನಗಳನ್ನು ಆರಿಸಿಕೊಳ್ಳಿ. ಪಲ್ಯದಂತಹ ಖಾದ್ಯಗಳನ್ನು ತಯಾರಿಸುವಾಗ ಪನ್ನೀರ್ ಬದಲಿಗೆ, ಟೋಫನ್ನು ಬಳಸಬಹುದು. 

ಉಲ್ಲೇಖಗಳು:

 1. Cardiovascular disease. World Health Organisation (WHO). https://www.who.int/news-room/fact-sheets/detail/cardiovascular-diseases-(cvds)
 2. American Heart Association. “Unhealthy diets linked to more than 400,000 cardiovascular deaths.” ScienceDaily. ScienceDaily, 9 March 2017. <www.sciencedaily.com/releases/2017/03/170309142345.htm>.
 3. Cereals and Pulses: Nutraceutical Properties and Health Benefits edited by Liangli L. Yu, Rong Tsao, Fereidoon Shahidi
 4. Michelfelder AJ1.Soy: a complete source of protein. Am Fam Physician. 2009 Jan 1;79(1):43-47.
 5. Ramdath DD, Padhi EM, Sarfaraz S, Renwick S, Duncan AM. Beyond the Cholesterol-Lowering Effect of Soy Protein: A Review of the Effects of Dietary Soy and Its Constituents on Risk Factors for Cardiovascular Disease. Nutrients. 2017;9(4):324. Published 2017 Mar 24. doi:10.3390/nu9040324
 6. Kyoko Taku et al. Soy isoflavones lower serum total and LDL cholesterol in humans: a meta-analysis of 11 randomized controlled trials. The Am J Clinical Nutrition, Volume 85, Issue 4, April 2007, Pages 1148–1156, https://doi.org/10.1093/ajcn/85.4.1148 

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.