Reading Time: 2 minutes

ಇದನ್ನು 17 ವರ್ಷ ಅನುಭವ ಇರುವ ನುರಿತ ತಜ್ಞರಾದ ಅಶ್ವಿನಿ ಎಸ್. ಕಾನಡೆ ಅವರು ವಿಮರ್ಶಿಸಿದ್ದಾರೆ. ಇವರು ರಿಜಿಸ್ಟರ್ಡ್ ಡಯೆಟೀಷಿಯನ್ ಮತ್ತು ಸರ್ಟಿಫೈಡ್ ಡಯಾಬಿಟಿಸ್ ಎಜುಕೇಟರ್ ಆಗಿದ್ದಾರೆ.

ನೀವು ದಿನವೂ ಸ್ವಲ್ಪ ಪ್ರಯತ್ನ ಪಟ್ಟರೆ ಡಯಾಬಿಟಿಸ್ ಅನ್ನು ನಿಭಾಯಿಸುವುದು ಕಷ್ಟವೇನಲ್ಲ. ಪರಿಸ್ಥಿತಿ ಕೈಮೀರಿ ಹೋಗುವವರೆಗೂ ಕಾಯುವುದಕ್ಕಿಂತ, ನಿಮ್ಮ ನಿತ್ಯದ ಜೀವನದಲ್ಲಿ ಚಿಕ್ಕ ಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ರಕ್ತದ ಸಕ್ಕರೆಯನ್ನು ಕಡಿಮೆ ಮಾಡಲು ಸಾಧ್ಯವಿದೆ, ಮತ್ತು ಕಾಲಕ್ರಮೇಣ ಅದನ್ನು ಪೂರ್ತಿಯಾಗಿ ತಳ್ಳಿ ಹಾಕಬಹುದಾಗಿದೆ. ನೀವು ಬದಲಾವಣೆಗಳನ್ನು ನೋಡಬೇಕಾದರೆ, ನಿಮ್ಮ ಆರೋಗ್ಯದೊಂದಿಗೆ ಒಂದು ಪ್ರತಿಜ್ಞೆಯನ್ನು ಮಾಡಿಕೊಳ್ಳುವುದರ ಮೂಲಕ ಅದನ್ನು ಪ್ರಾರಂಭಿಸಿ.

ಡಾಕ್ಟರ್ ಮೋಹನ್ಸ್ ಡಯಾಬಿಟಿಸ್ ಸ್ಪೆಷಾಲಿಟೀಸ್ ಸೆಂಟರ್‌ನ ಅಧ್ಯಕ್ಷರಾದ ಡಾಕ್ಟರ್ ವಿ ಮೋಹನ್ ರವರು ಡಯಾಬಿಟಿಸ್ ಹೊಂದಿರುವ ಎಲ್ಲರೂ ಸ್ವಲ್ಪ ಆತ್ಮಬಲ ಮತ್ತು ಧೃಡ ವಿಶ್ವಾಸದಿಂದ ಮಾಡಿಕೊಳ್ಳಬೇಕಾದ 5 ಪ್ರತಿಜ್ಞೆಗಳ ಬಗ್ಗೆ ತಿಳಿಸಿಕೊಡುತ್ತಾರೆ.

  1. ನಿಮ್ಮ ಆಹಾರವನ್ನು ಆರೋಗ್ಯಕರಗೊಳಿಸಿ

ನಿಮ್ಮ ಆರೋಗ್ಯದ ಹಿತಕ್ಕಾಗಿ, ನೀವು ಉತ್ತಮವಾದ ಆಹಾರವನ್ನು ಸೇವಿಸಲು ಪ್ರಾರಂಭಿಸುವಿರಿ ಎಂದು ನಿಮಗೆ ನೀವೇ ಪ್ರಮಾಣ ಮಾಡಿಕೊಳ್ಳಿ. ಈ ಉದ್ದೇಶಕ್ಕಾಗಿ ಒಂದು ಸರಿಯಾಗಿ ಯೋಜಿಸಿದ, ಸುವ್ಯವಸ್ಥಿತವಾದ ವಿಧಾನವನ್ನು ಅಳವಡಿಸಿಕೊಳ್ಳಿರಿ.

ನಿಮ್ಮ ದಿನದ, ವಾರದ ಮತ್ತು ತಿಂಗಳಿನ ಊಟದ ಯೋಜನೆಗಳನ್ನು ತಯಾರಿಸಲು ನಿಮಗೆ ಸಹಾಯ ಮಾಡುವ ಹಲವಾರು ವೆಬ್ಸೈಟ್ ಗಳಿವೆ. ಮತ್ತು ಈಗಾಗಲೇ ಊಟದ ಯೋಜನೆಗಳನ್ನು ಹೊಂದಿರುವ ವೆಬ್ಸೈಟ್ ಗಳು ಇವೆ. ನೀವು ಅವುಗಳನ್ನು ನೋಡಿ ಬೇಕಾದ್ದನ್ನು ಆರಿಸಕೊಳ್ಳಬೇಕಷ್ಟೆ.

ನಿಮಗೆ ಸರಿಹೊಂದುವ ವ್ಯವಸ್ಥೆಯೊಂದನ್ನು ಕಂಡುಕೊಳ್ಳಿ ಮತ್ತು ಯಾವುದೇ ಹಿಂಜರಿಕೆಯಿಲ್ಲದೆ ಅದನ್ನು ಜಾರಿಗೆ ತನ್ನಿ.

ಇಲ್ಲಿ ಕೆಲವು ಆರೋಗ್ಯಕರ, ರುಚಿಕರ ಮತ್ತು ಡಯಾಬಿಟಿಸ್‌ಗೆ ಒಳ್ಳೆಯದಾದ ಬೆಳಗಿನ ತಿಂಡಿ ಹಾಗೂ ಊಟ ತಯಾರಿಸುವ ಬಗೆಯನ್ನು ವಿವರಿಸಲಾಗಿದೆ.

ಡಯಾಬಿಟಿಸ್‌ಗೆ ಸಂಬಂಧಿಸಿದ ಚಿಂತೆಗಳಿಂದ ಮುಕ್ತವಾದ ಜೀವನವನ್ನು ಎದುರು ನೋಡುತ್ತಿರುವಿರಾ?

ನಿಮಗೆಂದೇ ಸಿದ್ಧಪಡಿಸಿದ ಮತ್ತು ಮನೆಯಲ್ಲೇ ಉಪಯೋಗಿಸಬಹುದಾದ  ನಮ್ಮ ಡಯಾಬಿಟಿಸ್ ಮ್ಯಾನೇಜ್‌ಮೆಂಟ್ ಪ್ಯಾಕೇಜ್ ಅನ್ನೊಮ್ಮೆ ಬಳಸಿ ನೋಡಿ. ಇದನ್ನು ನಮ್ಮ ಮೊಬೈಲ್ ಆ್ಯಪ್‌ನ ಮೂಲಕ ನಿಮಗೆ ತಲುಪಿಸಲಾಗುವುದು.

  1. ನಿಮ್ಮ ಕುರ್ಚಿಯನ್ನು ದೂರ ತಳ್ಳಿ

ನಮ್ಮ ಹೊಸ ಜೀವನಶೈಲಿಯ ದೆಸೆಯಿಂದ ನಾವು ಮೊದಲಿನಂತೆ ಹೆಚ್ಚು ಓಡಾಡುವುದಿಲ್ಲ. ನಮ್ಮ ಓಡಾಟದ ಅನುಕೂಲಕ್ಕೆ ಕ್ಯಾಬ್‌ಗಳು ಮತ್ತು ರಿಕ್ಷಾಗಳಿವೆ. ನಾವು ಮನೆಯಲ್ಲಿದ್ದರೂ ಸರಿ, ಕೆಲಸಕ್ಕೆ ಹೋದಾಗಲೂ ಸರಿ ಯಾವಾಗಲೂ ಕುಳಿತುಕೊಂಡೇ ಇರುವುದು ಸಾಮಾನ್ಯವಾಗಿಬಿಟ್ಟಿದೆ. 

ಆದರೆ ಈಗ, ನಿಮ್ಮ ಕುರ್ಚಿಯಿಂದ ಈಚೆ ಬರಲು ಪಣತೊಡಿ. ಯಾವಾಗಲೂ ಕುಳಿತುಕೊಂಡಿರುವ ಬದಲು ಓಡಾಡಲು ಕೆಲವು ನೆಪಗಳನ್ನು ಹುಡುಕಿ: ಫೋನ್‌ನಲ್ಲಿ ಮಾತನಾಡಬೇಕಾದರೆ ಅದನ್ನು ನಡೆದಾಡುತ್ತಾ ಮಾಡಿ, ಮೆಟ್ಟಿಲುಗಳನ್ನು ಬಳಸಿ, ನಿಮ್ಮ ಕೆಲಸದಿಂದ 10 ನಿಮಿಷ ವಿರಾಮ ತೆಗೆದುಕೊಂಡು ನಡೆದಾಡುವ ರೂಢಿ ಮಾಡಿಕೊಳ್ಳಿ.

ಇಲ್ಲಿ ಡಯಾಬಿಟಿಸ್ ಹೊಂದಿರುವವರು ಅನುಸರಿಸಬೇಕಾದ ಸುರಕ್ಷಿತವಾದ ಅಭ್ಯಾಸಗಳನ್ನು ಕುರಿತ ಕೆಲವು ಸಲಹೆಗಳಿವೆ.

  1. ಔಷಧಿಗಳನ್ನು ಸರಿಯಾಗಿ ತೆಗೆದುಕೊಳ್ಳಿ.

ನಾವು ಡಯಾಬಿಟಿಸ್ ಔಷಧಿಗಳನ್ನು ಕೇವಲ ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳುವುದು ಮಾತ್ರ ಮುಖ್ಯ ಎಂದು ಹೇಳುವುದಿಲ್ಲ, ಆದರೆ ಅವುಗಳನ್ನು ಹೊತ್ತಿಗೆ ಸರಿಯಾಗಿ ತೆಗೆದುಕೊಳ್ಳುವುದೂ ಅಷ್ಟೇ ಮುಖ್ಯ ಎನ್ನುತ್ತೇವೆ.

ನೀವು ಊಟಕ್ಕೆ ಮೊದಲು ಅಥವಾ ಊಟದ ನಂತರ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ತಡಮಾಡಿದಲ್ಲಿ, ಆ ಔಷಧಿಯು ನಿಮ್ಮ ರಕ್ತದ ಸಕ್ಕರೆಯ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. ಔಷಧಿಗಳನ್ನು ಊಟದ ನಂತರ ಬಹಳ ತಡವಾಗಿ ತೆಗೆದುಕೊಂಡರೆ, ಅಷ್ಟರಲ್ಲಾಗಲೇ ನಿಮ್ಮ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಹೆಚ್ಚಾಗಿಬಿಟ್ಟಿರುತ್ತದೆ ಮತ್ತು ಆಗ ನಿಮ್ಮ ಔಷಧಿಗಳು ಅದರ ಮೇಲೆ ಯಾವುದೇ ಕೆಲಸವನ್ನೂ ಮಾಡುವುದಿಲ್ಲ.

ಆದ್ದರಿಂದ ಔಷಧಿಯ ಪ್ರಮಾಣ ಮತ್ತು ಅದನ್ನು ತೆಗೆದುಕೊಳ್ಳುವ ಸಮಯ ಎರಡೂ ಬಹಳ ಮುಖ್ಯ

  1. ನಿಮ್ಮ ಪಾದಗಳನ್ನು ಖುಷಿಯಾಗಿಡಿ

ನಿಮ್ಮ ರಕ್ತದ ಸಕ್ಕರೆಯ ಮಟ್ಟವನ್ನು ಸರಿಯಾಗಿ ನೋಡಿಕೊಳ್ಳುವುದು, ರಕ್ತದೊತ್ತಡ ಮತ್ತು ಕೊಲೆಸ್ಟರಾಲ್  ಅನ್ನು ಗಮನಿಸುವುದು ಮತ್ತು ನಿಮ್ಮ ತೂಕವನ್ನು ನಿಭಾಯಿಸುವುದು ಮುಂತಾದವುಗಳು ನಿಮ್ಮ ದಿನನಿತ್ಯದ ಡಯಾಬಿಟಿಸ್ ನಿರ್ವಹಣೆಯ ಭಾಗಗಳಾಗಿವೆ. ಆದರೆ ಇವೆಲ್ಲವುಗಳ ಮಧ್ಯೆ ನೀವು ಡಯಾಬಿಟಿಸ್‌ಗೆ  ಸಂಬಂಧಪಟ್ಟಂತೆ ಕಾಳಜಿ ವಹಿಸಬೇಕಾದ ಒಂದು ಮುಖ್ಯವಾದ ಅಂಗವನ್ನೇ ಮರೆಯುತ್ತೀರಿ, ಅದುವೇ ನಿಮ್ಮ ಪಾದಗಳು.

ಡಯಾಬಿಟಿಸ್‌ನಲ್ಲಿ ಸಣ್ಣ ಪುಟ್ಟ ಗಾಯಗಳು, ಏಟುಗಳಿಂದಲೂ ಸೋಂಕು ತಗುಲುವ ಹೆಚ್ಚಿನ ಸಾಧ್ಯತೆ ಇರುತ್ತದೆ. ಹಾಗೂ ನಮ್ಮ ಪಾದಗಳಿಗೆ ಇಂತಹ ಗಾಯಗಳಾಗುವ ಹೆಚ್ಚಿನ ಅಪಾಯವಿರುವುದರಿಂದ, ಯಾವಾಗಲೂ ಅವುಗಳ ಆರೋಗ್ಯವನ್ನು ನೋಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ನಿಮಗೆ ಯಾವುದಾದರೂ ಸಣ್ಣ ಗಾಯಗಳು ಅಥವಾ ಪೆಟ್ಟುಗಳೇನಾದರೂ ಕಂಡುಬಂದಲ್ಲಿ ಸಾಧ್ಯವಾದಷ್ಟು ಬೇಗ ಅವುಗಳಿಗೆ ಚಿಕಿತ್ಸೆ ಮಾಡಿಸಿಕೊಳ್ಳಿ. ಇದರಿಂದ ಗ್ಯಾಂಗ್ರಿನ್ ಅಥವಾ ಕಾಲನ್ನೇ ಕತ್ತರಿಸಿ ತೆಗೆಯಬೇಕಾದಂತಹ ಅದಕ್ಕೂ ಕೆಟ್ಟದಾದ ತೊಂದರೆಗಳನ್ನು ತಡೆಯಬಹುದಾಗಿದೆ.

  1. ನಿಮ್ಮ ಕಿಡ್ನಿಗಳನ್ನು ಪ್ರೀತಿಸಿ

ಡಯಾಬಿಟಿಸ್ ಅನ್ನು ಸರಿಯಾಗಿ ನಿರ್ವಹಿಸದಿದ್ದರೆ ಮೂತ್ರಪಿಂಡದ ಕಾಯಿಲೆಯಂತಹ(ಡಯಾಬೆಟಿಕ್ ನೆಫ್ರೋಪತಿ ಎಂದು ಕರೆಯುತ್ತಾರೆ) ತೊಂದರೆಗಳು ಎದುರಾಗುವ ಸಾಧ್ಯತೆ ಇರುತ್ತದೆ. ಒಂದುವೇಳೆ ಮೂತ್ರಪಿಂಡಗಳು ಇದರ ಪರಿಣಾಮಕ್ಕೆ ಒಳಗಾದರೆ, ಅವುಗಳಿಗೆ ತಮ್ಮ ಮುಖ್ಯವಾದ ಕೆಲಸವನ್ನು ಅಂದರೆ ದೇಹದಿಂದ ಬೇಡವಾದ ವಸ್ತುಗಳನ್ನು ಮತ್ತು ಹೆಚ್ಚುವರಿ ನೀರಿನ ಅಂಶವನ್ನು ಹೊರಹಾಕಲು ಸಾಧ್ಯವಾಗುವುದಿಲ್ಲ.

ಇದೊಂದು ಗಂಭೀರ ಪರಿಸ್ಥಿತಿಯಾಗಿದ್ದು, ಡಯಾಲಿಸಿಸ್ ಹಾಗೂ ಬೇರೆಯವರ ಮೂತ್ರಪಿಂಡವನ್ನು ಜೋಡಣೆ ಮಾಡಬೇಕಾದಂತಹ ಅಗತ್ಯ ಬೀಳಬಹುದು. ಹಾಗೂ ಇದನ್ನೆಲ್ಲಾ ನಿರ್ವಹಿಸಲು ತುಂಬಾ ಖರ್ಚು ಮಾಡಬೇಕಾಗುತ್ತದೆ.

ಡಯಾಬಿಟಿಸ್ ಅನ್ನು ಸರಿಯಾಗಿ ನಿಭಾಯಿಸುವುದರಿಂದ ಮತ್ತು ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವುದರಿಂದ, ಇಂತಹ ತೊಂದರೆಗಳನ್ನು ತಡೆಯಬಹುದಾಗಿದೆ. ಡಯಾಬಿಟಿಸ್‌ಗೆ ಸಂಬಂಧಿಸಿದ ತೊಂದರೆಗಳ ಬಗ್ಗೆ ನಿಮ್ಮ ಗಮನಕ್ಕೆ ಬರದೇ ಇರಬಹುದಾದ ಈ 8 ಮುನ್ಸೂಚನೆಗಳನ್ನು ಓದಿ.

ಈ 5 ವಿಷಯಗಳಿಗೆ ಬದ್ಧರಾಗಿರಿ ಮತ್ತು ಒಂದು ಸಂತುಷ್ಟ, ಆರೋಗ್ಯಕರ ಹಾಗೂ ಸಮೃದ್ಧ ಜೀವನವನ್ನು ನಡೆಸಲು ಪ್ರಾರಂಭಿಸಿ.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.