ಕೊಲೆಸ್ಟರಾಲ್‌ಗೆ ಸಂಬಂಧಿಸಿದ ವಿಷಯಗಳನ್ನು ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ, ಚಿಂತಿಸಬೇಡಿ ನಾವಿದ್ದೇವೆ. ಬಹಳಷ್ಟು ಜನ ಅಧಿಕ ಕೊಲೆಸ್ಟರಾಲ್ ಎಂಬ ಪದ ಕಿವಿಗೆ ಬೀಳುತ್ತಿದಂತೆ ಬೆಚ್ಚಿಬೀಳುತ್ತಾರೆ ಹಾಗೂ ಒಳ್ಳೆ ಕೊಲೆಸ್ಟರಾಲ್ ಮತ್ತು ಕೆಟ್ಟ ಕೊಲೆಸ್ಟರಾಲ್ ಬಗ್ಗೆ ಮಾತನಾಡಲಾರಂಭಿಸಿ, ಗೊಂದಲಕ್ಕೆ ಬಂದು ನಿಲ್ಲುತ್ತಾರೆ. ಮೊದಲಿಗೆ, ಇದನ್ನು ಇತ್ಯರ್ಥ ಮಾಡಿಕೊಳ್ಳೋಣ. ಆರೋಗ್ಯಕರ ಜೀವನವನ್ನು ನಡೆಸಲು ಕೊಲೆಸ್ಟರಾಲ್‌ನ ಕೆಲವು ವಿಧಗಳು ಅತ್ಯಗತ್ಯ.
ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್1 (ಸಿಡಿಸಿ) ಪ್ರಕಾರ, ಎರಡು ರೀತಿಯ ಲಿಪೊಪ್ರೋಟೀನ್‌ಗಳಿದ್ದು, ಇವು ದೇಹದಾದ್ಯಂತ ಕೊಲೆಸ್ಟರಾಲನ್ನು ಕೊಂಡೊಯ್ಯುವುದರ ಜೊತೆಗೆ ಟ್ರೈಗ್ಲಿಸರೈಡ್‌ಗಳನ್ನು ಕೂಡ ಕೊಂಡೊಯ್ಯುತ್ತವೆ. ಇವುಗಳಲ್ಲಿ, “ಎಲ್‌ಡಿಎಲ್ (ಲೋ-ಡೆನ್ಸಿಟಿ ಲಿಪೊಪ್ರೋಟೀನ್), ಅಥವಾ “ಕೆಟ್ಟ” ಕೊಲೆಸ್ಟರಾಲ್, ಒಟ್ಟು ಕೊಲೆಸ್ಟರಾಲ್‌ನ ಹೆಚ್ಚಿನ ಪಾಲನ್ನು ಹೊಂದಿರುತ್ತದೆ, ಇದು ಹೃದ್ರೋಗ ಮತ್ತು ಪಾರ್ಶ್ವವಾಯುವಿನ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಆದರೆ, ಎಚ್‌ಡಿಎಲ್ (ಹೈ-ಡೆನ್ಸಿಟಿ ಲಿಪೊಪ್ರೋಟೀನ್) ಎಂದು ಕರೆಯಲ್ಪಡುವ “ಒಳ್ಳೆ” ಕೊಲೆಸ್ಟರಾಲ್, ಕೊಲೆಸ್ಟರಾಲನ್ನು ಲಿವರ್‌ಗೆ ಕೊಂಡೊಯ್ದು, ಅದನ್ನು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ. ಅಧಿಕ ಮಟ್ಟದ ಎಚ್‌ಡಿಎಲ್ ಹೃದ್ರೋಗ ಮತ್ತು ಪಾರ್ಶ್ವವಾಯುವಿನ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.”
ಅಧಿಕ ಕೊಲೆಸ್ಟರಾಲ್ ಅಥವಾ ಡಿಸ್ಲಿಪಿಡೀಮಿಯಾ ಎಂದರೇನು ಹಾಗೂ ಇದು ಹೃದ್ರೋಗದೊಂದಿಗೆ ಹೇಗೆ ತಳಕು ಹಾಕಿಕೊಂಡಿದೆ?
ಅಧಿಕ ಕೊಲೆಸ್ಟರಾಲ್ (ಇದನ್ನು ಹೈಪರ್‌ಲಿಪಿಡೀಮಿಯಾ ಎಂದು ಕೂಡ ಕರೆಯುತ್ತಾರೆ) ಅಥವಾ ಡಿಸ್ಲಿಪಿಡೀಮಿಯಾವನ್ನು ಮೆಟಾಬಾಲಿಕ್ ಅಸಹಜತೆ ಎಂದು ಕರೆಯಲಾಗುತ್ತದೆ, ಇದು ದೇಹದಲ್ಲಿನ ಕೊಲೆಸ್ಟರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟಗಳ ನಿರಂತರ ಹೆಚ್ಚಳಕ್ಕೆ ಕಾರಣವಾಗುತ್ತದೆ, ವಿಶೇಷವಾಗಿ ಎಲ್‌ಡಿಎಲ್ ಮತ್ತು ಟ್ರೈಗ್ಲಿಸರೈಡ್‌ಗಳ ಮಟ್ಟದಲ್ಲಿ ಹೆಚ್ಚಳವಾಗುತ್ತದೆ ಅಥವಾ ಎಚ್‌ಡಿಎಲ್ ಮಟ್ಟದಲ್ಲಿ ಇಳಿಕೆಯಾಗುತ್ತದೆ2. ಐದು ವಿಧಗಳ ಪೈಕಿ, ಡಿಸ್ಲಿಪಿಡೀಮಿಯಾ ಮತ್ತು ಹೈಪರ್‌ಲಿಪಿಡೀಮಿಯಾ, ಕೊಲೆಸ್ಟರಾಲ್ ಮತ್ತು ಟ್ರೈಗ್ಲಿಸರೈಡ್ ಎರಡನ್ನೂ ಹೆಚ್ಚಿಸುತ್ತವೆ ಎಂದು ತಿಳಿದುಬಂದಿದೆ3.
ಅಧ್ಯಯನಗಳು4 ಹೇಳುವಂತೆ, “ಒಟ್ಟಾರೆ ಕೊಲೆಸ್ಟರಾಲನ್ನು ಮತ್ತು ಎಲ್‌ಡಿಎಲ್ ಮಟ್ಟವನ್ನು ಕಡಿಮೆ ಮಾಡಿಕೊಳ್ಳುವುದರಿಂದ ಆಗುವ ಪ್ರಯೋಜನಗಳನ್ನು, ಸಾಮಾನ್ಯವಾಗಿ ಹೃದಯರಕ್ತನಾಳದ ಕಾಯಿಲೆಯನ್ನು ಸೂಚಿಸುವ ಕೊರೋನರಿ ಹೃದ್ರೋಗದ ಮೊದಲನೇ ಮತ್ತು ಎರಡನೇ ಹಂತದ ತಡೆಗಟ್ಟುವಿಕೆಯಲ್ಲಿ ಕಾಣಬಹುದಾಗಿದೆ”. 2019 ರಲ್ಲಿ ಪ್ರಕಟವಾದ ಅಧ್ಯಯನದ5 ಪ್ರಕಾರ, “2017 ರಲ್ಲಿ, ಹೃದಯ ರಕ್ತನಾಳದ ಕಾಯಿಲೆಯು ವಿಶ್ವಾದ್ಯಂತ ಅಂದಾಜು 1.78 ಕೋಟಿ ಜನರನ್ನು ಬಲಿ ಪಡೆದಿತ್ತು, ಅಂದರೆ ಸರಿ ಸುಮಾರು 33 ಕೋಟಿ ವರ್ಷಗಳ ಜೀವಿತಾವಧಿ ನಷ್ಟ…”
ಹೈಪರ್‌ಕೊಲೆಸ್ಟರಲೀಮಿಯಾ (ಅಧಿಕ ಕೊಲೆಸ್ಟರಾಲ್), ಆರ್ಟರಿಗಳಲ್ಲಿ ಕೊಬ್ಬು ತುಂಬಿಕೊಳ್ಳಲು ದಾರಿಮಾಡಿಕೊಡುತ್ತದೆ. ಇದರಿಂದ ಮುಂದೊಂದು ದಿನ ಆರ್ಟರಿಗಳ ಅಗಲಕಿರಿದಾಗಿ, ಅಥೆರೊಸ್ಕ್ಲೂರೋಸಿಸ್ ಆಗುತ್ತದೆ. ಅಥೆರೊಸ್ಕ್ಲೂರೋಸಿಸ್‌ನಿಂದಾಗಿ ಹೃದ್ರೋಗ, ಹೃದಯಾಘಾತ, ಪೆರಿಫೆರಲ್ ಆರ್ಟರಿ ರೋಗ ಇಲ್ಲವೇ ಪಾರ್ಶ್ವವಾಯು ಆಗುತ್ತದೆ. ಕಡಿಮೆ ಮಟ್ಟದ ಎಚ್‌ಡಿಎಲ್, ಜೊತೆಗೆ ಹೆಚ್ಚಿನ ಮಟ್ಟದ ಟ್ರೈಗ್ಲಿಸರೈಡ್‌ಗಳು ಕೂಡ ಆರ್ಟರಿಗಳಲ್ಲಿ ಕೊಬ್ಬು ತುಂಬಿಕೊಳ್ಳಲು ಕಾರಣವಾಗುತ್ತವೆ. ಇದರಿಂದ ಹೃದ್ರೋಗ ಹಾಗೂ ಬೇರೆ ತೊಂದರೆಗಳು ಬರುವ ಸಾಧ್ಯತೆ ಹೆಚ್ಚಾಗುತ್ತದೆ.
ಯಾವ ಕಾರಣಕ್ಕೆ ಅಧಿಕ ಕೊಲೆಸ್ಟರಾಲ್ ಉಂಟಾಗುತ್ತದೆ?
ಅಧಿಕ ಕೊಲೆಸ್ಟರಾಲ್‌ಗೆ ಕಾರಣವಾಗುವ ಕೆಲವು ಸಾಮಾನ್ಯ ಸಂಗತಿಗಳೆಂದರೆ ಅಧಿಕ ತೂಕ ಅಥವಾ ಬೊಜ್ಜುತನ, ಹೈಪೋಥೈರಾಯ್ಡಿಸಮ್, ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್, ಮೆಟಬಾಲಿಕ್ ಸಿಂಡ್ರೋಮ್, ಜೆನೆಟಿಕ್ ಪ್ರಿಡಿಸ್ಪೊಸಿಶನ್ ಅಥವಾ ಕುಶಿಂಗ್ ಸಿಂಡ್ರೋಮ್12. ನಿಮ್ಮ ಕೊಲೆಸ್ಟರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಲು ನೀವು ಮಾಡಬಹುದಾದ ಕೆಲಸಗಳು ಇಂತಿವೆ.
- ನಿಯಮಿತ ವ್ಯಾಯಾಮ: ನಡಿಗೆ, ಜಾಗಿಂಗ್, ಸೈಕ್ಲಿಂಗ್ ಅಥವಾ ಕೊಲೆಸ್ಟರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡಬಹುದಾದ ವ್ಯಾಯಾಮಗಳನ್ನು ಮಾಡುವುದು.
- ಆರೋಗ್ಯಕರ ಆಹಾರ ತಿನ್ನುವುದು: ದೇಹವು ಆರೋಗ್ಯಕರ ರೀತಿಯಲ್ಲಿ ಕೊಬ್ಬನ್ನು ಹೀರಿಕೊಳ್ಳಲು ಹಾಗೂ ಅದು ರಕ್ತನಾಳಗಳಲ್ಲಿ ಉಳಿದುಕೊಳ್ಳದಂತೆ ನೋಡಿಕೊಳ್ಳಲು, ಸಮತೋಲನದಿಂದ ಕೂಡಿರುವ ಆರೋಗ್ಯಕರ ಆಹಾರಕ್ರಮವನ್ನು ಸೇವಿಸುವುದು ಅತ್ಯಗತ್ಯವಾಗಿದೆ, ಇದು ಅಧಿಕ ಕೊಲೆಸ್ಟರಾಲನ್ನು ದೂರವಿಡುತ್ತದೆ.
- ತೂಕ ಇಳಿಕೆ: ತಜ್ಞರ ಪ್ರಕಾರ, ದೇಹದ ತೂಕದ 10-15% ನಷ್ಟು ಕಳೆದುಕೊಂಡರೂ ಬಹಳಷ್ಟು ವ್ಯತ್ಯಾಸವನ್ನು ಕಾಣಬಹುದಾಗಿದೆ.
- ಧೂಮಪಾನವನ್ನು ಬಿಡುವುದು: ಧೂಮಪಾನವು ಹಲವಾರು ಕಾಯಿಲೆಗಳಿಗೆ ಕಾರಣವಾಗಿದ್ದರೂ, ಆರ್ಟರಿಗಳಲ್ಲಿ ಪ್ಲಾಕ್ ಕಟ್ಟಿಕೊಳ್ಳಲು ಕಾರಣವಾಗುವುದರಿಂದ ಹೃದ್ರೋಗ ಮತ್ತು ಹೃದಯಾಘಾತ ಉಂಟುಮಾಡುವಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ.
ಉಲ್ಲೇಖಗಳು
- CDC. Cholesterol Myths & Facts [Internet]. Centers for Disease Control and Prevention. 2019 [cited 2020 Apr 28]. Available from: https://www.cdc.gov/features/cholesterol-myths-facts/index.html
- Hedayatnia M, Asadi Z, Zare-Feyzabadi R, Yaghooti-Khorasani M, Ghazizadeh H, Ghaffarian-Zirak R, et al. Dyslipidemia and cardiovascular disease risk among the MASHAD study population. Lipids in Health and Disease. 2020 Mar 16;19(1).
- Agence Francaise de Securite Sanitaire des Produits de Sante, [AFSSAPS guideline for the treatment of dyslipidemia]. Rev Prat. 2005 Oct 31; 55(16):1788-93.
- Fakhrzadeh H, Tabatabaei-Malazy O. Dyslipidemia and Cardiovascular Disease. In: Dyslipidemia – From Prevention to Treatment [Internet]. 2012 [cited 2020 Apr 28]. p. 303–20. Available from: http://cdn.intechopen.com/pdfs/27503.pdf
- Mensah GA, Roth GA, Fuster V. The Global Burden of Cardiovascular Diseases and Risk Factors. Journal of the American College of Cardiology [Internet]. 2019 Nov [cited 2020 Jan 14];74(20):2529–32. Available from: http://www.onlinejacc.org/content/74/20/2529
- OMS. Cadre Global Mondial de Suivi, Comprenant des Indicateurs, et Série de Cibles Mondiales Volontaires Pour la Lutte Contre les Maladies non Transmissibles. Geneva, Switzerland: OMS; 2012.
- Miller M. Dyslipidemia and cardiovascular risk: the importance of early prevention. QJM. 2009;102(9):657–667. doi:10.1093/qjmed/hcp065
- Janine Pöss, Florian Custodis, Christian Werner, Oliver Weingärtner, Michael Böhm, Ulrich Laufs, Cardiovascular disease and dyslipidemia: beyond LDL, Curr Pharm Des. 2011; 17(9): 861–870.
- Jennifer S. Lee1, Po-Yin Chang, Ying Zhang, Jorge R. Kizer, Lyle G. Best and Barbara V. Howard, Triglyceride and HDL-C Dyslipidemia and Risks of Coronary Heart Disease and Ischemic Stroke by Glycemic Dysregulation Status: The Strong Heart Study, American Diabetes Association
- Welty FK. Cardiovascular Disease and Dyslipidemia in Women. Arch Intern Med. 2001;161(4):514–522. doi:10.1001/archinte.161.4.514
- Ama Moor, V. J., Ndongo Amougou, S., Ombotto, S., Ntone, F., Wouamba, D. E., & Ngo Nonga, B. (2017). Dyslipidemia in Patients with a Cardiovascular Risk and Disease at the University Teaching Hospital of Yaoundé, Cameroon. International journal of vascular medicine, 2017, 6061306. doi:10.1155/2017/6061306
- High blood pressure (hypertension) – Symptoms and causes [Internet]. Mayo Clinic. 2018 [cited 2020 Apr 29]. Available from: https://www.mayoclinic.org/diseases-conditions/high-blood-pressure/symptoms-causes/syc-20373410